ಕ್ರಾಂತಿಕಾರರ ಬಗ್ಗೆ ಮಾಹಿತಿ | Information about revolutionaries in Kannada

ಕ್ರಾಂತಿಕಾರರ ಬಗ್ಗೆ ಮಾಹಿತಿ Information about revolutionaries Kranthikarara bagge Mahithi in Kannada

ಕ್ರಾಂತಿಕಾರರ ಬಗ್ಗೆ ಮಾಹಿತಿ

Information about revolutionaries in Kannada
ಕ್ರಾಂತಿಕಾರರ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಕ್ರಾಂತಿಕಾರರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಕ್ರಾಂತಿಕಾರರ ಚಟುವಟಿಕೆಗಳು :

  • 1890ರ ದಶಕದಲ್ಲಿ ಭಾರತವು ತೀವ್ರ ಬರಗಾಲ ಮತ್ತು ಫ್ಲೇಗ್‌ ರೋಗಕ್ಕೆ ತುತ್ತಾಗಿತ್ತು. ಫ್ಲೇಗ್‌ ಸಂತ್ರಸ್ತರಿಗೆ ನೆರವನ್ನು ನೀಡಲು ಬ್ರಿಟೀಷ್‌ ಸರ್ಕಾರ ನೇಮಿಸಿದ ಆಯೋಗ – “ರ್ಯಾಂಡ್‌ ಅಂಡ್‌ ಐಯರೆಸ್ಟ್”‌ 1987ರಲ್ಲಿ ಚಾಪೇಕರ್‌ ಸಹೋದರರು ರ್ಯಾಂಡ್‌ ಮತ್ತು ಐಯರೆಸ್ಟ್‌ ಹತ್ಯೆ ಮಾಡಿದರು. ಇದು ಭಾರತದ ಮೊದಲ ರಾಜಕೀಯ ಹತ್ಯೆ.
  • 1905ರಲ್ಲಿ ಲಾರ್ಡ್‌ ಕರ್ಜನ್‌ ಬಂಗಾಳವನ್ನು ವಿಭಜಿಸಿದನು. ಬಂಗಾಳ ವಿಭಜನೆಯ ಪ್ರಮುಖ ಪರಿಣಾಮ – ಸ್ವದೇಶಿ ಮತ್ತು ಬಹಿಷ್ಕಾರ ಚಳುವಳಿ. ಈ ಚಳುವಳಿಯ ಸಮಯದಲ್ಲಿ ಕ್ರಾಂತಿಕಾರಿ ಚಟುವಟಿಕೆಗಳು ವ್ಯಾಪಕಗೊಂಡವು.
  • 1909ರಲ್ಲಿ ನಾಗರೀಕ ಸೇವಾ ಅಧಿಕಾರಿ ಕರ್ಜನ್‌ ವೈಲಿಯನ್ನು ಮದನಲಾಲ್‌ ದಿಂಗ್ರಾ ಎಂಬ ಕ್ರಾಂತಿಕಾರಿ ಹತ್ಯೆಗೈಯ್ದನು. ಕರ್ಜನ್‌ ವೈಲಿ ಹತ್ಯೆಗೆ ಸಂಬಂಧಿಸಿದಂತೆ ಆಗಸ್ಟ್‌ 17, 1909 ರಂದು ಮದನಲಾಲ ದಿಂಗ್ರಾರನ್ನು ಲಂಡನನಲ್ಲಿ ಗಲ್ಲಿಗೇರಿಸಲಾಯಿತು.
  • 1924ರಲ್ಲಿ ಕಲ್ಕತ್ತಾದ ಪೊಲೀಸ್‌ ಕಮಿಷನರ್‌ ಚಾರ್ಲ್ಸ್‌ ಥೆಗಾಟರನ್ನು ಹತ್ಯಗೈಯಲು ವಿಫಲ ಯತ್ನ ನಡೆಸಿದರು. ಅರ್ನೆಸ್ಟ್‌ ಡೇ ರವರು ಈ ಪ್ರಯತ್ನದಲ್ಲಿ ಹತ್ಯೆಗೊಳಗಾದಾಗ ಗೋಪಿನಾಥ್‌ ಸಹಾ ಅವರನ್ನು ಬ್ರಿಟೀಷ್‌ ಸರ್ಕಾರ ಗಲ್ಲಿಗೇರಿಸಿತು. ಇದಕ್ಕೆ ಸಂಬಂಧಿಸಿದಂತೆ ಸುಭಾಸ್‌ ಚಂದ್ರ ಬೋಸ್‌ ರವರನ್ನು ಬ್ರಿಟೀಷ್‌ ಸರ್ಕಾರ ಬಂಧಿಸಿತು.

