ಹಸಿರು ಕ್ರಾಂತಿಯ ಬಗ್ಗೆ ಮಾಹಿತಿ | Information about Green Revolution in Kannada

ಹಸಿರು ಕ್ರಾಂತಿಯ ಬಗ್ಗೆ ಮಾಹಿತಿ Information about Green Revolution Hasiru Kranthiya bagge Mahithi in Kannada

ಹಸಿರು ಕ್ರಾಂತಿಯ ಬಗ್ಗೆ ಮಾಹಿತಿ

Information about Green Revolution in Kannada
ಹಸಿರು ಕ್ರಾಂತಿಯ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಹಸಿರು ಕ್ರಾಂತಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಹಸಿರು ಕ್ರಾಂತಿ :

ಭಾರತದಲ್ಲಿ 1960ರ ದಶಕದ ಮಧ್ಯಭಾಗದಲ್ಲಿ ಕೃಷಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸುವ ಮೂಲಕ ಉತ್ಪನ್ನವನ್ನು ಹೆಚ್ಚಿಸಲಾಯಿತು. ಇದನ್ನು ಹಸಿರು ಕ್ರಾಂತಿ ಎನ್ನುವರು. ಇದನ್ನು ವಾರ್ಷಿಕ ಯೋಜನೆಯ ಸಂದರ್ಭದಲ್ಲಿ ಸಾಧಿಸಲಾಯಿತು. ಹಸಿರು ಕ್ರಾಂತಿಯಲ್ಲಿ ಅಧಿಕ ಇಳುವರಿ ನೀಡುವ ಬಿತ್ತನೆ ಬೀಜಗಳ ಬಳಕೆ ಪ್ರಮುಖವಾಗಿತ್ತು. ಈ HYVS ಗಳನ್ನು ಅಭಿವೃದ್ದಿ ಪಡಿಸಿದ ಕೀರ್ತಿ ನಾರ್ಮನ್‌ ಬೋರ್ಲಾಂಗ್‌ ರವರಿಗೆ ಸಲ್ಲುತ್ತದೆ. ಆದ್ದರಿಂದ ಇವರನ್ನು ಹಸಿರು ಕ್ರಾಂತೀಯ ಪಿತಾಮಹಾ ಎನ್ನುವರು. ಭಾರತದಲ್ಲಿ ಸ್ವಾಮಿನಾಥನ್‌ ರವರು ಈ ಬಿತ್ತನೆ ಬೀಜವನ್ನು ಪರಿಚಯಿಸಿದರು. ಭಾರತದಲ್ಲಿ ಸ್ವಾಮಿನಾಥನ್‌ ಮತ್ತು ಸಿ.ಸುಬ್ರಮಣ್ಯನ್‌ ರವರನ್ನು ಭಾರತದ ಹಸಿರು ಕ್ರಾಂತೀಯ ಪಿತಾಮಹಾರೆಂದು ಕರೆಯಲಾಗಿದೆ.

ಭಾರತದ ಕೃಷಿಯಲ್ಲಿ ಅಳವಡಿಸಿಕೊಂಡ ತಂತ್ರಜ್ಞಾನವನ್ನು 2 ಭಾಗಗಳಾಗಿ ವಿಂಗಡಿಸಲಾಗಿದೆ :

ಸುಗ್ಗಿ ಪೂರ್ವ ತಂತ್ರಜ್ಞಾನ :

ಕೃಷಿಯ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಬಳಸಿದ ತಂತ್ರಜ್ಞಾವನ್ನು ಸುಗ್ಗಿ ಪೂರ್ವ ತಂತ್ರಜ್ಞಾನ ಎನ್ನುವರು. ಅಂದರೆ ಬೆಳೆಯನ್ನು ಕೊಯ್ಲು ಮಾಡುವುದಕ್ಕಿಂತ ಮೊದಲು ಬಳಸಿದಂತಹ ತಂತ್ರಜ್ಞಾನವಾಗಿದೆ.

ಅಧಿಕ ಇಳುವರಿ ನೀಡುವ ಬಿತ್ತನೆ ಬೀಜಗಳ ಬಳಕೆ :

