ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳ ಬಗ್ಗೆ ಮಾಹಿತಿ | Information about natural flora of Karnataka in Kannada

ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳ ಬಗ್ಗೆ ಮಾಹಿತಿ Information about natural flora of Karnataka Karnatakada Swabhavika Sasyavargagala bagge Mahithi in Kannada

ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳ ಬಗ್ಗೆ ಮಾಹಿತಿ

Information about natural flora of Karnataka in Kannada
ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳು :

  • ಪ್ರಕೃತಿದತ್ತವಾಗಿ ಬೆಳೆಯುವ ವಿವಿಧ ಸಸ್ಯ ಸಮುದಾಯವನ್ನು ಸ್ವಾಭಾವಿಕ ಸಸ್ಯವರ್ಗ ಎನ್ನುವರು.
  • ಕರ್ನಾಟಕದ ಕಾಡುಗಳಲ್ಲಿ ವಿಶೇಷವಾಗಿ ಶ್ರೀಗಂಧದ ಮರಗಳು ಹೆಚ್ಚಾಗಿ ಕಂಡು ಬರುವುದರಿಂದ ಕರ್ನಾಟಕವನ್ನು ಶ್ರೀಗಂಧದ ನಾಡು ಎನ್ನುವರು.

ನಿತ್ಯಹರಿದ್ವರ್ಣ ಕಾಡುಗಳು :

  • ವಾರ್ಷಿಕ 250cm ಗಳಿಗೂ ಅಧಿಕ ಮಳೆ ಬೀಳುವ ಭಾಗಗಳಲ್ಲಿ ಈ ಕಾಡುಗಳು ಬೆಳೆಯುತ್ತವೆ.
  • ಅಧಿಕ ಮಳೆ ಮತ್ತು ಅಧಿಕ ಉಷ್ಣಾಂಶಗಳಿಂದ ಇಲ್ಲಿನ ಮರಗಳು ಎತ್ತರವಾಗಿ ಹಾಗೂ ದಟ್ಟವಾಗಿ ಬೆಳೆಯುತ್ತವೆ. ಈ ಕಾಡುಗಳು ದುರ್ಗಮವಾಗಿದ್ದು. ಕೆಲವು ಕಡೆ ಸೂರ್ಯನ ಕಿರಣಗಳು ನೆಲಕ್ಕೆ ತಲುಪುವುದಿಲ್ಲ.
  • ಇಲ್ಲಿ ಪ್ರಮುಖವಾಗಿ ಬೆಳೆಯುವ ಮರಗಳು ಬೀಟೆ, ತೇಗ, ಮತ್ತಿ, ನಂದಿ, ಧೂಪ, ಹೊನ್ನೆ, ಹೆಬ್ಬಲಸು ಮುಂತಾದ ಮರಗಳು ಕಂಡು ಬರುತ್ತದೆ.
  • ಸಾಂಬಾರ ಪದಾರ್ಥಗಳಾದ ಲವಂಗಾ, ಉಡುಪಿ, ಏಲಕ್ಕಿ, ದಾಲ್ಚಿನ್ನಿ, ಔಷಧಿ ಸಸ್ಯಗಳು ಹೇರಳವಾಗಿ ಬೆಳೆಯುತ್ತವೆ.
  • ಈ ಕಾಡುಗಳು ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಕಂಡು ಬರುತ್ತವೆ.

