ಭಾರತದಲ್ಲಿ ಬಡತನದ ಬಗ್ಗೆ ಮಾಹಿತಿ | Information about poverty in India in Kannada

ಭಾರತದಲ್ಲಿ ಬಡತನದ ಬಗ್ಗೆ ಮಾಹಿತಿ Information about poverty in India Bharathadalli Badathanadha bagge Mahithi in Kannada

ಭಾರತದಲ್ಲಿ ಬಡತನದ ಬಗ್ಗೆ ಮಾಹಿತಿ

ಭಾರತದಲ್ಲಿ ಬಡತನದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಭಾರತದಲ್ಲಿ ಬಡತನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಭಾರತದಲ್ಲಿ ಬಡತನಕ್ಕೆ ಕಾರಣಗಳು :

ಬಡತನದ ವಿಷವರ್ತುಲ :

  • ಭಾರತವು ಬಡತನದ ವಿಷವರ್ತುಲ ಸಮಸ್ಯೆಯನ್ನು ಎದುರಿಸುತ್ತಿದೆ. ಕಡಿಮೆ ಅಭಿವೃದ್ದಿ ರಾಷ್ಟ್ರಗಳಲ್ಲಿನ ಕಡಿಮೆ ಉಳಿತಾಯ, ಕಡಿಮೆ ಬಂಡವಾಳ ಸಂಗ್ರಹ, ಕಡಿಮೆ ಹೂಡಿಕೆ, ಕಡಿಮೆ ಉತ್ಪಾದಕತೆ, ಕಡಿಮೆ ಉತ್ಪಾದನೆ ಮತ್ತು ಪುನಃ ಕಡಿಮೆ ಬಂಡವಾಳದ ಉತ್ಪನ್ನ ಹಾಗೂ ಕಡಿಮೆ ಆದಾಯಕ್ಕೆ ಕಾರಣವಾಗಿರುವ ಸನ್ನಿವೇಶವೇ ಬಡತನದ ವಿಷವರ್ತುಲ. ಇಲ್ಲಿ ಬಡತನಕ್ಕೆ ಕಾರಣ ಮತ್ತು ಪರಿಣಾಮ ಎರಡೂ ಬಡತನವೇ ಆಗಿದೆ.

ಬ್ರಿಟೀಷರ ದಬ್ಬಾಳಿಕೆ :

  • ಬ್ರಿಟೀಷರ ವಸಾಹತು ಆಳ್ವಿಕೆ ಅವಧಿಯಲ್ಲಿ ನಮ್ಮ ದೇಶವನದನು ಅವರು ನಿರ್ಧಯವಾಗಿ ಶೋಷಿಸಿದರು. ಅವರ ಆಧುನಿಕ ಕೈಗಾರಿಕೆಗಳನ್ನು ಬೆಂಬಲಿಸುವುದಕ್ಕಾಗಿ ನಮ್ಮ ಸಂಪ್ರದಾಯಿಕ ಗುಡಿ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ನಾಶಗೊಳಿಸಿದರು. ನಮ್ಮ ವಿಫುಲ ನೈಸರ್ಗಿಕ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆದರು. ಆದ್ದರಿಂದ ಇಂದಿಗೂ ಸಹ ಭಾರತವು ಅವರು ಮಾಡಿದ ನಷ್ಟದಿಂದ ಹೊರಬಂದು ಸುಧಾರಿಸಿಕೊಳ್ಳಲು ಸಾಧ್ಯವಾಗಿಲ್ಲ.

ಆರ್ಥಿಕ ಅಸಮಾನತೆಗಳು :

  • ಭಾರತದಲ್ಲಿ ಆದಾಯ ಮತ್ತು ಸಂಪತ್ತಿನ ಅಸಮಾನ ಹಂಚಿಕೆಗಳೂ ಸಹ ಬಡತನಕ್ಕೆ ಕಾರಣವಾಗಿವೆ. ಕೆಲವೇ ಜನರ ಕೈಯಲ್ಲಿ ಆದಾಯ ಮತ್ತು ಸಂಪತ್ತಿನ ಕೇಂದ್ರೀಕರಣವಾಗಿರುವ ಕಾರಣದಿಂದಾಗಿ ಬಹು ಜನರು ಬಡತನ ರೇಖೆಯ ಕೆಳಗೆ ಇರಬೇಕಾದ ಸಂದರ್ಭ ಬಂದಿದೆ.