ಹಸಿರು ಕ್ರಾಂತಿಯು ಪ್ರಮುಖ ಅಧಿಕ ಇಳುವರಿ ನೀಡುವ ಬಿತ್ತನೆ ಬೀಜಗಳ ಮೇಲೆ ಕೇಂಧ್ರೀಕರಿಸಿದೆ. ಗೋದಿಯಲ್ಲಿ ಬಳಸಿದ ಅಧಿಕ ಇಳುವರಿ ನೀಡುವ ಬಿತ್ತನೆ ಬೀಜಗಳಿಂದ ಸರ್ಕಾರವು ಸಂಶೋಧನಾ ಕೇಂದ್ರಗಳು ಮತ್ತು ವಿಶವವಿದ್ಯಾಲಯಗಳ ಮೂಲಕ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ಪೂರೈಸುತ್ತದೆ. ಆದ್ದರಿಂದ ರೈತರು ಅಧಿಕ ಇಳುವರಿ ನೀಡುವ ಬಿತ್ತನೆ ಬೀಜಗಳನ್ನು ಬಳಸಲು ಸಾಧ್ಯವಾಗಿದೆ. ಇದು ಉತ್ಪಾದನೆಯ ಹೆಚ್ಚಳಕ್ಕೆ ಕಾರಣವಾಗಿದೆ.

ರಸಗೊಬ್ಬರಗಳ ಬಳಕೆ :

ಬಿತ್ತನೆ ಬೀಜಗಳಿಂದ ಅಧಿಕ ಪ್ರಮಾಣದ ಉತ್ಪಾದನೆಯನ್ನು ಪಡೆಯಲು ರಸಗೊಬ್ಬರಗಳನ್ನು ಬಳಸಬೇಕಾಗುತ್ತದೆ. 1960ರ ದಶಕದ ನಂತರ ಭಾರತದಲ್ಲಿ ರಸಗೊಬ್ಬರಗಳ ಉತ್ಪಾದನೆ ಮತ್ತು ಬಳಕೆ ಅಧಿಕವಾಗಿದೆ. ಒಂದು ರೈತರು ಯೂರಿಯಾ, ಡಿ.ಎ.ಪಿ. ಪೊಟಾಶ್‌, ಕಾಂಪ್ಲೆಕ್ಸ್‌, ಮೊದಲಾದ ರಸಗೊಬ್ಬರಗಳನ್ನು ಬಳಸುತ್ತಿದ್ದಾರೆ. ಇವುಗಳ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಪೂರೈಸುವ ಕೃಷಿಯ ಉತ್ಪಾದಕತೆ ಮತ್ತು ಉತ್ಪಾದಕತೆಯ ಹೆಚ್ಚಳಕ್ಕೆ ಸಹಾಯಕವಾಗಿದೆ.

ಕ್ರಿಮಿನಾಶಕಗಳ ಬಳಕೆ :

ಕೃಷಿ ಬೆಳೆಗಳನ್ನು ಕ್ರಿಮಿ ಕೀಟಗಳ ಸಮಸ್ಯೆಯಿಂದ ರಕ್ಷಿಸಲು ಹಲವಾರು ಕ್ರಿಮಿನಾಶಕಗಳನ್ನು ಸಂಶೋಧನೆ ಮಾಡಲಾಗಿದೆ. ರಾಷ್ಟ್ರದಲ್ಲಿ ಸುಮಾರು 10% ಬೆಳೆಗಳು ಕ್ರಿಮಿಕೀಟಗಳಿಂದ ನಷ್ಟವೊಂದಿರುತ್ತದೆ. ಪ್ರಸ್ತುತ ಸರ್ಕಾರವು ರಿಯಾಯಿತಿ ದರದಲ್ಲಿ ಕ್ರಿಮಿನಾಶಕಗಳನ್ನು ರೈತರಿಗೆ ಪೂರೈಸುತ್ತದೆ. ಆದ್ದರಿಂದ ಕೃಷಿ ಉತ್ಪಾದನೆಯಲ್ಲಿ ಸ್ಥಿರತೆಯನ್ನು ಸಾಧಿಸಲು ಸಾಧ್ಯವಾಗಿದೆ.

ಆಧುನಿಕ ಉಪಕರಣಗಳ ಬಳಕೆ :

ಕೃಷಿಯು ಯಾಂತ್ರೀಕರಣಗೊಂಡು ಯಂತ್ರೋಪಕರಣಗಳ ಬಳಕೆಯು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಟ್ಯಾಕ್ಟರ್‌, ಟಿಲ್ಲರ್‌, ಬಿತ್ತನೆ, ಕಟಾವು ಮತ್ತು ಒಕ್ಕಣೆ ಯಂತ್ರಗಳು, ನೇರೆತ್ತುವ ಪಂಪುಗಳು ಮುಂತಾದವುಗಳನ್ನು ಸರ್ಕಾರವು ಸಹಾಯಧನ ಬೆಲೆಯಲ್ಲಿ ಪೂರೈಸುತ್ತದೆ. ಇದು ಕೃಷಿಯಲ್ಲಿನ ಉತ್ಪಾದನಾ ವೆಚ್ಚ ಕಡಿಮೆಯಾಗಿ ರೈತರ ಆದಾಯ ಹೆಚ್ಚಳವಾಗಲು ಸಹಾಯಕವಾಗಿದೆ.