ಕ್ರಾಂತಿಕಾರಿಗಳು ನಡೆಸಿದ ಪ್ರಮುಖ ಪಿತೂರಿಗಳು :

ಆಲಿಪುರ್‌ ಬಾಂಬ್‌ ಪ್ರಕರಣ 1908 :

  • 1908ರಲ್ಲಿ ಮುಜಾಫರ್‌ ಪುರ್‌ ಜಿಲ್ಲೆಯ ನ್ಯಾಯಾಧೀಶ “ಡೌಗ್ಲೌಸ್‌ ಕಿಂಗ್ಸ್ ಫರ್ಡ್‌” ನನ್ನು ಹತ್ಯೆಗೈಯಲು ಖುದಿರಾಮ್ ಬೋಸ್‌ ಮತ್ತು ಪ್ರಪುಲ್ಲ ಚಂದ್ರ ಚಾಕಿ ಯತ್ನಿಸಿದಾಗ ಘಟನೆಯಲ್ಲಿ ಕಿಂಗ್ಸ್‌ ಫರ್ಡ್‌ ಬದುಕುಳಿದರು ಇಬ್ಬರು ಬ್ರಿಟೀಷ್‌ ಮಹಿಳೆಯರಾದ ಕೆನಡಿ ಮತ್ತು ಪ್ರಿನ್ಲೆ ಕೆನಡಿ ಹತ್ಯೆಯಾದರು.
  • ಆಲಿಪುರ್‌ ಬಾಂಬ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟೀಷರು ಅರವಿಂದೋ ಘೋಷ್‌ ಮತ್ತು ಬರೀಂದ್ರ‌ ಕುಮಾರ್ ಘೋಷ್‌ ರನ್ನು ಬಂಧಿಸಿ ಅಂಡಮಾನ್‌ ನಿಕೋಬಾರ್‌ ದ್ವೀಪದ ಕಾಲಾಪಾನಿ ಜೈಲಿಗೆ ಗಡಿಪಾರು ಮಾಡಿದರು.
  • ಆಲಿಪುರ್‌ ಬಾಂಬ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದೋ ಘೋಷ್‌ರವರ ಪರವಾಗಿ ವಾದಿಸಿದವರು – ಚಿತ್ತರಂಜನ್‌ ದಾಸ್‌
  • ಮಂಡೇಲಾ ಜೈಲಿನಲ್ಲಿ ತಿಲಕರು ಬರೆದ ಪುಸ್ತಕ – ಗೀತಾ ರಹಸ್ಯ
  • ಈ ಪ್ರಕರಣದಲ್ಲಿ ಖುದಿರಾಮ್‌ ಬೋಸ್‌ ರನ್ನು ಬ್ರಿಟೀಷ್‌ ಸರ್ಕಾರ ಗಲ್ಲಿಗೇರಿಸಿತು.ಬ್ರಿಟೀಷ್‌ ಸರ್ಕಾರದಿಂದ ಗಲ್ಲಿಗೇರಿಸಲ್ಪಟ್ಟ ಯುವ ಕ್ರಾಂತಿಕಾರಿಗಳಲ್ಲಿ ಒಬ್ಬರು.
  • ಪ್ರಫುಲ್ಲ ಚಾಕಿ ತನ್ನನ್ನು ತಾನು ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡನು.
  • ಬ್ರಿಟೀಷರಿಗೆ ಸಂಚನ್ನು ಬಯಲುಗೊಳಿಸಿದ “ನರೇಂದ್ರ ಗೋಸ್ವಾಮಿ”ಯವರನ್ನು ಕನ್ನಯಲಾಲ್‌ದತ್‌ ಮತ್ತು ಸತ್ಯೇಂದ್ರನಾಥ್‌ ಕೊಂದರು.

