ಜೈನ ಧರ್ಮದ ಬಗ್ಗೆ ಮಾಹಿತಿ | Information about Jainism in Kannada

ಜೈನ ಧರ್ಮದ ಬಗ್ಗೆ ಮಾಹಿತಿ Information about Jainism Jaina Dharmada bagge Mahithi in Kannada

ಜೈನ ಧರ್ಮದ ಬಗ್ಗೆ ಮಾಹಿತಿ

Information about Jainism in Kannada
ಜೈನ ಧರ್ಮದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಜೈನ ಧರ್ಮದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಜೈನ ಧರ್ಮ :

ಜೈನಧರ್ಮದ ಪ್ರತಿಪಾದಕರನ್ನು ತೀರ್ಥಂಕರರು ಎಂದು ಕರೆಯುತ್ತಾರೆ. ಜೈನಧರ್ಮದ ಒಟ್ಟು ತೀರ್ಥಂಕರರು 24 ಜನ. 24 ಜನ ತೀರ್ಥಂಕರರ ಬಗ್ಗೆ ತಿಳಿಸುವ ಗ್ರಂಥಗಳು ಬದ್ರಬಾಹುವಿನ ಕಲ್ಪಸೂತ್ರ, ಚಾವುಂಡರಾಯನ ಚಾವುಂಡರಾಯ ಪುರಾಣ. ಮಹಾಭಾರತದ ಸಂದರ್ಭದಲ್ಲಿದ್ದ ಜೈನರ ತೀರ್ಥಾಂಕ – ನೇಮಿನಾಥ.

ವೃಷಭನಾಥ :

  • ತಂದೆ – ನಾಭಿರಾಜ
  • ತಾಯಿ – ವಾಮಾದೇವಿ
  • ಪತ್ನಿಯರು – ಸುನಂದ, ಸುಮಂಗಳ
  • ಇವನು ಕೈಲಾಸಗಿರಿಯಲ್ಲಿ ಸುಮಾರು 6 ತಿಂಗಳವರೆಗೆ ತಪ್ಪಸ್ಸನ್ನು ಗೈದು ಆದಿಯಾದನು.
  • ಇವನನ್ನು ಜೈನಧರ್ಮ ಸ್ಥಾಪಕ ಎಂದು ಕರೆಯುತ್ತಾರೆ.

ಪಾಶ್ವನಾಥ :

  • 23ನೇಯ ತೀರ್ಥಾಂಕ
  • ತಂದೆ – ಅಶ್ವಸೇನ
  • ತಾಯಿ – ಪ್ರಭಾವತಿ
  • ಜಾಕೋಬಿಯನ್ನರ ಪ್ರಕಾರ ಜೈನ ಧರ್ಮದ ನಿಜವಾದ ಸ್ಥಾಪಕನು ಎಂದು ಕರೆಯುತ್ತಾರೆ. ಕೊನೆಗೆ ಪಾಶ್ವನಾಥನು ಜಾರ್ಖಂಡದ ಶಿಖರಿ ಎಂಬಲ್ಲಿ ನಿರ್ವಾಣ ಹೊಂದಿದನು.

ವರ್ಧಮಾನ ಮಹಾವೀರ :

  • ತಂದೆ – ಸಿದ್ದಾರ್ಥ
  • ತಾಯಿ – ತ್ರಿಶಾಲದೇವಿ
  • ಜನನ – ಕ್ರಿ.ಪೂ. 599 ಬಿಹಾರದ ಕುಂಡಲಿಗ್ರಾಮದಲ್ಲಿ ಜನಿಸಿದನು.
  • ಪತ್ನಿ – ಯಶೋಧಾ
  • ಮಗಳು – ಅನ್ಹುಜಾ
  • ಅಳಿಯ – ಜಮಾಲಿ
  • ಗುರು – ಮಸ್ಕಾಲಿ ಗೋಸಲ ಪುತ್ತ

