ಕರ್ನಾಟಕದ ವ್ಯವಸಾಯದ ಬಗ್ಗೆ ಮಾಹಿತಿ | Information about Agriculture in Karnataka in Kannada

ಕರ್ನಾಟಕದ ವ್ಯವಸಾಯದ ಬಗ್ಗೆ ಮಾಹಿತಿ Information about Agriculture in Karnataka Karnatakada Vyavasayada bagge Mahithi in Kannada

ಕರ್ನಾಟಕದ ವ್ಯವಸಾಯದ ಬಗ್ಗೆ ಮಾಹಿತಿ

Information about Agriculture in Karnataka in Kannada
ಕರ್ನಾಟಕದ ವ್ಯವಸಾಯದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಕರ್ನಾಟಕದ ವ್ಯವಸಾಯದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಕರ್ನಾಟಕದ ವ್ಯವಸಾಯ :

  • ಭೂಮಿಯನ್ನು ಉಳುಮೆ ಮಾಡಿ ಬೆಳೆ ಬೆಳೆಯುವುದನ್ನು ವ್ಯವಸಾಯ ಎನ್ನುವರು.
  • ಕರ್ನಾಟಕದಲ್ಲಿ ಶೇ.61.4 ಭಾಗದಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯನ್ನು ಅವಲಂಬಿಸಿದ್ದಾರೆ.
  • ಕರ್ನಾಟಕದ ಪುರಾತನ ಮೂಲ ವೃತ್ತಿಗಳಲ್ಲಿ ವ್ಯವಸಾಯವೂ ಒಂದು. ಇದು ಮುಖ್ಯ ಜೀವನಾಧಾರಿತ ವೃತ್ತಿ. ನಮ್ಮ ರಾಜ್ಯದ ಆರ್ಥಿಕತೆಯ ಬೆನ್ನೆಲುಬಾಗಿದೆ.

ವ್ಯವಸಾಯದ ವಿಧಗಳು :

  • ಕಾಲುವೆ, ಕೆರೆ, ಬಾವಿ, ಮೂಲಗಳಿಂದ ನೀರನ್ನು ಬಳಕೆ ಮಾಡಿ ಸಾಗುವಳಿ ಮಾಡುವ ಕೃಷಿ ಪದ್ದತಿಗೆ ನೀರಾವರಿ ಬೇಸಾಯ ಎನ್ನುವರು.
  • ಮಳೆ ಆಶ್ರಿತ ಬೆಳೆಗಳ ಸಾಗುವಳಿಗೆ ಒಣ ಅಥವಾ ಶುಷ್ಕ ಬೇಸಾಯ ಎನ್ನುವರು.
  • ವಿಶಾಲವಾದ ಸಾಗುವಳಿ ಭೂಮಿಯಲ್ಲಿ ಹಣ ಗಳಿಕೆಗಾಗಿ ಕೆಲವೇ ಬಹುವಾರ್ಷಿಕ ಬೆಳೆಗಳನ್ನು ಸಾಗುವಳಿ ಮಾಡುವುದೇ ನೆಡತೋಪು ಬೇಸಾಯ ಅಥವಾ ಪ್ಲಾಂಟೇಷನ್‌ ಎನ್ನುವರು. ಉದಾ :ಕಾಫಿ, ಚಹ, ರಬ್ಬರ್‌, ಕೋಕೋ.
  • ಸ್ವದೇಶಿ ಉಪಯೋಗಕ್ಕಲ್ಲದೇ ವಿದೇಶೀ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡುಮಾಡುವ ಸಾಗುವಳಿಯೇ ವಾಣಿಜ್ಯ ಬೇಸಾಯ ಎನ್ನುವರು.
  • ಮಾರಾಟಕ್ಕಲ್ಲದೇ ರೈತರ ಜೀವನೋಪಾಯಕ್ಕಾಗಿ ಬೆಳೆ ಬೆಳೆಯುವ ಕೃಷಿ ಪದ್ದತಿಗೆ ಜೀವನಾಧಾರ ಬೇಸಾಯ ಎನ್ನುವರು. ಇದು ಪುರಾತನ ಮಾದರಿ ಬೇಸಾಯವಾಗಿದೆ.
  • ಬೆಲೆ ಬೆಳೆಯುವುದರ ಜೊತೆಯಲ್ಲೇ ಪಶುಸಂಗೋಪನೆ, ರೇಷ್ಮೆ ಕೃಷಿ, ಕುರಿ ಸಾಕಾಣಿಕೆ, ಕೋಳಿ ಸಾಗಾಣಿಕೆ, ಜೇನು ಸಾಗಾಣಿಕೆ, ಮೀನುಗಾರಿಕೆ ಮುಂತಾದ ಉಪ ಕಸುಬುಗಳನ್ನು ನಿರ್ವಹಿಸುವುದನ್ನು ಮಿಶ್ರ ಬೇಸಾಯ ಎನ್ನುವರು.

