ಭಾರತದ ರೈಲ್ವೆ ಸಾರಿಗೆ ಬಗ್ಗೆ ಮಾಹಿತಿ | Information about Railway Transport in India in Kannada

ಭಾರತದ ರೈಲ್ವೆ ಸಾರಿಗೆ ಬಗ್ಗೆ ಮಾಹಿತಿ Information about Railway Transport in India Bharathada Railway Sarige bagge Mahithi in Kannada

ಭಾರತದ ರೈಲ್ವೆ ಸಾರಿಗೆ ಬಗ್ಗೆ ಮಾಹಿತಿ

Information about Railway Transport in India in Kannada
ಭಾರತದ ರೈಲ್ವೆ ಸಾರಿಗೆ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಭಾರತದ ರೈಲ್ವೆ ಸಾರಿಗೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಭಾರತದ ರೈಲ್ವೆ ಸಾರಿಗೆ :

  • ಪ್ರಪಂಚದಲ್ಲಿ ಭಾರತವು ರೇಲ್ವೆ ವ್ಯವಸ್ಥೆಯಲ್ಲಿ 4ನೇ ಸ್ಥಾನದಲ್ಲಿ ಮತ್ತು ಏಷ್ಯಾಖಂಡದಲ್ಲಿ ಮೊದಲ ಸ್ಥಾನದಲ್ಲಿದೆ.
  • ರೈಲು ಸಾರಿಗೆಯಲ್ಲಿ ಪ್ರಯಾಣಿಕರ ಆದಾಯಕ್ಕಿಂತಲೂ ಸರಕು ಸೇವೆಗಳಿಂದ ಬರುವ ಅದಾಯ ಅತಿ ಹೆಚ್ಚಾಗಿದೆ.
  • ರೈಲು ಸಾರಿಗೆಯು ತೃತೀಯ ವಲಯ ಅಥವಾ ಸೇವಾವಲಯದಲ್ಲಿ ಕಂಡುಬರುತ್ತದೆ.
  • ಪ್ರಪಂಚದಲ್ಲಿ ಪ್ರಥಮ ಬಾರಿಗೆ ರೈಲು ಸಾರಿಗೆ ಆರಂಭವಾದದ್ದು 1825ರಲ್ಲಿ ಇಂಗ್ಲೆಂಡ್‌ ದೇಶದ ಸ್ಟಾಕಟೌನ ದಿಂದ ಡಾರ್ಜಿಲಿಂಗ್ಟನ್‌ ವರೆಗೆ.
  • ಭಾರತದಲ್ಲಿ ಪ್ರಥಮಬಾರಿಗೆ ರೈಲುಸಾರಿಗೆ ಆರಂಭವಾದದ್ದು 16/4/1853ರಲ್ಲಿ ಮುಂಬೈಯಿಂದ ಠಾಣೆ, 34 ಕಿ.ಮೀ. ಸಂಚರಿಸಿತು. ಇದು ಸಿಂಧ್‌, ಸುಲ್ತಾನ್‌ ಸಾಹೇಬ ಎಂಬ ಮೂರು ವಿಶೇಷ ಭೋಗಿಗಳನ್ನುಹೊಂದಿತ್ತು.
  • ಕರ್ನಾಟಕದಲ್ಲಿ ಪ್ರಥಮ ಬಾರಿಗೆ ರೈಲು ಸಾರಿಗೆ ಆರಂಭವಾಗಿದ್ದು 1859 ರಲ್ಲಿ ಬೆಂಗಳೂರಿನಿಂದ ತಮಿಳುನಾಡಿನ ಜೋಲಾರಪೇಟೆಯ ವರೆಗೆ ಇದನ್ನು ಮಾರ್ಕ್‌ ಕಬ್ಬನ್‌ ರವರು ಆರಂಭಿಸಿದರು.
  • 1882 ರಲ್ಲಿ ದಿವಾನ್‌ ರಂಗಚಾರ್ಲುರವರು ಬೆಂಗಳೂರಿನಿಂದ ತಿಪಟೂರು ಮತ್ತು ಬೆಂಗಳೂರಿನಿಂದ ಮೈಸೂರಿನ ವರೆಗೆ ರೇಲ್ವೆ ವ್ಯವಸ್ಥೆ ಕಲ್ಪಿಸಿದರು.
  • ಪ್ರಪಂಚದ ರೇಲ್ವೆ ಸಾರಿಗೆಯ ಪಿತಾಮಹಾನೆಂದು ಚಾರ್ಜ ಸ್ಟೀಪನ್‌ ಸನ್‌ ರನ್ನು ಕರೆಯುತ್ತಾರೆ.
  • ಭಾರತದ ರೈಲು ಸಾರಿಗೆಯು ಪಿತಾಮಹಾನೆಂದು ಲಾರ್ಡ ಡಾಲ್‌ ಹೌಸಿಯವರನ್ನು ಕರೆಯುತ್ತಾರೆ.
  • ಭಾರತದಲ್ಲಿ ರೈಲು ಸಾರಿಗೆ 1951 ರಲ್ಲಿ ರಾಷ್ಟ್ರೀಕರಣಗೊಂಡಿತು.
  • 1924ರಲ್ಲಿ ಭಾರತದ ರೇಲ್ವೆ ಇಲಾಖೆಯನ್ನು ಸ್ಥಾಪಿಸಲಾಯಿತು.
  • 1944ರಲ್ಲಿ ಭಾರತ ರೇಲ್ವೆ ಮಂಡಳಿಯನ್ನು ಸ್ಥಾಪಿಸಲಾಯಿತು.
  • ಭಾರತದ ರೇಲ್ವೆ ಖಾತೆಯ ಪ್ರಥಮ ಸಚಿವ ಜಾನ್‌ ಮಥಾಯಿ
  • ಭಾರತದ ರೇಲ್ವೆ ಖಾತೆ ಮೊದಲ ಮಹಿಳಾ ಸಚಿವೆ ಮಮತಾ ಬ್ಯಾನರ್ಜಿ
  • ಅತಿ ಹೆಚ್ಚು ಬಾರಿ ರೇಲ್ವೆ ಬಜೆಟ್‌ ನ್ನು ಮಂಡಿಸಿದರು ಲಾಲೂ ಪ್ರಸಾದ್‌ ಯಾದವ್

