ಸರ್.ಸಿ.ವಿ.ರಾಮನ್ ರವರ ಬಗ್ಗೆ ಮಾಹಿತಿ | Information about Sir CV Raman in Kannada

ಸರ್.ಸಿ.ವಿ.ರಾಮನ್ ರವರ ಬಗ್ಗೆ ಮಾಹಿತಿ Information about Sir CV Raman Sir.C.V.Raman ravara bagge Mahithi in Kannada

ಸರ್.ಸಿ.ವಿ.ರಾಮನ್ ರವರ ಬಗ್ಗೆ ಮಾಹಿತಿ

ಸರ್.ಸಿ.ವಿ.ರಾಮನ್ ರವರ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಸರ್.ಸಿ.ವಿ.ರಾಮನ್ ರವರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಸರ್.ಸಿ.ವಿ.ರಾಮನ್ :

ನೊಬೆಲ್‌ ಬಹುಮಾನ ಪಡೆದ ಸರ್.ಸಿ.ವಿ.ರಾಮನ್‌ ‌ತಮಿಳುನಾಡಿನ ತಿರುಚಿರಾಪಳ್ಳಿ ಎಂಬ ಪಟ್ಟಣದಲ್ಲಿ 1888 ರ ನವೆಂಬರ್‌ 7 ರಂದು ಹುಟ್ಟಿದರು. ತಂದೆ ಚಂದ್ರಶೇಖರ್‌ ಅಯ್ಯರ್‌, ಅಧ್ಯಾಪಕರು ಹಾಗೂ ವಿದ್ವಾಂಸರು. ತಾಯಿ ಪಾರ್ವತಿ ಅಮ್ಮಾಳ್.‌ ಮನೆಯಲ್ಲಿ ಸಂಸ್ಕೃತ, ಸಂಗೀತದ ವಾತಾವರಣ. ಬುದ್ದಿ ಜೀವಿಗಳ ಸಂಗಮ. ರಾಮನ್‌ ಅವರಿಗೆ ಚಿಕ್ಕಂದಿನಿಂದ ಒಳ್ಳೆ ಅನುಕೂಲವೆನಿಸಿದ ಪರಿಸರ ದೊರೆಯಿತು. ವಿಧ್ಯಾಭ್ಯಾಸದ ಎಲ್ಲ ಹಂತಗಳಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ರಾಮನ್‌ ಬಿ.ಎ.ಓದುವಾಗ ಚಿನ್ನದ ಪದಕ ಗಿಟ್ಟಿಸಿದರು. ಸಣ್ಣವರಿದಾಗಲೇ ರಾಮನ್‌ ವಿಜ್ಞಾನವನ್ನು ಪ್ರೀತಿಸಿದರು. ಜರ್ಮನಿಯ ವಿಜ್ಞಾನಿ ಹೆಲ್‌ ಮೋಲ್ಟ್‌ ಹಾಗೂ ಧ್ವನಿ ವಿಜ್ಞಾನಿ ಲಾರ್ಡ್‌ ರ್ಯಾಲೇ ರಾಮನ್‌ ರ ಮೇಲೆ ಪ್ರಭಾವ ಬೀರಿದರು. ಐ.ಎ.ಎಸ್.ಪರೀಕ್ಷೆಗೂ ಕುಳಿತು ರಾಮನ್‌ ತೇರ್ಗಡೆಯಾದರು.