ವರ್ಧಮಾನನು ತನ್ನ 29ನೇಯ ವಯಸ್ಸಿನಲ್ಲಿ ಮನೆಯನ್ನು ತೊರೆದು ಸುಮಾರು 13 ವರ್ಷಗಳ ವರೆಗೆ ತಪಸ್ಸನ್ನುಗೈದು ಕೊನೆಗೆ ತನ್ನ 42ನೃ ವಯಸ್ಸಿನಲ್ಲಿ ಬಿಹಾರ ಸಮೀಪದ ಜುಂಬ್ರಿಕಾ ನಗರದ ಋಜಪಾಲಿಕ ನದಿಯ ದಂಡೆಯ ಸಾಲು ಮರದ ಕೆಳಗೆ ಜ್ಞಾನೋದಯವಾಗಿ ಕೇಲೀನ್‌ ಆಗಿ ಜೀನನಾದರು.

5 ತತ್ವಗಳು :

  • ಸತ್ಯ – ಸುಳ್ಳು ಹೇಳಬಾರದು
  • ಅಹಿಂಸೆ – ಹಿಂಸೆಯನ್ನು ಮಾಡಬಾರದು
  • ಅಸ್ತೇಯ – ಕಳ್ಳತನವನ್ನು ಮಾಡಬಾರದು
  • ಅಪರಿಗ್ರಹ – ಅವಶ್ಯಕ್ಕಿಂತ ಹೆಚ್ಚಿನ ಸಂಪತ್ತನ್ನು ಹೊಂದಬಾರದು
  • ಬ್ರಹ್ನಚರ್ಯ – ಪವಿತ್ರತೆ
  • ಮೊದಲ 4 ಭೋದನೆಗಳು ಪಾರ್ಶ್ವನಾಥನಿಗೆ ಸಂಬಂಧಪಟ್ಟರೆ ಕೊನೆಯ ಭೋದನೆ ಮಹಾವೀರನಿಗೆ ಸಂಬಂಧ ಪಟ್ಟಿದೆ.
  • ಕ್ರಿ.ಪೂ.527 ರಲ್ಲಿ ಮಹಾವೀರನು ಬಿಹಾರದ ಪಾದಪೂರಿಯಲ್ಲಿ ತನ್ನ 72 ನೇ ವಯಸ್ಸಿನಲ್ಲಿ ನಿರ್ವಾಣ ಹೊಂದಿದನು.

ಜೈನಧರ್ಮದ ಪಂಗಡಗಳು :

  • ಶ್ವೇತಾಂಬರರು :
  • ಇವರು ಬಿಳಿವಸ್ತ್ರವನ್ನು ಧರಿಸುತ್ತಿದ್ದು, ಅತಿ ಹೆಚ್ಚು ಉತ್ತರಭಾರತದಲ್ಲಿ ಕಂಡುಬರುತ್ತಾರೆ. ಇವರು ಪಾರ್ಶ್ವನಾಥನ ಅನುಯಾಯಿಗಳಾಗಿದ್ದರು.
  • ಶ್ವೇತಾಂಬರರ ಕಾಶಿ – ಮೌಂಟ್‌ ಅಬುವಿನ ದಿಲ್ವಾರ ದೇವಾಲಯಗಳು
  • ಶ್ವೇತಾಂಬರರ ನಾಯಕ – ಸ್ಥೂಲಭದ್ರ
  • ಇವರು ಪಾರ್ಶ್ವನಾಥನ ಅನುಯಾಯಿಗಳು
  • ದಿಗಂಬರರು :
  • ಇವರು ವಸ್ತ್ರಗಳನ್ನು ಧರಿಸುವುದಿಲ್ಲ ಅತಿ ಹೆಚ್ಚು ದಕ್ಷಿಣಭಾರತದಲ್ಲಿ ಕಂಡುಬರುತ್ತಾರೆ.
  • ಇವರು ಮಹಾವೀರನ ಅನುಯಾಯಿಗಳು
  • ದಿಗಂಬರರ ಕಾಶಿ ಶ್ರವಣಬೆಳಗೊಳ
  • ನಾಯಕ – ಬದ್ರಬಾಹು
  • 1000 ಕಂಬಗಳ ಬಸದಿ ದೊರೆತ ಸ್ಥಳ – ಮೂಡಬಿದ್ರೆ
  • ಜೈನರ ಕಾಶಿ – ಶ್ರವಣ ಬೆಳಗೊಳ
  • ಮಹಾವೀರನ ಮೊದಲ ಶಿಷ್ಯ – ಇಂದ್ರ ಭೂತಿ
  • ಜೈನರ ತತ್ವಜ್ಞಾನಿ – ಹೇಮಿಚಂದ್ರ
  • ವೃಷಭನಾಥನ ಮೂರ್ತಿ ದೊರೆತ ಸ್ಥಳ – ಮಥುರಾ
  • ಜೈನರ ದೇವಾಲಯಗಳ ನಗರ – ಗುಜರಾತನ ಗಿರ್ನಾರ್‌

