ಮೊಘಲ್‌ ದೊರೆ ಅಕ್ಬರ್‌ ನ ಬಗ್ಗೆ ಮಾಹಿತಿ | Information about Mughal Emperor Akbar in Kannada

ಮೊಘಲ್‌ ದೊರೆ ಅಕ್ಬರ್‌ ನ ಬಗ್ಗೆ ಮಾಹಿತಿ Information about Mughal Emperor Akbar Moghal Dore Akbarana bagge Mahithi in Kannada

ಮೊಘಲ್‌ ದೊರೆ ಅಕ್ಬರ್‌ ನ ಬಗ್ಗೆ ಮಾಹಿತಿ

Information about Mughal Emperor Akbar in Kannada
ಮೊಘಲ್‌ ದೊರೆ ಅಕ್ಬರ್‌ ನ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಮೊಘಲ್‌ ದೊರೆ ಅಕ್ಬರ್‌ ನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಮೊಘಲ್‌ ದೊರೆ ಅಕ್ಬರ್‌(ಕ್ರಿ.ಶ.1556-1606) :

  • ಅಕ್ಬರ್‌ ಎಂದರೆ ಮಹಾಶಯ ಎಂದರ್ಥ. ಮೂಲ ಹೆಸರು ಜಲಾಲುದ್ದೀನ್‌ ಮೊಹಮ್ಮದ್.‌
  • ಮೊಘಲ್‌ ಸಾಮ್ರಾಜ್ಯದ ಪ್ರಸಿದ್ದ ಅರಸ
  • ಕ್ರಿ.ಶ. 1542 ರಲ್ಲಿ ಅಮರಕೋಟೆಯ ವೀರಸಾಲನ ಅರಮನೆಯಲ್ಲಿ ಜನಿಸಿದರು. ತಂದೆ ಹುಮಾಯುನ್‌, ತಾಯಿ ಹಮೀದಾ ಬಾನು ಬೇಗಂ
  • ತನ್ನ 14ನೇ ವಯಸ್ಸಿನಲ್ಲಿಯೇ ಅಧಿಕಾರಕ್ಕೆ ಬಂದನು.
  • ಕ್ರಿ.ಶ.1556 ಫೆಬ್ರವರಿ 14 ರಂದು ಪಂಜಾಬಿನ ಕಲನೂರು ಎಂಬಲ್ಲಿ ಪಟ್ಟಾಭಿಷೇಕವಾಯಿತು.
  • ಕ್ರಿ.ಶ.1556 ನವೆಂಬರ್‌ 5 ರಂದು ದೆಹಲಿಯನ್ನು ಆಳುತ್ತಿದ್ದ ಹೇಮುವನ್ನು 2ನೇ ಪಾಣಿಪತ್‌ ಯುದ್ದದಲ್ಲಿ ಬೈರಾಮ್‌ ಖಾನ್ ನ ಸಹಾಯದಿಂದ ಕೊಲೆ ಮಾಡಿದನು.
  • ಅಕ್ಬರನ ಸಾಕು ತಾಯಿ ಮೆಹನ ಅನಗಾ ಅಥವಾ ಮಾಲಾನ ಬೇಗಂಳು ಅಕ್ಬರನ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದಳು. ಕಾರಣ ತನ್ನ ಮಗ ಆಲಂಖಾನ್ ನನ್ನು ಅಧಿಕಾರಕ್ಕೆ ತರುವ ಯೋಚನೆಯಲ್ಲಿದ್ದಳು. ಆಗ ಅಕ್ಬರ್‌ ತನ್ನ ಸಹೋದರ ಆದಮ್‌ ಖಾನ ನನ್ನು ಅರಮನೆಯ ಮೇಲಿನಿಂದ ಬೀಳಿಸಿ ಕೊಲೆ ಮಾಡಿದನು.
  • ಅಕ್ಬರನ ಧಾರ್ಮಿಕ ಗುರು – ಅಬ್ದುಲ್‌ ಲತೀಫ್ ‌

ಅಕ್ಬರನ ದಿಗ್ವಿಜಯಗಳು :

ಕ್ರಿ.ಶ.1561 ಮಾಳ್ವ :

  • ಮಾಳ್ವದ ಮೇಲೆ ದಾಳಿ ಮಾಡಿ ಅರಸ ಬಾಚ್‌ ಬಹದ್ದೂರ್‌ ನನ್ನು ಸೋಲಿಸಿದನು.