1907 ರಲ್ಲಿ ರಾಮನ್‌ ಲೋಕಸುಂದರಿ ಎಂಬಾಕೆಯನ್ನು ವಿವಾಹವಾದರು. ಕಲ್ಕತ್ತೆಯ ಅಕೌಂಟೆಂಟ್‌ ಜನರಲ್‌ ಕಛೇರಿಯಲ್ಲಿ ಹುದ್ದೆಯೂ ದೊರೆಯಿತು. ಆದರೆ ಕುತೂಹಲ ಪ್ರವೃತ್ತಿಯ ರಾಮನ್‌ ಕಲ್ಕತ್ತೆಯ ಒಂದು ಸಂಶೋಧನಾಲಯದಲ್ಲಿ ಸಂಶೋಧನಾ ಕಾರ್ಯ ಕೈಗೊಂಡರು. ವಿದ್ಯಾರ್ಥಿಗಳಿಗೆ ವಿಜ್ಞಾನದ ವಿಷಯಗಳ ಕುರಿತು ಪಾಠ ಹೇಳುವುದೆಂದರೆ ರಾಮನ್‌ ರಿಗೆ ಪ್ರಾಣ. ಕಲ್ಕತ್ತಾದ ನ್ಯಾಷನಲ್‌ ಇನಸ್ಟಿಟ್ಯೂಟ್‌ ಫಾರ್‌ ಕಲ್ಟಿವೇಷನ್‌ ಆಫ್‌ ಸೈನ್ಸ್‌ ನ ಕಾರ್ಯದರ್ಶಿಗಳಾದರು. ಪಿಟೀಲು, ಮೃದಂಗ, ತಬಲ ಮೊದಲಾದ ವಾದ್ಯಗಳಲ್ಲುಂಟಾಗುವ ಸ್ಪಂದನಗಳನ್ನು ಕುರಿತು ವಿವರಣೆ ನೀಡುವ ಲೇಖನಗಳನ್ನು ಬರೆದರು.

ಕೆಲಕಾಲ ಇಂಗ್ಲೆಂಡಿಗೆ ಹೋಗಿ ಬಂದರು. ಲಂಡನ್ನಿನ ಫಿಸಿಕಲ್‌ ಸೊಸೈಟಿಯಲ್ಲಿ ಭಾಷಣ ಮಾಡಿದರು. ಭಾರತಕ್ಕೆ ಮರಳಿ ಬಂದ ಮೇಲೆ ಸಂಶೋಧನಾತ್ನಕ ಲೇಖನಗಳನ್ನು ಬರೆದು ಲಂಡನ್ನಿನ ರಾಯಲ್‌ ಸೊಸೈಟಿಗೆ ಕಳುಹಿಸಿದರು. ವಿದೇಶದ ವಿಜ್ಞಾನಿಗಳು ರಾಮನ್‌ ರ ಲೇಖನಗಳನ್ನು ಕೊಂಡಾಡಿದರು. 1924ರಲ್ಲಿ ರಾಮನ್‌ ರಾಯಲ್‌ ಸೊಸೈಟಿಯ ಫೆಲೋ ಆದರು. 1925 ರಲ್ಲಿ ರಾಮನ್‌ ರಷ್ಯಾಗೆ ಹೋಗಿ ರಷ್ಯನ್‌ ಅಕಾಡೆಮಿ ಆಫ್‌ ಸೈನ್ಸ್‌ ಗೌರವಕ್ಕೆ ಪಾತ್ರರಾದರು. 1926 ರಲ್ಲಿ ಇಂಡಿಯನ್‌ ಜರ್ನಲ್‌ ಆಫ್‌ ಫಿಸಿಕ್ಸ್‌ ಎಂಬ ಪತ್ರಿಕೆ ಆರಂಭಿಸಿದರು.

ರಾಮನ್‌ ಎಫೆಕ್ಟ್‌ :

ಸರ್.ಸಿ.ವಿ.ರಾಮನ್‌ ಎಂದೇ ಸುಪ್ರಸಿದ್ದರಾಗಿರುವ ಚಂದ್ರಶೇಖರ ವೆಂಕಟ ರಾಮನ್‌ ಅವರು, ನೋಬೆಲ್‌ ಪ್ರಶಸ್ತಿ ಗಳಿಸಿರುವ, ಪ್ರಪ್ರಥಮ ಭಾರತೀಯ ವಿಜ್ಞಾನಿ. ಅವರದೇ ಹೆಸರಿನಿಂದ ಸೂಚಿಸಲಾಗುವ “ರಾಮನ್‌ ಎಫೆಕ್ಟ್”‌ ಸಿದ್ದಾಂತಕ್ಕೆ 1930 ರಲ್ಲಿ ಭೌತಶಾಸ್ತ್ರ ವಿಭಾಗದ ನೊಬೆಲ್‌ ಪಡೆದರು. ಆದರೆ ರಾಮನ್‌ ಚದುರುವಿಕೆ ಪರಿಣಾಮ ಸಿದ್ದಾಂತ ಶೋಧನೆಯ ಹಾದಿ ಬಹಳ ಸ್ವಾರಸ್ಯಕರವೂ, ಕ್ಲಿಸ್ಟವೂ, ಶ್ರಮದಾಯಕವೂ ಆಗಿತ್ತು. ಅದೇನೇ ಇದ್ದರೂ, ರಾಮನ್‌ ಪರಿಣಾಮ ಸಿದ್ದಾಂತವು ವಿಜ್ಞಾನ ಕ್ಷೇತ್ರಕ್ಕೆ ಸಿ.ವಿ.ರಾಮನ್‌ ನೀಡಿರುವ ದೊಡ್ಡ ಕೊಡುಗೆಯಾಗಿದೆ.