ನಾಸಿಕ್‌ ಪಿತೂರಿ – 1909 :

  • ಕ್ರಾಂತಿಕಾರಿ ಗುಪ್ತಚರ ಸಂಘಟನೆಗಳಾದ ʼಅಭಿನವ ಭಾರತ ಮತ್ತು ಮಿತ್ರಮೇಳʼ ಗಳನ್ನು ಸಾರ್ವಕರ್‌ ಸಹೋದರರು ಸ್ಥಾಪಿಸಿದರು.
  • ಅಭಿನವ ಭಾರತ ಸೊಸೈಟಿಯ ಚಟುವಟಿಕೆಗಳು ನಾಸಿಕನಲ್ಲಿ ವ್ಯಾಪಕಗೊಂಡವು.
  • 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಪುಸ್ತಕ ಪ್ರಕಟಿಸಿದಕ್ಕೆ ಯಾವುದ್ಯಾವುದೋ ನೆಪಗಳನ್ನು ನೀಡಿ ಜಾಕ್ಸನ್‌ ಸಾರ್ವಕರ್‌ ರವರನ್ನು ಕಾಲಾಪಾನಿ ಜೈಲಿಗೆ ಗಡಿಪಾರು ಮಾಡಿದರು.
  • ಅಭಿನವ ಭಾರತ ಸೊಸೈಟಿಯ ಸದಸ್ಯನಾದ ಅನಂತ ಲಕ್ಷ್ಮಣ ಕರ್ಕೆರೆ ಯವರು ನಾಸಿಕನ ಜಿಲ್ಲಾಧಿಕಾರಿ ಜಾಕ್ಸನ್‌ರವರು ವರ್ಗಾವಣೆಯ ಗೌರವಕ್ಕೆ ನಾಟಕ ನಡೆಸುತ್ತಿದ್ದ ಸಂದರ್ಭದಲ್ಲಿ ಎಎಂಟಿ ಜಾಕ್ಸನ್‌ ರನ್ನು ಹತ್ಯೆಗೈದನು.
  • ಅಭಿನವ ಭಾರತ ಸೊಸೈಟಿಯ 27 ಸದಸ್ಯರನ್ನು ಬ್ರಿಟೀಷ್‌ ಸರ್ಕಾರ ಬಂಧಿಸಿ ವಿಚಾರಣೆಗೊಳಪಡಿಸಿತು.

ಹೌರಾ ಮತ್ತು ಸಿಬ್‌ಪುರ್‌ ಪಿತೂರಿ – 1910 :

  • ಸಂಶುಲ್‌ ಆಲಂ ಎಂಬ ಬ್ರಿಟೀಷ್‌ ಪೊಲೀಸ್‌ ನಿರೀಕ್ಷಕ ʼಆಲಿಪುರ್‌ ಬಾಂಬ್‌ ಪ್ರಕರಣʼ ದ ಪ್ರಮುಖ ರೂವಾರಿ – ನರೇನ್‌ ಗೋಸೈನರ ಹತ್ಯೆಯ ತನಿಖೆಯನ್ನು ನಡೆಸಿದರು.
  • ಬಂಗಾಳದ ಅನುಶೀಲನಾ ಸಮಿತಿಗೆ ಸೇರಿದ 47 ಮಂದಿ ಸದಸ್ಯರನ್ನು ಪೊಲೀಸ್‌ ನಿರೀಕ್ಷಕ ʼಸಂಶುಲ್‌ ಆಲಂʼ ಹತ್ಯೆಗೆ ಸಂಬಂಧಿಸಿದಂತೆ ಬಂಧಿಸಿತು.
  • ಒಟ್ಟು 47 ಸದಸ್ಯರಲ್ಲಿ 33 ಸದಸ್ಯರನ್ನು ಬ್ರಿಟೀಷ್‌ ಸರ್ಕಾರ ಬಿಡುಗಡೆ ಮಾಡಿತು.
  • ಜತಿನ್‌ ಮುಖರ್ಜಿ ಮತ್ತು ನರೇಂದ್ರ ಭಟ್ಟಾಚಾರ್ಯಜೀ ಯವರಿಗೆ ಒಂದು ವರ್ಷದ ಜೈಲುವಾಸವನ್ನು ವಿಧಿಸಿತು.