ರೈಲು ಹಳಿಗಳ ಪ್ರಕಾರಗಳು :

  • ಮೀಟರ್‌ಗೇಜ್ ಪರಿಕಲ್ಪನೆಯನ್ನು ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ಪರಿಚಯಿಸಲಾಯಿತು.
  • ಭಾರತದಲ್ಲಿ ಅತಿ ಹೆಚ್ಚಾಗಿ ಬ್ರಾಡ್ಗೇಜ್‌ ಕಂಡು ಬರುತ್ತದೆ.
  • ಗುಡ್ಡಗಾಡು ಮತ್ತು ಬೆಟ್ಟ ಪ್ರದೇಶಗಳಲ್ಲಿ ಅತಿ ಹೆಚ್ಚು ನ್ಯಾರೋಗೇಜ್‌ ಮತ್ತು ಲೈಟ್ಗೇಜಗಳನ್ನು ಬಳಸುತ್ತಾರೆ.
  • ಭಾರತ ದೇಶದಲ್ಲಿ ಅತಿ ಹೆಚ್ಚು ಗಂಗಾ ನದಿಯ ಬಯಲು ಪ್ರದೇಶದಲ್ಲಿ ರೇಲ್ವೆ ವ್ಯವಸ್ಥೆ ಹಂಚಿಕೆಯಾಗಿದೆ.

ಕೊಂಕಣ ರೇಲ್ವೆ :

  • ಸ್ಥಾಪನೆ 1998, ಕೇಂದ್ರ ಕಛೇರಿ – ಮುಂಬೈ
  • ಇದು ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ಮೂರು ರಾಜ್ಯಗಳನ್ನು ಸಂಪರ್ಕಿಸುವ ರೇಲ್ವೆ ವ್ಯವಸ್ಥೆಯಾಗಿದೆ.
  • ಇದು 741ಕಿ.ಮೀ.ಉದ್ದವನ್ನು ಹೊಂದಿದೆ.
  • ಇದು ಭಾರತದ 3 ಪ್ರಮುಖ ಬಂದರುಗಳಾದ ಮುಂಬೈ, ಮರ್ಮಗೋವಾ, ನವಮಂಗಳೂರು ಬಂದರುಗಳನ್ನು ಸಂಪರ್ಕಿಸುತ್ತದೆ.

