ಭೂಕಂಪನದ ಬಗ್ಗೆ ಮಾಹಿತಿ | Information about earthquakes in Kannada

ಭೂಕಂಪನದ ಬಗ್ಗೆ ಮಾಹಿತಿ Information about earthquakes Bhukampanada bagge Mahithi in Kannada

ಭೂಕಂಪನದ ಬಗ್ಗೆ ಮಾಹಿತಿ

ಭೂಕಂಪನದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಭೂಕಂಪನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಭೂಕಂಪ :

  • ಭೂಮಿಯ ಅಂತರಾಳದಲ್ಲಿರುವ ಒತ್ತಡ ಮತ್ತು ಉಷ್ಣತೆಯಿಂದ ಭೂಮಿಯು ಕಂಪಿಸುವುದಕ್ಕೆ ಭೂಕಂಪನ ಎಂದು ಕರೆಯುವರು.
  • ಭೂಕಂಪನದ ಕುರಿತು ಅಧ್ಯಯನ ಮಾಡುವ ಶಾಸ್ತ್ರಕ್ಕೆ ಸಿಸ್ಮೋಲಾಜಿ ಎಂದು ಕರೆಯುವರು.
  • ಭೂಕಂಪನದ ಉಗಮ, ಪ್ರಮಾಣ, ವೇಗ, ಮುಂತಾದವುಗಳ ಕರಿತು ಅಳೆಯುವ ಸಾಧನಕ್ಕೆ ಸಿಸ್ಮೋಗ್ರಾಫ್‌
  • ಭೂಕಂಪನದ ಮುನ್ಸೂಚನೆಯನ್ನು ತಿಳಿಸುವ ಸಾಧನಕ್ಕೆ ಅಕ್ವಾರೇಡಾರ್‌ ಮೀಟರ್‌ ಎಂದು ಕರೆಯುವರು.
  • ಭೂಕಂಪನದ ತೀವ್ರತೆ ಮತ್ತು ಪ್ರಮಾಣವನ್ನು ನಿಖರವಾಗಿ ಅಳೆಯುವ ಸಾಧನಕ್ಕೆ ರಿಕ್ಟರ್‌ ಎಂದು ಕರೆಯುವರು.
  • ಭೂಕಂಪನಾಭಿಯಿಂದ ಲಂಬಕೋನದಲ್ಲಿರುವ ಭೂ ಮೇಲ್ಮೈ ಸ್ಥಾನಕ್ಕೆ ಭೂಕಂಪನದ ಹೊರಕೇಂದ್ರ ಅಥವಾ ಎಫಿಸೆಂಟರ್‌ ಎಂದು ಕರೆಯುವರು.
  • ಒಂದೇ ಅವಧಿಯಲ್ಲಿ ಒಂದೇ ರೀತಿಯ ತೀವ್ರತೆ ಹೊಂದಿರುವ ಪ್ರದೇಶಗಳನ್ನು ಸೇರಿಸುವ ರೇಖೆಗೆ ಸಹ ಭೂಕಂಪನ ರೇಖೆ ಎನ್ನುವರು.
  • ಪೆಸಿಫಿಕ್‌ ಮಹಾಸಾಗರದ ಸುತ್ತಲೂ ಅತಿ ಹೆಚ್ಚು ಭೂಕಂಪ ಮತ್ತು ಜ್ವಾಲಾಮುಖಿಗಳು ಸಂಭವಿಸುತ್ತವೆ. ಆದ್ದರಿಂದ ಅದಕ್ಕೆ ರಿಂಗ್‌ ಫೈರ್‌ ಜೋನ ಅಥವಾ ಅಗ್ನಿ ಕಟಿಬಂದ ವಲಯ ಎಂದು ಕರೆಯುವರು.
  • ಸಮುದ್ರ ಮತ್ತು ಸಾಗರಗಳಲ್ಲಿ ಭೂಕಂಪನ ಉಂಟಾದಾಗ ದೊಡ್ಡ ಪ್ರಮಾಣದ ಅಲೆಗಳು ಸುತ್ತುವ ಭೂಭಾಗಕ್ಕೆ ಬಂದು ಅಪ್ಪಳಿಸುತ್ತವೆ. ಅದಕ್ಕೆ ಸುನಾಮಿ ಎಂದು ಕರೆಯುವರು.
  • ಜಪಾನ್‌ ಭಾಷೆಯಲ್ಲಿ ಸುನಾಮಿ ಸು ಎಂದರೆ ಬಂದರು-ನಾಮಿ ಎಂದರೆ ಅಲೆಗಳು
  • ಒಟ್ಟಿನಲ್ಲಿ ಸುನಾಮಿ ಎಂದರೆ – ಬಂದರದ ಅಲೆಗಳು ಎಂದು ಕರೆಯುವರು.
  • ಇವುಗಳಿಗೆ ಇತ್ತೀಚಿಗೆ ಮಾರಣಾಂತಿಕ ಅಲೆಗಳು ಎಂತಲೂ ಕರೆಯುವರು. ಇತ್ತೀಚಿಗೆ 2004 ಡಿಸೆಂಬರ್‌ 26 ರಂದು ಇಂಟೋನೇಷ್ಯಾದಲ್ಲಿ ಮತ್ತು ಮಾರ್ಚ್‌ 11, 2011 ರಂದು ಜಪಾನಿನ ಪುಕುಶಿಮಾ ಅತಿ ಭಯಂಕರವಾದ ಸುನಾಮಿ ಉಂಟಾಗಿದೆ.

