ಗ್ರಾಹಕರ ರಕ್ಷಣಾ ಕಾಯ್ದೆ 1986 ಬಗ್ಗೆ ಮಾಹಿತಿ | Information about Consumer Protection Act 1986 in Kannada

ಗ್ರಾಹಕರ ರಕ್ಷಣಾ ಕಾಯ್ದೆ 1986 ಬಗ್ಗೆ ಮಾಹಿತಿ Information about Consumer Protection Act 1986 Grahaka Rakshana kayde 1986 bagge Mahithi in Kannada

ಗ್ರಾಹಕರ ರಕ್ಷಣಾ ಕಾಯ್ದೆ 1986 ಬಗ್ಗೆ ಮಾಹಿತಿ

ಗ್ರಾಹಕರ ರಕ್ಷಣಾ ಕಾಯ್ದೆ 1986 ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಗ್ರಾಹಕರ ರಕ್ಷಣಾ ಕಾಯ್ದೆ 1986 ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಗ್ರಾಹಕ ಸಂರಕ್ಷಣಾ ಕಾಯ್ದೆ 1986 :

ಈ ಕಾಯ್ದೆಯ ದೋಷಪೂರಿತ ವಸ್ತುಗಳು, ಅತೃಪ್ತಿದಾಯಕ ಸೇವೆಗಳು, ಅನುಚಿತ ವ್ಯಾಪಾರಿ ಪದ್ದತಿಗಳು ಹಾಗೂ ಇತರೆ ಶೋಷಣೆಯ ವಿರುದ್ದ ಪರಿಣಾಮಕಾರಿ ರಕ್ಷಣೆಯನ್ನು ಗ್ರಾಹಕರಿಗೆ ನೀಡುವ ಉದ್ದೇಶವನ್ನು ಹೊಂದಿದೆ. ಈ ಕಾನೂನಿನನ್ವಯ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗ್ರಾಹಕರ ದೂರುಗಳ ಪರಿಹಾರ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ.

ಉದ್ದೇಶಗಳು :

  • ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವುದು.
  • ಗ್ರಾಹಕರ ಹಕ್ಕುಗಳನ್ನು ರಕ್ಷಿಸುವುದು.
  • ಅಪಾಯಕ್ಕೆ ಕಾರಣವಾಗಿರುವ ಸರಕುಗಳ ಮಾರಾಟದ ವಿರುದ್ದ ರಕ್ಷಿಸಿಕೊಳ್ಳುವ ಹಕ್ಕು
  • ಅಯೋಗ್ಯ ವ್ಯಾಪಾರಿ ಚಟುವಟಿಕೆಗಳ ವಿರುದ್ದ ಹೋರಾಡುವ ಹಕ್ಕು
  • ಸ್ಪರ್ಧಾತ್ಮಕ ಬೆಲೆಗಳಿಗೆ ಸರಕುಗಳನ್ನು ಪಡೆಯುವ ಹಕ್ಕು
  • ಗ್ರಾಹಕರ ವೇದಿಕೆಗೆ ದೂರು ನೀಡುವ ಹಕ್ಕು
  • ಗ್ರಾಹಕರ ಶೋಷಣೆ ವಿರುದ್ದ ಪರಿಹಾರ ಪಡೆಯುವ ಹಕ್ಕು
  • ಗ್ರಾಹಕರಿಗೆ ಗ್ರಾಹಕ ಶಿಕ್ಷಣವನ್ನು ನೀಡುವುದು.
  • ಗ್ರಾಹಕರ ದೂರಗಳನ್ನು ಬಗೆಹರಿಸಲು ಜಲ್ಲಾ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಂಡಳಿಗಳನ್ನು ಸ್ಥಾಪಿಸುವುದು.

ಗ್ರಾಹಕರ ವ್ಯಾಜ್ಯ ಪರಿಹಾರ ಕಾರ್ಯಭಾರಿಗಳು :

ಜಿಲ್ಲಾ ವೇದಿಕೆ :

ಗ್ರಾಹಕರ ವ್ಯಾಜ್ಯ ಪರಿಹರಿಸಲು ಪ್ರತಿಯೊಂದು ಜಿಲ್ಲೆಯಲ್ಲಿ ಜಿಲ್ಲಾ ವೇದಿಕೆಯನ್ನು ಸ್ಥಾಪಿಸಲಾಗಿದೆ.

