ಇಲೆಕ್ಟ್ರಾನಿಕ್ ತ್ಯಾಜ್ಯದ ಬಗ್ಗೆ ಮಾಹಿತಿ | Information about electronic waste in Kannada

ಇಲೆಕ್ಟ್ರಾನಿಕ್ ತ್ಯಾಜ್ಯದ ಬಗ್ಗೆ ಮಾಹಿತಿ Information about electronic waste Electronic Thyajyada bagge Mahithi in Kannada

ಇಲೆಕ್ಟ್ರಾನಿಕ್ ತ್ಯಾಜ್ಯದ ಬಗ್ಗೆ ಮಾಹಿತಿ

ಇಲೆಕ್ಟ್ರಾನಿಕ್ ತ್ಯಾಜ್ಯದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಇಲೆಕ್ಟ್ರಾನಿಕ್ ತ್ಯಾಜ್ಯದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಇಲೆಕ್ಟ್ರಾನಿಕ್ ತ್ಯಾಜ್ಯ :

ವಿದ್ಯುನ್ಮಾನ ತ್ಯಾಜ್ಯ, ಇ-ತ್ಯಾಜ್ಯ ಎಂದರೆ ಹಿಂದಕ್ಕೆ ಹಾಕಿದ, ಮಿಕ್ಕಿದ, ಹಳೆಯ, ಅಥವಾಮುರಿದ ವಿದ್ಯುತ್‌ ಮತ್ತು ವಿದ್ಯುನ್ಮಾನ ಸಾಧನಗಳನ್ನು ಸರವಲಾಗಿ ವಿವರಿಸುತ್ತದೆ. ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿವಿದ್ಯುನ್ಮಾನ ತ್ಯಾಜ್ಯವನ್ನುಅಸಾಂಪ್ರದಾಯಿಕವಾಗಿ ಸಂಸ್ಕರಿಸುವುದರಿಂದ ಗಂಭೀರ ಆರೋಗ್ಯ ಮತ್ತು ಮಲಿನತೆ ಸಮಸ್ಯೆಗಳು ಉಂಟಾಗುತ್ತವೆ ಎಂದು ಪರಿಸರ ಪ್ರೇಮಿ ಸಂಘಗಳು ವಾದಿಸುತ್ತವೆ.

ಇಲೆಕ್ಟ್ರಾನಿಕ್‌ ತ್ಯಾಜ್ಯ ವಸ್ತುಗಳು :

  • ದೊಡ್ಡ ಮೊತ್ತದ ಪದಾರ್ಥಗಳು – ತಾಮ್ರ, ಸಿಲಿಕಾನ್‌, ಟೆರಿಲಿಯಂ, ಇಂಗಾಲ, ಫೈಬರ್‌ ಗ್ಲಾಸ್‌, ಥರ್ಮೋಸೆಟ್ಟಿಂಗ್‌ ಪ್ಲಾಸ್ಟಿಕ್‌, ಕಬ್ಬಿಣ ಮತ್ತು ಅಲ್ಯೂಮಿನಿಯಂ
  • ಕಡಿಮೆ ಪ್ರಮಾಣದ ವಸ್ತುಗಳು – ನೀಲಿ ತವರ, ಪಾದರಸ, ಥೇಲಿಯಂ
  • ಸೋಸು ಪ್ರಮಾಣದಲ್ಲಿ ಸಿಗುವ ವಸ್ತುಗಳು – ಆಂಟಿಮನಿ, ಬಿಸ್ಮತ್‌, ಬೇರಿಯಂ, ಲೀಥಿಯಂ, ಮ್ಯಾಂಗನೀಸ್‌, ನಿಕ್ಕಲ್‌, ಜರ್ಮೇನಿಯಂ ಮತ್ತು ಕೊಬಾಲ್ಟ್.‌

ಅಪಾಯಕಾರಿ ಇ-ತ್ಯಾಜ್ಯಗಳು :

