ಭಾರತದ ಪ್ರಮುಖ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ | Information about major operations in India in Kannada

ಭಾರತದ ಪ್ರಮುಖ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ Information about major operations in India Bharathada Pramuka Karyacharanegala bagge Mahithi in Kannada

ಭಾರತದ ಪ್ರಮುಖ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ

Information about major operations in India in Kannada
ಭಾರತದ ಪ್ರಮುಖ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಭಾರತದ ಪ್ರಮುಖ ಕಾರ್ಯಾಚರಣೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಆಪರೇಷನ್‌ ಪೊಲೋ 1948 :

ಭಾರತದ ಸ್ವಾತಂತ್ರ್ಯ ಸಿಕ್ಕ ನಂತರ ಹೈದರಾಬಾದ್‌ ಸಂಸ್ಥಾನವನ್ನು ಭಾರತದ ಒಕ್ಕೂಟಕ್ಕೆ ಸೇರ್ಪಡೆ ಮಾಡಲು ಭಾರತದ ಅಂದಿನ ಗೃಹ ಸಚಿವ, ಭಾರತದ ಬಿಸ್ಮಾರ್ಕ್‌, ಉಕ್ಕಿನ ಮನುಷ್ಯ ಸರ್ಧಾರ್‌ ವಲ್ಲಭಬಾಯಿ ಪಟೇಲ್‌ ಆದೇಶದ ಮೇರೆಗೆ ಭಾರತೀಯ ಸೇನೆಯ ಸೆಪ್ಟೆಂಬರ್‌ 13 ಸೆಪ್ಟೆಂಬರ್‌ 17ರವರೆಗೆ 5 ದಿನಗಳ ಕಾಲ ಆಪರೇಷನ್‌ ಪೊಲೋ ಕಾರ್ಯಾಚರಣೆ ಕೈಗೊಂಡು ಹೈದರಾಬಾದ್‌ ಸಂಸ್ಥಾನವನ್ನು ಭಾರತದ ಒಕ್ಕೂಟಕ್ಕೆ ಸೇರ್ಪಡೆ ಮಾಡಿತು. ಆದ್ದರಿಂದ ಪ್ರತಿ ವರ್ಷ ಸೆಪ್ಟಂಬರ್‌ 17 ರಂದು ಹೈದರಾಬಾದ್‌ ವಿಮೋಚನಾ ದಿನ ಎಂದು ಆಚರಿಸಲಾಗುತ್ತದೆ.

ಆಪರೇಷನ್‌ ವಿಜಯ 1961 :

ಗೋವಾ, ದಿಯು ದಮನ್‌ ಪ್ರದೇಶಗಳಲ್ಲಿ ಆಡಳಿತ ನಡೆಸುತ್ತಿದ್ದ ಪೋರ್ಚುಗೀಸರನ್ನು ಅಲ್ಲಿಂದ ಹೊರಹಾಕಲು ಅಂದಿನ ಪ್ರಧಾನಿ ನೆಹರು ಆದೇಶದ ಮೇರೆಗೆ ಭಾರತೀಯ ಸೇನೆ ಕೈಗೊಂಡ ಯಶಸ್ವಿ ಕಾರ್ಯಾಚರಣೆಯಾಗಿದೆ. ಈ ಮೂಲಕ ಭಾರತದಿಂದ ಕೊನೆಯದಾಗಿ ನಿರ್ಗಮಿಸಿದ ಯುರೋಪಿಯನ್ನರು ಪೋರ್ಚುಗೀಸರಾಗಿದ್ದಾರೆ.