ಭತ್ತ :

  • ಇದು ಪೊಯೆಸಿ ಹುಲ್ಲಿನ ವರ್ಗದ ಸಸ್ಯ
  • ಇದರ ವೈಜ್ಞಾನಿಕ ಹೆಸರು – ಓರೈಸಾ ಸಟೈವಾ
  • ಇದು ಉಷ್ಣವಲಯದ ಬೆಳೆಯಾಗಿದೆ. ಇದರ ಬೇಸಾಯಕ್ಕೆ ಹೆಚ್ಚು ಮಳೆ ಮತ್ತು ಉಷ್ಣಾಂಶ ಬೇಕಾಗಿರುತ್ತದೆ.
  • ಸುಮಾರು ಶೇ.70 ಭಾಗದಷ್ಟು ಫಸಲನ್ನು ಜೂನ್‌ – ಆಗಸ್ಟ್‌ ತಿಂಗಳುಗಳಲ್ಲಿ ನಾಟಿ ಮಾಡಿ ನವೆಂಬರ್‌ – ಡಿಸೆಂಬರ್‌ ತಿಂಗಳಿನಲ್ಲಿ ಕಟಾವು ಮಾಡುವರು.
  • ಇದನ್ನು ಹೈನು ಬೆಳೆ ಎನ್ನುವರು.
  • ಬೇಸಿಗೆಯಲ್ಲೂ ನೀರಾವರಿ ಸೌಲಭ್ಯ ದೊರೆಯುವ ಪ್ರದೇಶಗಳಲ್ಲಿ ಭತ್ತ ಬೆಳೆಯುವರು. ಇದನ್ನು ಖಾರೀಫ್‌ ಬೆಳೆ ಎನ್ನುವರು.
  • ಭತ್ತವನ್ನು ಮಲೆನಾಡು ಪ್ರದೇಶದಲ್ಲಿ ಚೆಲ್ಲುವ ವಿಧಾನಗಳಿಂದ ಬೆಳೆಯುವರು.
  • ಭತ್ತವನ್ನುಉತ್ಪಾದನೆಯಲ್ಲಿ ರಾಯಚೂರು ಪ್ರಥಮ ಸ್ಥಾನದಲ್ಲಿದೆ. ನಂತರ ದಾವಣಗೆರೆ, ಮೈಸೂರು, ಶಿವಮೊಗ್ಗ, ಮಂಡ್ಯ, ಕೊಪ್ಪಳ, ಉತ್ತರಕನ್ನಡ ಜಿಲ್ಲೆಯಾಗಿದೆ.
  • ಭತ್ತವು ನೀರಾವರಿಯಲ್ಲಿ ಬೆಳೆಯುವ ಉತ್ತಮ ಗುಣಮಟ್ಟ ಹಾಗೂ ಇಳುವರಿಯೂ ಹೆಚ್ಚಾಗಿರುವ ಬೆಳೆಯಾಗಿದೆ.
  • ಭತ್ತ ಸಂಶೋಧನಾ ಕೇಂದ್ರವು ಓರಿಸ್ಸಾದ ಕಟಕನಲ್ಲಿದೆ.

