ಕೇಂದ್ರ ಚುನಾವಣಾ ಆಯೋಗದ ಬಗ್ಗೆ ಮಾಹಿತಿ | Information about Central Election Commission in Kannada

ಕೇಂದ್ರ ಚುನಾವಣಾ ಆಯೋಗದ ಬಗ್ಗೆ ಮಾಹಿತಿ Information about Central Election Commission Kendra Chunavana Ayogada bagge Mahithi in Kannada

ಕೇಂದ್ರ ಚುನಾವಣಾ ಆಯೋಗದ ಬಗ್ಗೆ ಮಾಹಿತಿ

Information about Central Election Commission in Kannada
ಕೇಂದ್ರ ಚುನಾವಣಾ ಆಯೋಗದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಕೇಂದ್ರ ಚುನಾವಣಾ ಆಯೋಗ :

  • ಸ್ಥಾಪನೆ – 25/1/1950
  • ಕೇಂದ್ರ ಕಛೇರಿ – ನವದೆಹಲಿ
  • ವಿಶೇಷತೆ – ಸಾಂವಿಧಾನಿಕ ಸಂಸ್ಥೆ

ಕಾರ್ಯಗಳು :

  • ಸಂಸತ್ತು, ರಾಜ್ಯಶಾಸಕಾಂಗ, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಸ್ಥಾನಗಳಿಗೆ ಚುನಾವಣೆಗಳನ್ನು ನಡೆಸುವುದು.
  • ಮತದಾರರ ಪಟ್ಟಿಗಳ ಸಿದ್ದತೆ ಹಾಗೂ ಪರಿಷ್ಕರಣೆ, ಪರಿಶೀಲನೆ ಮತ್ತು ನಿರ್ದೇಶನ
  • ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು.
  • ರಾಜಕೀಯ ಪಕ್ಷಗಳಿಗೆ ಚುನಾವಣಾ ಚಿನ್ಹೆಗಳನ್ನು ನೀಡುವುದು.
  • ಕೇಂದ್ರ ಚುನಾವಣಾ ಆಯೋಗದ ಮೊದಲ ಮುಖ್ಯ ಆಯುಕ್ತರು ಸುಕುಮಾರ್‌ ಸೇನ್.‌

ಕೇಂದ್ರ ಚುನಾವಣಾ ಆಯೋಗ ಪ್ರಮುಖ ಸುಧಾರಣೆಗಳು :

  • ವಿದ್ಯುನ್ಮಾನ ಮತಯಂತ್ರ ಚುನಾವಣೆಯಲ್ಲಿ ಪಾರದರ್ಶಕತೆ ತರಲು ಕೇಂದ್ರ ಚುನಾವಣಾ ಆಯೋಗವು EVM ನ್ನು ಪರಿಚಯಿಸಿದೆ.
  • EVM ಬಳಕೆಗಿಂತ ಮೊದಲು ಚುನಾವಣೆಗೆ ಬ್ಯಾಲೇಟ್‌ ಪೇಪರನ್ನು ಬಳಕೆ ಮಾಡಲಾಗುತ್ತಿತ್ತು.
  • EVM ನ್ನು 1982 ರಲ್ಲಿ ಮೊದಲ ಬಾರಿಗೆ ಕೇರಳದ ಪರವೂರಿನ ಉಪಚುನಾವಣೆಯಲ್ಲಿ ಕೆಲವು ಸೀಮಿತ ಮತಕೇಂದ್ರಗಳಲ್ಲಿ ಬಳಕೆ ಮಾಡಲಾಯಿತು.
  • ಇದರ ಪರಿಣಾಮದ ಹಿನ್ನಲೆಯಲ್ಲಿ 1989 ರಲ್ಲಿ ಚುನಾವಣಾ ಆಯೋಗವು BEL ಮತ್ತು ಎಲೆಕ್ಟ್ರಾನಿಕ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ ಸಹಯೋಗದೊಂದಿಗೆ EVM ನ್ನು ಅಭಿವೃದ್ದಿಪಡಿಸಿತು.
  • 1999 ರಲ್ಲಿ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ EVM ನ್ನು ಬಳಕೆ ಮಾಡಲಾಯಿತು.
  • 2004 ರ ಲೋಕಸಭಾ ಚುನಾವಣೆಯಲ್ಲಿ ಸಂಪೂರ್ಣವಾಗಿ EVM ನ್ನು ಬಳಕೆ ಮಾಡಲಾಯಿತು.
  • ಪ್ರತಿ EVM 6 ವೋಲ್ಟಾನ ಬ್ಯಾಟರಿಯ ಸಂಪರ್ಕವನ್ನು ಹೊಂದಿರುತ್ತದೆ.
  • ಒಂದು EVM ಯಂತ್ರದಲ್ಲಿ 16 ಅಭ್ಯರ್ಥಿಗಳಿಗೆ ಅವಕಾಶವಿದ್ದು, 4 ಯಂತ್ರಗಳನ್ನು ಒಂದೇ ಕಡೆ ಸಂಪರ್ಕ ಕಲ್ಪಿಸಬಹದು. ಒಟ್ಟಾರೆ 64 ಅಭ್ಯರ್ಥಿಗಳಿಗೆ ಅವಕಾಶವಿದೆ.
  • ಭಾರತದ EVM ಗಳನ್ನು ನೇಪಾಳ, ಭೂತಾನ, ನಮೀಬಿಯಾ ಹಾಗೂ ಕೀನ್ಯಾ ದೇಶಗಳು ಖರೀದಿಸಿವೆ.