ಕ್ರಿ.ಶ.1562 ಅಂಬರ :

  • ಅಂಬರದ ಮೇಲೆ ದಾಳಿ ಮಾಡಿದನು. ಅಂಬರ ಅರಸ ಬಿಹಾರಿ ಮಹಲ್‌ ಅಕ್ಬರನಿಗೆ ಶರಣಾಗಿ ತನ್ನ ಮಗಳು ಜೀದಾಬಾಯಿಯನ್ನು ಕೊಟ್ಟು ವಿವಾಹ ಮಾಡಿದನು.

ಕ್ರಿ.ಶ.1572 ಗುಜರಾತ್‌ :

  • ಗುಜರಾತಿನ ಮೇಲೆ ದಾಳಿ ಮಾಡಿ ಮುಜಾಫರ್ಖಾನ್‌ ಮತ್ತು ನೊಬೆಲರ ಸೈನ್ಯವನ್ನು ಸೋಲಿಸಿದನು. ಈ ದಾಳಿಯಲ್ಲಿ ಅಕ್ಬರ್‌ 600 ಮೈಲಿ ದೂಅರದ ಪ್ರಯಾಣವನ್ನು ಕೇವಲ 11 ದಿನಗಳಲ್ಲಿ ಕ್ರಮಿಸಿ ಯುದ್ದ ಮಾಡಿದನು. ಹೀಗೆ ಯಶಸ್ವಿಯಾಗಿದಕ್ಕಾಗಿ ಜವಹಾರ್‌ ಲಾಲ್‌ ನೆಹರು ಅವರು ಇದು ಬಾರತದ ಶೀಘ್ರಗತಿ ದಾಳಿಯೆಂದು ಕರೆದಿದ್ದಾರೆ.
  • ಈ ವಿಜಯದ ಸವಿ ನೆನಪಿಗಾಗಿ ಅಕ್ಬರ್‌ ಫತೇಪುರ ಸಿಕ್ರಿಯಲ್ಲಿ ಬುಲಂದ ದರ್ವಾಜಾ ಎಂಬ ಕಟ್ಟಡ ನಿರ್ಮಿಸಿದನು. ಈ ದರ್ವಾಜ್‌ ದ ಮೇಲೆ ಜಗತ್ತು ಒಂದು ಸೇತುವೆ ಅದನ್ನು ದಾಟು ಎಂದು ಕೆತ್ತಿಸಿದನು.
  • ಕ್ರಿ.ಶ.1576 ರಲ್ಲಿ ಅಕ್ಬರನ ದಂಡನಾಯಕ ಮಾನಸಿಂಗ್‌ ಮತ್ತು ರಜಪೂತರ ಅರಸ ರಾನಾ ಪ್ರತಾಪ ಸಿಂಹ ನ ನಡುವೆ ಪ್ರಸಿದ್ದವಾದ ಹಳದಿ ಘಾಟ್‌ ಕದನ ನಡೆಯಿತು. ಇದರಲ್ಲಿ ರಾನಾ ಪ್ರತಾಪ ಸೋತು ಹೋದನು.
  • 1586 ರಲ್ಲಿ ಕಾಶ್ಮೀರದ ಮೇಲೆ ದಾಲಿ ಮಾಡಿ ಯೂಸೂಫ್‌ ಖಾನ ನನ್ನು ಸೋಲಿಸಿದನು.
  • 1596 ರಲ್ಲಿ ಅಹ್ಮದ್‌ ನಗರದ ರಾಜಕುಮಾರಿ ಚಾಂದಬೀಬಿ ಅಕ್ಬರನೊಂದಿಗೆ ಯುದ್ದ ಮಾಡಿ ಸೋತು ಒಪ್ಪಂದ ಮಾಡಿಕೊಂಡಳು.

ಅಕ್ಬರನ ಧಾರ್ಮಿಕ ವಿಜಯಗಳು :

