ಭಾರತದ ಪ್ರಮುಖ ಕೈಗಾರಿಕೋದ್ದಿಮೆಗಳ ಬಗ್ಗೆ ಮಾಹಿತಿ | Information About Major Industrial Companies in India Kannada

ಭಾರತದ ಪ್ರಮುಖ ಕೈಗಾರಿಕೋದ್ದಿಮೆಗಳ ಬಗ್ಗೆ ಮಾಹಿತಿ Information About Major Industrial Companies in India bharathada pramuka kaigarikagalu in kannada

ಭಾರತದ ಪ್ರಮುಖ ಕೈಗಾರಿಕೋದ್ದಿಮೆಗಳ ಬಗ್ಗೆ ಮಾಹಿತಿ

Information About Major Industrial Companies in India Kannada
ಭಾರತದ ಪ್ರಮುಖ ಕೈಗಾರಿಕೋದ್ದಿಮೆಗಳ ಬಗ್ಗೆ ಮಾಹಿತಿ | Information About Major Industrial Companies in India Kannada

ಮಾನವನ ಆಧುನಿಕ ಆರ್ಥಿಕ ಚಟುವಟಿಕೆಗಳಲ್ಲಿ ಕೈಗಾರಿಕೆಗಳು ಅತ್ಯಂತ ಮಹತ್ವದ್ದಾಗಿವೆ. ಯಾವುದೇ ದೇಶದ ಆರ್ಥಿಕ ಪ್ರಗತಿಯನ್ನು ನಿರ್ಧರಿಸಲು ಆ ದೇಶವು ಹೊಂದಿರುವ ಕೈಗಾರಿಕೆಯ ಅಭಿವೃದ್ಧಿಯನ್ನು ಸಹ ಪ್ರಧಾನವಾಗಿ ಪರಿಗಣಿಸಲಾಗುವುದು. ಕೈಗಾರಿಕೆಗಳು ಆಧುನಿಕ ನಾಗರಿಕತೆಯ ಲಕ್ಷಣಗಳಾಗಿದ್ದು, ನಮಗೆ ಅವಶ್ಯಕವಾದ ವಸ್ತುಗಳನ್ನು ಪೂರೈಸುವುದಲ್ಲದೆ ಸಾಕಷ್ಟು ಉದ್ಯೋಗಾವಕಾಶಗಳನ್ನು ದೊರಕಿಸಿಕೊಡುತ್ತವೆ. ಸಾಮಾನ್ಯವಾಗಿ ಕಚ್ಚಾವಸ್ತುಗಳನ್ನು ಸಿದ್ದ ವಸ್ತುಗಳನ್ನಾಗಿ ಪರಿವರ್ತಿಸುವ ಮಾನವನ ಎಲ್ಲ ಉದ್ಯೋಗಗಳನ್ನು ಕೈಗಾರಿಕೆ ಎಂದು ಕರೆಯುತ್ತಾರೆ.

ಭಾರತದ ಕೈಗಾರಿಕಾ ಪ್ರದೇಶಗಳು

ಭಾರತದಲ್ಲಿ ಸ್ವಾತಂತ್ರ್ಯಾ ನಂತರದ ಅವಧಿಯ ಎಲ್ಲ ಪಂಚವಾರ್ಷಿಕ ಯೋಜನೆಗಳಲ್ಲಿಯೂ ಕೈಗಾರಿಕೆಗಳಿಗೆ ಆದ್ಯತೆ ನೀಡಲಾಯಿತು. ಕಳೆದ ಐದು ದಶಕಗಳಲ್ಲಿ ಭಾರತವು ಕೈಗಾರಿಕೆ ಮತ್ತು ತಾಂತ್ರಿಕತೆಯ ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿ ಮಹತ್ವಪೂರ್ಣವಾದುದು. ಕೈಗಾರಿಕೆಗಳು ದೇಶದ ಸಮಗ್ರ ರಾಷ್ಟೀಯ ಅದಾಯದ ಶೇ. 35 ರಷ್ಟು ಪೊರೈಸುತ್ತಿದ್ದು, ದೇಶದ ಒಟ್ಟು ಕಾರ್ಮಿಕರಲ್ಲಿ ಶೇ 16 ರಷ್ಟು ಜನರಿಗೆ ಉದ್ಯೋಗವನ್ನು ಕಲ್ಪಿಸಿವೆ. ಅದಾಯ ಹಾಗೂ ಉದ್ಯೋಗ ನೀಡಿಕೆಗಳೆರಡರಲ್ಲಿಯೂ ಕೈಗಾರಿಕೆಗಳು ಭಾರತದಲ್ಲಿ ವ್ಯವಸಾಯದ ನಂತರ ಸ್ಥಾನದಲ್ಲಿದೆ.

