ಬೆಳಕಿನ ಬಗ್ಗೆ ಮಾಹಿತಿ | Information about lighting in Kannada

ಬೆಳಕಿನ ಬಗ್ಗೆ ಮಾಹಿತಿ Information about lighting Belakina bagge Mahithi in Kannada

ಬೆಳಕಿನ ಬಗ್ಗೆ ಮಾಹಿತಿ

Information about lighting in Kannada
ಬೆಳಕಿನ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಬೆಳಕಿನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಬೆಳಕು :

  • ವಸ್ತುಗಳು ಗೋಚರಿಸಲು ಬೆಳಕು ಎಂಬ ಶಕ್ತಿಯ ಆಕರ ಅತ್ಯವಶ್ಯಕವಾಗಿದೆ.
  • ಬೆಳಕು ಒಂದು ಶಕ್ತಿಯ ರೂಪವಾಗಿದೆ.
  • ಬಿಳಿ ಬಣ್ಣದ ಬೆಳಕು 7 ಬಣ್ಣಗಳಿಂದ ಕೂಡಿದೆ ಎಂದು ಹೇಳಿದ ವಿಜ್ಞಾನಿ ಸರ್‌ ಐಸಾಕ್‌ ನ್ಯೂಟನ್‌
  • ಬೆಳಕಿಗೂ ವೇಗವಿದೆ ಎಂದು ಹೇಳಿದ ವಿಜ್ಞಾನಿ ಗೆಲಿಲಿಯೋ ಗೆಲಿಲಿ.
  • ಬೆಳಕಿನ ವೇಗ ಮಾಧ್ಯಮವನ್ನು ಅವಲಂಬಿಸಿದೆ.

ಬೆಳಕಿನ ವೇಗ ವಿವಿಧ ಮಾಧುಮಗಳಲ್ಲಿ :

  • ಬೆಳಕಿನ ವೇಗ ನಿರ್ವಾತದಲ್ಲಿ 3*108 m/sec
  • ಬೆಳಕಿನ ವೇಗ ಗಾಳಿಯಲ್ಲಿ 3*108 m/sec
  • ಬೆಳಕಿನ ವೇಗ ನೀರಿನಲ್ಲಿ 2.25*108 m/sec
  • ಬೆಳಕಿನ ವೇಗ ಗಾಜಿನಲ್ಲಿ 2.01*108 m/sec
  • ಬೆಳಕಿನ ಕಣಗಳ ರೂಪದಲ್ಲಿ ಚಲಿಸುತ್ತದೆ ಎಂದು ಹೇಳಿದ ವಿಜ್ಞಾನಿ ಸರ್‌ ಐಸಾಕ್‌ ನ್ಯೂಟನ್‌
  • ಬೆಳಕು ತರಂಗಗಳ ರೂಪದಲ್ಲಿ ಚಲಿಸುತ್ತದೆ ಎಂದು ಹೇಳಿದ ವಿಜ್ಞಾನಿ ಕ್ರಿಶ್ಚಿಯನ್‌ ಹೈಗನ್ಸ್‌

ಬೆಳಕಿನ ಪ್ರತಿಫಲನ :

ಒಂದು ವಸ್ತುವಿನ ಮೇಲೆ ಅಥವಾ ವಸ್ತುವಿನ ಮೇಲ್ಮೈ ಮೇಲೆ ಬೆಳಕಿನ ಕಿರಣಗಳು ಬಿದ್ದು ಮರಳಿ ಬರುತ್ತದೆ. ಇದನ್ನು ಬೆಳಕಿನ ಪ್ರತಿಫಲನ ಎನ್ನುವರು.

ಬೆಳಕಿನ ವಕ್ರೀಭವನ :

ಬೆಳಕು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಓರೆಯಾಗಿ ದಾಟುವಾಗ ತನ್ನ ಪ್ರಸರಣದ ದಿಕ್ಕನ್ನು ಬದಲಿಸುತ್ತದೆ. ಈ ವಿದ್ಯಾಮಾನವನ್ನು ಬೆಳಕಿನ ವಕ್ರೀಭವನ ಎನ್ನುವರು.

