ಛತ್ರಪತಿ ಶಿವಾಜಿಯ ಬಗ್ಗೆ ಮಾಹಿತಿ | Information about Chhatrapati Shivaji in Kannada

ಛತ್ರಪತಿ ಶಿವಾಜಿಯ ಬಗ್ಗೆ ಮಾಹಿತಿ Information about Chhatrapati Shivaji Chathrapathi Shivaji bagge Mahithi in Kannada

ಛತ್ರಪತಿ ಶಿವಾಜಿಯ ಬಗ್ಗೆ ಮಾಹಿತಿ

Information about Chhatrapati Shivaji in Kannada
ಛತ್ರಪತಿ ಶಿವಾಜಿಯ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಛತ್ರಪತಿ ಶಿವಾಜಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಛತ್ರಪತಿ ಶಿವಾಜಿ(ಕ್ರಿ.ಶ.1627-1680) :

  • ಕ್ರಿ.ಶ. 1627 ಫೆಬ್ರವರಿ 19 ರಲ್ಲಿ ಪುಣೆ ಜಿಲ್ಲೆಯ ಶಿವನೇರಿದುರ್ಗ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಷಹಾಜಿಬೋಸ್ಲೆ, ತಾಯಿ ಜೀಜಾಬಾಯಿ, ಶಸ್ತ್ರಾಸ್ತ್ರ ವಿದ್ಯಾ ಗುರು ದಾದಾಜಿಕೊಂಡದೇವ, ಆಧ್ಯಾತ್ಮಿಕ ಗುರು ರಾಮದಾಸ.
  • ಶಿವಾಜಿ ತನ್ನ 16 ನೇ ವಯಸ್ಸಿನಲ್ಲಿ ಮೊಘಲರ ವಿರುದ್ದ ಒಂದು ಪ್ರಬಲವಾದ ಸಾಮ್ರಾಜ್ಯ ನಿರ್ಮಿಸುವ ಕನಸು ಹೊಂದಿದ್ದನು.
  • ಕ್ರಿ.ಶ. 1646 ರಲ್ಲಿ ಬಿಜಾಪುರದ ಸುಲ್ತಾನನ ವಶದಲ್ಲಿದ್ದ ತೋರಣ ದುರ್ಗ, ಪ್ರತಾಪಗಢ, ರಾಯಗಢ ಮತ್ತು ಕೊಂಡಾಣ ಎಂಬ ಪ್ರದೇಶಗಳನ್ನು ವಶಪಡಿಸಿಕೊಂಡನು. ಆಗ ಬಿಜಾಪುರದ ಸುಲ್ತಾನ ಷಹಾಜಿ ಬೋಸ್ಲೆಯನ್ನು ಬಂದನದಲ್ಲಿಟ್ಟಿದನು. ಆಗ ಶಿವಾಜಿ ತಂದೆಯ ಬಿಡುಗಡೆಗಾಗಿ ಕೊಂಡಾಣ ಕೋಟೆ ಬಿಟ್ಟುಕೊಟ್ಟನು.
  • ಕ್ರಿ.ಶ. 1659 ರಲ್ಲಿ ಬಿಜಾಪುರದ ಸುಲ್ತಾನ 2ನೇ ಅಲಿ ಆದಿಲ್‌ ಷಾಹಿಯ ದಂಡನಾಯಕ ಅಫ್ಜಲ್ಖಾನನ್ನು ತನ್ನ ವ್ಯಾಘ್ರನಖದಿಂದ ಹೊಟ್ಟೆ ಹರಿದು ಕೊಲೆ ಮಾಡಿದನು.
  • ಕ್ರಿ.ಶ. 1663 ರಲ್ಲಿ ಔರಂಗಜೇಬ ಶಿವಾಜಿಯ ವಿರುದ್ದ ತನ್ನ ಅಳಿಯ ಶಾಯಿಸ್ತಾಖಾನನ್ನು ಕಳುಹಿಸಿದನು. ಈ ಸೈನ್ಯವನ್ನು ಶಿವಾಜಿ ತನ್ನ ಗೆರಿಲ್ಲಾ ಯುದ್ದ ತಂತ್ರದ ಮೂಲಕ ಸದೆ ಬಡಿದನು.