ನೀರಾವರಿ :

ಕೃಷಿ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ನೀರಾವರಿಯ ಅವಶ್ಯಕವಾಗಿದೆ. ಸರ್ಕಾರವು ನೀರಾವರಿ ಸೌಲಭ್ಯವನ್ನು ಕಲ್ಪಿಸಿಕೊಡಲು ವಿವಿದ್ದೋದ್ದೇಶ ನದಿ ಯೋಜನೆಗಳ ನಿರ್ಮಾಣ ಮಾಡಿದೆ. ಅದರ ನೀರಿನ ಮಿತ ಬಳಕೆಯನ್ನು ಉತ್ತೇಜಿಸಲು ಹನಿ ನೀರಾವರಿ ತುಂತುರು ನೀರಾವರಿ ವಿಧಾನಗಳನ್ನು ಉತ್ತೇಜಿಸುತ್ತದೆ.

ಸಾಲ ಸೌಲಭ್ಯ :

ಭಾರತೀಯ ರೈತರು ಮೂಲತಃ ಬಡತನ ರೇಖೆಗಿಂತ ಕೆಳಗಿರುವ ಕಾರಣ ಕೃಷಿಯಲ್ಲಿ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲು ಅಗತ್ಯ ಬಂಡವಾಳ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸರ್ಕಾರವು ಕಡಿಮೆ ಬಡ್ಡಿದರದಲ್ಲಿ ವಾಣಿಜ್ಯ ಬಾಂಕ್‌ಗಳು, ಸಹಕಾರಿ ಸಂಘಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಮೂಲಕ ಅಗತ್ಯ ಹಣಕಾಸಿನ ನೆರವನ್ನು ನೀಡುತ್ತದೆ.

ರೈತರಿಗೆ ತರಬೇತಿ :

ಕೃಷಿಯಲ್ಲಿ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳಲು ರೈತರ ಅನಕ್ಷರತೆಯು ಒಂದು ತೊಡಕಾಗಿ ಪರಿಣಮಿಸಿದೆ. ಆದ್ದರಿಂದ ಸರ್ಕಾರವು, ವಿಶ್ವವಿದ್ಯಾನಿಲಯಗಳು, ಕೃಷಿ ಇಲಾಖೆಗಳು, ಸರ್ಕಾರೇತರ ಸಂಸ್ಥೆಗಳು ಮೊದಲಾದವುಗಳ ಮೂಲಕ ರೈತರಿಗೆ ಸೂಕ್ತ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಹಸಿರು ಮನೆ ತಂತ್ರಜ್ಞಾನ :

ಹವಾಮಾನದ ವೈಪರೀತ್ಯಗಳಿಂದ ಕೃಷಿ ಉತ್ಪಾದನೆಯಲ್ಲಿನ ನಷ್ಟಗಳನ್ನು ಕಡಿಮೆ ಮಾಡಲು ಹಸಿರು ಮನೆ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಹಸಿರು ಮನೆ ತಂತ್ರಜ್ಞಾನದಲ್ಲಿ ನಿಯಂತ್ರಿತ ತಾಪಮಾನದಲ್ಲಿ ಕೃಷಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಪ್ರಮುಖವಾಗಿ ಹೂ ಹಣ್ಣುಗಳು ಮತ್ತು ತರಕಾರಿಗಳನ್ನು ಹಸಿರುಮನೆ ತಂತ್ರಜ್ಞಾನದಲ್ಲಿ ಬೆಳೆಯಲಾಗುತ್ತದೆ.

FAQ :

ಹಸಿರು ಮನೆ ತಂತ್ರಜ್ಞಾನವನ್ನು ಏಕೆ ಬಳಸಲಾಗುತ್ತದೆ?

ಹವಾಮಾನದ ವೈಪರೀತ್ಯಗಳಿಂದ ಕೃಷಿ ಉತ್ಪಾದನೆಯಲ್ಲಿನ ನಷ್ಟಗಳನ್ನು ಕಡಿಮೆ ಮಾಡಲು ಹಸಿರು ಮನೆ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ

ಭಾರತದ ಹಸಿರು ಕ್ರಾಂತೀಯ ಪಿತಾಮಹಾ ಎಂದು ಯಾರನ್ನು ಕರೆಯುತ್ತಾರೆ?

M S ಸ್ವಾಮಿನಾಥನ್

ಇತರೆ ವಿಷಯಗಳು :

ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯ ಪ್ರಮುಖ ಯೋಜನೆಗಳ ಬಗ್ಗೆ ಮಾಹಿತಿ

ಭಾರತ ಸಂವಿಧಾನಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ

Leave your vote

-4 Points
Upvote Downvote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