ಜೋಳ :

  • ಭತ್ತದ ನಂತರ ಜೋಳವು ಕರ್ನಾಟಕದ 2ನೇಯ ಸ್ಥಾನದ ಬೆಳೆಯಾಗಿದೆ.
  • ಭಾರತದಲ್ಲಿ ಕರ್ನಾಟಕವು ಜೋಳದ ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದೆ.
  • ಇದು ಉತ್ತರ ಕರ್ನಾಟಕದ ಜನರ ಪ್ರಮುಖ ಆಹಾರ ಬೆಳೆಯಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಜೋಳವನ್ನು ಜಾನುವಾರುಗಳ ಮೇವಿಗಾಗಿ ಬೆಳೆಯುವರು.
  • ಇದು ಹುಲ್ಲಿನ ಜಾತಿಗೆ ಸೇರಿದ ಸಸ್ಯವರ್ಗ.
  • ಇದು ಉಷ್ಣವಲಯದ ಬೆಳೆಯಾಗಿದ್ದು ಬೇಸಾಯಕ್ಕೆ ಸಾಧಾರಣ ಮಳೆ, ಒಣ ಹವೆ, ಕಪ್ಪು, ಕೆಂಪು ಮತ್ತು ಮೆಕ್ಕಲು ಮಿಶ್ರಿತ ಮಣ್ಣು ಇದ್ದರೆ ಸಾಕು.
  • ಜೋಳವನ್ನು ಬಿತ್ತನೆ ಮಾಡುವ ವಿಧಾನದಿಂದ ಮಳೆ ಆಶ್ರಯದಲ್ಲಿ ಬೆಳೆಯುವರು.
  • ಜೋಳದ ಉತ್ಪಾದನೆಯಲ್ಲಿ ವಿಜಯಪುರ ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ.

ರಾಗಿ :

  • ಇದು ಉತ್ತಮ ಪೋಷಕಾಂಶ ಹೊಂದಿರುವ ಆಹಾರದ ಬೆಳೆಯಾಗಿದೆ.
  • ಇದರ ವೈಜ್ಞಾನಿಕ ಹೆಸರು – ಯೆಲಿಯುಸಿನ್‌ ಕೋರಾಕಾನ
  • ಇದು ಹೆಚ್ಚು ಕಾಲ ಸಂಗ್ರಹಿಸಬಹುದಾದ ಧಾನ್ಯ
  • ಇದು ಉಷ್ಣವಲಯದ ಬೆಳೆ. ಅಧಿಕ ಉಷ್ಣಾಂಶ ಸಾಧಾರಣ ಮಳೆ, ಕೆಂಪು ಮತ್ತು ಮೆಕ್ಕಲು ಮಿಶ್ರಿತ ಮಣ್ಣು ಇದಕ್ಕೆ ಯೋಗ್ಯವಾಗಿದೆ.
  • ರಾಗಿ ಉತ್ಪಾದನೆಯಲ್ಲಿ ಕರ್ನಾಟಕವು ಭಾರತದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ.
  • ರಾಗಿಯು ಹಳೆಯ ಮೈಸೂರು ಪ್ರಾಂತ್ಯದ ಸಾಂಪ್ರದಾಯಿಕ ಬೆಳೆಯಾಗಿದೆ.
  • ಕರ್ನಾಟಕದಲ್ಲಿ ತುಮಕೂರು ಅತಿ ಹೆಚ್ಚು ರಾಗಿ ಉತ್ಪಾದಿಸುವ ಜಿಲ್ಲೆ. ಅನಂತರ ಸ್ಥಾನದಲ್ಲಿ ರಾಮನಗರ, ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಾಗಿದೆ.

ಕಬ್ಬು :

  • ಇದರ ವೈಜ್ಞಾನಿಕ ಹೆಸರು – ಸಖ್ಯಾರಮ್‌ ಅಫಿಸಿನೇರಮ್‌
  • ಇದು ಉಷ್ಣವಲಯದ ಬೆಳೆಯಾಗಿದೆ.
  • ಕರ್ನಾಟಕವು ಕಬ್ಬು ಉತ್ಪಾದನೆಯಲ್ಲಿ ಭಾರತದಲ್ಲಿ ನಾಲ್ಕನೆಯ ಸ್ಥಾನದಲ್ಲಿರುವ ರಾಜ್ಯ
  • ಕಬ್ಬಿನ ಬೇಸಾಯಕ್ಕೆ ಮರಳು ಮಿಶ್ರಿತ ಮೆಕ್ಕಲು ಮಣ್ಣು, ಕೆಂಪು ಮಣ್ಣು ಉತ್ತಮವಾಗಿರುತ್ತದೆ.
  • ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆಯಾಗುವ ಪ್ರದೇಶದಲ್ಲಿ ಬೆಳೆಯುವರು.
  • ಇದು ಸಹ ಹುಲ್ಲಿನ ಜಾತಿಯ ಸಸ್ಯವಾಗಿದ್ದು. ಇದು ಸುಮಾರು 3 ಮೀಟರ್‌ ಎತ್ತರದವರೆಗೆ ಬೆಳೆಯುತ್ತದೆ.
  • ಬೆಳಗಾವಿ ಅತಿ ಹೆಚ್ಚು ಕಬ್ಬು ಉತ್ಪಾದಿಸುವ ಜಿಲ್ಲೆಯಾಗಿದೆ.
  • ಸ್ವಾತಂತ್ರ್ಯ ಪೂರ್ವದಿಂದಲೂ ಕಬ್ಬು ಬೆಳೆಯಲು ಮಂಡ್ಯದ ಜಿಲ್ಲೆ ಹೆಸರುವಾಸಿಯಾಗಿದೆ.