  • ಕ್ರಿ.ಶ. 1665 ರಲ್ಲಿ ಔರಂಗಜೇಬ ಜೈಸಿಂಗ್‌ ಮತ್ತು ದುಲೀಪ್‌ ಸಿಂಗ್ ರ ನೇತೃತ್ವದಲ್ಲಿ ಮತ್ತೊಂದು ಪ್ರಬಲವಾದ ಸೈನ್ಯಕೊಟ್ಟು ಕಳುಹಿಸಿದನು. ಈ ಸೈನ್ಯ ಶಿವಾಜಿಯ ಎಲ್ಲಾ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಾ ಪುರಂದಗಢಕ್ಕಡ ಬಂದು ತಲುಪಿತು.
  • ಕ್ರಿ.ಶ. 1665 ಜೂನ್‌ 22 ರಂದು ಪುರಂದಗಢ ಒಪ್ಪಂದಕ್ಕೆ ಸಹಿ ಹಾಕಿ 23 ಕೋಟೆಗಳು ಮೊಘಲರಿಗೆ ಒಪ್ಪಿಸಿ ಆಡಳಿತದ ಸಮಸ್ತ ಜವಬ್ದಾರಿ ಎಲ್ಲವೂ ತನ್ನ ತಾಯಿ ಜೀಜಾಬಾಯಿಗೆ ವಹಿಸಿ, ಜೈಸಿಂಗ್‌ ನ ಮಾತಿನಂತೆ 1666 ಮಾರ್ಚ್‌ 16 ರಂದು ತನ್ನ ಮಗ ಸಂಭಾಜಿಯೊಂದಿಗೆ ಆಗ್ರಾ ನಗರಕ್ಕೆ ತೆರಳಿದನು. ಅಲ್ಲಿ ಶಿವಾಜಿಗೆ ಅವಮಾನಗೊಳಿಸಿ ಬಂಧನದಲ್ಲಿಡಲಾಯಿತು.
  • ಕ್ರಿ,ಶ. 1666 ನವೆಂಬರ್‌ 30 ರಂದು ತನ್ನ ಮಗ ಸಂಭಾಜಿಯೊಂದಿಗೆ ಹಣ್ಣಿನ ಬುಟ್ಟಿಯಲ್ಲಿ ಕುಳಿತು ಔರಂಗಜೇಬನ ಬಂಧನದಿಂದ ಪಾರಾದನು.
  • ಔರಂಗಜೇಬನ ಬಂಧನದಿಂದ ಪಾರಾದ ಶಿವಾಜಿ ಮೊಘಲರ ವಶದಲ್ಲಿದ್ದ ಎಲ್ಲಾ ಕೋಟೆಗಳನ್ನು ಪುನಃ ವಶಪಡಿಸಿಕೊಂಡನು.
  • ಕ್ರಿ.ಶ. 1670 ರಲ್ಲಿ ಮರಾಠರ ಪ್ರಸಿದ್ದ ದಳಪತಿ ಮತ್ತು ಶಿವಾಜಿಯ ಆಪ್ತ ಸ್ನೇಹಿತ ತಾನಾಜೀ ಮಲ್ಸೂರೇ ಎಂಬಾತನು ಮೊಘಲರ ವಿರುದ್ದ ವೀರಾವೇಶದಿಂದ ಹೋರಾಡಿ ಸಿಂಹಗಢ ಎಂಬ ಕೋಟೆಯನ್ನು ವಶಪಡಿಸಿಕೊಂಡು ಮರಣ ಹೊಂದಿದನು. ಆಗ ಆಪ್ತ ಸ್ನೇಹಿತನ ಮರಣವನ್ನು ಕುರಿತು ಶಿವಾಜಿ ಕೋಟೆಯನ್ನು ಗೆದ್ದುಕೊಂಡೆ ಆದರೆ ಸಿಂಹವನ್ನು ಕಳೆದುಕೊಂಡೆ ಎಂದನು.
  • ಕ್ರಿ.ಶ. 1672 ರಲ್ಲಿ ಶಿವಾಜಿ ಸಲ್ಹರ್‌ ಎಂಬ ಕದನದಲ್ಲಿ ಮೊಘಲರ ಸೈನ್ಯವನ್ನು ಸಂಪೂರ್ಣವಾಗಿ ಸೋಲಿಸಿದನು. ಆಗ ಔರಂಗಜೇಬ ಶಿವಾಜಿಗೆ ರಾಜಾ ಎಂಬ ಬಿರಿದು ನೀಡಿದನು.
  • ಕ್ರಿ.ಶ. 1674 ಜೂನ್‌ 16 ರಂದು ಶಿವಾಜಿಗೆ ರಾಯಗಢದಲ್ಲಿ ಪಟ್ಟಾಬಿಷೇಕವಾಗಿ ಛತ್ರಪತಿ ಎಂಬ ಬಿರುದು ನೀಡಲಾಯಿತು.