ಎಲೆ ಉದುರಿಸುವ ಸಸ್ಯವರ್ಗ :

  • ಚಳಿಗಾಲದ ತರುವಾಯ ತೇವಾಂಶದ ಕೊರತೆಯಿಂದಾಗಿ ಮರಗಳ ಎಲೆಗಳು ಉದುರುತ್ತವೆ. ಮತ್ತೆ ವಸಂತ ಋತುವಿನಲ್ಲಿ ಚಿಗುರುತ್ತವೆ. ಇವುಗಳನ್ನು ಎಲೆ ಉದುರಿಸುವ ಸಸ್ಯವರ್ಗ ಎನ್ನುವರು.
  • ವಾರ್ಷಿಕವಾಗಿ 60-120 cm ಮಳೆ ಬೀಳುವ ಭಾಗಗಳಲ್ಲಿ ಇಂತಹ ಸಸ್ಯವರ್ಗಗಳು ಕಂಡು ಬರುತ್ತವೆ.
  • ತೇಗ, ಹೊನ್ನೆ, ಮತ್ತಿ, ಬೇವು, ಮಾವು, ಹಲಸು, ಮುತ್ತುಗ, ಬಾಗೆ, ಆಲ, ಶ್ರೀಗಂಧ ಮತ್ತು ಬಿದಿರು ಮರಗಳು ಕಂಡುಬರುತ್ತವೆ. ಇವು ದಟ್ಟವಾಗಿ ಬೆಲೆಯುವುದಿಲ್ಲ.
  • ಈ ಕಾಡುಗಳು ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಗಳ ಪೂರ್ವಭಾಗ, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕಂಡು ಬರುತ್ತವೆ.

ಮಿಶ್ರ ಬಗೆಯ ಕಾಡುಗಳು :

  • ನಿತ್ಯಹರಿದ್ವರ್ಣ ಮತ್ತು ಅಗಲ ಎಲೆಗಳನ್ನುಳ್ಳ ಎಲೆ ಉದುರಿಸುವ ಪ್ರಕಾರದ ಮರಗಳು ಬೆಳೆಯುವ ಸಸ್ಯವರ್ಗವೇ ಮಿಶ್ರ ಬಗೆಯ ಕಾಡುಗಳು.
  • ವಾರ್ಷಿಕ 120-150 cm ಮಳೆ ಬೀಳುವ ಭಾಗಗಳಲ್ಲಿ ಇಂತಹ ಸಸ್ಯವರ್ಗ ಕಂಡುಬರುತ್ತದೆ.
  • ತೇಗ, ಹೊನ್ನೆ, ಮತ್ತಿ ನಂದಿ, ದಿಂಡಗ, ಶ್ರೀಗಂಧ, ಹಲಸು ಮತ್ತು ಬಿದಿರು ಇಲ್ಲಿ ಬೆಳೆಯುವ ಪ್ರಮುಖ ಮರಗಳು.
  • ಈ ಕಾಡುಗಳು ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡ ಕೆಲಭಾಗಗಳು. ಕೊಡಗಿನ ಪೂರ್ವ ಬಾಗ, ಹಾಗೂ ಚಿಕ್ಕಮಗಳೂರು ಮತ್ತು ಹಾಸನ, ಮೈಸೂರು ಜಿಲ್ಲೆಯ ಕೆಲಭಾಗಗಳಲ್ಲಿ ಬೆಳೆಯುತ್ತವೆ.

ಹುಲ್ಲುಗಾವಲು ಮತ್ತು ಕುರುಚಲು ಸಸ್ಯವರ್ಗ :