ಕಡಿಮೆ ಸಂಪನ್ಮೂಲದ ಮೂಲ :

  • ಭಾರತದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಕಡಿಮೆ ಸಂಪನ್ಮೂಲದ ಮೂಲವು ಬಡತನಕ್ಕೆ ಪ್ರಮುಖ ಕಾರಣವಾಗಿದೆ. ಇಂದು ಬಹಳಷ್ಟು ಗ್ರಾಮೀಣ ರೈತರು ಅತಿ ಕಡಿಮೆ ಭೂಮಿಯನ್ನು ಹೊಂದಿದ್ದಾರೆ ಅಥವಾ ಭೂರಹಿತರಾಗಿದ್ದಾರೆ. ಈ ಸಣ್ಣ ಹಿಡುವಳಿಗಳಿಂದ ಬರುವ ಆದಾಯವು ಅವರ ಕನಿಷ್ಠ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಕಾಗುತ್ತಿಲ್ಲ. ನಗರ ಪ್ರದೇಶದಲ್ಲಿ ಸಣ್ಣ ವ್ಯಾಪಾರಿಗಳು, ರಿಕ್ಷಾತಳ್ಳುವವರು ಹಂಗಾಮಿ ದಿನಗೂಲಿ ಕಾರ್ಮಿಕರು, ಹಾಗೂ ಇತರರು ಅತಿ ಸಂಪನ್ಮೂಲದ ಮೂಲಗಳನ್ನು ಹೊಂದಿದ್ದಾರೆ ಆದ್ದರಿಂದ ಕಡಿಮೆ ಸಂಪನ್ಮೂಲದ ಮೂಲವು ಭಾರತದಲ್ಲಿ ಬಡತನವು ಶಾಶ್ವತವಾಗಿರುವಂತೆ ಮಾಡಿದೆ.

ನಿರುದ್ಯೋಗ :

  • ಭಾರತದಲ್ಲಿ ನಿರುದ್ಯೋಗ ಮತ್ತು ಅರೆ ನಿರುದ್ಯೋಗವು ವ್ಯಾಪಕವಾಗಿ ಹಬ್ಬಿರುವ ಸಮಸ್ಯೆಯಾಗಿದೆ. ನಿರುದ್ಯೋಗದ ಮಟ್ಟವು ಬಡವರಲ್ಲಿ ಅಧಿಕವಾಗಿದೆ, ಆದ್ದರಿಂದ ಅವರು ತಮ್ಮ ಕುಟುಂಬದ ಸದಸ್ಯರಿಗೆ ಬೇಕಾದ ಮೂಲ ಅಗತ್ಯಗಳನ್ನುಕೊಳ್ಳಲು ಸಾಕಾಗುವಷ್ಟು ಆದಾಯವನ್ನು ಗಳಿಸಲು ಸಾಧ್ಯವಾಗುತ್ತಿಲ್ಲ.

ಬೆಲೆ ಏರಿಕೆಯ ಒತ್ತಡ :

  • ಹಣದುಬ್ಬರದಿಂದಾಗಿ ಆಹಾರ ಧಾನ್ಯಗಳು ಮತ್ತು ಅಗತ್ಯ ವಸ್ತುಗ ಬೆಲೆಗಳು ಹೆಚ್ಚಳವಾಗುತ್ತಿದ್ದು ಇದು ಬಡತನದ ಸ್ಥಿತಿಯನ್ನು ಮತ್ತಷ್ಟು ತೀವ್ರಗೊಳಿಸಿದೆ.

ಬಡತನದ ಉಪಶಮನ ನೀತಿಗಳು ಮತ್ತು ಕಾರ್ಯಕ್ರಮ :

ಬೆಳವಣಿಗೆ ಆಧಾರಿತ ಮಾರ್ಗ :

  • 1950-1960 ದಶಕದ ಪ್ರಾರಂಭದಲ್ಲಿ ಯೋಜನಾವಧಿಯ ಉದ್ದೇಶವು ಆರ್ಥಿಕ ಬೆಳವಣಿಗೆಯನ್ನು ಆಧರಿಸಿತ್ತು ಅದು ಒಟ್ಟು ದೇಶೀಯ ಉತ್ಪನ್ನ ಮತ್ತು ತಲಾಆದಾಯದ ಹೆಚ್ಚಖದ ಮೂಲಕ ಬಡತನವನ್ನು ಕಡಿಮೆಗೊಳಿಸುವುದಾಗಿತ್ತು. ತೀವ್ರ ಕೈಗಾರೀಕರಣ ಮತ್ತು ಹಸಿರು ಕ್ರಾಂತಿಯಿಂದ ಹಿಂದುಳಿದ ಪ್ರದೇಶಗಳು ಮತ್ತು ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಹೆಚ್ಚು ಅನುಕೂಲಗಳಾಗಿವೆ.