ದೇಶದ ಕೆಲವು ಭಾಗಗಳಲ್ಲಿ ಕೈಗಾರಿಕೆಗಳು ಹೆಚ್ಚು ಕೇಂದ್ರೀಕೃತವಾಗಿವೆ. ಇಂತಹವುಗಳನ್ನು ʼಕೈಗಾರಿಕಾ ವಲಯ ವೆಂದುʼ ಕೆರೆಯುವರು. ಭಾರತದಲ್ಲಿ 8 ಪ್ರಧಾನ ಕೈಗಾರಿಕಾ ವಲಯಗಳನ್ನು ಗುರುತಿಸಲಾಗಿದೆ. ಅವುಗಳೆಂದರೆ,

  1. ಹೂಗ್ಲಿ ಪ್ರದೇಶ
  2. ಮುಂಬೈ-ಪೂನಾ ಪ್ರದೇಶ
  3. ಅಹಮದಾಬಾದ್‌ – ವಡೋದರ ಪ್ರದೇಶ
  4. ದಾಮೋದರ ಕಣಿವೆ ಪ್ರದೇಶ
  5. ದಕ್ಷಿಣದ ಕೈಗಾರಿಕಾ ಪ್ರದೇಶ
  6. ನ್ಯಾಷನಲ್‌ ಕ್ಯಾಪಿಟಲ್‌ ಪ್ರದೇಶ
  7. ವಿಶಾಖಪಟ್ಟಣ-ಗುಂಟೂರು ಪ್ರದೇಶ
  8. ಕೊಲ್ಲಂ-ತಿರುವನಂತಪುರ ಪ್ರದೇಶ.

ಭಾರತದ ಪ್ರಮುಖ ಕೈಗಾರಿಕೆಗಳು

ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ

ಇದನ್ನು ಮೂಲ ಕೈಗಾರಿಕೆ ಎಂದು ಕರೆಯುತ್ತಾರೆ. ಇದಕ್ಕೆ ಕಾರಣವೆಂದರೆ ಈ ಕೈಗಾರಿಕೆಯು ಯಂತ್ರೋಪಕರಣ, ರೈಲ್ವೆ, ಹಡಗು ನಿರ್ಮಾಣ, ವಿದ್ಯುತ್ ಯೋಜನೆ, ನೀರಾವರಿ ಯೋಜನೆ, ಕಟ್ಟಡ ನಿರ್ಮಾಣ, ಗೃಹ ನಿರ್ಮಾಣ ಮುಂತಾದ ಇನ್ನಿತರ ಹಲವಾರು ಕೈಗಾರಿಕೆಗಳಿಗೆ ಅಗತ್ಯವಾದ ಕಚ್ಚಾವಸ್ತುವನ್ನು ಒದಗಿಸುವುದು.