  • ಕರ್ನಾಟಕದಲ್ಲಿ 60cm ಗಿಂತ ಕಡಿಮೆ ವಾರ್ಷಿಕ ಮಳೆ ಬೀಳುವ ಪ್ರದೇಶಗಳಲ್ಲಿ ಇಂತಹ ಸಸ್ಯವರ್ಗ ಹಂಚಿಕೆಯಾಗಿದೆ.
  • ಇಲ್ಲಿ ಬೆಲೆಯುವ ಕುರುಚಲು ಮತ್ತು ಮುಳ್ಳಿನ ಗಿಡಗಳೆಂದರೆ ಕಳ್ಳಿ, ಕತ್ತಾಳಿ, ಕರಿಜಾಲಿ, ಬೇಲ, ಈಚಲು, ಹಂಚಿ ಮತ್ತು ಕುಂತಿಹುಲ್ಲು, ಅಲ್ಲಲ್ಲಿ ಆಲ, ಬೇವು, ಅರಳಿ, ಮುತ್ತುಗದಂತಹ ಮರಗಳು ಬೆಳೆಯುತ್ತವೆ.
  • ಕರಾವಳಿ ಅಂಚಿನಲ್ಲಿರುವ ನದಿ ಮುಖಜ ಭೂಮಿ ಅಳಿವೆಗಳು ಹಾಗೂ ಮರಗಳು ದಂಡೆಗಳ ಭಾಗದಲ್ಲಿ ಬಿಳಿಲುಗಳಿಂದ ಕೂಡಿರುವ ಸಸ್ಯಗಳಿವೆ. ಇವು ಉಪ್ಪು ನೀರಿನಲ್ಲಿ ಬೆಳೆಯುವ ವಿಶಿಷ್ಟವಾದ ಸಾಮರ್ಥವನ್ನು ಹೊಂದಿದೆ. ಇದನ್ನೇ ಮ್ಯಾಂಗ್ರೋವ್‌ ಕಾಡು ಎನ್ನುವರು.
  • ಇವುಗಳ ಹಂಚಿಕೆ ರಾಜ್ಯದಲ್ಲಿ ಅತ್ಯಲ್ಪ
  • ಸುಮಾರು 1400 ಮೀ. ಗಿಂತ ಹೆಚ್ಚು ಎತ್ತರವುಳ್ಳ ಭಾಗದಲ್ಲಿ ತಂಪಾದ ವಾಯುಗುಣವಿರುವ ಕುದುರೆಮುಖ. ಬಾಬಾಬುಡನಗಿರಿ, ಬಿಳಿಗಿರಿ ರಂಗನಬೆಟ್ಟ, ಝರಿ, ತೊರೆಗಳಿಂದ ಕೂಡಿದ ಭಾಗಗಳಲ್ಲಿ ಕಂಡುಬರುತ್ತವೆ.

FAQ :

ನಿತ್ಯಹರಿದ್ವರ್ಣ ಕಾಡುಗಳು ಎಲ್ಲಿ ಬೆಳೆಯುತ್ತವೆ?

ವಾರ್ಷಿಕ 250cm ಗಳಿಗೂ ಅಧಿಕ ಮಳೆ ಬೀಳುವ ಭಾಗಗಳಲ್ಲಿ ಈ ಕಾಡುಗಳು ಬೆಳೆಯುತ್ತವೆ.

ಎಲೆ ಉದುರಿಸುವ ಸಸ್ಯವರ್ಗಗಳು ಎಲ್ಲಿ ಬೆಳೆಯುತ್ತವೆ?

ಚಳಿಗಾಲದ ತರುವಾಯ ತೇವಾಂಶದ ಕೊರತೆಯಿಂದಾಗಿ ಮರಗಳ ಎಲೆಗಳು ಉದುರುತ್ತವೆ. ಮತ್ತೆ ವಸಂತ ಋತುವಿನಲ್ಲಿ ಚಿಗುರುತ್ತವೆ. ಇವುಗಳನ್ನು ಎಲೆ ಉದುರಿಸುವ ಸಸ್ಯವರ್ಗ ಎನ್ನುವರು. ವಾರ್ಷಿಕವಾಗಿ 60-120 cm ಮಳೆ ಬೀಳುವ ಭಾಗಗಳಲ್ಲಿ ಇಂತಹ ಸಸ್ಯವರ್ಗಗಳು ಕಂಡು ಬರುತ್ತವೆ.

ಇತರೆ ವಿಷಯಗಳು :

ಭಾರತದ ಜೀವ ವೈವಿದ್ಯತೆಯ ತೀವ್ರ ನೆಲೆಗಳ ಬಗ್ಗೆ ಮಾಹಿತಿ

ಬೆಳಕಿನ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