  • ಕ್ರಿ.ಶ.1562 ರಲ್ಲಿ ಗುಲಾಮಗಿರಿ ಪದ್ದತಿ ರದ್ದು ಮಾಡಿದನು.
  • ಕ್ರಿ.ಶ.1563 ರಲ್ಲಿ ಹಿಂದುಗಳ ಮೇಲಿನ ಯಾತ್ರಾ ತೆರಿಗೆ ರದ್ದು ಮಾಡಿದನು.
  • ಕ್ರಿ.ಶ.1564 ರಲ್ಲಿ ಹಿಂದುಗಳ ಮೇಲಿನ ಜಿಜಿಯಾ ಎಂಬ ತೆರಿಗೆಯನ್ನು ರದ್ದು ಮಾಡಿದನು.
  • ಕ್ರಿ.ಶ.1570 ರಲ್ಲಿ ಸೂಫಿ ಸಂತ ಸಲೀಂ ಚಿಸ್ತಿಯ ಸ್ಮರಣಾರ್ಥವಾಗಿ ಫತೇಪುರ ಸಿಕ್ರಿ ಎಂಬ ನಗರಕ್ಕೆ ಅಡಿಪಾಯ ಹಾಕಿದರು.
  • ಕ್ರಿ.ಶ.1575 ರಲ್ಲಿ ಫತೇಪುರ ಸಿಕ್ರಿಯಲ್ಲಿ ಇಬಾದತ್‌ ಖಾನಾ ಎಂಬ ಪ್ರಾರ್ಥನಾ ಮಂದಿರವನ್ನು ನಿರ್ಮಿಸಿದನು.
  • 1581-1582 ರಲ್ಲಿ ಇಬಾದತ್‌ ಖಾನಾ ಎಂಬ ಪ್ರಾರ್ಥನಾ ಮಂದಿರದಲ್ಲೆ ತನ್ನದೇ ಆದ ಹೊಸ ಧರ್ಮ ದಿನ್‌-ಇ-ಇಲಾಹಿಯನ್ನು ಸ್ಥಾಪಿಸಿದರು.
  • ಈ ಧರ್ಮಕ್ಕೆ ಸೇರಿದ ಏಕೈಕ ಹಿಂದೂ ಬೀರಬಲ್‌ ಈ ಧರ್ಮಕ್ಕೆ ಸೇರಬೇಕಾದರೆ ರವಿವಾರ ಮುಂಜಾನೆ ಸುಲ್ತಾನನ ಪಾದಗಳಿಗೆ ನಮಸ್ಕರಿಸಿ ಅಲ್ಲಾ ಹೋ ಅಕ್ಬರ್‌ ಎಂದರೆ ಈ ಧರ್ಮಕ್ಕೆ ಸೇರಿದಂತಾಗುತಿತ್ತು.

ಅಕ್ಬರನ ಆಡಳಿತ :

  • ಅರಸ ಆಡಳಿತದ ಕೇಂದ್ರ ಬಿಂದುವಾಗಿದ್ದ.
  • ಅಂತಿಮ ನ್ಯಾಯ ನೀಡುವ ಪರಮಾಧಿಕಾರಿಯಾಗಿದ್ದನು.
  • ಅಕ್ಬರನ ಕಂದಾಯ ಮಂತ್ರಿ – ರಾಜಾ ತೋದರಮಲ್ಲ
  • ಅಕ್ಬರನ ಆಡಳಿತದಲ್ಲಿ ಜಪ್ತಿ ಅಥವಾ ಬಂದೋಬಸ್ತ್‌ ಪದ್ದತಿ ಅಳವಡಿಸಿಕೊಂಡಿದ್ದನು.
  • ಅಕ್ಬರನು ಆಗ್ರಾ ನಗರಕ್ಕೆ ಕೋಟೆ ನಿರ್ಮಿಸಿದನು.
  • ಅಕ್ಬರನ ಆಡಳಿತದ ಅನುಕೂಲಕ್ಕಾಗಿ ರಾಜ್ಯ – ಸುಬೇದಾರ, ಸರ್ಕಾರ – ಫೌಜುದಾರ, ಪರಗಣ – ಶೇಕದಾರ, ಗ್ರಾಮ – ಚೌಕಿದಾರ ಎಂದು ವಿಭಾಗಿಸಿದ್ದನು.
  • ಅಕ್ಬರ್‌ ತನ್ನ ಆಡಳಿತದಲ್ಲಿ ಮನ್ಸಬ್‌ ದಾರಿ ಪದ್ದತಿ ಜಾರಿಗೆ ತಂದನು. ಅಕ್ಬರ್‌ ಇದನ್ನು ಮಂಗೋಲರಿಂದ ಅಳವಡಿಸಿಕೊಂಡಿದ್ದನು.
  • ಅಕ್ಬರನ ಆಸ್ಥಾನದ ಕಂದಾಯಮಂತ್ರಿ ರಾಜಾ ತೋದರ ಮಲ್ಲ.
  • ಅಕ್ಬರ್‌ ತನ್ನ ಆಡಳಿತದಲ್ಲಿ ಜರೋಖ ದರ್ಶನ ಜಾರಿಗೆ ತಂದನು.