ಹತ್ತಿ :

  • ನಾರಿನ ಬೆಳೆಯಾಗಿದೆ. ಹತ್ತಿಯು, ಬಟ್ಟೆ ಕೈಗಾರಿಕೆಯ ಕಚ್ಚಾ ವಸ್ತುವಾಗಿದೆ.
  • ಇದು ಉಷ್ಣವಲಯ ಮತ್ತು ಉಪ ಉಷ್ಣವಲಯಗಳ ವಾಣಿಜ್ಯ ಬೆಳೆಯಾಗಿದೆ.
  • ಸಾಧಾರಣ ಮಳೆ, ಹೆಚ್ಚು ಉಷ್ಣಾಂಶ ಹಾಗೂ ಕಪ್ಪು ಮಣ್ಣು ಈ ಬೆಳೆಗೆ ಸೂಕ್ತ.
  • ಉದ್ದ, ಮಧ್ಯಮ, ತುಂಡು ಎಳೆಯ ಹತ್ತಿಯನ್ನು ಕಾಣಬಹುದಾಗಿದೆ.
  • ಕರ್ನಾಟಕದಲ್ಲಿ ಹೆಚ್ಚಾಗಿ ಮಧ್ಯಮ ಮತ್ತು ತುಂಡು ಎಳೆಯ ಹತ್ತಿಯನ್ನು ಬೆಳೆಯುವರು.
  • ಹತ್ತಿಯನ್ನು ಕರ್ನಾಟಕದಲ್ಲಿ ಆಗಸ್ಟ್-‌ ಸೆಪ್ಟೆಂಬರ್‌ ತಿಂಗಳಿನಲ್ಲಿ ಬಿತ್ತನೆ ಮಾಡುವರು. ಇದನ್ನು ಮಳೆ ಆಶ್ರಯದಲ್ಲಿ ಬೆಳೆಯುವುದೇ ಹೆಚ್ಚು.
  • ಹಾವೇರಿ ಜಿಲ್ಲೆ ಹತ್ತಿ ಉತ್ಪಾದನೆಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.

ತಂಬಾಕು :

  • ಇದು ನಿಕೋಷಿಯಾನ್‌ ವರ್ಗಕ್ಕೆ ಸೇರಿದ ಸಸ್ಯವಾಗಿದೆ.
  • ಇದರಲ್ಲಿ ನಿಕೋಟಿನ್‌ ಎಂಬ ಮಾದಕ ವಸ್ತುವಿದೆ.
  • ಪೋರ್ಚುಗೀಸರು 17ನೇ ಶತಮಾನದಲ್ಲಿ ತಂಬಾಕನ್ನು ಭಾರತಕ್ಕೆ ಪರಿಚಯಿಸಿದರು.
  • ಸಾಧಾರಣ ಮಳೆ ಮತ್ತು ಹೆಚ್ಚು ಉಷ್ಣಾಂಶವುಳ್ಳ ಮರಳು ಮಿಶ್ರಿತ ಮಣ್ಣಿನ ಪ್ರದೇಶಗಳಲ್ಲಿ ಇದನ್ನು ಬೆಳೆಯುವರು.
  • ವರ್ಜಿನಿಯಾ ತಂಬಾಕು ಉತ್ತಮ ದರ್ಜೆಯದ್ದಾಗಿದೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಬೇಡಿಕೆಗಳಿಸಿದೆ.
  • ಮೈಸೂರು ಜಿಲ್ಲೆಯು ತಂಬಾಕು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ.
  • ಬೆಳಗಾವಿ ಜಿಲ್ಲೆಯ ನಿಪ್ಪಾಣಿಯು ದೇಶದಲ್ಲಿ ಬೀಡಿ ತಯಾರಿಕಾ ತಂಬಾಕು ಮಾರಿಕಟ್ಟೆಗೆ ಅತ್ಯಂತ ಪ್ರಸಿದ್ದವಾಗಿದೆ.
  • ಕರ್ನಾಟಕದಲ್ಲಿ ಬೆಳೆಯುವ ತಂಬಾಕು ವಿಶ್ವದರ್ಜೆಯದಾಗಿದ್ದು, ಉತ್ಪಾದನೆಯ ಬಹುಪಾಲು ರಫ್ತಾಗುವುದು.
  • ತಂಬಾಕು ಸಂಶೋಧನಾ ಕೇಂದ್ರ – ರಾಜಮಂಡ್ರಿ(ಆಂದ್ರಪ್ರದೇಶ

