ಹರಪ್ಪ ನಾಗರಿಕತೆಯ ಬಗ್ಗೆ ಮಾಹಿತಿ | Information about Harappan Civilization in Kannada

ಹರಪ್ಪ ನಾಗರಿಕತೆಯ ಬಗ್ಗೆ ಮಾಹಿತಿ Information about Harappan Civilization Harappa Nagarikatheya bagge Mahithi in Kannada

ಹರಪ್ಪ ನಾಗರಿಕತೆಯ ಬಗ್ಗೆ ಮಾಹಿತಿ

ಹರಪ್ಪ ನಾಗರಿಕತೆಯ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಹರಪ್ಪ ನಾಗರಿಕತೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಹರಪ್ಪ ನಾಗರಿಕತೆ :

ಒಂದು ಶತಮಾನದ ಹಿಂದಿನವರೆಗೂ ಭಾರತದ ಚರಿತ್ರೆಯನ್ನು ವೇದಗಳ ಕಾಲಗಳಿಂದ ಅಧ್ಯಯನ ಮಾಡಲಾಗುತ್ತಿತ್ತು. ಕೆಲವು ವರ್ಷಗಳ ನಂತರ ದಯಾರಾಂ ಸಾಹ್ನಿ ಮತ್ತು ರಖಲ್ದಾಸ್‌ ಬ್ಯಾನರ್ಜಿ ಅವರು ಇಂದಿನ ಪಾಕಿಸ್ತಾನದ ಹರಪ್ಪ ಮತ್ತು ಮೆಹೆಂಜೋದಾರೋ ಎಂಬಲ್ಲಿ ಪ್ರಾಚೀನ ನಗರಗಳ ಅವಶೇಷಗಳನ್ನು ಶೋಧಿಸಿದರು. ಈ ಶೋಧವು ಭಾರತದ ಇತಿಹಾಸವನ್ನುವೇದಗಳಿಗೂ ಸುಮಾರು 2000 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿತು. ಆರಂಭದಲ್ಲಿ ಸಿಂಧೂ ಮತ್ತು ಅದರ ಉಪನದಿಗಳ ಬಯಲಿನಲ್ಲಿ ಇವು ಪತ್ತೆಯಾದ್ದರಿಂದ ಸಿಂಧೂ ಬಯಲಿನ ನಾಗರಿಕತೆ ಎಂದು ಕರೆದರು. ಆದರೆ ಅಂದಿನಿಂದ ಇಂದಿನವರೆಗೂ ನಡೆದಿರುವ ಸಂಶೋಧನೆಗಳಲ್ಲಿ ಸುಮಾರು 1500 ಕ್ಕೂ ಹೆಚ್ಚು ನೆಲೆಗಳು ಕಂಡು ಬಂದಿವೆ. ಪರಿಣಾಮವಾಗಿ ಸಿಂಧೂ ನದಿಬಯಲಿನ ಆಚೆಗೂ ಈ ನಾಗರೀಕತೆಯ ನೆಲೆಗಳು ಗುರುತಿಸಲ್ಪಟ್ಟಿವೆ.

ನಗರ ಯೋಜನೆ :