ಆಪರೇಷನ್‌ ಟ್ರೈಡೆಂಟ್‌ 1971 :

1971ರ ಭಾರತ ಪಾಕ್‌ ಯುದ್ದ ಸಂದರ್ಭದಲ್ಲಿ ಪಾಕಿಸ್ತಾನ ಸೇನೆಯನ್ನು ಸೋಲಿಸಲು ಭಾರತೀಯ ನೌಕಾಪಡೆಯ ಡಿಸೆಂಬರ್‌ 4,5 ರಂದು ಆಪರೇಷನ್‌ ಟ್ರೈಡೆಂಟ್‌ ಕಾರ್ಯಾಚರಣೆ ಕೈಗೊಂಡು ಕರಾಚಿಯ ಅರಬ್ಬಿ ಸಮುದ್ರದ ಹತ್ತಿರ ಪಾಕಿಸ್ತಾನವನ್ನು ಸಂಪೂರ್ಣವಾಗಿ ಸೋಲಿಸಿತು. ಆದ್ದರಿಂದ ಪ್ರತಿವರ್ಷ ಡಿಸೆಂಬರ್‌ 4ನ್ನು ಭಾರತೀಯ ನೌಕಾಪಡೆಯ ದಿನ ಎಂದು ಆಚರಿಸಲಾಗುತ್ತದೆ.

ಆಪರೇಷನ್‌ ಸ್ಮೈಲಿಂಗ್‌ ಬುದ್ದ 1974 :

ಭಾರತ ಪ್ರಥಮವಾಗಿ ಪರಮಾಣು ಪರೀಕ್ಷೆ ಕೈಗೊಳ್ಳಲು ರಾಜಸ್ತಾನದ ಪೋಕ್ರಾನ್‌ ನಲ್ಲಿ ಕೈಗೊಂಡ ಕಾರ್ಯಾಚರಣೆಯಾಗಿದೆ. ಆದರೆ ಇದು ಯಶಸ್ವಿಯಾಗಲಿಲ್ಲ.

ಆಪರೇಷನ್ ಮೇಘದೂತ 1984 :

1984‌ ರಲ್ಲಿ ಪಾಕಿಸ್ತಾನ ಕಾಶ್ಮೀರದ ಮೇಲೆ ದಾಳಿಮಾಡಿ ವಶಪಡಿಸಿಕೊಂಡಿದ್ದ ಜಗತ್ತಿನ ಅತ್ಯಂತ ಎತ್ತರ ಭೂಮಿಯಾದ ಗ್ಲೇಸಿಯರ್‌ ಸಿಯಾಚಿನ್‌ ಪ್ರದೇಶವನ್ನು ಮರಳಿ ಪಡೆಯಲು ಭಾರತೀಯ ಸೇನೆ ಕೈಗೊಂಡ ಕಾರ್ಯಾಚರಣೆಯಾಗಿದೆ.

ಆಪರೇಷನ್‌ ಬ್ಲ್ಯೂ ಸ್ಟಾರ್‌ 1984 :

ಭಾರತದ ವಾಯುವ್ಯ ಪ್ರದೇಶವನ್ನು ಒಂದುಗೂಡಿಸಿ ಪ್ರತ್ಯೇಕ ಕಲಿಸ್ಥಾನ ದೇಶಕ್ಕಾಗಿ ಬಿಂದ್ರನ್‌ ವಾಲೆಸಿಂಗ್‌ ನೇತೃತ್ವದಲ್ಲಿ ಅಮೃತಸರದ ಸುವರ್ಣ ದೇವಾಲಯವನ್ನು ಅಡಗು ತಾಣವಾಗಿ ಮಾಡಿಕೊಂಡು ಹೋರಾಟ ನಡೆಸುತ್ತಿದ್ದ ಸಿಖ್‌ ಚಟುವಟಿಕೆಗಳನ್ನು ಅಂದಿನ ಪ್ರಧಾನಿ ಇಂದಿರಾಗಾಂಧಿ ಆದೇಶದ ಮೇರೆಗೆ ಭಾರತೀಯ ಸೇನೆ ಸುವರ್ಣ ದೇವಾಲಯದಲ್ಲಿ ಕೈಗೊಂಡ ಕಾರ್ಯಾಚರಣೆಯಾಗಿದೆ.