ರಚನೆ(ಒಟ್ಟು ಮೂರು ಜನರು) :

  • ಜಿಲ್ಲಾ ವೇದಿಕೆಯ ಅಧ್ಯಕ್ಷ
  • ಜಿಲ್ಲೆಯ ಮಾಜಿ ಹಾಲಿ ಅಥವಾ ಅದ್ಯ ಸೇವೆ ಸಲ್ಲಿಸುತ್ತಿರುವ ನ್ಯಾಯಾಧೀಶರಾಗಿರುತ್ತಾರೆ.
  • ಇಬ್ಬರು ಸದಸ್ಯರು ಅವರು ಪ್ರಾಮಾಣಿಕರಾಗಿರಬೇಕು ಮತ್ತು ಅವರು ಅರ್ಥಶಾಸ್ತ್ರ ವಾಣಿಜ್ಯಶಾಸ್ತ್ರ ಮುಂತಾದವುಗಳ ಬಗ್ಗೆ ವಿಶೇಷವಾದ ಜ್ಞಾನವನ್ನು ಹೊಂದಿರಬೇಕು.
  • ಈ ಮೇಲಿನ ವ್ಯಕ್ತಿಗಳನ್ನು ರಾಜ್ಯ ಸರ್ಕಾರವು ಆಯ್ಕೆಯ ಸಮಿತಿಯ ಶಿಫಾರಸ್ಸಿನ ಮೇಲೆ ಆಯ್ಕೆಯ ಸಮಿತಿಯ ಶಿಫಾರಸ್ಸಿನ ಮೇಲೆ ಆಯ್ಕೆ ಮಾಡಲಾಗುತ್ತದೆ.
  • ಜಿಲ್ಲಾ ವೇದಿಕೆಯು ಪ್ರತಿಯೊಬ್ಬ ಸದಸ್ಯರ ಅವಧಿ 5 ವರ್ಷ ಅಥವಾ 65 ವರ್ಷಗಳ ವಯಸ್ಸಿನ ವರೆಗೆ.

ಪರಿಹಾರಗಳು :

  • ಗ್ರಾಹಕರು ಸಲ್ಲಿಸಿದ ದೂರಿನ ಪ್ರಕಾರ ಸರಕಿನಲ್ಲಿ ದೋಷ ಕಂಡು ಬಂದರೆ ವೇದಿಕೆಯ ಕಕ್ಷಿದಾರನಿಗೆ ಈ ಕೆಳಕಂಡಂತೆ ಆದೇಶಿಸಬಹುದು.
  • ಸರಕಿನಲ್ಲಿರುವ ನ್ಯೂನ್ಯತೆಯನ್ನು ನಿವಾರಿಸುವಂತೆ
  • ಬದಲಿವಸ್ತುಗಳನ್ನು ನೀಡುವಂತೆ
  • ಸರಕಿನ ಮೌಲ್ಯಗಳನ್ನು ಹಿಂದಿರುಗಿಸುವಂತೆ
  • ಗ್ರಾಹಕನಿಗೆ ಆಗಿರುವ ನಷ್ಟವನ್ನು ತುಂಬಿ ಕೊಡುವಂತೆ ಅನುಚಿತ ವ್ಯಾಪಾರಿ ಪದ್ದತಿಯನ್ನು ನಿಲ್ಲಿಸುವಂತೆ

ರಾಜ್ಯ ವೇದಿಕೆ :

ಗ್ರಾಹಕರ ವ್ಯಾಜ್ಯ ಪರಿಹರಿಸಲು ಪ್ರತಿಯೊಂದು ರಾಜ್ಯದಲ್ಲಿ ರಾಜ್ಯ ವೇದಿಕೆಯಲ್ಲಿ ಸ್ಥಾಪಿಸಲಾಗಿದೆ.