ಹತ್ತಿ ಬಟ್ಟೆ ಕೈಗಾರಿಕೆ

ವಿವಿಧ ಬಗೆಯ ನಾರುಗಳಿಂದ ಬಟ್ಟೆಯನ್ನು ತಯಾರಿಸುವುದನ್ನು ʼಜವಳಿ ಕೈಗಾರಿಕೆʼ ಯೆಂದು ಕರೆಯುವರು. ಜವಳಿ ಕೈಗಾರಿಕೆಯಲ್ಲಿ ಹತ್ತಿ ಬಟ್ಟೆ ಕೈಗಾರಿಕೆ, ಸೆಣಬಿನ ಕೈಗಾರಿಕೆ, ರೇಷ್ಮೆ ಕೈಗಾರಿಕೆ, ಉಣ್ಣೆ ಬಟ್ಟೆ ಕೈಗಾರಿಕೆ ಮತ್ತು ಕೃತಕ ನಾರಿನ ಬಟ್ಟೆ ತಯಾರಿಕೆ ಮೊದಲಾದವುಗಳಿವೆ. ಹತ್ತಿ ಬಟ್ಟೆ ಕೈಗಾರಿಕೆಗೆ ಇತಿಹಾಸವು ಇತರೆ ಕೈಗಾರಿಕೆಗಳಿಗಿಂತ ಸುದೀರ್ಘವಾದುದು. ದೇಶದಲ್ಲಿ ಈ ದೇಶವು ಒಟ್ಟು 378 ಹತ್ತಿ ಬಟ್ಟೆ ಕೈಗಾರಿಕೆಗಳನ್ನು ಹೊಂದಿದ್ದು, 2008 ರಲ್ಲಿ ಇವುಗಳ ಸಂಖ್ಯೆ 1773ಕ್ಕೆ ಏರಿದೆ. ಇವು ದೇಶದ 175 ಪಟ್ಟಣ ಮತ್ತು ನಗರಗಳಲ್ಲಿ ಹಂಚಿಕೆಯಾಗಿವೆ.

ಸಕ್ಕರೆ ಕೈಗಾರಿಕೆ

ಭಾರತವು ಪ್ರಪಂಚದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಬ್ರೆಜಿಲ್‌ ನಂತರ ಎರಡನೆಯ ಸ್ಥಾನವನ್ನು ಪಡೆದಿದೆ. ಸಕ್ಕರೆ ತಯಾರಿಕೆ ಭಾರತೀಯರಿಗೆ ಪುರಾತನ ಕಾಲದಿಂದಲೂ ತಿಳಿದಿದೆ. ಈ ಕೈಗಾರಿಕೆಯನ್ನು ಕಬ್ಬು ಬೆಳೆಯುವ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿದೆ. ಭಾರತದ ಬಹಳಷ್ಟು ಸಕ್ಕರೆ ಕೈಗಾರಿಕೆಗಳು ಕಬ್ಬು ಬೆಳೆಯುವ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿದೆ. ಭಾರತದ ಬಹಳಷ್ಟು ಸಕ್ಕರೆ ಕೈಗಾರಿಕೆಗಳು ಗಂಗಾ ನದಿಯ ಮೈದಾನ ಪ್ರದೇಶದಲ್ಲಿ ಸ್ಥಾಪಿತಗೊಂಡಿವೆ. ಈ ಕೈಗಾರಿಕೆಯನ್ನು ಹೊಂದಿರುವ ಪ್ರಮುಖ ರಾಜ್ಯಗಳೆಂದರೆ ಮಹಾರಾಷ್ಟ್ರ, ಉತ್ತರ ಪ್ರದೇಶ, ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ, ಮಧ್ಯ ಪ್ರದೇಶ ಮೊದಲಾದವು. ಭಾರತದಲ್ಲಿ ಒಟ್ಟು 516 ಸಕ್ಕರೆ ಕೈಗಾರಿಕೆಗಳಿದ್ದು, ಸುಮಾರು 263.6 ಲಕ್ಷ ಟನ್ ಗಳಷ್ಟು ಸಕ್ಕರೆಯನ್ನು ಉತ್ಪಾದಿಸುತ್ತದೆ. ಭಾರತದಿಂದ ಸಕ್ಕರೆಯು ಯು.ಎಸ್.ಎ. ಬ್ರಿಟನ್‌, ಇರಾನ, ಕೆನೆಡಾ, ಮಲೇಷಿಯಾ ದೇಶಗಳಿಗೆ ರಫ್ತಾಗುತ್ತದೆ.