ಆಪರೇಷನ್‌ ಕಾಕ್ಟಾಸ್‌ 1988 :

ಭಾರತದ ನೆರೆಯ ರಾಷ್ಟ್ರ ಮಾಲ್ಡೀವ್ಸನ ಮಾಲೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡಿದ್ದ ಪ್ಲೋಟೆ ಸಂಘಟನೆಯ ಉಗ್ರರನ್ನು ಸದೆ ಬಡಿಯಲು ಭಾರತೀಯ ಸೇನೆ ಅಂದಿನ ಪ್ರಧಾನಿ ರಾಜೀವಗಾಂಧಿ ಆದೇಶದ ಮೇರೆಗೆ ಮಾಲೆಯಲ್ಲಿ ಕೈಗೊಂಡ ಯಶಸ್ವಿ ಕಾರ್ಯಾಚರಣೆಯಾಗಿದೆ.

ಆಪರೇಷನ್‌ ವಿರಾಟ್‌ 1988 :

ಶ್ರೀಲಂಕಾ ದೇಶದಲ್ಲಿ ತಮಿಳು ದೇಶಕ್ಕಾಗಿ ಪ್ರಭಾಕರನ್‌ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದ ಹೋರಾಟಗಾರರನ್ನು ಸದೆ ಬಡೆಯಲು ರಾಜೀವಗಾಂಧಿ ಆದೇಶದ ಮೇರೆಗೆ ಭಾರತೀಯ ಸೇನೆ ಶ್ರೀಲಂಕಾದಲ್ಲಿ ಕೈಗೊಂಡ ಕಾರ್ಯಾಚರಣೆಯಾಗಿದೆ.

ಆಪರೇಷನ್‌ ಶಕ್ತಿ 1998 :

ಭಾರತ ಎರಡನೇ ಬಾರಿಗೆ 1998 ಮೇ 11 ರಂದು ರಾಜಸ್ತಾನದ ಪೊಕ್ರಾನ್‌ 5 ಪರಮಾಣು ಪರೀಕ್ಷೆಯನ್ನು ಯಶಸ್ವಿಯಾಗಿ ಪ್ರಯೋಗಿಸಲು ಕೈಗೊಂಡ ಕಾರ್ಯಾಚರಣೆಯಾಗಿದೆ. ಆದ್ದರಿಂದ ಪ್ರತಿ ವರ್ಷ ಮೇ 11 ರಾಷ್ಟ್ರೀಯ ತಂತ್ರಜ್ಞಾನ ದಿನ ಆಚರಿಸಲಾಗುತ್ತದೆ.

ಆಪರೇಷನ್‌ ವಿಜಯ 1999 :

1999ರಲ್ಲಿ ನಾಲ್ಕನೇ ಬಾರಿಗೆ ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಿ ಕಾಶ್ಮೀರದ ಕಾರ್ಗಿಲ್‌ ಪ್ರದೇಶವನ್ನು ಭಾರತೀಯ ಸೇನೆ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಆದೇಶದ ಮೇರೆಗೆ ಆಪರೇಷನ್‌ ವಿಜಯ ಕಾರ್ಯಾಚರಣೆ ಕೈಗೊಂಡು ಜುಲೈ 26ರಂದು ಕಾರ್ಗಿಲ್‌ ಪ್ರದೇಶ ವಶಪಡಿಸಿಕೊಂಡಿತು. ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್‌ ವಿಜಯ ದಿನವಾಗಿ ಆಚರಿಸಲಾಗುತ್ತದೆ.

ಆಪರೇಷನ್‌ ಪರಾಕ್ರಮ :

2001 ನವದೆಹಲಿಯ ಸಂಸತ್‌ ಭವನದ ಮೇಲೆ ದಾಳಿ ಮಾಡಿದ ಭಯೋತ್ಪಾದಕರನ್ನು ಸದೆಬಡಿಯಲು ಕೈಗೊಂಡ ಕಾರ್ಯಾಚರಣೆ.