ಶಿವಾಜಿಯ ಆಡಳಿತ :

  • ಅರಸ ಆಡಳಿತ ಕೇಂದ್ರ ಬಿಂದು ಆಗಿದ್ದ.
  • ಅಂತಿಮ ನ್ಯಾಯ ನೀಡುವ ನ್ಯಾಯಾದೀಶನಾಗಿದ್ದ.
  • ಅರಸನಿಗೆ ಸಹಾಯ ಮಾಡಲು ಮಂತ್ರಿ ಮಂಡಲವಿತ್ತು.
  • ಮಂತ್ರಿಗಳನ್ನು ಪೇಶ್ವೆಗಳೆಂದು ಕರೆಯುತ್ತಿದ್ದರು.
  • ಶಿವಾಜಿ ಆಡಳಿತ ಅನುಕೂಲಕ್ಕಾಗಿ ರಾಜ್ಯವನ್ನು 4 ಭಾಗಗಳಾಗಿ ವಿಭಾಗಿಸಿದ್ದನು.
  • ಪ್ರಾಂತ್ಯ – ಪ್ರಾಂತ್ಯಾಧಿಕಾರಿ
  • ಜಿಲ್ಲೆಗಳು – ಮುಖ್ಯ ದೇಶಾದಿಕಾರಿ
  • ಪರಗಣ – ಹವಾಲ್ದಾರ
  • ಗ್ರಾಮ – ಪಟೇಲ

ಶಿವಾಜಿಯ ಕಂದಾಯ ಪದ್ದತಿ :

  • ಚೌತ್‌ – 1/4 ರಷ್ಟು ಶತೃ ಸಾಮ್ರಾಜ್ಯದ ಮೇಲೆ ಹೇರುವ ತೆರಿಗೆ
  • ಸರ್‌ದೇಶಮುಕಿ – 1/10 ಮಿತ್ರ ಪ್ರದೇಶಗಳ ಮೇಲಿನ ತೆರಿಗೆ

ಶಿವಾಜಿಯ ಅಶ್ವಪಡೆ :

  • ಸಿಲ್ದಾದಾರ – ಸ್ವಂತ ಕುದುರೆ ಪಡೆದುಕೊಂಡು ಸೈನ್ಯದಲ್ಲಿ ಸೇರುವುದು.
  • ಬಾಗೀರಬಾದ್‌ – ಸರ್ಕರದ ಕುದುರೆ ಪಡೆದುಕೊಂಡು ಸೈನ್ಯದಲ್ಲಿ ಸೇರುವುದು.

ಅಷ್ಟ ಪ್ರಧಾನರು :

  • ಪೇಶ್ವೆ – ಪ್ರಧಾನಮಂತ್ರಿ
  • ಅಮಾತ್ಯ – ಹಣಕಾಸು
  • ಮಂತ್ರಿ – ದೈನಂದಿನ
  • ಸಚಿವ – ಲೆಕ್ಕ ಪತ್ರ
  • ಸುಮಂತ – ವಿದೇಶಾಂಗ ವ್ಯವಹಾರ ನೋಡಿಕೊಳ್ಳುವವರು
  • ಪಂಡಿತ – ಮುಖ್ಯ ಪುರೋಹಿತ
  • ಸರಣೋಬತ್ರ – ಸೇನಾಧಿಪತಿ
  • ನ್ಯಾಯಾಧೀಶ – ನ್ಯಾಯ ತೀರ್ಮಾನ ನೀಡುವನು

ಕ್ರಿ.ಶ. 1680 ರಲ್ಲಿ ಭುಜದ ಕ್ಯಾನ್ಸರ್‌ ನಿಂದ ಮರಣ ಹೊಂದಿದನು.

