ಕರ್ನಾಟಕದ ಪ್ರಸಿದ್ದ ಜಲಾಶಯಗಳ ಬಗ್ಗೆ ಮಾಹಿತಿ | Information About Famous Reservoirs of Karnataka in Kannada

ಕರ್ನಾಟಕದ ಪ್ರಸಿದ್ದ ಜಲಾಶಯಗಳ ಬಗ್ಗೆ ಮಾಹಿತಿ Information About Famous Reservoirs of Karnataka karnatakada prasidda jalashayagalu in kannada

ಕರ್ನಾಟಕದ ಪ್ರಸಿದ್ದ ಜಲಾಶಯಗಳ ಬಗ್ಗೆ ಮಾಹಿತಿ

ಕರ್ನಾಟಕದ ಪ್ರಸಿದ್ದ ಜಲಾಶಯಗಳ ಬಗ್ಗೆ ಮಾಹಿತಿ | Information About Famous Reservoirs of Karnataka in Kannada
ಕರ್ನಾಟಕದ ಪ್ರಸಿದ್ದ ಜಲಾಶಯಗಳ ಬಗ್ಗೆ ಮಾಹಿತಿ | Information About Famous Reservoirs of Karnataka in Kannada

ಈ ಲೇಖನಿಯಲ್ಲಿ ಜಲಾಶಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಕೃಷ್ಣರಾಜಸಾಗರ :

ಈ ಜಲಾಶಯನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕನ್ನಂಬಾಡಿ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಜಲಾಶಯವು ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಸುಮಾರು ೧.೯೫ ಲಕ್ಷ ಹೆಕ್ಟರ್‌ ಭೂಮಿಗೆ ನೀರು ಒದಗಿಸುತ್ತದೆ.

ಕೃಷ್ಣಾ ಮೇಲ್ದಂಡೆ ಯೋಜನೆ :

ಈ ಯೋಜನೆಯಡಿಯಲ್ಲಿ ಕೃಷ್ಣಾನದಿಗೆ ಅಡ್ಡಲಾಗಿ ವಿಜಾಪುರ ಜಿಲ್ಲೆಯ ನಾರಾಯಣಪುರಗಳಲ್ಲಿ ಜಲಾಶಯಗಳನ್ನು ನಿರ್ಮಿಸಲಾಗಿದ್ದು ಬರಗಾಲ ಪೀಡಿತ ವಿಜಾಪುರ, ಕಲಬುರ್ಗಿ, ಯಾದಗಿರಿ, ಬಾಗಲಕೋಟೆ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ೬.೨೨ ಲಕ್ಷ ಹೆಕ್ಟರ್‌ ಭೂಮಿಗೆ ನೀರೊದಗಿಸುವ ಗುರಿ ಹೊಂದಲಾಗಿದೆ.

ಮಲಪ್ರಭಾ ಯೋಜನೆ :

ಮಲಪ್ರಭಾ ಯೋಜನೆಯಡಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬಳಿ ನವಿಲುತೀರ್ಥ ಜಲಾಶಯವನ್ನು ನಿರ್ಮಿಸಲಾಗಿದೆ. ಈ ಯೋಜನೆಯಿಂದ ೨,೨೦,೦೨೮ ಹೆಕ್ಟರ್‌ ಭೂಮಿಗೆ ನೀರೊದಗಿಸುವ ಗುರಿ ಇದೆ.

ಭದ್ರಾ ಜಲಾಶಯ ಯೋಜನೆ :

ಈ ಜಲಾಶಯವನ್ನು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಬಳಿ ನಿರ್ಮಿಸಲಾಗಿದ್ದು. ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ಬಳ್ಳಾರಿ ಜಿಲ್ಲೆಗಳ ೧,೦೫,೦೦೦ ಹೆಕ್ಟರ್‌ ಭೂಮಿಗೆ ನೀರಾವರಿ ನೀಡಲಾಗುತ್ತದೆ.