ಆಪರೇಷನ್‌ ಮದಾಧ 2004 :

ಬಂಗಾಳ ಕೊಲ್ಲಿಯಲ್ಲಿ ಸುನಾಮಿ ಸಂಭವಿಸಿದಾಗ ಪ್ರವಾಹಕ್ಕೆ ಓಡಿಸ್ಸಾ, ಆಂಧ್ರಪ್ರದೇಶ, ತಮಿಳುನಾಡು ತೀರದಲ್ಲಿನ ನಿರ್ಗತಕರಿಗೆ ಮೂಲಭೂತ ಸೌಕರ್ಯ ಒದಗಿಸಲು ಕೈಗೊಂಡ ಕಾರ್ಯಾಚರಣೆ.

ಆಪರೇಷನ್‌ ಅನಕೊಂಡ 2004 :

ಇಂಡೋನೇಷಿಯಾದ ಕರಾವಳಿ ತೀರ ಮರದ ಪೊಟರೆಯಲ್ಲಿ ಸಿಲುಕಿದ ಜೀವಂತ ಮಗುವನ್ನು ರಕ್ಷಿಸಲು ಭಾರತೀಯ ಸೇನೆ ಕೈಗೊಂಡ ಕಾರ್ಯಾಚರಣೆಯಾಗಿದೆ.

ಆಪರೇಷನ್‌ ಕಕೂನ್‌ 2006 :

ದಂತಕುಳ್ಳ ಕಾಡುಗಳ ವೀರಪ್ಪನನ್ನು ದಮನ ಮಾಡಲು ಕರ್ನಾಟಕ, ತಮಿಳುನಾಡಿನ ಭಾರತೀಯ ಸೇನೆ ಕೈಗೊಂಡ ಕಾರ್ಯಾಚರಣೆಯಾಗಿದೆ.

ಆಪರೇಷನ್‌ ಬ್ಲ್ಯಾಕ್‌ ಟಾರ್ನಾಡೋ 2008 :

2008-26-11 ಮುಂಬೈ ಮೇಲೆ ದಾಳಿ ಮಾಡಿದ ಲಷ್ಕರ-ಎ-ತೊಯ್ಬಾ ಸಂಘಟನೆಗಳು ಕೈಗೊಂಡ ಕಾರ್ಯಾಚರಣೆಯಾಗಿದೆ. ಕರ್ನಾಟಕದ ಕಮಾಂಡೋ ಎನ್.ಕೃಷ್ಣನ್‌ ಹುತಾತ್ಮರಾದರು.

ಆಪರೇಷನ್‌ ಸೈಕ್ಲೋನ್‌ 2008 :

2008ರ ಮುಂಬೈ ದಾಳಿಕೋರರನ್ನು ಸದೆಬಡಿಯಲು ಮಹಾರಾಷ್ಟ್ರ ಸರ್ಕಾರ ಕೈಗೊಂಡ ಕಾರ್ಯಾಚರಣೆಯಾಗಿದೆ. ಇಲ್ಲಿ ಜೀವಂತ ಸೆರೆಸಿಕ್ಕ ಉಗ್ರ ಅಜ್ಮಲ ಕಸಬ್‌ ಇವನನ್ನು ಸೆರೆ ಹಿಡಿದವರು ಮಹಾರಾಷ್ಟ್ರದ ಹುತಾತ್ಮ ಪೋಲಿಸ್‌ ಪಡೆ ತುಕಾರಂ.

ಆಪರೇಷನ್‌ ಗ್ರೀನ್‌ ಹಂಟ್‌ 2010 :

ಛತ್ತೀಸಗಢ ಮತ್ತು ಜಾರ್ಖಾಂಡ್‌ ರಾಜ್ಯಗಳ ಅರಣ್ಯಗಳಲ್ಲಿ ಅಡಗಿಕೊಂಡಿದ್ದ ನಕ್ಸಲರನ್ನು ದಮನ ಮಾಡಲು ಭಾರತದ ನಕ್ಸಲ್‌ ನಿಗ್ರಹ ಪಡೆ ಕೈಕೊಂಡ ಕಾರ್ಯಾಚರಣೆಯಾಗಿದೆ.