ಹರಪ್ಪ ನಾಗರಿಕತೆಯ ನಗರಗಳು ಯೋಜನಾಬದ್ದವಾಗಿ ನಿರ್ಮಾಣಗೊಂಡಿದ್ದವು. ಅವುಗಳ ರಕ್ಷಣೆಗಾಗಿ ಕೋಟೆಗಳನ್ನು ಕಟ್ಟಲಾಗಿತ್ತು. ಅಗಲವಾದ ರಸ್ತೆಗಳು, ಸಾರ್ವಜನಿಕ ಬಾವಿಗಳು, ಉಪ್ಪರಿಗೆಯ ಮನೆಗಳು, ಅಚ್ಚುಕಟ್ಟಾದ ಒಳಚರಂಡಿ ವ್ಯವಸ್ಥೆ ಇವು ಹರಪ್ಪ ನಗರಗಳ ವಿಶೇಷ ಲಕ್ಷಣಗಳು. ಒಳಚರಂಡಿ ವ್ಯವಸ್ಥೆಯಂತೂ ನಮ್ಮ ಪ್ರಾಚೀನರ ಅಪೂರ್ವ ಸಾಧನೆಯಾಗಿದೆ. ಅವರು ಸ್ವಚ್ಛತೆಗೆ ನೀಡಿರುವ ಆಧ್ಯತೆಯು ಇಂದಿಗೂ ಮಾದರಿಯಾಗಿದೆ. ಇಲ್ಲಿನ ನಗರ ಯೋಜನಬೆ ವ್ಯವಸ್ಥೆಯನ್ನು ಜಗತ್ತಿನ ಬೇರೆ ಯಾವ ಪ್ರಾಚೀನ ನಾಗರಿಕತೆಯಲ್ಲೂ ಕಾಣಲಾರೆವು. ಮೆಹೆಂಜೋದಾರೋ ನಗರದಲ್ಲಿ ಸಾರ್ವಜನಿಕ ಸ್ನಾನಗೃಹವಿದೆ. ಅದರ ಸುತ್ತಲೂ ಕೊಠಡಿಗಳಿವೆ. ಹರಪ್ಪ ನಗರದಲ್ಲಿ ಆರು ಕಣಜಗಳಿದ್ದು ಸಮೀಪದಲ್ಲಿ ಕಾರ್ಮಿಕರ ಮನೆಗಳಿವೆ. ಲೋಥಾಲ್‌ ಅಂದಿನ ಪ್ರಸಿದ್ದ ಬಂದರಾಗಿತ್ತು.

ಆರ್ಥಿಕ ಜೀವನ :

ಹತ್ತಿ ಹಾಗೂ ಉಣ್ಣೆ ಬಟ್ಟೆಯನ್ನು ನೂಲುವುದು ಹರಪ್ಪನ್ನರ ಒಂದು ಕಸುಬು. ಅವರ ಇನ್ನೊಂದು ಕಸುಬು ಸುಟ್ಟ ಇಟ್ಟಿಗೆಗಳ ತಯಾರಿ. ಇವರು ಪಶುಪಾಲನೆಯನ್ನು ಮಾಡುತ್ತಿದ್ದರು. ಎತ್ತು, ಕೋಣ, ಆಡು, ಕುರಿ, ಹಂದಿ, ಬೆಕ್ಕು, ನಾಯಿ, ಒಂಟೆ, ಕತ್ತೆಗಳನ್ನು ಸಾಕುತ್ತಿದ್ದರು ಮತ್ತು ಹತ್ತಿ ಬೆಳೆಯುತ್ತಿದ್ದರು. ಜಗತ್ತಿನಲ್ಲಿ ಮೊದಲ ಬಾರಿಗೆ ಹತ್ತಿಯನ್ನು ಬೆಳೆದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಸಿಂಧೂ ಪ್ರದೇಶದಿಂದ ಉತ್ಪಾದಿಸಲಾಗುತ್ತಿದ್ದ ಕಾರಣ ಹತ್ತಿಯನ್ನು ಗ್ರೀಕ್‌ ಭಾಷೆಯಲ್ಲಿ ಸಿಂಧೂನ್‌ ಎಂದು ಕರೆಯಲಾಗುತ್ತಿತ್ತು. ಹರಪ್ಪನ್ನರು ಮೆಸೊಪೆಟೋಮಿಯಾ ನಾಗರಿಕತೆಯೊಂದಿಗೆ ವ್ಯಾಪಾರ ಸಂಪರ್ಕ ಹೊಂದಿದ್ದರು. ಮೆಸೊಪೆಟೋಮಿಯನ್ನರು ಈ ನಾಗರಿಕತೆಯನ್ನು ಮೆಲುಹ ಎಂದು ಕರೆಯುತ್ತಿದ್ದರು. ಲೋಥಾಲ್‌ ಬಂದರಿನ ಮೂಲಕ ಅರಬ್ಬಿ ಸಮುದ್ರದ ಮಾರ್ಗದಲ್ಲಿ ವ್ಯಾಪಾರ ನಡೆಸುತ್ತಿದ್ದರು.