ರಚನೆ :

  • ರಾಜ್ಯ ವೇದಿಕೆಯ ಅಧ್ಯಕ್ಷ – ರಾಜ್ಯ ಸರ್ಕಾರದಿಂದ ನೇಮಿಸಲ್ಪಡುವ ಶ್ರೇಷ್ಠ ನ್ಯಾಯಾಲಯದ ಮಾಜಿ ಹಾಲಿ ಅಥವಾ ನಿವೃತ್ತಿ ಹೊಂದಿದ ನ್ಯಾಯಮೂರ್ತಿ.
  • ಇಬ್ಬರು ಸದಸ್ಯರು ಅವರು ಪ್ರಾಮಾಣಿಕರಾಗಿರಬೇಕು ಮತ್ತು ಅವರು ಅರ್ಥಶಾಸ್ತ್ರ ವಾಣಿಜ್ಯಶಾಸ್ತ್ರ ಮುಂತಾದವುಗಳ ಬಗ್ಗೆ ವಿಶೇಷವಾದ ಜ್ಞಾನವನ್ನು ಹೊಂದಿರಬೇಕು.
  • ಈ ಮೇಲಿನ ವ್ಯಕ್ತಿಗಳನ್ನು ಶ್ರೇಷ್ಠ ನ್ಯಾಯಾಲಯದ ಮುಖ್ಯ ನ್ಯಾಯಾಮೂರ್ತಿಗಳೊಂದಿಗೆ ಸಮಾಲೋಚಿಸಿ ನೇಮಕ ಮಾಡಲಾಗುವುದು.
  • ರಾಜ್ಯ ವೇದಿಕೆಯು ಪ್ರತಿಯೊಬ್ಬ ಸದಸ್ಯರ ಅವಧಿ 5 ವರ್ಷ ಅಥವಾ 60 ವರ್ಷಗಳ ವಯಸ್ಸಿನ ವರೆಗೆ(ಇವರೆಡರಲ್ಲಿ ಯಾವುದು ಮೊದಲು ಅದರ ಪ್ರಕಾರ ಅಧಿಕಾರದಲ್ಲಿ ಇರಬೇಕಾಗುತ್ತದೆ).

ಪರಿಹಾರಗಳು :

ಗ್ರಾಹಕರು ಸಲ್ಲಿಸಿದ ದೂರಿನ ಪ್ರಕಾರ ಸರಕಿನಲ್ಲಿದೋಷ ಕಂಡು ಬಂದರೆ ವೇದಿಕೆಯು ಕಕ್ಷಿದಾರನಿಗೆ ಈ ಕೆಳಕಂಡಂತೆ ಆದೇಶಿಸಬಹುದು.

  • ಸರಕಿನಲ್ಲಿರುವ ನ್ಯೂನ್ಯತೆಯನ್ನು ನಿವಾರಿಸುವಂತೆ
  • ಬದಲಿ ವಸ್ತುಗಳನ್ನು ನೀಡುವಂತೆ
  • ಸರಕಿನ ಮೌಲ್ಯವನ್ನು ಹಿಂದಿರುಗಿಸುವಂತೆ
  • ಗ್ರಾಹಕನಿಗೆ ಆಗಿರುವ ನಷ್ಟವನ್ನು ತುಂಬಿ ಕೊಡುವಂತೆ
  • ಅನುಚಿತ ವ್ಯಾಪಾರಿ ಪದ್ದತಿಯನ್ನು ನಿಲ್ಲಿಸುವಂತೆ

ರಾಷ್ಟ್ರೀಯ ವೇದಿಕೆ :

ಗ್ರಾಹಕರ ವ್ಯಾಜ್ಯ ಪರಿಹರಿಸಲು ಪ್ರತಿಯೊಂದು ದೇಶದಲ್ಲಿ ರಾಷ್ಟ್ರೀಯ ವೇದಿಕೆಯನ್ನು ಸ್ಥಾಪಿಸಲಾಗಿದೆ.