ತುಂಗಾಭದ್ರ ಜಲಾಶಯ ಯೋಜನೆ :

ಈ ಜಲಶಯವನ್ನು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮಲ್ಲಾಪುರದ ಬಳಿ ಕರ್ನಾಟಕ ಮತ್ತು ಆಂದ್ರಪ್ರದೇಶ ರಾಜ್ಯಗಳ ಜಂಟಿ ಯೋಜನೆಯಾಗಿ ತುಂಗಾಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಯೋಜನೆಯು ೧೯೪೫ ರಲ್ಲಿ ಪ್ರಾರಂಭವಾಯಿತು. ಈ ಜಲಾಶಯದಿಂದ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಸುಮಾರು ೩, ೬೨,೭೯೫ ಹೆಕ್ಟರ್‌ ಭೂಮಿಗೆ ನೀರೊದಗಿಸುವ ಅವಕಾಶವಿದೆ.

ತುಂಗಾ ಮೇಲ್ದಂಡೆ ಯೋಜನೆ :

ಈ ಯೋಜನೆಯಡಿ ಈಗ ಶಿವಮೊಗ್ಗ ಬಳಿ ಇರುವ ತುಂಗಾ ಆಣೆಕಟ್ಟಿಗೆ ಹೊಸ ರೂಪ ನೀಡಿ ಶಿವಮೊಗ್ಗ, ಚಿತ್ರದುರ್ಗ, ಧಾರವಾಡ ಜಿಲ್ಲೆಗಳ ಸುಮಾರು ೯೪,೭೦೦ ಹೆಕ್ಟರ್‌ ಭೂಮಿಗೆ ನೀರೊದಗಿಸುವ ಗುರಿಯನ್ನು ಹೊಂದಿದೆ.

ಹಾರಂಗಿ ಯೋಜನೆಗಳು :

ಈ ಯೋಜನೆಯಂತೆ ಕೊಡಗು ಜಿಲ್ಲೆಯ, ಸೋಮವಾರ ಪೇಟೆ ತಾಲೂಕಿನ ಹುಡ್ಗೂರ ಗ್ರಾಮದ ಬಳಿ ಹಾರಂಗಿ ನದಿಗೆ ಅಡ್ಡಾಗಿ ಜಲಾಶಯ ನಿರ್ಮಿಸಿ ಕೊಡಗು, ಹಾಸನ ಮತ್ತು ಮೈಸೂರು ಜಿಲ್ಲೆಗಳ ಸುಮಾರು ೫೩, ೩೯೧ ಹೆಕ್ಟರ್‌ ಭೂಮಿಗೆ ನೀರೋದಗಿಸಲಾಗುತ್ತದೆ.

ಬೆಣ್ಣೆತೋರ ಯೋಜನೆ :

ಈ ಯೋಜನೆಯಂತೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹೆರೂರು ಗ್ರಾಮದ ಬಳಿ ಬೆಣ್ಣೆತೊರ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಿಸಲಾಗಿದ್ದು. ಕಲಬುರಗಿ ಜಿಲ್ಲೆಯ ೨೦,೨೩೪ ಹೆಕ್ಟರ್‌ ಜಮೀನಿಗೆ ನೀರಾವರಿ ಕಲ್ಪಿಸಲಾಗಿದೆ.

ಕಾರಂಜಾ ಯೋಜನೆ :

ಬೀದರ ಜಿಲ್ಲೆಯ ಬಾಲ್ಕಿ ತಾಲೂಕಿನ ಬಳಿ ಮಾಂಜ್ರಾ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಿಸಲಾಗಿದ್ದು, ಯೋಜನೆಯಡಿ ನೀರಾವರಿ ಒದಗಿಸಲು ಯೋಜಿಸಿರುವ ಜಮೀನು ೩೫,೬೧೪ ಹೆಕ್ಟರ್‌ ಆಗಿದೆ.

FAQ

ಹಾರಂಗಿ ಯೋಜನೆಯು ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ ?

ಹಾರಂಗಿ

ಕೃಷ್ಣಾರಾಜಸಾಗರ ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ ?

ಕಾವೇರಿ

ಇತರೆ ವಿಷಯಗಳು :

ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆ ಪ್ರಬಂಧ

ಮಳೆ ನೀರು ಕೊಯ್ಲು ಬಗ್ಗೆ ಪ್ರಬಂಧ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