ರಾಸಾಯನಿಕ ಗೊಬ್ಬರಗಳ ಬಗ್ಗೆ ಮಾಹಿತಿ | Information about chemical fertilizers in Kannada

ರಾಸಾಯನಿಕ ಗೊಬ್ಬರಗಳ ಬಗ್ಗೆ ಮಾಹಿತಿ Information about chemical fertilizers Rasayanikagobbaragala bagge Mahithi in Kannada

ರಾಸಾಯನಿಕ ಗೊಬ್ಬರಗಳ ಬಗ್ಗೆ ಮಾಹಿತಿ

Information about chemical fertilizers in Kannada
ರಾಸಾಯನಿಕ ಗೊಬ್ಬರಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ರಾಸಾಯನಿಕ ಗೊಬ್ಬರಗಳು :

ಸಸ್ಯಗಳ ಸಮೃದ್ದ ಬೆಳವಣಿಗೆಗೆ ಸುಮಾರು 18 ಪೋಷಕಾಂಶಗಳು ಅತ್ಯವಶ್ಯಕ. ಒಂದು ವೇಳೆ ಪೋಷಕಾಂಶಗಳ ಕೊರತೆಯಾದರೆ ಸಸ್ಯಗಳ ಬೆಳವಣಿಗೆ ಕುಂಠಿತವಾಗಿ ಅನೇಕ ರೋಗ ಲಕ್ಷಣಗಳು ಕಂಡು ಬರುತ್ತವೆ. ಸಸ್ಯಗಳು ತಮಗೆ ಬೇಕಾದ ಪೋಷಕಾಂಶಗಳನ್ನು ಗಾಳಿ, ನೀರು, ಮಣ್ಣಿನಿಂದ ಪಡೆದುಕೊಳ್ಳುತ್ತವೆ.

ಸಸ್ಯಗಳಿಗೆ ಅವಶ್ಯವಾಗಿ ಬೇಕಾಗಿರುವ ಪೋಷಕಾಂಶಗಳು :

  • ಲವಣಾಂಶಗಳಿಲ್ಲದ ಪೋಷಕಾಂಶಗಳು : ಜಲಜನಕ, ಇಂಗಾಲ, ಆಮ್ಲಜನಕ.
  • ಪ್ರಾಥಮಿಕ ಪೋಷಕಾಂಶ : ಸಾರಜನಕ, ರಂಜಕ, ಪೊಟ್ಯಾಸಿಯಂ.
  • ದ್ವಿತೀಯಕ ಪೋಷಕಾಂಶ : ಕ್ಯಾಲ್ಸಿಯಂ, ಮ್ಯಾಗ್ನೇಷಿಯಂ, ಸಲ್ಫರ್.‌
  • ಕಿರು ಪೋಷಕಾಂಶ : ಮಾಲಿಬ್ಡಿನಂ‌, ಮ್ಯಾಂಗನೀಸ್, ತಾಮ್ರ, ಕ್ಲೋರಿನ್‌, ಸೋಡಿಯಂ, ಬೋರಾನ್.

ಪೋಷಕಾಂಶಗಳು :

ಸಾರಜನಕ :

  • ಇದು ಸಸ್ಯಗಳಲ್ಲಿ ಹೇರಳವಾಗಿ ಕಂಡು ಬರುತ್ತದೆ.
  • ಪ್ರೋಟೀನ್‌ ತಯಾರಿಕೆ ಮತ್ತು ಕ್ಲೋರೋಫಿಲ್‌ ನ ತಯಾರಿಕೆಗೆ ಅವಶ್ಯಕ.
  • ಇದರ ಕೊರತೆಯಿಂದ ಎಲೆಗಳು ಬಿಳುಚಿಕೊಂಡು ಕುಂಠಿತ ಬೆಳವಣಿಗೆ ಹೊಂದುತ್ತವೆ.
  • ಹೀಗೆ ಎಲೆಗಳು ಬಿಳುಚಿಕೊಂಡಿರುವುದನ್ನು ಕ್ಲೋರೋಸಿಸ್‌ ಎನ್ನುವರು.

ರಂಜಕ :

  • ಇದು ಬೇರುಗಳ ಬೆಳವಣಿಗೆಗೆ ಮತ್ತು ಕಾರ್ಬೋಹೈಡ್ರೇಟ್‌ ಮತ್ತು ಪ್ರೋಟೀನ್‌ ತಯಾರಿಕೆಗೆ ಅತ್ಯವಶ್ಯಕವಾಗಿದೆ.
  • ಇದರ ಕೊರತೆಯಿಂದ ಸಸ್ಯಗಳು ಕುಬ್ಜವಾಗಿ ಬೆಳವಣಿಗೆ ಹೊಂದಿ ಎಲೆಗಳು ನೇರಳೆ ಬಣ್ಣಕ್ಕೆ ತಿರುಗಿ ಅಕಾಲಿಕವಾಗಿ ಉದುರುತ್ತವೆ.