ದೆಹಲಿ ಪಿತೂರಿ – 1912 :

  • 1905 ಅಕ್ಟೋಬರ್‌ 16 ರಂದು ಲಾರ್ಡ್‌ ಕರ್ಜನ್‌ ಹಿಂದೂ ಮುಸ್ಲಿಂರ ಏಕತೆಯನ್ನು ಬೇರ್ಪಡಿಸಲು ಬಂಗಾಳವನ್ನು ವಿಭಜಿಸಿದನು.
  • 1911 ರಲ್ಲಿ ಲಾರ್ಡ್‌ ಹಾರ್ಡಿಂಜ್‌ – 2 ಬಂಗಾಳದ ವಿಭಜನೆಯನ್ನು ರದ್ದುಪಡಿಸಿ, ರಾಜಧಾನಿಯನ್ನು ಕಲ್ಕತ್ತಾದಿಂದ ದೆಹಲಿಗೆ ವರ್ಗಾಯಿಸಿದನು.
  • ಲಾರ್ಡ್‌ ಹಾರ್ಡಿಂಜ್‌ -2 ದೆಹಲಿಯ ಚಾಂದಿನಿ ಚೌಕ ಪ್ರವೇಶಿಸುವಾಗ ರಾಸ್‌ ಬಿಹಾರಿ ಬೋಸ್‌ ಮತ್ತು ಸಚಿನ್‌ ಸನ್ಯಾಲರವರು ಹತ್ಯೆಗೈಯಲು ಯತ್ನಿಸಿದರು, ವಿಫಲವಾಯಿತು.
  • ಬ್ರಿಟೀಷ್‌ ಸರ್ಕಾರ ರಾಸ್‌ ಬಿಹಾರಿ ಬೋಸ್‌ ಮತ್ತು ಸಚಿನ್‌ ಸನ್ಯಾಲ್‌ ರನ್ನು ಬಂಧಿಸಿದರು.
  • ದೆಹಲಿ ಪಿತೂರಿಗೆ ಸಂಬಂಧಿಸಿದಂತೆ ಅಮಿರ ಚಂದ್‌, ಅವಧ್‌ ಬಿಹಾರಿ, ಬಸಂತ್‌ ಕುಮಾರ್‌ ಬಿಸ್ವಾಸರನ್ನು ಬ್ರಿಟೀಷರು ಬಂಧಿಸಿದರು.

ಕಾಮಘಟ ಮಾರು ದುರಂತ – 1914 :

  • ಕಾಮಘಟ ಮಾರು ಎಂಬುದು – ಜಪಾನಿನ ನೌಕೆ ಇದರ ಮುಖ್ಯಸ್ಥ – ಗುರ್ದಿತ್‌ ಸಿಂಗ್‌
  • 376 ಭಾರತೀಯ ವಲಸೆಗಾರರು ಸಿಂಗಾಪುರದಿಂದ ಕೆನಡಾದ ವ್ಯಾಂಕೋವರ್‌ ಗೆ ಹೊರಟಿದ್ದರು. ಆದರೆ ಕೆನಡಾ ಸರ್ಕಾರ ನೌಕೆಯನ್ನು ಕೆನಡಾ ಪ್ರವೇಶಿಸಲು ಅನುಮತಿ ನೀಡುವುದಿಲ್ಲ.
  • ಇದರಿಂದ ಸಿಟ್ಟಿಗೆದ್ದ ಕೆನಡಾದಲ್ಲಿದ್ದ ಭಾರತೀಯ ಕ್ರಾಂತಿಕಾರಿ ʼಮೇವಾಸಿಂಗ್‌ʼ ಅಲ್ಲಿನ ಅಧಿಕಾರಿ ʼ ಹಾಪಕಿನ್ಸ್‌ʼ ನನ್ನು ಕೊಂದನು.
  • ಅಲ್ಲಿಂದ ಹಿಂದುರಿಗಿದ ನೌಕೆಯ ಕಲ್ಕತ್ತಾದ ಬಡ್ಜ್‌ ಬಡ್ಜ್‌ ಬಂದವರಿಗೆ ಬಂದಾಗ ಅಧಿಕೃತ ಪರವಾನಗಿ ಇಲ್ಲವೆಂದು ಶೋಧನೆಗೆ ಒಳಪಡಿಸಿದಾಗ ಬ್ರಿಟೀಷರು ಮತ್ತು ರಾಷ್ಟ್ರೀಯವಾದಿಗಳ ನಡುವೆ ಗಲಭೆಗಳುಂಟಾಗಿ 22 ಜನ ರಾಷ್ಟ್ರೀಯವಾದಿಗಳು ಸಾವನ್ನಪ್ಪಿದರು.
  • ಹಲವರನ್ನು ಪಂಜಾಬ್‌ ಗೆ ಕಳುಹಿಸಿ ಉಗ್ರ ಶಿಕ್ಷೆಯನ್ನು ನೀಡಲಾಯಿತು.
  • ಕಾಮಘಟ ಮಾರು ದುರಂತದಲ್ಲಿ ಭಾಗವಹಿಸಿದ ಪ್ರಮುಖ ನಾಯಕರು – ಗದ್ದರ್‌ ಪಕ್ಷದ ಸೋಹನಸಿಂಗ್‌ ಭಕ್ನ, ಮಾಸ್ಟರ್‌ ತಾರಾಸಿಂಗ್‌, ಕರ್ತಾರ್‌ ಸಿಂಗ್ ಜಬ್ಬರ್‌, ಬರ್ಕತುಲ್ಲಾ ಮತ್ತು ತಾಯಿ ಪರಮಾನಂದ.