ಮೆಟ್ರೋ ರೈಲು :

  • ಇದು ಜಪಾನ್‌ ದೇಶದ ಪರಿಕಲ್ಪನೆಯಾಗಿದೆ. ಇದು ಭಾರತದಲ್ಲಿ ಪ್ರಥಮ ಬಾರಿಗೆ 1984 ಅಕ್ಟೋಬರ್‌ 24 ರಂದು ಕೋಲ್ಕತ್ತಾ ನಗರದಲ್ಲಿ ಪ್ರಾರಂಭಿಸಲಾಯಿತು, ನಂತರ ಚೆನೈ. ನವದೆಹಲಿ, ಬೆಂಗಳೂರು, ಮುಂಬೈ ನಗರಗಳಲ್ಲಿ ಆರಂಭಿಸಲಾಯಿತು.
  • ಬಾರತದ ಮೆಟ್ರೋ ಮ್ಯಾನ್‌ – ಇ ಶ್ರೀಧರನ್‌
  • ಬೆಂಗಳೂರಿನಲ್ಲಿ 20/10/2011ರಲ್ಲಿ ಎಮ್.ಜಿ.ರಸ್ತೆಯಿಂದ ಬೈಯಪ್ಪನ ಹಳ್ಳಿಯವೆರೆಗೆ 6.7 ಕಿ.ಮೀ.ವರೆಗೆ ಮೊದಲ ಬಾರಿಗೆ ಸಂಚರಿಸಿತು.
  • ಭಾರತದ ಅತಿ ದೊಡ್ಡ ಮೆಟ್ರೋ ರೈಲು ವ್ಯವಸ್ಥೆ ಹೊಂದಿರುವ ರಾಜ್ಯ ದೆಹಲಿ

ಮೊನೋ ರೈಲು :

ಇದು ಜರ್ಮನ್‌ ದೇಶದ ಪರಿಕಲ್ಪನೆಯಾಗಿದೆ. 1/2/2014ರಲ್ಲಿ ಮುಂಬೈ ಸಮೀಪದ ಕುರ್ಲಾದಿಂದ ಚಂಬಾವರೆಗೆ ಸಂಚರಿಸಿತು. ಇದರ ವಿಶೇಷತೆ ಎಂದರೆ ಇದು ಒಂದೇಹಳಿಯ ಮೇಲೆ ಚಲಿಸುವ ರೇಲ್ವೆ ವ್ಯವಸ್ಥೆಯಾಗಿದೆ.

ವಿಶೇಷ ಅಂಶಗಳು :