ವಿವಿ ಪ್ಯಾಟ ಬಳಕೆ :

  • VVPAT-Voter Verifiable Paper Audiet Trail
  • ಮತದಾರನು ಚಲಾಯಿಸಿದ ಮತವು ಅದೇ ವ್ಯಕ್ತಿಗೆ ಆಗಿದೆ ಎಂಬುದನ್ನು ಪರೀಕ್ಷಿಸಲು ವಿ.ವಿ.ಪ್ಯಾಟನ್ನು ಬಳಕೆ ಮಾಡಲಾಗುತ್ತದೆ.
  • ಕೇಂದ್ರ ಚುನಾವಣಾ ಆಯೋಗ ನೇಮಕ ಮಾಡಿದ “ಪಿ.ವಿ.ಇಂದರೇಶನ ಸಮಿತಿ” ಶಿಫ್ಪಾರಸ್ಸಿನ ಮೇರೆಗೆ ಇದನ್ನು ಅಳವಡಿಸಲಾಯಿತು.
  • ವಿ.ವಿ.ಪ್ಯಾಟನ್ನು 2013 ರ ಸೆಪ್ಟೆಂಬರನಲ್ಲಿ ನಾಗಾಲ್ಯಾಂಡನ ನಾಗಸೇನ ಚುನಾವಣೆಯಲ್ಲಿ ಬಳಕೆ ಮಾಡಲಾಯಿತು.
  • ETPBS : ಅನಿವಾಸಿ ಭಾರತೀಯರು ಭಾರತದಲ್ಲಿ ನಡೆಯುವ ಚುನಾವಣೆಗಳಲ್ಲಿ ತಾವಿರುವ ಸ್ಥಳದಿಂದಲೇ ವಿದ್ಯುನ್ಮಾನ ಮಾಧ್ಯಮದ ಮೂಲಕ ಮತದಾನ ಮಾಡಲು ಈ ವ್ಯವಸ್ಥೆ ಮೂಲಕ ಚಿಂತನೆ ನಡೆಸಲಾಗಿದೆ.
  • E-Epic : 2021ರ ಜನವರಿ 25 ರಂದು ಕೇಂದ್ರ ಚುನಾವಣಾ ಆಯೋಗವು ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ E-Epic ಕಾರ್ಯಕ್ರಮವನ್ನು ರೂಪಿಸಿದೆ.
  • Voter Helpline App ಮೂಲಕ ಮತದಾರರು E-Epic ಕಾರ್ಡನ್ನು ಪಡೆಯಲು ಅವಕಾಶ ನೀಡಿದೆ.