ಕರ್ನಾಟಕದಲ್ಲಿರುವ ಗೊಮ್ಮಟೇಶ್ವರ ವಿಗ್ರಹಗಳು :

  • ಶ್ರವಣಬೆಳಗೋಳ – 57.8 ಅಡಿ ಎತ್ತರ
  • ವೇಣೂರು – 45 ಅಡಿ
  • ಕಾರ್ಕಳ – 42 ಅಎಇ
  • ದರ್ಮಸ್ಥಳ – 39 ಅಡಿ
  • ಗೊಮ್ಮಟಗಿರಿ – 20 ಅಡಿ

ಜೈನ ಧರ್ಮದ ಸಮ್ಮೇಳನಗಳು :

ಮೊದಲ ಜೈನ ಸಮ್ಮೇಳನ :

  • ನಡೆದ ವರ್ಷ – ಕ್ರಿ.ಪೂ.300
  • ನಡೆದ ಸ್ಥಳ – ಪಾಟಲೀಪುತ್ರ
  • ಅಧ್ಯಕ್ಷ – ಸ್ಥೂಲಭದ್ರ
  • ವಿಷಯ – ಜೈನರ ಗ್ರಂಥಗಳನ್ನು ವಿಂಗಡಿಸಲಾಯಿತು.

ಎರಡನೇ ಜೈನ ಸಮ್ಮೇಳನ :

  • ನಡೆದ ವರ್ಷ – ಕ್ರಿ.ಶ.512
  • ನಡೆದ ಸ್ಥಳ – ಗುಜರಾತಿನ ವಲ್ಲಭಿ
  • ಅಧ್ಯಕ್ಷ – ದೇವರ್ಧಕ್ಷಮಾಕರಣ
  • ವಿಷಯ – ಜೈನರ ಗ್ರಂಥಗಳನ್ನು ವಿಂಗಡಿಸಲಾಯಿತು, 12 ಅಂಗಾಂಗಗಳು, 12 ಉಪಾಂಗಗಳು, 10 ಸಂಕೀರ್ಣ.
  • ಇವುಗಳನ್ನು ಒಳಗೊಂಡಿರುವುದೇ ಆಗಮ ಸಿದ್ದಾಂತ ಇದು ಜೈನರ ಪವಿತ್ರ ಗ್ರಂಥವಾಗಿದೆ.
  • ಜೈನರ ಪ್ರಾರ್ಥನೆಯ ಸ್ಥಳವನ್ನು ಬಸದಿ ಎನ್ನುವರು.
  • ಮಹಾವೀರನ ಭೋಧನೆಯ ಭಾಷೆ ಅರ್ಧಮಾಗದಿ ಭಾಷೆ – ಪಾಲಿ

FAQ :

ಜೈನ ಧರ್ಮದ 24ನೇ ತೀರ್ಥಂಕರ ಯಾರು?

ಮಹಾವೀರ

ಕರ್ನಾಟಕದಲ್ಲಿರುವ ಗೊಮ್ಮಟೇಶ್ವರ ವಿಗ್ರಹಗಳು ಎಷ್ಟು?

5

ಇತರೆ ವಿಷಯಗಳು :

ವೇದಕಾಲದ ಸಂಸ್ಕೃತಿಯ ಬಗ್ಗೆ ಮಾಹಿತಿ

ಹರಪ್ಪ ನಾಗರಿಕತೆಯ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