ಅಲ್ಯೂಮಿನಿಯಂ ಕೈಗಾರಿಕೆ

ಅಲ್ಯೂಮಿನಿಯಂ ಇತ್ತೀಚೆಗೆ ಅಂದರೆ 1886 ರಲ್ಲಿ ಶೋಧಿಸಲ್ಪಟ್ಟಿದೆ. ಭಾರತವು ಉತ್ಪಾದಿಸುವ ಕಬ್ಬಿಣೇತರ ಲೋಹಗಳಲ್ಲಿ ಅಲ್ಯೂಮಿನಿಯಂ ಅತೀ ಮುಖ್ಯವಾದುದು. ಅಲ್ಯೂಮಿನಿಯಂ ಕೈಗಾರಿಕೆಗಳು ದೇಶದ ಕೆಲವೇ ಸ್ಥಳಗಳಲ್ಲಿ ಮಾತ್ರ ಸ್ಥಾಪಿಸಲ್ಪಟ್ಟಿವೆ. ಈ ಕೈಗಾರಿಕೆಯು ಪ್ರಮುಖ ಮೂರು ಅಂಶಗಳನ್ನು ಅವಲಂಬಿಸಿದೆ. ವಿದ್ಯುಚ್ಛಕ್ತಿಯ ದೊರೆಯುವಿಕೆ, ಬಾಕ್ಸೈಟ್ ನ ಪೊರೈಕೆ, ಇತರ ಲೋಹ ಮತ್ತು ಬಂಡವಾಳದ ಪೊರೈಕೆ. ಭಾರತದಲ್ಲಿ ಒರಿಸ್ಸಾ, ಜಾರ್ಖಂಡ್‌, ಛತ್ತೀಸಗರ್‌, ಮಧ್ಯಪ್ರದೇಶ, ಗುಜರಾತ, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳನ್ನು ಈ ಕೈಗಾರಿಕೆಗಳಿವೆ.

ಕಾಗದದ ಕೈಗಾರಿಕೆ

ಭಾರತದಲ್ಲಿ ಮೊದಲ ಕಾಗದದ ಕೈಗಾರಿಕೆಯು 1840 ರಲ್ಲಿ ಪಶ್ಚಿಮ ಬಂಗಾಳದ ಸೆರಾಂಪುರದಲ್ಲಿ ಹೂಗ್ಲಿನದಿ ದಡದಲ್ಲಿ ಸ್ಥಾಪನೆಗೊಂಡಿತು. ನಂತರ 1867 ರಲ್ಲಿ ಮತ್ತೊಂದು ಕೈಗಾರಿಕೆಯು ಕೋಲ್ಕತ್ತಾದ ಬಳಿಯಿರುವ ಬಾಲ್ಟಿ ನಗರದಲ್ಲಿ ಆರಂಭಗೊಂಡಿತು. ಅರಣ್ಯಗಳಿಂದ ದೊರೆಯುವ ಬಿದಿರು, ಮರದ ತಿರುಳು, ಹುಲ್ಲು, ಕಾಗದ ತಯಾರಿಕೆಯಲ್ಲಿ ಬಳುಸುವ ಪ್ರಮುಖ ಕಚ್ಚಾ ವಸ್ತುಗಳು ದೇಶದ ಹೆಚ್ಚಿನ ಕಾಗದ ಕೈಗಾರಿಕೆಗಳು ಪಶ್ಚಿಮ ಬಂಗಾಳದಲ್ಲಿ ಕಂಡುಬರುತ್ತವೆ.