ಆದಾಯ ಮತ್ತು ಉದ್ಯೋಗ ಸೃಷ್ಟಿಸುವ ಮಾರ್ಗ :

  • ಈ ಮಾರ್ಗವನ್ನು ಮೂರನೇ ಯೋಜನಾವಧಿಯಲ್ಲಿ ಪ್ರಾರಂಭಿಸಲಾಯಿತು ಈ ವಿಧಾನವು ಬಡತನವನ್ನು ಕಡಿಮೆಗೊಳಿಸಲು ನಿರ್ದಿಷ್ಟವಾದ ಕಾರ್ಯಕ್ರಮಗಳನ್ನು ಆಧರಿಸಿದೆ. ಉದ್ಯೋಗ ಸೃಷ್ಟಿಸುವ ಕಾರ್ಯಕ್ರಮಗಳ ಮೂಲಕ ಹೆಚ್ಚುವರಿ ಆಸ್ತಿಯನ್ನು ನಿರ್ಮಿಸಿ ಬಡವರ ಆದಾಯ ಮತ್ತು ಉದ್ಯೋಗಗಳನ್ನು ಹೆಚ್ಚಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ ಮಾರ್ಗ ಈ ಕೆಳಗಿನ ಕಾರ್ಯಕ್ರಮಗಳನ್ನು ಒಳಗೊಂಡಿದೆ.

ಸ್ವಯಂ ಉದ್ಯೋಗ ಕಾರ್ಯಕ್ರಮ :

  • ಸ್ವರ್ಣಜಯಂತಿ ಗ್ರಾಮ ಸ್ವರಾಜ್ಗಾರ್‌ ಇದನ್ನು ಸ್ವಯಂ ಉದ್ಯೋಗಕ್ಕಾಗಿ ಸ್ವಸಹಾಯ ಗುಂಪುಗಳಿಗೆ ಹಣಕಾಸು ನೆರವು ನೀಡುವ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಸ್ವರ್ಣ ಜಯಂತಿ ಷಹರಿ ರೋಜಗಾರ್‌ ಯೋಜನೆ. ಪ್ರಧಾನಮಂತ್ರಿ ರೋಜಗಾರ್‌ ಯೋಜನೆ ಈ ಎರಡೂ ಯೋಜನೆಗಳಡಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಬ್ಯಾಂಕುಗಳ ಮೂಲಕ ಸಾಲದ ರೂಪದಲ್ಲಿ ಹಣಕಾಸು ನೆರವು ನೀಡಲಾಗುತ್ತದೆ.

ಕೂಲಿ ಉದ್ಯೋಗ ಕಾರ್ಯಕ್ರಮ :

  • ರಾಷ್ಟ್ರೀಯ ಕೂಲಿಗಾಗಿ ಕಾರ್ಯಕ್ರಮ ಸಂಪೂರ್ಣ ಗ್ರಾಮೀಣ ರೋಜಗಾರ್‌ ಯೋಜನೆಯು ಮತ್ತು ಮಹಾತ್ನ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾರ್ಯಕ್ರಮ ಅಡಿಯಲ್ಲಿ ಪ್ರತಿ ಕುಟುಂಬದಲ್ಲಿನ ಇಚ್ಛೆಯುಳ್ಳ ವಯಸ್ಕರಿಗೆ ವರ್ಷದಲ್ಲಿ ಕನಿಷ್ಠ ನೂರು ದಿನಕ್ಕೆ ಕೌಶಲ್ಯ ರಹಿತ ದಿನಗೂಲಿ ಕೆಲಸವನ್ನು ಒದಗಿಸುವ ಖಾತರಿ ನೀಡಲಾಗಿದೆ.

