ಬೌದ್ದ ಧರ್ಮದ ಬಗ್ಗೆ ಮಾಹಿತಿ | Information about Buddhism in Kannada

ಬೌದ್ದ ಧರ್ಮದ ಬಗ್ಗೆ ಮಾಹಿತಿ Information about Buddhism Bhowdda Dharmada bagge Mahithi in Kannada

ಬೌದ್ದ ಧರ್ಮದ ಬಗ್ಗೆ ಮಾಹಿತಿ

Information about Buddhism in Kannada
ಬೌದ್ದ ಧರ್ಮದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಬೌದ್ದ ಧರ್ಮದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಬೌದ್ದ ಧರ್ಮ :

ಗೌತಮ ಬುದ್ದ ಸ್ಥಾಪಿಸಿದ ಧರ್ಮವೇ ಬೌದ್ಧಧರ್ಮ. ಇದು ಸುಮಾರು 2500 ವರ್ಷಗಳಷ್ಟು ಹಿಂದೆ ಸ್ಥಾಪನೆಯಾಯಿತು.

ಬುದ್ದನ ಜೀವನ :

ಗೌತಮ ಬುದ್ದನು ನೇಪಾಳದ ಕಪಿಲವಸ್ತು ಸಮೀಪದ ಲುಂಬಿನಿಯಲ್ಲಿ ಜನಿಸಿದನು. ಅವನ ಬಾಲ್ಯದ ಹೆಸರು ಸಿದ್ದಾರ್ಥ. ಅವನ ತಂದೆ ಶುದ್ದೋದನನು ಶಾಕ್ಯ ಗಣರಾಜ್ಯದ ಮುಖ್ಯಸ್ಥನಾಗಿದ್ದನು. ತಾಯಿ ಮಾಯಾದೇವಿ. ಸಿದ್ದಾರ್ಥನ ಪತ್ನಿ ಯಶೋಧರ ಮತ್ತು ಪುತ್ರ ರಾಹುಲ. ಒಮ್ಮೆ ನಗರ ಪ್ರದಕ್ಷಿಣೆಯ ಸಂದರ್ಭದಲ್ಲಿ ಅವನ ಕಣ್ಣಿಗೆ ಆಕಸ್ಮಿಕವಾಗಿ ಓರ್ವ ವೃದ್ದ, ರೋಗಿ, ಸನ್ಯಾಸಿ ಹಾಗೂ ಶವಯಾತ್ರೆಯ ದೃಶ್ಯಗಳು ಬಿದ್ದವು. ಈ ನಾಲ್ಕು ಸನ್ನಿವೇಶಗಳು ಅವನಲ್ಲಿ ವೈರಾಗ್ಯ ಮೂಡಿಸಿ ದುಃಖದ ಮೂಲವನ್ನು ಕಂಡುಹಿಡಿಯಲು ಪ್ರೇರೇಪಿಸಿದವು ಇವು ಬುದ್ದಗುರುವಿನ ಕಥಾನಕದಲ್ಲಿ ಬರುವ ಅಂಶಗಳು.

ಒಂದು ದಿನ ರಾತ್ರಿ ಸಿದ್ದಾರ್ಥನು ಯಾರಿಗೂ ತಿಳಿಸದೇ ಪರಿವಾರ ಮತ್ತು ಅರಮನೆಯನ್ನು ತೊರೆದು ಕುದುರೆಯನ್ನೇರಿ ಹೊರಟನು. ದುಃಖ ನಿವಾರಣೆಗಾಗಿ ಹಲವು ಗುರುಗಳನ್ನು ಕಂಡು ಮಾರ್ಗದರ್ಶನ ಪಡೆದನು. ಆದರೂ ಅವನಿಗೆ ದುಃಖದ ಮೂಲ ಕುರಿತು ಉತ್ತರ ಸಿಗಲಿಲ್ಲ. ಕೊನೆಗೆ ಬಿಹಾರದ ಗಯಾ ಎಂಬಲ್ಲಿ ಅರಳಿ ಮರವೊಂದರ ಕೆಳಗೆ ಕುಳಿತು ಅನೇಕ ದಿನಗಳ ಕಾಲ ಧ್ಯಾನಸ್ಥನಾದನು. ಕೊನೆಗೆ ಅಲ್ಲಿ ಜ್ಞಾನೋದಯ ಪಡೆದು ಸಿದ್ದಾರ್ಥನು ಬುದ್ದನಾದನು. ಬುದ್ದನೆಂದರೆ ಜ್ಞಾನಿ ತಿಳಿದವನು ಎಂದರ್ಥ. ಈ ಸ್ಥಳವು ಬುದ್ದಗಯಾ ಎಂದೇ ಪ್ರಸಿದ್ದಿ ಪಡೆಯಿತು.

