ನಮಸ್ಕಾರ ಸ್ನೇಹಿತರೇ, ಸರ್ಕಾರದಿಂದ ಸಿಗುವ ಸೌಲಭ್ಯಗಳು ನಮಗೆ ತಲುಪಬೇಕಾದರೆ ನಮ್ಮ ಹತ್ತಿರ ಈ-ಶ್ರಮ್ (e-Shram) ಅಥವಾ ಲೇಬರ್ ಕಾರ್ಡ್ ಇರುವುದು ಬಹಳ ಮುಖ್ಯ. ಆದರೆ ಬಹಳಷ್ಟು ಜನ ಇದನ್ನು ಮಾಡಿಸಲು ಸೈಬರ್ ಸೆಂಟರ್‌ಗಳಿಗೆ ಅಲೆದಾಡಿ, ಹಣ ಖರ್ಚು ಮಾಡುತ್ತಾರೆ

ಈ ಕಾರ್ಡ್ ಮಾಡಿಸೋದ್ರಿಂದ ಏನು ಲಾಭ?
- ₹2 ಲಕ್ಷ ವಿಮೆ: ಅಪಘಾತ ಸಂಭವಿಸಿದರೆ ಸರ್ಕಾರದಿಂದ ₹2 ಲಕ್ಷದವರೆಗೆ ವಿಮಾ ಸೌಲಭ್ಯ ಸಿಗುತ್ತದೆ.
- ಸರ್ಕಾರಿ ಯೋಜನೆಗಳು: ಸರ್ಕಾರದ ಪಿಂಚಣಿ ಮತ್ತು ಇತರೆ ಹಣಕಾಸಿನ ನೆರವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
- ಕೆಲಸದ ಅವಕಾಶ: ಕೌಶಲ್ಯಕ್ಕೆ ತಕ್ಕಂತೆ ಉದ್ಯೋಗ ಮಾಹಿತಿ ಪಡೆಯಲು ಇದು ಸಹಕಾರಿ.
ಅರ್ಜಿ ಸಲ್ಲಿಸಲು ಏನೇನು ಬೇಕು?
- ಆಧಾರ್ ಕಾರ್ಡ್ ಸಂಖ್ಯೆ.
- ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
- ಬ್ಯಾಂಕ್ ಖಾತೆ ವಿವರ (IFSC ಕೋಡ್ ಸಮೇತ).
- ನಿಮ್ಮ ವಯಸ್ಸು 16 ರಿಂದ 59 ವರ್ಷದೊಳಗಿರಬೇಕು.
ಮೊಬೈಲ್ನಲ್ಲಿ ಅಪ್ಲೈ ಮಾಡುವುದು ಹೇಗೆ:
- ಹಂತ 1: ಮೊದಲು ನಿಮ್ಮ ಮೊಬೈಲ್ ಬ್ರೌಸರ್‌ನಲ್ಲಿ eshram.gov.in ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
- ಹಂತ 2: ಅಲ್ಲಿ ಕಾಣುವ ‘REGISTER on e-Shram’ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಹಂತ 3: ಈಗ ನಿಮ್ಮ ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಮತ್ತು ಅಲ್ಲಿರುವ ‘Captcha’ ಕೋಡ್ ಟೈಪ್ ಮಾಡಿ ‘Send OTP’ ಕೊಡಿ.
- ಹಂತ 4: ಮೊಬೈಲ್‌ಗೆ ಬಂದ OTP ನಮೂದಿಸಿದ ನಂತರ, ನಿಮ್ಮ ಆಧಾರ್ ಸಂಖ್ಯೆಯನ್ನು ಟೈಪ್ ಮಾಡಿ ಸಬ್‌ಮಿಟ್ ಮಾಡಿ
- ಹಂತ 5: ಈಗ ನಿಮ್ಮ ವೈಯಕ್ತಿಕ ಮಾಹಿತಿ (ಹೆಸರು, ವಿಳಾಸ, ವಿದ್ಯಾರ್ಹತೆ ಮತ್ತು ಕೆಲಸದ ವಿವರ) ಕೇಳುತ್ತದೆ. ಅದನ್ನೆಲ್ಲಾ ಸರಿಯಾಗಿ ಭರ್ತಿ ಮಾಡಿ.
- ಹಂತ 6: ಕೊನೆಯಲ್ಲಿ ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನೀಡಿ ‘Save and Continue’ ಕೊಡಿ
- ಹಂತ 7: ಅಷ್ಟೇ! ನಿಮ್ಮ UAN Card (e-Shram Card) ಪರದೆಯ ಮೇಲೆ ಕಾಣಿಸುತ್ತದೆ. ಅಲ್ಲಿರುವ ‘Download’ ಬಟನ್ ಒತ್ತಿ ನಿಮ್ಮ ಫೋನಿಗೆ ಸೇವ್ ಮಾಡಿಕೊಳ್ಳಿ.
ಪ್ರಮುಖ ಲಿಂಕ್ಗಳು:
| ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಇತರೆ ಮಾಹಿತಿಗಾಗಿ | Click Here |
| ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| E-Shram R Labor Card ಡೌನ್ಲೋಡ್ | Click Here |
ಒಂದು ಮುಖ್ಯ ಮಾಹಿತಿ:
ನೀವು ರೈತರಾಗಿದ್ದರೆ, ಕಟ್ಟಡ ಕಾರ್ಮಿಕರಾಗಿದ್ದರೆ, ಆಟೋ ಚಾಲಕರಾಗಿದ್ದರೆ, ಬೀದಿ ಬದಿ ವ್ಯಾಪಾರಿಗಳಾಗಿದ್ದರೆ ಅಥವಾ ಯಾವುದೇ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದರೆ ತಪ್ಪದೇ ಈ ಕಾರ್ಡ್ ಮಾಡಿಸಿಕೊಳ್ಳಿ.