ಪೊಟ್ಯಾಸಿಯಂ :

  • ಇದು ಹೂ ಬಿಡುವಿಕೆಗೆ ಅವಶ್ಯವಾಗಿದೆ.
  • ಕ್ಲೋರೋಫಿಲ್‌ ತಯಾರಿಕೆಗೆ ಪ್ರೋಟೀನ್‌ ತಯಾರಿಕೆ, ದ್ಯುತಿಸಂಶ್ಲೇಷಣೆ ಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
  • ಇದರ ಕೊರತೆಯಿಂದ ಎಲೆಗಳ ತುದಿ ಸುರುಳಿ ಸುತ್ತಿಕೊಳ್ಳುತ್ತವೆ. ಕಾಂಡ ದುರ್ಬಲವಾಗುತ್ತವೆ.

ಕ್ಯಾಲ್ಸಿಯಂ :

  • ಇದು ಸಸ್ಯಗಳ ಕೋಶ ಬಿತ್ತಿಯ ರಚನೆಗೆ ಫೆಕ್ಸಿನ್‌ ಗಳ ತಯಾರಿಕೆಗೆ ಅವಶ್ಯವಾಗಿದೆ.
  • ಇದರ ಕೊರತೆಯಿಂದ ಎಲೆಗಳ ಅಂಚಿನಲ್ಲಿ ಕ್ಲೋರೋಸಿಸ್‌ ಉಂಟಾಗುತ್ತದೆ ನಂತರ ಎಲೆಗಳ ಬೆಳವಣಿಗೆ ಹಂತದಲ್ಲಿ ಉದುರುತ್ತವೆ.

ಮ್ಯಾಗ್ನೇಷಿಯಂ :

  • ಇದು ಕ್ಲೋರೋಫಿಲ್‌ ದಲ್ಲಿ ಕಂಡು ಬರುತ್ತದೆ.
  • ಇದು ದ್ಯುತಿ ಸಂಶ್ಲೇಷಣೆ, ಉಸಿರಾಟ ಹಾಗೂ ಲೆಗ್ಯುಮಿನಸ್‌ ಸಸ್ಯಗಳ ಬೇರುಗಳಲ್ಲಿನ ಗಂಟುಗಳ ತಯಾರಿಕೆಗೆ ಅವಶ್ಯಕವಾಗಿದೆ.
  • ಇದರ ಕೊರತೆಯಿಂದ ನೆಕ್ರೋಸಿಸ್‌ ಎಂಬ ಖಾಯಿಲೆ ಉಂಟಾಗುತ್ತದೆ.

ಗಂಧಕ :

  • ಇದು ಬೇರುಗಳ ಬೆಳವಣಿಗೆ ಹಾಗೂ ಪ್ರೋಟೀನ್‌ ಗಳ ಉತ್ಪಾದನೆಗೆ ಅವಶ್ಯಕವಾಗಿದೆ.
  • ಇದರ ಕೊರತೆಯಿಂದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ.

ಸತು :

  • ಇದು Indal acetic acid ತಯಾರಿಕೆಗೆ ಅವಶ್ಯಕವಾಗಿದೆ.
  • ಇದರ ಕೊರತೆಯಿಂದ ಎಲೆಗಳು, ಅಂತರ್ಗೆಣ್ಣುಗಳು ಕಿರಿದಾಗುತ್ತವೆ.

ಬೋರಾನ್‌ :

  • ಇದು ಕ್ಯಾಲ್ಸಿಯಂ ಮತ್ತು ನೀರಿನ ಹೀರಿಕೆಗೆ ಅವಶ್ಯಕವಾಗಿದೆ.
  • ಇದರ ಕೊರತೆಯಿಂದ ಎಲೆಗಳು, ಅಂತರ್ಗೇಣ್ಣುಗಳು ಕಿರಿದಾಗುತ್ತವೆ.

ಮ್ಯಾಂಗನೀಸ್‌ :

  • ಇದು ನೈಟ್ರೋಜನ್‌ ಮೆಟಾಬಾಲಿಸಂ ಗೆ ಕೋ-ಕಿಣ್ವವಾಗಿ ಸಹಕಾರಿಯಾಗಿದೆ.
  • ದರ ಕೊರತೆಯಿಂದ ಕ್ಲೋರೋಟಿಕ್‌ ಮತ್ತು ನೆಕ್ರಾಟಿಕ್‌ ಮಚ್ಚೆಗಳು ಉಂಟಾಗುತ್ತವೆ.