ಆಪರೇಷನ್‌ ಎಕ್ಸ್‌ 3 ಸ್ಟಾರ್‌ 2011 :

2008ರಲ್ಲಿ ಮುಂಬೈ ದಾಳಿಕೋರ ಅಜ್ಮಲ ಕಸಬನ್ನು ಪುಣೆಯ ಯರವಾಡ ಜೈಲಿನಲ್ಲಿ ರಹಸ್ಯವಾಗಿ ಗಲ್ಲಿಗೇರಿಸಲಾಯಿತು.

ಆಪರೇಷನ್‌ 3 ಸ್ಟಾರ್‌ 2013 :

2001ರ ಸಂಸತ್ತ ಭವನದ ದಾಳಿಕೋರ ಅಬ್ಜಲ್‌ ಗುರುವನ್ನು ದೆಹಲಿಯ‌ ಲಾಹೋರ್ ಜೈಲಿನಲ್ಲಿ ರಹಸ್ಯವಾಗಿ ಗಲ್ಲಿಗೇರಿಸಲಾಯಿತು.

ಆಪರೇಷನ್‌ ಸರ್ಚ್‌ ಲೈಟಾ 2013 :

279 ಪ್ರಯಾಣಿಕರನ್ನು ಹೊತ್ತು ಮಲೇಷಿಯಾದ ಎಮ್.ಎಚ್.370‌ ವಿಮಾನ ಕೌಲಾಲಾಂಪುರ ಚೀನಾದ ರಾಜಧಾನಿ ಬಿಜಿಂಗ್‌ ಹೋಗುವಾಗ ಹಿಂದೂ ಮಹಾಸಾಗರದಲ್ಲಿ ಮರೆಯಾಯಿತು. ಇದನ್ನು ಪತ್ತೆಹಚ್ಚಲು ಭಾರತೀಯ ಸೇನೆ ಕೈಗೊಂಡ ಕಾರ್ಯಾಚರಣೆಯಾಗಿದೆ.

ಆಪರೇಷನ್‌ ಸೂರ್ಯ ಹೋಪ 2013 :

2013 ಜೂನ್‌ ನಲ್ಲಿ ಉತ್ತರ ಖಂಡದಲ್ಲಿ ಸುರಿದ ಮಳೆಯಿಂದ ಮತ್ತು ಭಾಗೀರಥಿ ನದಿಯ ಪ್ರವಾಹ ಉಂಟಾಗಿ ಕೇದರನಾಥ ಮತ್ತು ಬದ್ರಿನಾಥಗಳಲ್ಲಿ ಪ್ರವಾಹದಲ್ಲಿ ಸಿಲುಕಿದ ಪ್ರಯಾಣಿಕರನ್ನು ರಕ್ಷಿಸಲು ಕೈಗೊಂಡ ಕಾರ್ಯಾಚರಣೆಯಾಗಿದೆ.

ಆಪರೇಷನ್‌ ಆಲ್‌ ಔಟ್‌ 2015 :

ಅಸ್ಸಾಂ ಮತ್ತು ನಾಗಲ್ಯಾಂಡಿನಲ್ಲಿ ಪ್ರತ್ಯೇಕ ಬೋಡೋಲ್ಯಾಂಡ್‌ ದೇಶಕ್ಕಾಗಿ ಹೋರಾಟ ನಡೆಸುತ್ತಿದ್ದ ಬೋಡೋ ಹೋರಾಟಗಾರರನ್ನು ಸದೆ ಬಡೆಯಲು ಭೂ ಸೇನೆ ಕೈಗೊಂಡ ಕಾರ್ಯಾಚರಣೆಯಾಗಿದೆ.

ಆಪರೇಷನ್‌ ಮೈತ್ರಿ 2015 :

ನೇಪಾಳದಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಿಲುಕಿದ ಸಂತ್ರಸ್ತರಿಗೆ ಮೂಲಭೂತ ಸೌಕರ್ಯ ಒದಗಿಸಲು ಭಾರತೀಯ ಸೇನೆ ಕೈಗೊಂಡ ಕಾರ್ಯಾಚರಣೆ.