ಭೂಕಂಪ ಮಾಪನ ಕೇಂದ್ರಗಳು :

  • ತಮಿಳುನಾಡು – ಕೊಡೈಕೆನಾಲ್‌
  • ಕರ್ನಾಟಕ – ಗೌರಿಬಿದನೂರು ಮತ್ತು ಚಿಂಚೋಳಿ
  • ಮಹಾರಾಷ್ಟ್ರ – ಪುಣೆ ಸಮೀಪದ ಕೊಲಾಬಾ
  • ಆಂಧ್ರಪ್ರದೇಶ – ಹೈದರಾಬಾದ್‌
  • ಪಶ್ಚಿಮ ಬಂಗಾಳ – ಕೊಲ್ಕತ್ತಾ

ಭೂಕಂಪನದ ಅಲೆಗಳು :

ನೀಳ ಅಲೆ :

  • ಭೂ ಮೇಲ್ಮೈಯನ್ನು ಮೊದಲು ಬಂದು ತಲುಪುತ್ತವೆ. ಆದ್ದರಿಂದ ಇವುಗಳಿಗೆ ಪ್ರಾಥಮಿಕ ಅಲೆಗಳೆಂದು ಕರೆಯುವರು.
  • ಈ ಅಲೆಗಳಿಗೆ ತಳ್ಳುವ ಅಲೆಗಳು, ಒತ್ತಡದ ಅಲೆಗಳು, ಲ್ಯಾಂಗಿ ಟ್ಯೂಡನಲ್‌ ವ್ಹೇವ್ಸ್‌ ಎಂತಲೂ ಕರೆಯುವರು.
  • ಇವುಗಳು ಘನ, ದ್ರವ, ಅನಿಲ ಮಾಧ್ಯಮದಲ್ಲಿ ಚಲಿಸುತ್ತವೆ.
  • ಇವುಗಳು ಕೇಂದ್ರಗೋಳ ಮಿಶ್ರಗೋಳ ಶಿಲಾಗೋಳದ ಮೂಲಕ ಚಲಿಸುತ್ತವೆ. ಇವುಗಳ ವೇಗ ಪ್ರತಿ ಸೆಕೆಂಡಿಗೆ 5.5ಕಿ.ಮೀ. ದಿಂದ13 ಕಿ.ಮೀ.
  • ಈ ಅಲೆಗಳನ್ನು P ಸಂಕೇತಾಕ್ಷರದಿಂದ ಗುರುತಿಸುತ್ತಾರೆ.