ಜ್ಞಾನಾಧಾರಿತ ಕೈಗಾರಿಕೆಗಳು

ಭಾರತದಲ್ಲಿ ಪ್ರಸ್ತುತ ಅತಿ ವೇಗವಾಗಿ ಬೆಳೆವಣಿಗೆ ಹೊಂದುತ್ತಿರುವ ಕೈಗಾರಿಕೆಯೆಂದರೆ ಮಾಹಿತಿ ತಂತ್ರಜ್ಞಾನ ಇದನ್ನೇ ʼಜ್ಞಾನಾಧಾರಿತ ಕೈಗಾರಿಕೆʼ ಯೆಂದು ಕರೆಯಲಾಗಿದೆ. ಇದಕ್ಕೆ ಮಾನವನ ಜ್ಞಾನವೇ ಆಧಾರವಾಗಿರುವುದರಿಂದ ಇದನ್ನು ಈ ಹೆಸರಿಂದ ಕರೆಯಲಾಗಿದೆ. ಇದು ದೇಶದ ಅರ್ಥಿಕತೆ ಹಾಗೂ ಜೀವನ ಶೈಲಿಯ ಮೇಲೆ ಅಪಾರ ಪರಿಣಾಮವನ್ನು ಬೀರಿದೆ. ಇದರ ಬೆಳವಣಿಗೆಯ ಪ್ರಮಾಣವು ಉಳಿದ ಎಲ್ಲಾ ಕೈಗಾರಿಕೆಗಳಿಗಿಂತಲೂ ಮುಂದಿದೆ.

a) ಮಾಹಿತಿ ತಂತ್ರಜ್ಞಾನ

ಭಾರತ ಸರಕಾರವು ಸಾಫ್ಟವೇರ್‌ ಉದ್ಯಮ ಬೆಳವಣಿಗೆಯನ್ನು ಪೋತ್ಸಾಹಿಸಿ ರಫ್ತನ್ನು ಉತ್ತೇಜಿಸಲು ಸಾಫ್ಟವೇರ್‌ ಟೆಕ್ನಾಲಜಿ ಪಾರ್ಕಗಳನ್ನು (STP) 1991 ರಲ್ಲಿಯೇ ಸ್ಥಾಪಿಸಿತು. ಇಂದು ದೇಶದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಆಂಧ್ರ ಪ್ರದೇಶ ರಾಜ್ಯಗಳು ಈ ಉದ್ಯಮದ ಮೇಲೆ ಸಂಪೂರ್ಣ ಹತೋಟಿಯನ್ನು ಸಾಧಿಸಿವೆ.

b) ಜೈವಿಕ ತಂತ್ರಜ್ಞಾನ

ಭಾರತ ಸರಕಾರವು 1980 ರಲ್ಲಿ ಜೈವಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಪ್ರತ್ಯೇಕವಾದ ಸಂಸ್ಥೆಯನ್ನು ಹುಟ್ಟುಹಾಕಿತು. ಇದರಿಂದ ವ್ಯವಸಾಯದಲ್ಲಿ ದೊಡ್ಡ ಕ್ರಾಂತಿಯೇ ಜರುಗಲು ಪ್ರಾರಂಭಿಸಿತು.

c) ಉನ್ನತ ತಂತ್ರಜ್ಞಾನ

ಮಾನವನ ಜ್ಞಾನ ಅಭಿವೃದ್ಧಿ ಹೊಂದಿದಂತೆ ಉನ್ನತ ಅಥವಾ ಸುಧಾರಿಸಿದ ತಂತ್ರಜ್ಞಾನ ಬಹುತೇಕವಾಗಿ ಬಳಕೆಯಾಗುತ್ತದ್ದು, ಕಾನೂನಾತ್ಮಕವಾಗಿ ಕೇಂದ್ರ ಸರಕಾರವು ನವೆಂಬರ್‌ 1990 ರಲ್ಲಿ “ಉನ್ನತ ತಂತ್ರಜ್ಞಾನದ” ಬಳಕೆಯನ್ನು ಅಧಿಕೃತವಾಗಿ ಜಾರಿಗೆ ತಂದಿತು.

FAQ

ಸೌರಮಂಡಲದ ಅತಿ ದೊಡ್ಡ ಉಪಗ್ರಹ ಯಾವುದು?

ಗ್ಯಾನಿಮೇಡ.

ಬಾಕ್ಸೈಟ್ ಯಾವ ಲೋಹದ ಅದಿರಾಗಿದೆ?

ಅಲ್ಯುಮಿನಿಯಂ.

ಇತರೆ ವಿಷಯಗಳು :

ಕರ್ನಾಟಕದ ಪ್ರಸಿದ್ದ ಜಲಾಶಯಗಳ ಬಗ್ಗೆ ಮಾಹಿತಿ

ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆ ಪ್ರಬಂಧ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