ರಾಮನ್‌ ಅವರು ಆಕಾಶದ ನೀಲಿ ಬಣ್ಣ ಕಂಡು ಸ್ಥಬ್ದರಾಗಿದ್ದರು. ರಾತ್ರಿ ಕಪ್ಪಗಿರುವ ಆಕಾಶ ಬೆಳಗಾಗುತ್ತಿದ್ದಂತೆ ನೀಲಿ ಬಣ್ಣಕ್ಕೆ ತಿರುಗಲು ಕಾರಣವೇನು, ಸೂರ್ಯೋದಯ ಹಾಗೂ ಸೂರ್ಯಾಸ್ತ ಸಮಯದಲ್ಲಿ ಆಕಾಶದಲ್ಲಿ ಕೆಂಪು ವರ್ಣ ಮೂಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ರಾಮನ್‌ ಅವರನ್ನು ಮೊದಲಿನಿಂದಲೂ ಕಾಡುತ್ತಿತ್ತು. ಅದಕ್ಕೆ ಉತ್ತರ ಕಂಡು ಹಿಡಿಯಲು ಪ್ರಯೋಗ ಮಾಡುತ್ತ ಅವರು ಬಹಳ ಸಮಯ ವ್ಯಯಿಸಿದರು. ಹಡಗಿನಲ್ಲಿ ವಿದೇಶ ಪ್ರಯಾಣದಲ್ಲಿದ್ದಾಗ ಕಡಲಿನ ನೀಲಿ ಬಣ್ಣದ ಕಾರಣ ತಿಳಿಯಲು ಪ್ರಯೋಗ ಮಾಡುತ್ತ ಹಡಗಿನ ತುಂಬ ಅಲೆದಾಡುತ್ತಿದ್ದರು. ಕೊನೆಗೂ ಯಾರೂ ಭೇದಿಸಲಾಗದ ರಹಸ್ಯವನ್ನು ತಿಳಿಯುವಲ್ಲಿ ಯಶಸ್ವಿಯಾದರ, ಇದರ ಫಲವಾಗಿ ಬಂದದ್ದೆ ರಾಮನ್‌ ಎಫೆಕ್ಟ್‌ ಸಿದ್ದಾಂತ. ಇವರ ಸಂಸೋಧನೆಗೆ ಇಡೀ ವಿಶ್ವವೇ ಬೆರಗಾಗಿದ್ದು ಇತಿಹಾಸ. ಆಕಾಶ ನೀಲಿ ಬಣ್ಣ ರಾಮನ್ ರ ಕುತೂಹಲ ಕೆರಳಿಸಿ ಪ್ರಯೋಗಕ್ಕೆ ತೊಡಗಿಸಿತು. ಹಾಗೇ ಬಗೆಬಗೆಯ ಹೂಗಳ ಬಣ್ಣದಿಂದಲೂ ಅವರು ಆಶ್ಚಯ ಚಕಿತರಾಗುತ್ತಿದ್ದರು. ವಾತಾವರಣದಲ್ಲಿಯ ಧೂಳಿನ ಕಣಗಳು ಬೆಳಕನ್ನು ಭಾಗಶಃ ಚದುರುವುವು. ಹೆಚ್ಚು ಚದುರದ ಕೆಂಪುಬೆಳಕು ದಿಗಂತದ ಸಮೀಪ ಸೂರ್ಯಕಾಣುವ ಪ್ರದೇಶದಲ್ಲಿ ಪ್ರಜ್ವಲಿಸುವುದು. ಉಳಿದದ್ದು ಆಕಾಶಕ್ಕೆ ನೀಲಿ ಬಣ್ಣವನ್ನು ನೀಡುವುದು ಎಂಬ ಸತ್ಯವನ್ನು ಇಡೀ ವಿಶ್ವಕ್ಕೆ ಮೊದಲ ಬಾರಿಗೆ ತಿಳಿಸಿದವರು ಸಿ.ವಿ.ರಾಮನ್.