ಬಡತನ ನಿರ್ಮೂಲನ ಕಾರ್ಯಕ್ರಮ ವಿಮರ್ಶಾತ್ಮಕ ಮೌಲ್ಯಮಾಪನ :

  • ಸ್ವಾತಂತ್ರ್ಯ ಪಡೆದ ನಂತರ ಭಾರತ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದೆ. ಆದರೆ ಅವು ಅಲ್ಪಪ್ರಮಾಣದ ಯಶಸ್ಸನ್ನು ಕಂಡಿವೆ. ನಿರಪೇಕ್ಷ ಬಡತನ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೂ ಸಹ ಹಸಿವು, ಅಪೌಷ್ಟಿಕತೆ, ಅನಕ್ಷರತೆ ಮತ್ತು ಮೂಲ ಸೌಲಭ್ಯಗಳ ಕೊರತೆಯು ಹಲವಾರು ಪ್ರದೇಶಗಳಲ್ಲಿ ಮುಂದುವರೆದಿದೆ.
  • ಸರ್ಕಾರವು ಬಡತನವನ್ನು ಪ್ರಗತಿಪರವಾಗಿ ಕಡಿಮೆ ಮಾಡುವ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ವಿಲೀನಿಕರಿಸಲಾಗಿದೆ ಮತ್ತು ಕೆಲವು ಕಾರ್ಯಕ್ರಮಗಳ ಹೆಸರನ್ನು ಬದಲಾಯಿಸಲಾಗಿದೆ. ಆದರೂ ಸಹ ಬಡತನ ನಿವಾರಣೆಯಲ್ಲಿ ಯಶಸ್ವಿಯಾಗಲು ಸಾದ್ಯವಾಗಿಲ್ಲ. ಕೆಲವು ವಿದ್ವಾಂಸರು ಬಡತನ ಕಡಿಮೆ ಮಾಡುವ ಯಶಸ್ವಿ ಅನುಷ್ಠಾನಕ್ಕೆ ಹಿನ್ನಡೆಯಾಗಿರುವ ಅಂಶಗಳನ್ನು ಪಟ್ಟಿಮಾಡಿದ್ದಾರೆ. ಅವುಗಳೆಂದರೆ
  • ಭೂಮಿ ಮತ್ತು ಇತರ ಆಸ್ತಿಗಳ ಅಸಮಾನ ಹಂಚಿಕೆ
  • ಬಡವರಲ್ಲದವರು ಕಾರ್ಯಕ್ರಮಗಳ ಪ್ರಯೋಜನ ಪಡೆಯುತ್ತಿರುವುದು.
  • ಸಾಕಷ್ಟು ಹಣಕಾಸು ಸಂಪನ್ಮೂಲಗಳ ಕೊರತೆ
  • ಕಾರ್ಯಕ್ರಮ ಅನುಷ್ಠಾನದ ಜವಾಬ್ದಾರಿ ಹೊಂದಿರುವ ನೌಕರರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ, ಅಸಮರ್ಪಕ ತರಬೇತಿ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿರುವುದು.
  • ಸ್ಥಳೀಯ ಮಟ್ಟದ ಸಂಸ್ಥೆಗಳ ಭಾಗವಹಿಸುವಿಕೆ ಇಲ್ಲದಿರುವುದು.
  • ಬಡವರು ಸಕ್ರೀಯವಾಗಿ ಭಾಗವಹಿಸದೇ ಇರುವುದು.
  • ಬಡವರ ಭಾಗವಹಿಸುವಿಕೆ ಮತ್ತು ಉದ್ಯೋಗದ ಮೂಲಕ ಆರ್ಥಿಕ ಬೆಳವಣಿಗೆ ಪ್ರಕ್ರಿಯೆಗೆ ತಮ್ಮ ಕೊಡುಗೆಯನ್ನು ನೀಡಿದಾಗ ಮಾತ್ರ ಬಡತನವನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ.

FAQ :

ಭಾರತದಲ್ಲಿ ಬಡತನಕ್ಕೆ ಎರಡು ಕಾರಣಗಳನ್ನು ತಿಳಿಸಿ?

ನಿರುದ್ಯೋಗ, ಆರ್ಥಿಕ ಅಸಮಾನತೆಗಳು.

ಬಡತನದ ಉಪಶಮನದ ನೀತಿಗಳನ್ನು ತಿಳಿಸಿ?

ಆದಾಯ ಮತ್ತು ಉದ್ಯೋಗ ಸೃಷ್ಟಿಸುವ ಮಾರ್ಗ
ಸ್ವಯಂ ಉದ್ಯೋಗ ಕಾರ್ಯಕ್ರಮ
ಕೂಲಿ ಉದ್ಯೋಗ ಕಾರ್ಯಕ್ರಮ
ಬೆಳವಣಿಗೆ ಆಧಾರಿತ ಮಾರ್ಗ

ಇತರೆ ವಿಷಯಗಳು :

ಭೂ ಸುಧಾರಣೆಯ ಬಗ್ಗೆ ಮಾಹಿತಿ

ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯ ಪ್ರಮುಖ ಯೋಜನೆಗಳ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