ಆಪರೇಷನ್‌ ರಾಹತ್‌ 2015 :

ಅರಬ್‌ ರಾಷ್ಟ್ರ ಯೆಮನ್‌ ನಲ್ಲಿ ಭಯೋತ್ಪಾದಕರ ದಾಳಿಗೆ ಸಿಲುಕಿದ ಆದಿವಾಸಿ ಭಾರತೀಯರನ್ನು ಭಾರತಕ್ಕೆ ಕರೆತರಲು ಭಾರತೀಯ ಸೇನೆ ಕೈಗೊಂಡ ಕಾರ್ಯಾಚರಣೆಯಾಗಿದೆ.

ಆಪರೇಷನ್‌ ದಂಗೂ 2016 :

ಪಂಜಾಬಿನ ಪಠಾಣಕೋಟ್‌ ವಾಯು ನೆಲೆಯ ಮೇಲೆ ದಾಳಿ ಮಾಡಿಮಾಡಿದ ಜೈಸ್‌ – ಎ ಮಹಮ್ಮದ್‌ ಸಂಘಟನೆಯ ಭಯೋತ್ಪಾದಕರನ್ನು ಸದೆ ಬಡೆಯಲು ಭಾರತೀಯ ಸೇನೆ ಕೈಗೊಂಡ ಕಾರ್ಯಾಚರಣೆಯಾಗಿದೆ.

ಆಪರೇಷನ್‌ ಸಂಕಟವಿಮೋಚನಾ 2016 :

ಆಫ್ರಿಕಾ ಖಂಡದ ದಕ್ಷಿಣ ಸುಡಾನ್‌ ಹಿಂಸಾಚಾರಕ್ಕೆ ಒಳಗಾದ 600 ಜನ ಭಾರತೀಯರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲು ಭಾರತೀಯ ಸೇನೆ ಕೈಗೊಂಡ ಕಾರ್ಯಾಚರಣೆಯಾಗಿದೆ.

ಆಪರೇಷನ್‌ ದೇವಿಶಕ್ತಿ 2021 :

ಅಫಘ್ಗಾನಿಸ್ತಾನದಲ್ಲಿ ಭಾರತೀಯ ನಿವಾಸಿಗಳನ್ನು ತಾಲಿಬಾನಿಗಳಿಂದ ರಕ್ಷಿಸುವ ಸಲುವಾಗಿ ಕೈಗೊಂಡ ಕಾರ್ಯಾಚರಣೆಯಾಗಿದೆ.

FAQ :

ಆಪರೇಷನ್‌ ಸ್ಮೈಲಿಂಗ್‌ ಬುದ್ದ ಎಷ್ಟರಲ್ಲಿ ಕೈಗೊಳ್ಳಲಾಯಿತು?

1974

ಆಪರೇಷನ್‌ ವಿಜಯ ಎಂಬ ಕಾರ್ಯಾಚರಣೆಯನ್ನು ಏಕೆ ಪ್ರಾರಂಭಿಸಲಾಯಿತು?

ಗೋವಾ, ದಿಯು ದಮನ್‌ ಪ್ರದೇಶಗಳಲ್ಲಿ ಆಡಳಿತ ನಡೆಸುತ್ತಿದ್ದ ಪೋರ್ಚುಗೀಸರನ್ನು ಅಲ್ಲಿಂದ ಹೊರಹಾಕಲು ಅಂದಿನ ಪ್ರಧಾನಿ ನೆಹರು ಆದೇಶದ ಮೇರೆಗೆ ಭಾರತೀಯ ಸೇನೆ ಕೈಗೊಂಡ ಯಶಸ್ವಿ ಕಾರ್ಯಾಚರಣೆಯಾಗಿದೆ.

ಇತರೆ ವಿಷಯಗಳು :

ಪ್ಲಾಸಿ ಕದನದ ಬಗ್ಗೆ ಮಾಹಿತಿ

ಕರ್ನಾಟಕದ ವ್ಯವಸಾಯದ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