ಅಡ್ಡ ಅಲೆಗಳು :

  • ಈ ಅಲೆಗಳಿಗೆ ಅಡ್ಡ ಅಲೆ, ದ್ವಿತೀಯ ಅಲೆ, ಛೇದನಾ ಅಲೆ, ಕಂಡಿದ ಅಲೆ, ಟ್ರಾನ್ಜರವೇಷನ್‌ ವ್ಹೇವ್ಸ್‌ ಎಂದು ಬೇರೆ ಬೇರೆ ಹೆಸರುಗಳಿಂದ ಕರೆಯುವರು.
  • P ಅಲೆಗಳ ನಂತರ ಭೂ ಮೇಲ್ಮೈಯನ್ನು ಬಂದು ತಲುಪುತ್ತವೆ.
  • ಇವುಗಳನ್ನು S & T ಸಂಕೇತದಿಂದ ಗುರುತಿಸುವರು.
  • ಇವುಗಳ ವೇಗ ಪ್ರತಿ ಸೆಕೆಂಡಿಗೆ 3.2 ಕಿ.ಮೀ ದಿಂದ 7.2 ಕಿ.ಮೀ. ಇವುಗಳು ದ್ರವ ಮಾಧ್ಯಮದಿಂದ ಚಲಿಸಲಾರವು.
  • ಘನ ಮತ್ತು ಅನಿಲ ಮಾಧ್ಯಮದಲ್ಲಿ ಚಲಿಸುತ್ತದೆ.
  • ಇವುಗಳು ಮಿಶ್ರಗೋಳ ಮತ್ತು ಶಿಲಾಗೋಳದ ಮೂಲಕ ಭೂ ಮೇಲ್ಮೈಗೆ ಬಂದು ತಲುಪುವುದರಿಂದ ತೃತೀಯ ಎಂದು ಕರೆಯುವರು.

ಮೇಲ್ಮೈಅಲೆಗಳು :

  • ಈ ಅಲೆಗಳನ್ನು P&S ಅಲೆಗಳ ನಂತರ ಭೂ ಮೇಲ್ಮೈಯನ್ನು ಬಂದು ತಲುಪುವುದರಿಂದ ತೃತೀಯ ಅಲೆಗಳು ಎಂದು ಕರೆಯುವರು.
  • ಈ ಅಲೆಗಳನ್ನು ಉದ್ದ ಅಲೆ, ದೀರ್ಘ ಅಲೆ, ಲವ್‌ ಅಲೆ, ಅತಿ ವಿನಾಶವನ್ನುಂಟು ಮಾಡುವ ಅಲೆ, ಭಯಂಕರವಾದ ಅಲೆ ಹೀಗೆ ಬೇರೆ ಹೆಸರುಗಳಿಂದ ಕರೆಯುವರು.
  • ಈ ಅಲೆಗಳನ್ನು ಇ.ಎಚ್.ಲವ್.‌ ಮತ್ತು ರೈಲ್ವೆ ಎಂಬುವರು. ಕಂಡು ಹಿಡಿದಿದ್ದರಿಂದ ಇವುಗಳಿಗೆ ಲವ್‌ ಅಲೆಗಳು ಎಂದು ಕರೆಯುವರು.
  • ಈ ಅಲೆಗಳನ್ನು L ಸಂಕೇತಾಕ್ಷರದಿಂದ ಗುರುತಿಸುವರು ಇವುಗಳ ವೇಗ ಪ್ರತಿ ಸೆಕೆಂಡಿಗೆ 4 ಕಿ.ಮೀ. ದಿಂದ 4.3 ಕಿ.ಮೀ.

ಭೂಕಂಪ ಹಂಚಿಕೆಗಳು :

  • ಪೆಸಿಫಿಕ್‌ ಸಾಗರದ ಸುತ್ತಲಿನ ತೀರ ಪ್ರದೇಶದ ನ್ಯೂಜಿಲ್ಯಾಂಡ್‌, ಫಿಲಿಪೈನ್ಸ್‌, ಜಪಾನ್‌, ಪೇರು, ಅಮೇರಿಕಾ ಮುಂತಾದವುಗಳು.
  • ಮೆಡಿಟರೇನಿಯನ್‌ ಸುತ್ತುವ ಪ್ರದೇಶಗಳು
  • ಭಾರತದ ಸಿವಾಲಿಕ್‌ ಬೆಟ್ಟಗಳು
  • ಮಧ್ಯ ಅಂಟ್ಲಾಂಟಿಕ್ ಭೂ ವಲಯ.ಹಿಮಾಲಯದ ಸುತ್ತಲೂ.