ಕಾಫಿ :

  • ಕಾಫಿಯ ವೈಜ್ಞಾನಿಕ ಹೆಸರು – ರುಬಿಯೇಸಿ ಕೇಪಿನ್‌
  • ಕಾಫಿಯು ಕರ್ನಾಟಕದ ಪ್ರಸಿದ್ದ ನೆಡುತೋಟದ ಪಾನೀಯ ಬೆಳೆ
  • ಕರ್ನಾಟಕವು ಭಾರತದಲ್ಲೇ ಕಾಫಿಯ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ.
  • ಕ್ರಿ.ಶ.1670 ರ ಸುಮಾರಿಗೆ ಬಾಬಬುಡನ್‌ ಎಂಬ ಮುಸ್ಲಿಂ ಸಂತನು ಚಿಕ್ಕಮಂಗಳೂರಿನ ಬೆಟ್ಟಗಳ ಸಾಲಿನಲ್ಲಿ ಕಾಫಿ ಸಸಿಗಳನ್ನು ಬೆಳೆಸಿದನು. ಆದ್ದರಿಂದ ಇದನ್ನು ಬಾಬಾಬುಡನಗಿರಿ ಎನ್ನುವರು. ಆದರೆ ಇದರ ಕ್ರಮಬದ್ದವಾದ ಬೇಸಾಯವು 1826 ರಲ್ಲಿ ಪ್ರಾರಂಭವಾಯಿತು.
  • ಕರ್ನಾಟಕವು ಅರೆಬಿಕಾ ಹಾಗೂ ರುಬೆಸ್ಟಾ ಎಂಬ ಎರಡು ಪ್ರಭೇದದ ಕಾಫಿಯನ್ನು ಉತ್ಪಾದಿಸುತ್ತಿದೆ.
  • ಕೊಡಗು ಜಿಲ್ಲೆಯು ಕಾಫಿ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ.
  • ಕರ್ನಾಟಟಕದಲ್ಲಿ ಬೆಲೆಯುವ ಕಾಫಿ ಅತ್ಯುತ್ತಮವಾಗಿದ್ದು. ರುಚಿ ಮತ್ತು ಸ್ವಾದಕ್ಕೆ ಹೆಸರುವಾಸಿಯಾಗಿದೆ. ದೇಶ ವಿದೇಶಗಳಲ್ಲಿ ಈ ಕಾಫಿಯು ಉತ್ತಮವಾದ ಮಾರುಕಟ್ಟೆಯನ್ನು ಹೊಂದಿದೆ.

FAQ :

ತಂಬಾಕಿನಲ್ಲಿ ಯಾವ ಮಾದಕ ವಸ್ತುವಿದೆ?

ನಿಕೋಟಿನ್

ಭತ್ತದ ವೈಜ್ಞಾನಿಕ ಹೆಸರೇನು?

ಓರೈಸಾ ಸಟೈವಾ

ಇತರೆ ವಿಷಯಗಳು :

ಏಕಕೋಶಿಯ ಜೀವಿಗಳ ಬಗ್ಗೆ ಮಾಹಿತಿ

ಕರ್ನಾಟಿಕ್‌ ಯುದ್ದಗಳ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