ಪೇಷಾವರ ಪಿತೂರಿ 1922-1927 :

  • 1917 ರ ರಷ್ಯಾ ಕ್ರಾಂತಿಯಿಂದ ಪ್ರೇರಿತವಾದ ಭಾರತೀಯ ಕ್ರಾಂತಿಕಾರರು ಕಮ್ಯುನಿಸ್ಟ್‌ ತರಬೇತಿ ಪಡೆಯಲು ರಷ್ಯಾ ಮಾಸ್ಕೋಗೆ ಪೇಷಾವರದ ಕ್ರಾಂತಿಕಾರಿ ಸಂಘಟನೆಯಾದ ʼಮುಜಾಹಿರ್‌ʼಗಳು ತೆರಳಿದರು.
  • ಕಮ್ಯುನಿಸ್ಟ್‌ ತರಬೇತಿ ಪಡೆದು ಭಾರತಕ್ಕೆ ಬಂದು ಬ್ರಿಟೀಷ್‌ ಸರ್ಕಾರಕ್ಕೆ ತೊಂದರೆಯನ್ನುಂಟು ಮಾಡಿದರು.
  • ಬ್ರಿಟೀಷ್‌ ಸರ್ಕಾರ ರಾಷ್ಟ್ರೀಯವಾದಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದರು. ಇದನ್ನು ʼಪೇಷಾವರ ಪಿತೂರಿʼ ಎನ್ನುವರು.
  • ಪೇಷಾವರ ಪಿತೂರಿಯು 1924ರ ಕಾನ್ಪುರ ಬೋಲ್ಷೆವಿಕ್‌ ಪಿತೂರಿಗೆ ಕಾರಣವಾಯಿತು.

ಕಾಕೋರಿ ಪಿತೂರಿ – 1924 :

  • ಕಾಕೋರಿ ಪಿತೂರಿ ಎಂಬುದು ರೈಲು ಡಕಾಯ್ತಿ ಪ್ರಕರಣವಾಗಿದೆ.
  • ಶಹಾರಾನಪುರ ಮತ್ತು ಲಕ್ನೋ ನಡುವಿನ ಸ್ಥಳವೇ ಕಾಕೋರಿ.
  • ಹಿಂದೂಸ್ತಾನ್‌ ರಿಪಬ್ಲಿಕನ್‌ ಆರ್ಮಿ – 1924ರಲ್ಲಿ ಕಾನ್ಪುರದಲ್ಲಿ ಸ್ಥಾಪನೆಯಾಯಿತು.
  • ಕಾಕೋರಿ ಪಿತೂರಿಯಲ್ಲಿ ತೊಡಗಿದ್ದವರು – ಹಿಂದೂಸ್ತಾನ್‌ ರಿಪಬ್ಲಿಕನ್‌ ಸೈನ್ಯ
  • HRA ಸದಸ್ಯರು ಸರ್ಕಾರಿ ಖಜಾನೆಯನ್ನು ದೋಚಿದರು.
  • ಕಾಕೋರಿ ಪಿತೂರಿಯ ಪ್ರಮುಖ ಕ್ರಾಂತಿಕಾರರು ರಾಮ್‌ ಪ್ರಸಾದ್‌ ಬಿಸ್ಮಿಲ್ಲಾ, ಅಶ್ಪಕುಲ್ಲಾ ಖಾನ್‌, ರಾಜೇಂದ್ರ ಲಾಹಿರಿ ಮತ್ತು ರೋಷನಲಾಲ್.‌