  • ಪ್ರಪಂಚದ ಅತ್ಯಂತ ಉದ್ದವಾದ ರೇಲ್ವೆ ಮಾರ್ಗವೆಂದರೆ ಚೀನಾ ಸ್ಪೇನ್‌ ರೇಲ್ವೆ ಮಾರ್ಗ. ಇದು ಏಷ್ಯಾ ಮತ್ತು ಯೂರೋಪ್‌ ಖಂಡದ 8 ದೇಶಗಳಾದ ಚೀನಾ, ರಷ್ಯಾ, ಬೆಲಾರಸ, ಕಜಕಿಸ್ತಾನ, ಪೊಲ್ಯಾಂಡ್‌ ಜರ್ಮನಿ, ಫ್ರಾನ್ಸ್‌, ಸ್ಪೇನ್‌ ಗಳನ್ನು ಸಂಪರ್ಕಿಸುತ್ತದೆ. ಇದು 40 ಬೋಗಿಗಳನ್ನು ಹೊಂದಿದೆ.
  • ರಾಷ್ಟ್ರೀಯ ರೈಲು ಯೋಜನೆ 2030. 2022ರಲ್ಲಿ ಕಾರ್ಯ ಅರಂಭ ಮಾಡಲಾಗಿದೆ. ಇದು ಮೇಕ ಇನ್‌ ಇಂಡಿಯಾ ಭಾಗವಾಗಿ ರೈಲು ಸರಕು ಸಾಗಾಣಿಕೆ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಜಾರಿಗೆ ತರಲಾಗಿದೆ.
  • ಭಾರತದ ಅತ್ಯಂತ ಉದ್ದವಾದ ರೇಲ್ವೆ ಮಾರ್ಗವೆಂದರೆ ಜಮ್ಮು ಕಾಶ್ಮೀರದ ಜಮ್ಮು ತಾವೆ ದಿಂದ ತಮಿಳುನಾಡಿನ ಕನ್ಯಾಕುಮಾರಿವರೆಗೆ.
  • ಇಲ್ಲಿ ಸಂಚರಿಸುವ ರೈಲು ಹಿಮಗಿರಿ/ಹಿಮಸಾಗರ ಎಕ್ಸಪ್ರೆಸ್ ವು ಭಾರತದಲ್ಲಿ ಅತಿ ಹೆಚ್ಚು ರಾಜ್ಯಗಳನ್ನು ಸಂಪರ್ಕಿಸುತ್ತದೆ.
  • ಭಾರತದಲ್ಲಿ ಅತ್ಯಂತ ಉದ್ದವಾಗಿ ಚಲಿಸುವ ರೈಲು ಎಂದರೆ ವಿವೇಕ ಎಕ್ಸಪ್ರೆಸ್.‌ ಅಸ್ಸಾಂ ದಿಬ್ರೂ ದಿಂದ ತಮಿಳುನಾಡಿನ ಕನ್ಯಾಕುಮಾರಿ
  • ಪ್ರಪಂಚದ ಮತ್ತು ಭಾರತದ ಅತಿ ಉದ್ದವಾದ ರೈಲ್ವೆ ಫ್ಲಾಟಫಾರ್ಮ್‌ ಶ್ರೀ ಸಿದ್ದಾರೂಢಸ್ವಾಮಿ ನೈರುತ್ಯ ರೇಲ್ವೆ ವಲಯ, ಹುಬ್ಬಳ್ಳಿ
  • ಮಹಾರಾಷ್ಟ್ರದ ಕಾರ್ಬುಡೆ ಸುರಂಗಮಾರ್ಗ ಭಾರತದ ಅತಿ ಉದ್ದವಾದ ರೇಲ್ವೆ ಸುರಂಗ ಮಾರ್ಗವಾಗಿದೆ.
  • ಭಾರತದ ಅತಿ ಉದ್ದವಾದ ರೇಲ್ವೆ ಸೇತುವೆ – ಚೀನಾಬ್‌
  • ಭಾರತದಲ್ಲಿ ಸ್ಥಾಪನೆಯಾದ ಮೊದಲ ರೇಲ್ವೆ ನಿಲ್ದಾಣ – ಮಹಾರಾಷ್ಟ್ರದ ಬೋರಿಬಂದರ
  • ಸ್ವಾಮಿ ವಿವೇಕಾನಂದ 150ನೇ ಜನ್ಮ ಸ್ಮರಣಾರ್ಥವಾಗಿ 2013ರಲ್ಲಿ ಆರಂಭಿಸಿದ ರೇಲ್ವೆ ವಿವೇಕ ಎಕ್ಸ್‌ ಪ್ರೆಸ್‌ ಇದು ಅಸ್ಸಾಂನ ದಿಬ್ರೂದಿಂದ ತಮಿಳುನಾಡಿನ ಕನ್ಯಾಕುಮಾರಿವರೆಗೆ ಚಲಿಸುತ್ತವೆ.
  • ರವೀಂದ್ರನಾಥ ಟ್ಯಾಗೋರವರ 150ನೇ ಜನ್ಮ ಸ್ನರಣಾರ್ಥವಾಗಿ 2010ರಲ್ಲಿ ಆರಂಭಿಸಿದ ರೈಲು ಸಂಸ್ಕೃತಿ ಎಕ್ಸಪ್ರೆಸ್‌ ಭಾರತ ಬಾಂಗ್ಲಾದೇಶದವರೆಗೆ ಸಂಚರಿಸುತ್ತದೆ.
  • ರೇಲ್ವೆ ಎಂಜಿನಗಳನ್ನು ತಯಾರಿಸುವ ಸ್ಥಳ ಪಶ್ಚಿಮ ಬಂಗಾಳದ ಚಿತ್ತರಂಜನ್

‌FAQ :

ರೇಲ್ವೆ ಎಂಜಿನಗಳನ್ನು ತಯಾರಿಸುವ ಸ್ಥಳ ಎಲ್ಲಿದೆ?

ಪಶ್ಚಿಮ ಬಂಗಾಳದ ಚಿತ್ತರಂಜನ್

ಭಾರತದ ರೇಲ್ವೆ ಖಾತೆಯ ಪ್ರಥಮ ಸಚಿವ ಯಾರು?

ಜಾನ್‌ ಮಥಾಯಿ

ಇತರೆ ವಿಷಯಗಳು :

ಛತ್ರಪತಿ ಶಿವಾಜಿಯ ಬಗ್ಗೆ ಮಾಹಿತಿ

ಸಮಾಜೀಕರಣದ ಬಗ್ಗೆ ಮಾಹಿತಿ

Leave your vote

-3 Points
Upvote Downvote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