  • ಸಲ್ಫರ್‌ – ಸೀಸದ ಆಮ್ಲ ಬ್ಯಾಟರಿಗಳು
  • ಪಾದರಸ – ಪ್ಲೋರೋಸೆಂಟ್‌ ಟ್ಯೂಬ್ಗಳು
  • ನೀಲಿ ತವರ – ಬೆಳಕು ಗ್ರಾಹಿ ನಿರೋಧಕಗಳು
  • ನಿಕ್ಕಲ್‌ – ಮೀಲಿ ತವರ ಬ್ಯಾಟರಿಗಳು
  • ಬೆರಿಲಿಯಂ – ಕ್ಷ ಕಿರಣ ಪಾರದರ್ಶಕ, ಸಿರಾಮಿಕ್‌ ಕಿಟಕಿಗಳು, ಗ್ಯಾಸ್‌ ಲೇಸರ್ಗಳು, ಹೀಟ್‌ ಸಿಂಕ್ ಗಳ ಮೇಲೆ ಬಳಸುವ ಉಷ್ಣದ ಗ್ರೀಸ್‌ ಮತ್ತು ಪವರ್‌ ಟ್ರಾನ್ಸಿಸ್ಟರ್.‌

ಅಪಾಯಕಾರಿಯಲ್ಲದ ಇ-ತ್ಯಾಜ್ಯಗಳು :

  • ತಾಮ್ರ – ತಾಮ್ರದ ತಂತಿ, ಪ್ರಿಟೆಂಡ್‌ ಸರ್ಕ್ಯೂಟ್‌ ಬೋರ್ಡ್‌ ಗಳು
  • ಅಲ್ಯುಮಿನಿಯಂ – ಎಲ್ಲಾ ವಿದ್ಯುನ್ಮಾನ ಸರಕುಗಳು
  • ಸಿಲಿಕಾನ್‌ – ಗಾಜು, ಐಸಿಗಳು
  • ಲೀಥಿಯಂ – ಲೀಥಿಯಂ ಅಯಾನ್‌ ಬ್ಯಾಟರಿಗಳು
  • ಸತು – ಸ್ಟೀಲ್‌ ಭಾಗಗಳಿಗೆ ಲೋಹ ಲೇಪನ ಮಾಡುವುದು.

ಇ-ತ್ಯಾಜ್ಯದ ಪರಿಣಾಮಗಳು :

ಇ-ತ್ಯಾಜ್ಯಗಳನ್ನು ಅಸಾಂಪ್ರದಾಯಿಕವಾಗಿ ಸಂಸ್ಕರಿಸುವುದರಿಂದ ಗಂಭೀರ ಆರೋಗ್ಯ ಹಾಗೂ ಮಲಿನತೆ ಸಮಸ್ಯೆಗಳು ಎದುರಾಗುತ್ತವೆ.

  • ಇ-ತ್ಯಾಜ್ಯಗಳಲ್ಲಿ ಕ್ಯಾನ್ಸರ್ಕಾರಕ ವಸ್ತುಗಳು ಪಾಲಿಕ್ಲೋನೇಟೆಡ್‌ ಬೈಫಿನಾಯಿಲ್ಗಳನ್ನು ಒಳಗೊಂಡಿರುತ್ತದೆ.
  • ಅರ್ಸೆನಿಕ್‌ ನಂತಹ ವಿಷಕಾರಿ ವಸ್ತುಗಳು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಖಾಯಿಲೆಗಳನ್ನು ತಂದೊಡ್ಡುತ್ತದೆ.
  • ಕ್ಯಾಡ್ಮಿಯಂ ವಸ್ತುಗಳ ಶ್ವಾಸಕೋಶ, ಜಠರ ಹಾಗೂ ಮೂತ್ರ ಜನಕಾಂಗ ಸಂಬಂಧಿಸಿದ ಖಾಯಿಲೆಗೆ ಕಾರಣವಾಗುತ್ತದೆ.