ಮೀರತ್‌ ಪಿತೂರಿ – 1929 :

  • ಕಮ್ಯುನಿಸ್ಟ್‌ ಚಿಂತನೆಗಳಿಂದ ಪ್ರೇರಿತರಾಗಿ ಭಾರತೀಯ ಮತ್ತು ಯುರೋಪಿನ ಕಾರ್ಮಿಕ ಮುಖಂಡರು ಟ್ರೇಡ್‌ ಯೂನಿಯನ್‌ ಚಳುವಳಿಯಲ್ಲಿ ಭಾಗವಹಿಸಿದರು.
  • ಟ್ರೇಡ್‌ ಯೂನಿಯನ್‌ ಚಳುವಳಿಯಲ್ಲಿ ಭಾಗವಹಿಸಿದ ಬ್ರಿಟೀಷರು – ಬೆಂಜಮಿನ್‌ ಬ್ಲಾಡ್ಲೆ, ಫಿಲಿಪ್‌ ಸ್ಟ್ರಾಟ್‌, ಎಸ್.ಎಸ್.ಜೋಶ್‌, ಹೆಚ್.ಎಲ್.ಹಚಿಸನ್.‌
  • ಟ್ರೇಡ್‌ ಯೂನಿಯನ್‌ ಚಳುವಳಿಯಲ್ಲಿ ಭಾಗವಹಿಸಿದ ಭಾರತೀಯರು – ಪಿ.ಸಿ.ಜೋಶಿ, ಎಸ್.ವಿ.ಘಾಟೆ, ಮುಜಾಫರ್‌ ಅಹ್ಮದ್‌, ಎಸ್.ಎ.ಡಾಂಗೆ, ಗೋಪಾಲ್‌ ಬಾಸಕ್.‌
  • ಬ್ರಿಟೀಷ್‌ ಸರ್ಕಾರ ಈ ನಾಯಕರನ್ನು ಬಂಧಿಸಿ ವಿಚಾರಣೆಗೆ ಒಳಡಿಸಿತು. ಇದು ಐತಿಹಾಸಿಕವಾಗಿ ಮೀರತ್‌ ಪಿತೂರಿ ಎಂದು ಪ್ರಸಿದ್ದಿ.

ಲಾಹೋರ್‌ ಪಿತೂರಿ – 1929 :

  • 1927ರಲ್ಲಿ ಸೈಮನ್‌ ಆಯೋಗ ಭಾರತದ ಮುಂಬೈಗೆ ಭೇಟಿ ನೀಡಿದಾಗ ಭಾರತೀಯರು ಬಹಿಷ್ಕರಿಸಿದರು.
  • ಸೈಮನ್‌ ಆಯೋಗದ ವಿರುದ್ದ ಪ್ರತಿಭಟಿಸುತ್ತಿದ್ದಾಗ ಲಾಲಾ ಲಜಪತರಾಯ್‌ ಗಾಯಗೊಂಡು 1928 ನವೆಂಬರ್‌ 17ರಂದು ನಿಧನರಾದರು.
  • ಲಾಲಾ ಲಜಪತರಾಯವರ ಖಾಸಗೀ ವೈದ್ಯ – ಎನ್.ಎಸ್.ಹರ್ಢೆಕರ್‌
  • ಲಾಲಾ ಲಜಪತರಾಯರ ಸಾವಿಗೆ ಕಾರಣವಾದ ಸ್ಯಾಂಡರ್ಸ್‌ ನನ್ನು ಭಗತ್‌ ಸಿಂಗ್‌, ರಾಜ್‌ ಗುರು ಮತ್ತು ಸುಖದೇವ ಹತ್ಯೆಗೈದರು. ಇದು ಲಾಹೋರ್‌ ಪಿತೂರಿ ಎಂದು ಪ್ರಸಿದ್ದಿ.
  • ಭಗತ್‌ ಸಿಂಗ್‌, ರಾಜಗುರು ಮತ್ತು ಸುಖದೇವರನ್ನು 1931, ಮಾರ್ಚ್‌ 23 ರಂದು ಲಾಹೋರಿನ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.
  • ಲಾಹೋರ್‌ ಪಿತೂರಿಗೆ ಸಂಬಂಧಿಸಿದಂತೆ ʼಜತಿನ್‌ ದಾಸ್ʼ ಲಾಹೋರ್‌ ನ ಬೋಸ್ಟಲದ ನಲ್ಲಿ 64 ದಿನಗಳ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡು ನಿಧನನಾದನು.