ಭೂಕಂಪನದ 5 ವಲಯಗಳು :

5ನೇ ವಲಯ :

  • ಏಳು ರಿಕ್ಟರ್ಗಿಂತ ಹೆಚ್ಚು ಭೂಕಂಪನ ಉಂಟಾಗುವುದು.
  • ಇಲ್ಲಿ ಈಶಾನ್ಯ ರಾಜ್ಯಗಳು ಜಮ್ಮು ಮತ್ತು ಕಾಶ್ಮೀರ ಉತ್ತರಖಂಡ, ಬಿಹಾರ ಮತ್ತು ಕಚ್‌ ಪ್ರದೇಶಗಳು.

4ನೇಯ ವಲಯ :

  • 5 ರಿಂದ 7 ರಿಕ್ಟರ್‌ ಭೂಕಂಪನದ ತೀವ್ರತೆ ಕಂಡುಬರುವುದು.
  • ಜಮ್ಮು ಮತ್ತು ಕಾಶ್ಮೀರದ ಉತ್ತರ ಭಾಗ, ಹಿಮಾಚಲ ಪ್ರದೇಶ, ಬಿಹಾರದ ಭಾಗಗಳು, ಉತ್ತರ ಪ್ರದೇಶ, ಗುಜರಾತ್‌, ಪಶ್ಚಿಮ ಬಂಗಾಳ

3ನೇ ವಲಯ :

  • 3 ರಿಂದ 5 ರಿಕ್ಟರ್ದಷ್ಟು ಭೂಕಂಪನದ ತೀವ್ರತೆ ಕಂಡು ಬರುತ್ತದೆ.
  • ಇಲ್ಲಿ ಗುಜರಾತ್‌, ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್ಗಢ, ಓಡಿಸ್ಸಾ, ಮಹಾರಾಷ್ಟ್ರ, ಉತ್ತರ ಕರ್ನಾಟಕ, ಆಂಧ್ರಪ್ರದೇಶ, ಪಶ್ಚಿಮ ಕರಾವಳಿ ತೀರ ಪ್ರದೇಶ ಮುಂತಾದವುಗಳು.

2ನೇ ವಲಯ :

  • 2 ರಿಂದ 3 ರಿಕ್ಟರ್ ದಷ್ಟು ಭೂಕಂಪನದ ತೀವ್ರತೆ ಕಂಡು ಬರುತ್ತದೆ.
  • ಈ ವಲಯದಲ್ಲಿ ಕರ್ನಾಟಕದ ಕೆಲ ಭಾಗ ಆಂಧ್ರಪ್ರದೇಶ, ಓಡಿಸ್ಸಾದಲ್ಲಿ ಸೇರುತ್ತವೆ.

1ನೇ ವಲಯ :

  • ಅತಿ ಕಡಿಮೆ ಭೂಕಂಪನದ ತೀವ್ರತೆ ಉಂಟಾಗುವುದು.
  • ದಕ್ಷಿಣ ಪ್ರಸ್ಥ ಭೂಮಿಯ ಪ್ರದೇಶಗಳು ಭಾರತದ ಉಳಿದ ಭಾಗಗಳು ಈ ವಲಯದಲ್ಲಿ ಕಂಡು ಬರುತ್ತವೆ.

FAQ :

ಭೂಕಂಪ ಎಂದರೇನು?

ಭೂಮಿಯ ಅಂತರಾಳದಲ್ಲಿರುವ ಒತ್ತಡ ಮತ್ತು ಉಷ್ಣತೆಯಿಂದ ಭೂಮಿಯು ಕಂಪಿಸುವುದಕ್ಕೆ ಭೂಕಂಪನ ಎಂದು ಕರೆಯುವರು.

ಭೂಕಂಪನದ ಕುರಿತು ಅಧ್ಯಯನ ಮಾಡುವ ಶಾಸ್ತ್ರಕ್ಕೆ ಏನೆಂದು ಕರೆಯುತ್ತಾರೆ?

ಭೂಕಂಪನದ ಕುರಿತು ಅಧ್ಯಯನ ಮಾಡುವ ಶಾಸ್ತ್ರಕ್ಕೆ ಸಿಸ್ಮೋಲಾಜಿ ಎಂದು ಕರೆಯುವರು.

ಇತರೆ ವಿಷಯಗಳು :

ಹರಪ್ಪ ನಾಗರಿಕತೆಯ ಬಗ್ಗೆ ಮಾಹಿತಿ

ವೇದಕಾಲದ ಸಂಸ್ಕೃತಿಯ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