ಜಾಗತಿಕ ಇ-ತ್ಯಾಜ್ಯ ನಿಯಂತ್ರಣ 2017 :

  • ಇದನ್ನು ಅಂತರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ, ವಿಶ್ವ ಸಂಸ್ಥೆ ವಿಶ್ವವಿದ್ಯಾಲಯ ಮತ್ತು ಅಂತರಾಷ್ಟ್ರೀಯ ಘನತ್ಯಾಜ್ಯ ಸಂಘ 2017ರಲ್ಲಿ ಬಿಡುಗಡೆಗೊಳಿಸಿದವು.
  • ಇ-ತ್ಯಾಜ್ಯ ಹೆಚ್ಚಾಗುವ ಮಟ್ಟವನ್ನು ಮತ್ತು ಅಸಮರ್ಪಕ, ಅಸುರಕ್ಷಿತ ನಿರ್ವಹಣೆ, ಸುಡುವ ಅಥವಾ ಎಲ್ಲಾದರೂ ಸಂಗ್ರಹಿಸಿಡುವ ಮೂಲಕ ದೂರವಿಡಿವುದನ್ನು ಪತ್ತೆ ಹಚ್ಚುವುದು ಇದರ ಮುಖ್ಯ ಉದ್ದೇಶವಾಗಿದೆ.
  • ವಿಶ್ವ ಸಂಸ್ಥೆಯ 2021ರ ವರದಿಯ ಪ್ರಕಾರ ಭೂಗ್ರಹದ ಮೇಲಿಂದ ಪ್ರತಿ ಮನುಷ್ಯ 7.6 ಕಿಲೋನಷ್ಟು ಇ-ತ್ಯಾಜ್ಯವನ್ನು ಸೃಷ್ಠಿಸುವನು.
  • ಇದರಂತೆ ಜಾಗತಿಕವಾಗಿ 57.4 ಮಿಲಿಯನ್‌ ಟನ್‌ ಗಳಷ್ಟು ಇ-ತ್ಯಾಜ್ಯ ಸಂಗ್ರಹವಾಗುತ್ತದೆ.

ಅಂತರಾಷ್ಟ್ರೀಯ ಇ-ತ್ಯಾಜ್ಯ ದಿನ :

  • ಪ್ರತಿವರ್ಷ ಅಕ್ಟೋಬರ್‌ 14 ರಂದು ಅಂತರಾಷ್ಟ್ರೀಯ ಇ- ತ್ಯಾಜ್ಯ ದಿನವನ್ನಾಗಿ ಆಚರಿಸಲಾಗುತ್ತದೆ.
  • 2018 ರಿಂದ ಈ ದಿನವನ್ನು ಆಚರನೆಯಲ್ಲಿ ತರಲಾಗಿದೆ.
  • ಜಾಗತಿಕವಾಗಿ 78 ರಾಷ್ಟ್ರಗಳ 172 ಸಂಸ್ಥೆಗಳು ಈ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ.

ಇ-ತ್ಯಾಜ್ಯ ಸೃಷ್ಠಿಯಲ್ಲಿ ಮೊದಲ 5 ರಾಷ್ಟ್ರಗಳು :

  • ಚೀನಾ
  • ಅಮೇರಿಕಾ
  • ಜಪಾನ್‌
  • ಭಾರತ
  • ಜರ್ಮನಿ

ಇ-ತ್ಯಾಜ್ಯ ಸೃಷ್ಠಿಯಲ್ಲಿ ಭಾರತದ ಮೊದಲ 6 ರಾಜ್ಯಗಳು :

  • ಮಹಾರಾಷ್ಟ್ರ
  • ತಮಿಳುನಾಡು
  • ಉತ್ತರ ಪ್ರದೇಶ
  • ಪಶ್ಚಿಮ ಬಂಗಾಲ
  • ದೆಹಲಿ
  • ಕರ್ನಾಟಕ

FAQ :

ಅಪಾಯಕಾರಿ ಇ-ತ್ಯಾಜ್ಯಗಳನ್ನು ತಿಳಿಸಿ?

ಸಲ್ಫರ್‌, ಪಾದರಸ, ನಿಕ್ಕಲ್‌, ನೀಲಿ ತವರ, ಬೆರಿಲಿಯಂ.

ಇ-ತ್ಯಾಜ್ಯ ಸೃಷ್ಠಿಯಲ್ಲಿ ಭಾರತದ ಮೊದಲ ರಾಜ್ಯ ಯಾವುದು?

ಮಹಾರಾಷ್ಟ್ರ

ಇತರೆ ವಿಷಯಗಳು :

ಜಲ ಸಂಪನ್ಮೂಲಗಳ ಬಗ್ಗೆ ಮಾಹಿತಿ

ಭಾರತದ ಪ್ರಮುಖ ಕೈಗಾರಿಕೋದ್ದಿಮೆಗಳ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