ಚಿತ್ತಗಾಂಗ್‌ ಶಸ್ತ್ರಾಗಾರಗಳ ಮೇಲಿನ ದಾಳಿ – 1930 ಏಪ್ರಿಲ್‌ 18 :

  • ನಾಗರೀಕ ಕಾನೂನು ಭಂಗ ಚಳುವಳಿಯ ಸಂದರ್ಭದಲ್ಲಿ ನಡೆದ ಪ್ರಮುಖ ಘಟನೆ.
  • ಚಿತ್ತಗಾಂಗ್‌ ಶಸ್ತ್ರಾಗಾರಗಳ ಮೇಲಿನ ದಾಳಿಯು ಪ್ರಮುಖ ಉದ್ದೇಶ – ಚಿತ್ತಗಾಂಗನ 2 ಶಸ್ತ್ರಾಗಾರಗಳನ್ನು ವಶಪಡಿಸಿಕೊಳ್ಳುವುದು.
  • ಬ್ರಿಟೀಷ್‌ ಸರ್ಕಾರ 65 ಕ್ರಾಂತಿಕಾರರನ್ನು ಗಲ್ಲಿಗೇರಿಸತು. 12 ಜನ ಕ್ರಾಂತಿಕಾರರನ್ನು ಜೀವನ ಪರ್ಯಂತ ಗಡಿಪಾರು ಮಾಡಿತು.
  • 1934 ಜನವರಿ 12 ರಂದು ಸೂರ್ಯಸೇನ್ ರನ್ನು ಬ್ರಿಟೀಷ್‌ ಸರ್ಕಾರ ಗಲ್ಲಗೇರಿಸಿತು.

ಕ್ರಾಂತಿಕಾರಕ ಉದ್ದೇಶಗಳು :

  • ಬ್ರಿಟೀಷರ ದುರಾಡಳಿತದ ಬಗ್ಗೆ ಪತ್ರಿಕೆ ಮತ್ತು ಪುಸ್ತಕಗಳಲ್ಲಿ ಬರೆಯುವುದು.
  • ಸರ್ಕಾರಿ ಕಛೇರಿ ಮತ್ತು ಕಟ್ಟಡಗಳ ಮೇಲೆ ದಾಳಿ ಮಾಡಿ ಬೆಂಕಿ ಇಡುವುದು.
  • ಅಂಚೆ, ತಂತಿ, ರೈಲ್ವೆ ಸಂಪರ್ಕ ಕಡಿದು ಹಾಕುವುದು.
  • ದೇಶದಲ್ಲಿ ಮತ್ತು ಹೊರಗೆ ಕ್ರಾಂತಿಕಾರಿ ಸಂಘಟನೆಗಳನ್ನು ಸ್ಥಾಪಿಸುವುದು.
  • ಬಾಣಬ್‌ ಗಳನ್ನು ತಯಾರಿಸುವುದು.
  • ದುರಹಂಕಾರಿ ಬ್ರಿಟೀಷ್‌ ಅಧಿಕಾರಿಗಳನ್ನು ಕೊಲ್ಲುವುದು.

FAQ :

ದೆಹಲಿ ಪಿತೂರಿ ಎಷ್ಟರಲ್ಲಿ ನಡೆಯಿತು?

1912

ಕ್ರಾಂತಿಕಾರಕ ಒಂದು ಉದ್ದೇಶ ತಿಳಿಸಿ?

ಬ್ರಿಟೀಷರ ದುರಾಡಳಿತದ ಬಗ್ಗೆ ಪತ್ರಿಕೆ ಮತ್ತು ಪುಸ್ತಕಗಳಲ್ಲಿ ಬರೆಯುವುದು.
ಸರ್ಕಾರಿ ಕಛೇರಿ ಮತ್ತು ಕಟ್ಟಡಗಳ ಮೇಲೆ ದಾಳಿ ಮಾಡಿ ಬೆಂಕಿ ಇಡುವುದು

ಇತರೆ ವಿಷಯಗಳು :

ಬಕ್ಸಾರ್‌ ಕದನದ ಬಗ್ಗೆ ಮಾಹಿತಿ

ಇಸ್ಲಾಂ ಧರ್ಮದ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