ರಚನೆ :

  • ರಾಷ್ಟ್ರೀಯ ವೇದಿಕೆಯಲ್ಲಿ ಅಧ್ಯಕ್ಷ – ಕೇಂದ್ರ ಸರ್ಕಾರದಿಂದ ನೇಮಿಸಲ್ಪಡುವ ವರಿಷ್ಠ ನ್ಯಾಯಾಲಯದ ಮಾಜಿ, ಹಾಲಿ ಅಥವಾ ನಿವೃತ್ತಿ ಹೊಂದಿದ ನ್ಯಾಯಾಮೂರ್ತಿ.
  • ಇತರ ನಾಲ್ವರು ಸದಸ್ಯರು ಅವರು ಪ್ರಾಮಾಣಿಕರಾಗಿರಬೇಕು ಮತ್ತು ಅವರು ಅರ್ಥಶಾಸ್ತ್ರ ವಾಣಿಜ್ಯಶಾಸ್ತ್ರ ಮುಂತಾದವುಗಳ ಬಗ್ಗೆ ವಿಶೇಷವಾದ ಜ್ಞಾನವನ್ನು ಹೊಂದಿರಬೇಕು.
  • ಈ ಮೇಲಿನ ವ್ಯಕ್ತಿಗಳನ್ನು ಭಾರತದ ಮುಖ್ಯ ನ್ಯಾಯಾಮೂರ್ತಿಗಳೊಂದಿಗೆ ಸಮಾಲೋಚಿಸಿ ನೇಮಕ ಮಾಡಲಾಗುವುದು.
  • ರಾಷ್ಟ್ರೀಓಯ ವೇದಿಕೆಯನ್ನು ಪ್ರತಿಯೊಬ್ಬ ಸದಸ್ಯರ ಅವಧಿ 5 ವರ್ಷ ಅಥವಾ 70 ವರ್ಷಗಳ ವಯಸ್ಸಿನ ವರೆಗೆ(ಇವೆರಡರಲ್ಲಿ ಯಾವುದು ಮೊದಲು ಅದರ ಪ್ರಕಾರ ಅಧಿಕಾರದಲ್ಲಿ ಇರಬೇಕಾಗುತ್ತದೆ).

ಪರಿಹಾರಗಳು :

ಗ್ರಾಹಕರು ಸಲ್ಲಿಸಿದ ದೂರಿನ ಪ್ರಕಾರ ಸರಕಿನಲ್ಲಿ ದೋಷ ಕಂಡು ಬಂದರೆ ವೇದಿಕೆಯು ಕಕ್ಷಿದಾರನಿಗೆ ಈಕೆಳಕಂಡಂತೆ ಆದೇಶಿಸಬಹುದು.

  • ಸರಕಿನಲ್ಲಿರುವ ನ್ಯೂನ್ಯತೆಯನ್ನು ನಿವಾರಿಸುವಂತೆ
  • ಬದಲಿ ವಸ್ತುಗಳನ್ನು ನೀಡುವಂತೆ ಸರಕಿನ ಮೌಲ್ಯವನ್ನು ಹಿಂದಿರುಗಿಸುವಂತೆ
  • ಗ್ರಾಹಕನಿಗೆ ಆಗಿರುವ ನಷ್ಟವನ್ನು ತುಂಬಿ ಕೊಡುವಂತೆ
  • ಅನುಚಿತ ವ್ಯಾಪಾರಿ ಪದ್ದತಿಯನ್ನು ನಿಲ್ಲಿಸುವಂತೆ

FAQ :

ಗ್ರಾಹಕ ಸಂರಕ್ಷಣಾ ಕಾಯ್ದೆ ಯಾವಾಗ ಜಾರಿಗೆ ಬಂತು?

1986

ಗ್ರಾಹಕ ಸಂರಕ್ಷಣಾ ಕಾಯ್ದೆಯ ಒಂದು ಉದ್ದೇಶ ತಿಳಿಸಿ?

ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವುದು.
ಗ್ರಾಹಕರ ಹಕ್ಕುಗಳನ್ನು ರಕ್ಷಿಸುವುದು.

ಇತರೆ ವಿಷಯಗಳು :

ಭಾರತದ ಪ್ರಮುಖ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ

ನಾಗರೀಕ ಕಾನೂನು ಭಂಗ ಚಳುವಳಿಯ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