ರಿಮೋಟ್‌ ವೋಟಿಂಗ್‌ ವ್ಯವಸ್ಥೆ :

  • ರಿಮೋಟ್‌ ವೋಟಿಂಗ್‌ ವ್ಯವಸ್ಥೆಯು ಸ್ವ ಕ್ಚೇತ್ರಕ್ಕೆ ಬಂದು ಮತದಾನ ಮಾಡಲು ಆಗದವರು ದೂರದ ಊರಿನಲ್ಲೇ ಕುಳಿತು ಹಕ್ಕು ಚಲಾವಣೆ ಮಾಡವು ಕ್ರಾಂತಿಕಾರಿ ಸೌಲಭ್ಯ ಒದಗಿಸುವ ಪದ್ದತಿಯಾಗಿದೆ.
  • ಈ ಸೌಲಭ್ಯ ಕಲ್ಪಿಸಲು ಬ್ಲ್ಯಾಕಚೈನ್‌ ತಂತ್ರಜ್ಞಾನ ಬಳಸಿಕೊಳ್ಳಬಲಾಗುತ್ತಿದೆ.
  • ರಿಮೋಟ್‌ ವೋಟಿಂಗ್‌ ವ್ಯವಸ್ಥೆಯ ವಿಧಾನ : ತಾವಿರುವ ಸ್ಥಳದಿಂದಲೇ ಮತ ಹಾಕಲು ಬಯಸುವ ವ್ಯಕ್ತಿ ಈ ಸಂಬಂಧ ಚುನಾವಣಾಧಿಕಾರಿಗಳಿಗೆ ಮೊದಲೇ ಅರ್ಜಿ ಸಲ್ಲಿಸಬೇಕು.
  • ಇಂಟರ್ನೆಟ್‌, ಬಯೋಮೆಟ್ರಿಕ್‌ ಉಪಕರಣ, ವೆಬ್‌ ಕ್ಯಾಮಾರದಂತಹ ಸಾಧನಗಳು ಅಲ್ಲಿರುತ್ತವೆ. ಈ ವ್ಯವಸ್ಥೆ ಪ್ರಯೋಜನ ಪಡೆಯುವ ಇಚ್ಛೆಯುಳ್ಳ ಮತದಾರರು ಮುಂಚಿತವಾಗಿಯೇ ನಿಗದಿತ ಸ್ಥಳಕ್ಕೆ ನಿಗದಿತ ಸಮಯಕ್ಕೆ ಹೋಗಿರಬೇಕು. ಆಗಲೇ ರಿಮೋಟ್‌ ಮತದಾನ ಮಾಡಲು ಸಾದ್ಯವಾಗುತ್ತದೆ.
  • ಸಂವಿಧಾನದ 15ನೇ ಭಾಗದ 324ನೇ ವಿಧಿಯ ಅನ್ವಯ ಕೇಂದ್ರ ಚುನಾವಣಾ ಆಯೋಗವನ್ನು ಸ್ಥಾಪಿಸಲಾಗಿದೆ.
  • 1951 – 1952 ರಲ್ಲಿ ಭಾರತದಲ್ಲಿ ಮೊದಲ ಸಾವ್ರರ್ತಿಕ ಚುನಾವಣೆ ಜರುಗಿತ್ತು.
  • ಹಿಮಾಚಲ ಪ್ರದೇಶದ ಶ್ಯಾಮಶರಣ್‌ ನೇಗಿ ಎಂಬ ಶಾಲಾ ಶಿಕ್ಷಕ ಮೊದಲ ಮತದಾನ ಮಾಡಿದ್ದು, ದೇಶದಲ್ಲಿಯೇ ಮತದಾನ ಮಾಡಿದ ಮೊದಲ ವ್ಯಕ್ತಿಯಾಗಿದ್ದಾನೆ.
  • 1988 ರಲ್ಲಿ ಸಂವಿಧಾನದ 61ನೇ ತಿದ್ದುಪಡಿ ಅನ್ವಯ ಮತದಾರನ ಕನಿಷ್ಠ ವಯೋಮಿತಿಯನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಕೆ ಮಾಡಲಾಗಿದೆ.

FAQ :

ಕೇಂದ್ರ ಚುನಾವಣಾ ಆಯೋಗ ಯಾವಾಗ ಸ್ಥಾಪನೆಯಾಯಿತು?

25/1/1950

ಪ್ರಸ್ತುತ ಕೇಂದ್ರ ಚುನಾವಣಾ ಆಯೋಗದ ಆಯುಕ್ತರು ಯಾರು?

ಸುಶೀಲ್‌ ಚಂದ್ರ

ಇತರೆ ವಿಷಯಗಳು :

ಸಮಾಜೀಕರಣದ ಬಗ್ಗೆ ಮಾಹಿತಿ

ಛತ್ರಪತಿ ಶಿವಾಜಿಯ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