ಸಾಮಾಜಿಕ ಜೀವನ :

ಹರಪ್ಪ ನಾಗರಿಕತೆಯಲ್ಲಿ ಸ್ತ್ರೀ ಪುರುಷರಿಬ್ಬರೂ ಅಲಂಕಾರ ಪ್ರಿಯರಾಗಿದ್ದರು. ಸ್ತ್ರೀಯರು ಅನೇಕ ವಿಧದ ಕಂಠಿಹಾರ, ಬಳೆ, ಉಂಗುರ. ಕಿವಿಯ ಓಲೆ, ಸೊಂಟದ ಪಟ್ಟಿ, ಕಾಲಿನ ಕಡಗಗಳು ಮೊದಲಾದ ಆಭರಣಗಳನ್ನು ಧರಿಸುತ್ತಿದ್ದರು. ಕಾಂತಿವರ್ಧಕಗಳನ್ನೂ ಬಳಸುತ್ತಿದ್ದರು. ಸುಗಂಧದ್ರವ್ಯಗಳ ಬಳಕೆಯೂ ಅವರಿಗೆ ತಿಳಿದಿತ್ತು. ಸ್ತ್ರೀಯರಷ್ಟೇ ಪರುಷರು ಕೂಡ ಅಲಂಕಾರ ಪ್ರಿಯರಾಗಿದ್ದರು.

ಕಲೆ :

ಅವಶೇಷಗಳ ಪೈಕಿ ಜೇಡಿಮಣ್ಣಿನ ಮಾತೃದೇವತೆಗಳ ಚಿಕ್ಕ ಮೂರ್ತಿಗಳು ಭಾರಿ ಸಂಖ್ಯೆಯಲ್ಲಿ ದೊರಕಿವೆ. ಸುಮಾರು 2000 ಕ್ಕೂ ಹೆಚ್ಚು ಮುದ್ರೆಗಳು ಕೂಡ ಸಿಕ್ಕಿವೆ. ಅವುಗಳಲ್ಲಿ ಡುಬ್ಬದ ಗೂಳಿ, ಏಕಶೃಂಗಿ ಮುದ್ರೆಗಳು ಪ್ರಮುಖವಾದವು. ನರ್ತಕಿಯ ಲೋಹದ ಮೂರ್ತಿ ಮತ್ತು ಗಡ್ಡದಾರಿ ಮನುಷ್ಯನ ಶಿಲಾಮೂರ್ತಿಗಳು ಇಲ್ಲಿ ದೊರಕಿದ ಸುಂದರ ಮೂರ್ತಿಗಳಾಗಿವೆ.

ಧರ್ಮ :

ಹರಪ್ಪನ್ನು ಪಶುಪತಿ ಮತ್ತು ಮಾಸತೃದೇವತೆಯನ್ನು ಪೂಜಿಸುತ್ತಿದ್ದರು. ಅಶ್ವತ್ಥಮರ, ಸೂರ್ಯ, ಅಗ್ನಿ, ಭೂಮಿ, ಜಲ ಮತ್ತು ನಾಗರ ಹಾವುಗಳನ್ನು ಕೂಡ ಆರಾಧಿಸುತ್ತಿದ್ದರು. ಕಾಲಿಬಂಗನ್‌ ಮತ್ತು ಲೋಥಾಲ್‌ ಮುಂತಾದ ನಗರಗಳಲ್ಲಿ ಬೆಂಕಿಯ ಕುಂಡಗಳು ಕಂಡುಬಂದಿದೆ.

ಲಿಪಿ :

ಹರಪ್ಪ ಜನರು ತಮ್ಮದೇ ಆದ ಲಿಪಿ ಮತ್ತು ಭಾಷೆಯನ್ನು ಬಳಸುತ್ತಿದ್ದರು. ವಿದ್ವಾಂಸರು ಮುದ್ರೆಗಳ ಮೇಲಿರುವ ಬರಹಗಳನ್ನು ಓದಲು ಅನೇಕ ದಶಕಗಳಿಂದ ಶ್ರಮಿಸುತ್ತಾ ಬಂದಿದ್ದಾರೆ. ಆದರೂ ಹರಪ್ಪ ಲಿಪಿಯನ್ನು ಅರ್ಥೈಸುವುದು ಇನ್ನೂ ಸಾಧ್ಯವಾಗಿಲ್ಲ.