ವಕ್ರೀಭವನದ ಪರಿಣಾಮಗಳು :

  • ಬೀಕರಿನಲ್ಲಿಟ್ಟ ಕೋಲು ಮುರಿದಂತೆ ಕಾಣುವುದು.
  • ಶುದ್ದ ನೀರಿನ ಮೂಲಗಳಾದ ಕೆರೆ, ಬಾವಿ, ತಳ ನಿಜವಾಗಲು ಇರುವದಕ್ಕಿಂತ ಸ್ವಲ್ಪ ಮೇಲಕ್ಕೆ ಬಂದರೆ ಕಾಣುವದು.
  • ನೀರಿನಲ್ಲಿ ಮುಳುಗಿದ ನಾಣ್ಯವು ಸ್ವಲ್ಪ ಮೇಲಕ್ಕೆ ಬಂದಂತೆ ಕಾಣುವುದು.
  • ನಕ್ಷತ್ರಗಳು ಹೊಳೆಯಲು ಕಾರಣವಾಗಿದೆ.
  • ಕಾಮನಬಿಲ್ಲು ಉಂಟಾಗಲು ಕಾರಣವಾಗಿದೆ.

ಬೆಳಕಿನ ಸಂಪೂರ್ಣ ಆಂತರಿಕ ಪ್ರತಿಫಲನ :

  • ಬೆಳಕು ಸಾಂದ್ರ ಮಾಧ್ಯಮದಿಂದ ವಿರಳ ಮಾಧ್ಯಮದ ಕಡೆಗೆ ಚಲಿಸುವಾಗ ಪತನ ಕೋನದಲ್ಲಿ ಬದಲಾವಣೆಯಾದಂತೆ ವಕ್ರೀಭವನ ಕೋನದಲ್ಲಿಯೂ ಬದಲಾವಣೆಯಾಗುತ್ತದೆ.
  • ಪತನಕೋನವು ಒಂದಿ ನಿರ್ದಿಷ್ಟ ಮಟ್ಟವನ್ನು ಮುಟ್ಟಿದಾಗ ಅಲ್ಲಿ ವಕ್ರೀಭವನವಾದರೆ ಬೆಳಕು ಮೊದಲಿನ ಮಾಧ್ಯಮಕ್ಕೆ ಪ್ರತಿಫಲಿಸಲ್ಪಡುತ್ತದೆ. ಇದನ್ನು ಬೆಳಕಿನ ಸಂಪೂರ್ಣ ಆಂತರಿಕ ಪ್ರತಿಫಲನ ಎನ್ನುವರು.
  • ಮರೀಚಿಕೆ ಉಂಟಾಗಲು ಕಾರಣವಾಗಿದೆ.
  • ಸರಳ ಸೂಕ್ಷ್ಮದರ್ಶಕ ಮತ್ತು ಸಂಯುಕ್ತ ಸೂಕ್ಷ್ಮದರ್ಶಕದಲ್ಲಿ ಉಪಯೋಗಿಸುವರು.
  • ವಜ್ರ ಹೊಳೆಯಲು ಕಾರಣವಾಗಿದೆ.
  • ವಾಹನದ ಪ್ರತಿಫಲಕಗಳು ಹೊಳೆಯಲು ಕಾರಣವಾಗಿದೆ.

ಬೆಳಕಿನ ವರ್ಣ ವಿಭಜನೆ :

  • ಸಂಕೀರ್ಣ ಬೆಳಕನ್ನು ಅದರ ಘಟಕ ಬಣ್ಣಗಳ ಬೆಳಕಾಗಿ ವಿಭಜಿಸುವ ಅಥವಾ ಬೇರ್ಪಡಿಸುವ ಕ್ರಿಯೆಗೆ ಬೆಳಕಿನ ವರ್ಣ ವಿಭಜನೆ ಎನ್ನುವರು.
  • ಸಂಕೀರ್ಣ ಬೆಳಕನ್ನು ವಿಭಜಿಸಿ ಪಡೆದ ಬಣ್ಣಗಳ ಶ್ರೇಣಿಗೆ ರೋಹಿತ ಎನ್ನುವರು.
  • ಕಾಮನ ಬಿಲ್ಲಿನಲ್ಲಿ ಕಂಡು ಬರುವ ಒಟ್ಟು ಬಣ್ಣಗಳು 7
  • ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ ಬಾಗುವ ಬಣ್ಣವೆಂದರೆ ಕೆಂಪು ಬಣ್ಣ
  • ಕಾಮನ ಬಿಲ್ಲಿನಲ್ಲಿ ಕಂಡು ಬರುವ ಬಣ್ಣಗಳಲ್ಲಿ ಅತಿ ಹೆಚ್ಚು ಬಾಗುವ ಬಣ್ಣವೆಂದರೆ ನೇರಳೆ ಬಣ್ಣ
  • ಕಾಮನಬಿಲ್ಲಿನಲ್ಲಿ ಮಧ್ಯದಲ್ಲಿ ಕಂಡು ಬರುವ ಬಣ್ಣವೆಂದರೆ ಹಸಿರು ಬಣ್ಣ
  • ಕೆಂಪು, ಹಸಿರು ಮತ್ತು ನೀಲಿ ಬಣ್ಣವನ್ನು ಪ್ರಾಥಮಿಕ ಬಣ್ಣವೆಂದು ಕರೆಯುವರು.
  • ಸೈಯಾನ್‌, ಮೆಜೆಂಟಾ, ಹಳದಿ, ಕಪ್ಪು ಬಣ್ಣವನ್ನು ದ್ವಿತೀಯ ಬಣ್ಣವೆಂದು ಕರೆಯುವರು.