ರಾಸಾಯನಿಕ ಗೊಬ್ಬರಗಳ ವಿಧಗಳು :

  • ಸಾರಜನಕಯುಕ್ತ ಗೊಬ್ಬರ :

ಸಾರಜನಕಯುಕ್ತ ಗೊಬ್ಬರಗಳನ್ನು ತಯಾರಿಸಲು ಮುಖ್ಯವಾದ ಕಚ್ಛಾವಸ್ತು ಅಮೋನಿಯಂ ಅನಿಲ. ಉದಾಹರಣೆಗೆ

ಯೂರಿಯಾ – ಇದನ್ನು ಎಲ್ಲಾ ರೀತಿಯ ಮಣ್ಣಿನಲ್ಲಿ ಹಾಕಬಹುದು ಆದರೆ ದ್ವಿದಳ ಧಾನ್ಯಗಳನ್ನು ಬೆಳೆಯುವ ಮಣ್ಣಿಗೆ ಹಾಕುವುದಿಲ್ಲ. ಇದರಲ್ಲಿ 46% ಸಾರಜನಕ ಇರುತ್ತದೆ.

ಅಮೋನಿಯಂ ಸಲ್ಫೇಟ್‌ – ಇದು ಹೆಚ್ಚು ತೇವಾಂಶವಿರುವ ಭತ್ತದ ಗದ್ದೆಗೆ ಹಾಕುವರು. ಇದರಲ್ಲಿ 20% ರಷ್ಟು ಸಾರಜನಕ ಇದೆ.

ಅಮೋನಿಯಂ ನೈಟ್ರೇಟ್‌ – ಇದು ಸುಣ್ಣದ ಅಂಶವಿರುವ ಮಣ್ಣಿಗೆ ಹಾಕುವರು. ಇದರಲ್ಲಿ 20%ರಷ್ಟು ಸಾರಜನಕ ಇದೆ.

ಸೋಡಿಯಂ ನೈಟ್ರೈಟ್ – ಇದು ಹುಳಿ ಮಣ್ಣಿಗೆ ಹಾಕುವರು. ಇದರಲ್ಲಿ16%ರಷ್ಟು ಸಾರಜನಕ ಇದೆ.

  • ರಂಜಕಯುಕ್ತ ಗೊಬ್ಬರ :

ರಂಜಕಗಳನ್ನು ಹೊಂದಿರುವ ಗೊಬ್ಬರಗಳನ್ನು ರಂಜಕಯುಕ್ತ ಗೊಬ್ಬರ ಎನ್ನುವರು. ಉದಾಹರಣೆಗೆ

ಸುಪರ್‌ ಫಾಸ್ಫೇಟ್‌ – ಇದನ್ನು ಎಲ್ಲಾ ತರಹದ ಮಣ್ಣಿಗೂ ಹಾಕುವರು ಇದರಲ್ಲಿ 16-20% ಫಾಸ್ಫರಿಕ್‌ ಆಮ್ಲ ಇರುತ್ತದೆ.

  • ಪೊಟ್ಯಾಷಿಯಂಯುಕ್ತ ಗೊಬ್ಬರ :

ಇದನ್ನು ಸಾಮಾನ್ಯವಾಗಿ ಮಸ್ಸಾರಿ ಮಣ್ಣಿಗೆ ಹಾಕುವರು.

ಪೊಟ್ಯಾಷಿಯಂ ಸಲ್ಫೇಟ್‌ – ಇದರಲ್ಲಿ 48-52% ಪೊಟ್ಯಾಷಿಯಂ ಇರುತ್ತದೆ.

ಮ್ಯಾರೇಟ್‌ ಆಫ್‌ ಪೊಟ್ಯಾಷ್‌ – ಇದನ್ನು ಬಿತ್ತುವ ಸಮಯದಲ್ಲಿ ಹಾಕುವರು. ಇದರಲ್ಲಿ 50-60% ಪೊಟ್ಯಾಷ್‌ ಇರುತ್ತದೆ.

FAQ :

ಪ್ರಾಥಮಿಕ ಪೋಷಕಾಂಶಗಳು ಯಾವುವು?

ಸಾರಜನಕ, ರಂಜಕ, ಪೊಟ್ಯಾಸಿಯಂ.

ತೇವಾಂಶವಿರುವ ಭತ್ತದ ಗದ್ದೆಗೆ ಯಾವ ಗೊಬ್ಬರವನ್ನು ಹಾಕುತ್ತಾರೆ?

ಅಮೋನಿಯಂ ಸಲ್ಪೇಟ್.

ಇತರೆ ವಿಷಯಗಳು :

ಭಾರತದ ಪ್ರಮುಖ ಕೈಗಾರಿಕೋದ್ದಿಮೆಗಳ ಬಗ್ಗೆ ಮಾಹಿತಿ

ಜಲ ಸಂಪನ್ಮೂಲಗಳ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