ನಗರಗಳ ಅವನತಿಗೆ ಕಾರಣಗಳು :

  • ಸಿಂಧೂ ಮತ್ತು ಅದರ ಉಪನದಿಗಳಲ್ಲಿ ಆಗಾಗ ಉಂಟಾಗುತ್ತಿದ್ದ ನೆರೆ ಹಾವಳಿಗಳು.
  • ಇಟ್ಟಿಗೆಗಳನ್ನು ಸುಡಲು ಮರಮುಟ್ಟುಗಳ ಅತಿಯಾದ ಬಳಕೆಯಿಂದ ಕಾಡುಗಳ ನಾಸ ಮತ್ತು ಇದರ ಪರಿಣಾಮವಾಗಿ ಜನರ ವಲಸೆ.
  • ಹೊರಗಿನಿಂದ ಬಂದ ಆರ್ಯರು ಹರಪ್ಪನ್ನರ ಮೇಲೆ ನಡೆಸಿರಬಹುದಾದ ಆಕ್ರಮಣ.
  • ಸಾಂಕ್ರಾಮಿಕ ರೋಗದ ಪ್ರಸಾರ.

FAQ :

ಹರಪ್ಪ ನಾಗರಿಕತೆಯ ಸಾಮಾಜಿಕ ಜೀವನ ತಿಳಿಸಿ?

ಹರಪ್ಪ ನಾಗರಿಕತೆಯಲ್ಲಿ ಸ್ತ್ರೀ ಪುರುಷರಿಬ್ಬರೂ ಅಲಂಕಾರ ಪ್ರಿಯರಾಗಿದ್ದರು. ಸ್ತ್ರೀಯರು ಅನೇಕ ವಿಧದ ಕಂಠಿಹಾರ, ಬಳೆ, ಉಂಗುರ. ಕಿವಿಯ ಓಲೆ, ಸೊಂಟದ ಪಟ್ಟಿ, ಕಾಲಿನ ಕಡಗಗಳು ಮೊದಲಾದ ಆಭರಣಗಳನ್ನು ಧರಿಸುತ್ತಿದ್ದರು. ಕಾಂತಿವರ್ಧಕಗಳನ್ನೂ ಬಳಸುತ್ತಿದ್ದರು. ಸುಗಂಧದ್ರವ್ಯಗಳ ಬಳಕೆಯೂ ಅವರಿಗೆ ತಿಳಿದಿತ್ತು. ಸ್ತ್ರೀಯರಷ್ಟೇ ಪರುಷರು ಕೂಡ ಅಲಂಕಾರ ಪ್ರಿಯರಾಗಿದ್ದರು.

ನಗರಗಳ ಅವನತಿಗೆ ಕಾರಣಗಳನ್ನು ತಿಳಿಸಿ?

ಸಿಂಧೂ ಮತ್ತು ಅದರ ಉಪನದಿಗಳಲ್ಲಿ ಆಗಾಗ ಉಂಟಾಗುತ್ತಿದ್ದ ನೆರೆ ಹಾವಳಿಗಳು.
ಇಟ್ಟಿಗೆಗಳನ್ನು ಸುಡಲು ಮರಮುಟ್ಟುಗಳ ಅತಿಯಾದ ಬಳಕೆಯಿಂದ ಕಾಡುಗಳ ನಾಸ ಮತ್ತು ಇದರ ಪರಿಣಾಮವಾಗಿ ಜನರ ವಲಸೆ.
ಹೊರಗಿನಿಂದ ಬಂದ ಆರ್ಯರು ಹರಪ್ಪನ್ನರ ಮೇಲೆ ನಡೆಸಿರಬಹುದಾದ ಆಕ್ರಮಣ.
ಸಾಂಕ್ರಾಮಿಕ ರೋಗದ ಪ್ರಸಾರ

ಇತರೆ ವಿಷಯಗಳು :

ಜಲ ಸಂಪನ್ಮೂಲಗಳ ಬಗ್ಗೆ ಮಾಹಿತಿ

ಜನಪದ ಚರಿತ್ರೆ ಬಗ್ಗೆ ಮಾಹಿತಿ

Leave your vote

-3 Points
Upvote Downvote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