ಬೆಳಕಿನ ವ್ಯತೀಕರಣ :

2 ಅಥವಾ 2 ಕ್ಕಿಂತ ಹೆಚ್ಚು ಬೆಳಕಿನ ತರಂಗಗಳು ಒಂದರ ಮೇಲೊಂದು ಅದ್ಯಾರೋಪನಗೊಂಡಾಗ ಬೆಳಕಿನ ಶಕ್ತಿಯಲ್ಲಾಗುವ ಮರು ಹೊಂದಾಣಿಕೆಯಾಗಿದೆ.

ಪರಿಣಾಮಗಳು :

  • ರಸ್ತೆಯ ಮೇಲೆ ಅಥವಾ ನೀರಿನ ಮೇಲೆ ಇಂಧನವು ಚಲ್ಲಿದಾಗ ಅದು ಸೂರ್ಯ ಪ್ರಕಾಶದಲ್ಲಿ ಬಣ್ಣ ಬಣ್ಣದಾಗಿ ಗೋಚರಿಸಲು ಕಾರಣವಾಗಿದೆ.
  • ಸೂರ್ಯ ಪ್ರಕಾಶದಲ್ಲಿ ಸಾಬೂನಿನ ಗುಳ್ಳೆಗಳು ಹೊಳೆಯಲು ಅಥವಾ ಬಣ್ಣ ಬಣ್ಣದಾಗಿ ಗೋಚರಿಸಲು ಕಾರಣವಾಗಿದೆ.

ಬೆಳಕಿನ ಚದುರುವಿಕೆ :

ಸಂಕೀರ್ಣ ಬೆಳಕನ್ನು ಅದರ ಘಟಕ ಬಣ್ಣಗಳ ಬೆಳಕಾಗಿ ವಿಭಜಿಸುವ ಅತವಾ ಬೇರ್ಪಡಿಸುವ ಕ್ರಿಯೆಗೆ ಬೆಳಕಿನ ಚದುರುವಿಕೆ ಎನ್ನುವರು.

ಬೆಳಕಿನ ಚದುರುವಿಕೆಯ ಪರಿಣಾಮಗಳು :

  • ಆಕಾಶವು ನೀಲಿಯಾಗಿ ಕಾಣುವುದು.
  • ಸೂರ್ಯೋದಯ ಮತ್ತು ಸೂರ್ಯಾಸ್ತ ಕೆಂಪು ಬಣ್ಣದಾಗಿ ಕಾಣಿಸಲು ಕಾರಣವಾಗಿದೆ.

FAQ :

ಬೆಳಕಿನ ವ್ಯತೀಕರಣದ ಒಂದು ಪರಿಣಾಮ ತಿಳಿಸಿ?

ಸೂರ್ಯ ಪ್ರಕಾಶದಲ್ಲಿ ಸಾಬೂನಿನ ಗುಳ್ಳೆಗಳು ಹೊಳೆಯಲು ಅಥವಾ ಬಣ್ಣ ಬಣ್ಣದಾಗಿ ಗೋಚರಿಸಲು ಕಾರಣವಾಗಿದೆ.

ವಕ್ರೀಭವನದ ಪರಿಣಾಮಗಳನ್ನು ತಿಳಿಸಿ?

ಬೀಕರಿನಲ್ಲಿಟ್ಟ ಕೋಲು ಮುರಿದಂತೆ ಕಾಣುವುದು.

ಇತರೆ ವಿಷಯಗಳು :

ಜ್ವಾಲಾಮುಖಿಯ ಬಗ್ಗೆ ಮಾಹಿತಿ

ಭೂಕಂಪನದ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