ಅಕ್ಬರನ ಸಾಂಸ್ಕೃತಿಕ ಕೊಡುಗೆಗಳು :

  • ಅಕ್ಬರನ ಕನಸಿನ ನಗರ ಫತೇಪುರಸಿಕ್ರಿ ಇದನ್ನು ಶಿಲೆಯಲ್ಲಿನ ಶೃಂಗಾರ ಎಂದು ಕರೆದವರು ವಿ.ಎ ಸ್ಮಿತ್‌
  • ಬುಲಂದ ದರ್ವಾಜ, ಇಬಾದತ್‌ ಖಾನಾ ಜಹಾಂಗೀರ್‌ ಮಹಲ್‌, ಬೀರಬಲ್‌ ಹೌಸ್‌, ಪಂಚಮಹಲ್, ಜಾಮಿಯಾ ಮಸೀದಿ, ಜೋದಾಬಾಯಿ ಅರಮನೆ ಎಂಬ ಕಟ್ಟಡಗಳನ್ನು ನಿರ್ಮಿಸಿದನು.
  • ಅಕ್ಬರನ ಆಸ್ಥಾನದಲ್ಲಿ ಅಬುಲ್‌ ಫಜಲ್‌, ಅಬುಲ್‌ ಫೈಜಿ ಮತ್ತು ಬೀರಬಲ್ಲ ಎಂಬ ವಿದ್ವಾಂಸರಿದ್ದರು.
  • ಅಬುಲ್‌ ಫಜಲನು ಅಕ್ಬರನ ಜೀವನ ಚರಿತ್ರೆಯಾದ ಐನ್‌ ಇ ಅಕ್ಬರಿ ಅಥವಾ ಅಕ್ಬರನಾಮಾ ಎಂಬ ಗ್ರಂಥವನ್ನು ಪರ್ಷಿಯನ್‌ ಭಾಷೆಯಲ್ಲಿ ರಚಿಸಿದನು. ಇದು ಅಮೇರಿಕಾ ಖಂಡದ ಸಂಶೋಧನೆಯ ಬಗ್ಗೆ ತಿಳಿಸುತ್ತದೆ. ಇದರಲ್ಲಿ ಅಮೇರಿಕಾವನ್ನು ಅಲ್ಮಮನೌಜ್ ಎಂದು ಕರೆಯಲಾಗಿದೆ.
  • ಅಬುಲ್‌ ಫೈಜಿ ರಾಮಾಯಣ, ಮಹಾಭಾರತ, ನಳಚರಿತೆ, ಲೀಲಾವತಿ ಇಂತಹ ಅನೇಕ ಗ್ರಂಥಗಳನ್ನು ಪರ್ಷಿಯನ್‌ ಭಾಷೆಗೆ ಭಾಷಾಂತರಿಸಿದರು.
  • ಅಕ್ಬರನ ಆಸ್ಥಾನದಲ್ಲಿ ಹಿಂದೂಸ್ತಾನಿ ಸಂಗೀತದ ಪಿತಾಮಹಾನೆಂದೆ ಖ್ಯಾತನಾದ ತಾನಸೇನ್‌ ನು ಆಶ್ರಯ ಪಡೆದುಕೊಂಡಿದ್ದನು.
  • ಕ್ರಿ.ಶ.1602 ರಲ್ಲಿ ಅಕ್ಬರನ ಮಗ ಜಹಾಂಗೀರ ಅಬುಲ್‌ ಫಜಲ್‌ ನನ್ನು ಕೊಲೆ ಮಾಡಿದನು.
  • ಕ್ರಿ.ಶ.1605 ರಲ್ಲಿ ಅಕ್ಬರ ಮರಣ ಹೊಂದಿದನು.
  • ಅಕ್ಬರನ ಸಮಾಧಿ ಸ್ಥಳ ಆಗ್ರಾದ ಸಮೀಪ ಸಿಕಂದರನಲ್ಲಿದೆ.

FAQ :

ಅಕ್ಬರನ ಕಂದಾಯ ಮಂತ್ರಿ ಯಾರು?

ರಾಜಾ ತೋದರಮಲ್ಲ

ಅಕ್ಬರನ ಧಾರ್ಮಿಕ ಗುರು ಯಾರು?

ಅಬ್ದುಲ್‌ ಲತೀಫ್

ಇತರೆ ವಿಷಯಗಳು :

ಭೂಕಂಪನದ ಬಗ್ಗೆ ಮಾಹಿತಿ

ಜ್ವಾಲಾಮುಖಿಯ ಬಗ್ಗೆ ಮಾಹಿತಿ

Leave your vote

20 Points
Upvote Downvote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