ಬುದ್ದನು ಉತ್ತರ ಪ್ರದೇಶದ ವಾರಣಾಸಿಯ ಬಳಿ ಸಾರನಾಥ ಎಂಬಲ್ಲಿ ತನ್ನ ಮೊದಲ ಉಪದೇಶವನ್ನು ಐವರು ಶಿಷ್ಯರಿಗೆ ನೀಡಿದನು. ಈ ಘಟನೆಯನ್ನು “ಧರ್ಮಚಕ್ರ ಪ್ರವರ್ತನ” ಎಂದು ಕರೆಯುತ್ತಾರೆ. ಅಲ್ಲಿಂದ ಮುಂದೆ ಬಿಹಾರ್‌ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಲ್ವತ್ತು ವರ್ಷಕಾಲ ಸಂಚರಿಸಿ ಉಪದೇಶ ನೀಡಿದನು. ಬುದ್ದನ ಕೀರ್ತಿ ಕ್ರಮೇಣ ಹಲವೆಡೆ ಪಸರಿಸಿತು. ರಾಜಮಹಾರಾಜರು ಆತನನ್ನು ಗೌರವಿಸಿದರು. ಕೊನೆಗೆ ಬುದ್ದನು ಬಿಹಾರದ ಕುಶೀನಗರ ಎಂಬಲ್ಲಿ ದೇಹತ್ಯಾಗ ಮಾಡಿದನು.

4 ಆರ್ಯಸತ್ಯಗಳ ಬೋಧನೆ :

  • ಪ್ರಾಪಂಚಿಕ ಜೀವನ ದುಃಖಮಯದಿಂದ ಕೂಡಿದೆ.
  • ಆಸೆಯೇ ದುಃಖಕ್ಕೆ ಕಾರಣ
  • ಆಸೆಯನ್ನು ತೊರೆದರೆ ದುಃಖ ನಿವಾರಣೆಯಾಗುತ್ತದೆ.
  • ಆಸೆಯನ್ನು ತೊರೆಯಬೇಕೆಂದರೆ ಅಷ್ಟಾಂಗ ಮಾರ್ಗವನ್ನು ಅನುಸರಿಸಬೇಕು.

ಅಷ್ಟಾಂಗ ಮಾರ್ಗಗಳು :

  • ಒಳ್ಳೆಯ ನಂಬಿಕೆ
  • ಒಳ್ಳೆಯ ನಡತೆ
  • ಒಳ್ಲೆಯ ಪ್ರಯತ್ನ
  • ಒಳ್ಳೆಯ ಗುರಿ
  • ಒಳ್ಳೆಯ ಮಾತು
  • ಒಳ್ಲೇಯ ಜ್ಞಾನ
  • ಒಳ್ಳೆಯ ಆಲೋಚನೆ
  • ಒಳ್ಳೆಯ ದೃಷ್ಠಿ

ಇವಲ್ಲದೆ ತನ್ನ ಅನುಯಾಯಿಗಳಿಗೆ ಹಿಂಸೆ, ಮಧ್ಯಪಾನ, ಭ್ರಷ್ಟಾಚಾರ ಮಾಡದಿರಲು, ಸುಳ್ಳು ಹೇಳದಿರಲು ನಿಯಮ ವಿಧಿಸಿದನು. ಹೀಗೆ ಬುದ್ದನ ಉಪದೇಶಗಳು ಸರಳವೂ, ಜನಪ್ರಿಯವೂ ಆಗಿದ್ದವು. ಏಕೆಂದರೆ ತನ್ನ ಉಪದೇಶವನ್ನು ಜನರ ಭಾಷೆಯಾದ ಪಾಲಿ ಭಾಷೆಯಲ್ಲಿ ಬೋಧಿಸಿದನು. ಅವನ ಉಪದೇಶಗಳನ್ನು ಆತನ ಶಿಷ್ಯರು ಮೂರು ಪಿಟಕಗಳಲ್ಲಿ ಸಂಗ್ರಹಿಸಿದರು. ಅವುಗಳೆಂದರೆ ವಿನಯ ಪೀಟಕ, ಸುತ್ತ ಪಿಟಕ ಮತ್ತು ಅಭಿದಮ್ಮ ಪಿಟಕ, ಬೌದ್ದರ ಪವಿತ್ರ ಗ್ರಂಥಗಳಾದ ಇವುಗಳನ್ನು ತ್ರಿಪಿಟಕಗಳೆಂದು ಕರೆಯುವರು.