ಸಮಾಧಿ ಸ್ಥಳ – ರಾಯಗಢದಲ್ಲಿದೆ.

ಶಿವಾಜಿಯ ವಿಶೇಷ ಅಂಶಗಳು :

  • ಹೈಂದವಿ ಸಾಮ್ರಾಜ್ಯದ ಕಲ್ಪನೆ ಕಂಡ ಮೊದಲ ವ್ಯಕ್ತಿ – ಶಿವಾಜಿ
  • ಶಿವಾಜಿಯನ್ನು ಮೊಘಲರು ಬೆಟ್ಟದ ಹುಲಿ ಎಂದು ಕರೆಯುತ್ತಿದ್ದರು.
  • ಶಿವಾಜಿಗೆ ಪಟ್ಟಾಭಿಷೇಕ ಮಾಡಿದವರು – ಕಾಶಿಯ ಪಂಡಿತ ಗಗಭಟ್‌ ಅಥವಾ ಗಂಗಾದರ್‌ ಭಟ್‌
  • ಶಿವಾಜಿಯ ಕುದುರೆ ಹೆಸರು – ಕೃಷ್ಣ(ಹೆಣ್ಣು ಕುದುರೆ)
  • ಶಿವಾಜಿಯ ನಾಯಿಯ ಹೆಸರು – ವಾಗ್ಯಾ
  • ಶಿವಾಜಿಯ ಖಡ್ಗದ ಹೆಸರು – ಭವಾನಿ
  • ಮರಾಟರು ತಮ್ಮ ದಾಖಲೆಗಳಲ್ಲಿ ಮೋಡಿ ಲಿಪಿಯನ್ನು ಬಳಸಿದರು.
  • ಶಿವಾಜಿಯನ್ನು ಭಾರತದ ನೌಕಾದಳದ ಪಿತಾಮಹಾ ಎಂದು ಕರೆಯುತ್ತಾರೆ.
  • ಶಿವಾಜಿಯ ಸೈನ್ಯದಲ್ಲಿ ಸರನೋಭತ್ತ, ಹಜಾರಿ, ಜುಮ್ಲಾದಾರ, ಹವಾಲ್ದಾರ, ನಾಯಕ, ಫೈಕ ಎಂಬ ಸೈನ್ಯಾಧಿಕಾರಿಗಳಿದ್ದರು. ಕ್ರಿ.ಶ. 1680 ರಲ್ಲಿ ಭುಜದ ಕ್ಯಾನ್ಸರ್‌ ನಿಂದ ಶಿವಾಜಿ ಮರಣ ಹೊಂದಿದನು. ಸಮಾಧಿ ಸ್ಥಳ ರಾಯಗಢದಲ್ಲಿದೆ.

FAQ :

ಶಿವಾಜಿ ಎಲ್ಲಿ ಜನಿಸಿದರು?

ಪುಣೆ ಜಿಲ್ಲೆಯ ಶಿವನೇರಿದುರ್ಗ ಎಂಬ ಗ್ರಾಮದಲ್ಲಿ ಜನಿಸಿದರು

ಹೈಂದವಿ ಸಾಮ್ರಾಜ್ಯದ ಕಲ್ಪನೆ ಕಂಡ ಮೊದಲ ವ್ಯಕ್ತಿ ಯಾರು?

ಶಿವಾಜಿ

ಇತರೆ ವಿಷಯಗಳು :

ಬೌದ್ದ ಧರ್ಮದ ಬಗ್ಗೆ ಮಾಹಿತಿ

ಹರಪ್ಪ ನಾಗರಿಕತೆಯ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