ಬೌದ್ದ ಸಮ್ಮೇಳನಗಳು :

1ನೇ ಸಮ್ಮೇಳನ :

  • ನಡೆದ ವರ್ಷ – ಕ್ರಿ.ಪೂ. 483
  • ನಡೆದ ಸ್ಥಳ – ರಾಜಗೃಹ
  • ಅರಸ – ಅಜಾತಶತೃ
  • ಅಧ್ಯಕ್ಷ – ಮಹಾಕಶ್ಯಪ
  • ವಿಷಯ – ತ್ರಿಪಿಟಕಗಳಲ್ಲಿ ವಿನಯ ಪೀಠಕ ಮತ್ತು ಸೂಕ್ತ ಪೀಠಕ

2ನೇ ಸಮ್ಮೇಳನ :

  • ನಡೆದ ವರ್ಷ – ಕ್ರಿ.ಪೂ 383
  • ನಡೆದ ಸ್ಥಳ – ವೈಶಾಲಿ
  • ಅರಸ – ಕಾಲಶೂಕ
  • ಅಧ್ಯಕ್ಷ – ಸಭಾಕಮಿ
  • ವಿಷಯ – ಬೌದ್ದ ಭಿಕ್ಷುಗಳು 10 ಅಂಶಗಳ ಬೇಡಿಕೆಯನ್ನಿಟ್ಟು ಅವುಗಳಲ್ಲಿ ಸಡಲಿಕೆಬೇಕು ಎಂದಾಗ ಅದಕ್ಕೆ ಪ್ರೋತ್ಸಾಹಿಸಿದವರನ್ನು ಮಹಾಸಂದಿಗ್ದರು ಎಂದು ವಿರೋಧಸಿದವರನ್ನು ಸಂದಿಗ್ದರು ಎಂದು ಕರೆಯುತ್ತಿದ್ದರು.

3ನೇ ಸಮ್ಮೇಳನ :

  • ನಡೆದ ವರ್ಷ – ಕ್ರಿ.ಪೂ250/251
  • ನಡೆದ ಸ್ಥಳ – ಪಾಟಲಿಪುತ್ರ
  • ಅರಸ – ಅಶೋಕ
  • ಅಧ್ಯಕ್ಷ – ಲೆಸ್ಸಾ ಮೊಗ್ಗಲಿ ಪುಟಿಸ್ತಾ
  • ವಿಷಯ – ಅಭಿದಮ್ಮ ಪೀಠಿಕೆ ರಚಿಸಲಾಯಿತು. ಈ ಪೀಠಕದಲ್ಲಿ ಬೌದ್ದಧರ್ಮದ ದರ್ಶನ ಮತ್ತು ನಡತೆಯನ್ನು ಒಳಗೊಂಡಿದೆ.

4ನೇ ಸಮ್ಮೇಳನ :

  • ನಡೆದ ವರ್ಷ – ಕ್ರಿ.ಪೂ100/102
  • ನಡೆದ ಸ್ಥಳ – ಕಾಶ್ಮೀರದ ಕುಂಡಲಿವನ
  • ಅರಸ – ಕನಿಷ್ಕ
  • ಅಧ್ಯಕ್ಷ – ವಸುಮಿತ್ರ
  • ವಿಷಯ – ಜಾತಕಗಳ ಮಧ್ಯ ಕಲಹ ಉಂಟಾಗಿ ಬೌದ್ದ ಧರ್ಮವು 2 ಪಂಗಡಗಳಾಗಿ ಒಡೆಯಿತು.

FAQ :

ಬುದ್ದ ಎಲ್ಲಿ ಜನಿಸಿದನು?

ನೇಪಾಳದ ಲುಂಬಿನಿ.

1ನೇ ಬೌದ್ದ ಸಮ್ಮೇಳನ ಎಲ್ಲಿ ನಡೆಯಿತು?

ರಾಜಗೃಹ.

ಇತರೆ ವಿಷಯಗಳು :

ಜನಪದ ಚರಿತ್ರೆ ಬಗ್ಗೆ ಮಾಹಿತಿ

ಜಲ ಸಂಪನ್ಮೂಲಗಳ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