ಸಾಧನೆಯ ಮೈಲಿಗಲ್ಲುಗಳು :

  • 1900 – ತಮ್ಮ 12ನೇ ವಯಸ್ಸಿನಲ್ಲೇ ಮೆಟ್ರಿಕ್ಯುಲೇಷನ್‌ ಮುಗಿಸಿದರು.
  • 1904 – ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿ.ಎ.ಪದವಿ ಪಡೆದರು.
  • 1907 – ಎಂ.ಎಸ್ಸಿ. ಪದವಿ ಪೂರ್ಣಗೊಳಿಸಿದರು.
  • 1907 – ರಲ್ಲಿ ಭಾರತೀಯ ಸಿವಿಲ್‌ ಸರ್ವೀಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಲ್ಕತ್ತಾದಲ್ಲಿ, ಡೆಪ್ಯುಟಿ ಅಕೌಂಟೆಂಟ್‌ ಜನರಲ್‌ ಆಗಿ ಉತ್ತೀರ್ಣರಾಗಿ ಕಲ್ಕತ್ತಾದಲ್ಲಿ ಡೆಪ್ಯುಟಿ ಅಕೌಂಟೆಂಟ್‌ ಜನರಲ್‌ ಆಗಿ ವೃತ್ತಿ ಜೀವನ ಆರಂಭಿಸಿದರು, ವಿದ್ಯಾರ್ಥಿಯಾಗಿದ್ದಾಗ ವೈಜ್ಞಾನಿಕ ಪ್ರಯೋಗಗಳಲ್ಲಿ ತೋರುತ್ತಿದ್ದ ಆಸಕ್ತಿಯನ್ನು ಅವರು ವೃತ್ತಿನಿರತರಾಗಿದ್ದಾಗಲೂ ಮುಂದುವರೆಸಿದರು.
  • 1917 – ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಚಾರ್ಯರಾದರು.
  • 1924 – ರಲ್ಲಿ ಲಂಡನಿನ ಫೆಲೋ ಆಫ್‌ ರಾಯಲ್‌ ಸೊಸೈಟಿಗೆ ರಾಮನ್‌ ಆಯ್ಕೆಯಾದರು.
  • 1928 – ರ ಮಾರ್ಚ್‌ 16 ರಂದು ತಮ್ಮ ಶೋಧನೆ, ರಾಮನ್‌ ಎಫೆಕ್ಟ್‌ ನ್ನು ಬೆಂಗಳೂರಿನಲ್ಲಿ ಬಹಿರಂಗ ಪಡಿಸಿದರು.
  • 1930 ರಲ್ಲಿ ನೋಬೆಲ್‌ ಪ್ರಶಸ್ತಿ ಗಳಿಸಿದರು.
  • ಇವರ ನೆನಪಿಗೆ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ ಭಾರತದ ಹೆಮ್ಮೆಯ ವಿಜ್ಞಾನಿ ಸರ್.ಸಿ.ವಿ. ರಾಮನ್‌ ಅವರ ಅಪೂರ್ವ ಸಾಧನೆಯ ನೆನಪಿಗಾಗಿ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಗುತ್ತದೆ.

FAQ :

ಫೆಬ್ರವರಿ 28 ರಂದು ಯಾವ ದಿನವೆಂದು ಆಚರಿಸಲಾಗುತ್ತದೆ?

ರಾಮನ್‌ ಎಫೆಕ್ಟ್

ಸಿ.ವಿ.ರಾಮನ್‌ ರವರಿಗೆ ಯಾವಾಗ ನೋಬೆಲ್‌ ಪ್ರಶಸ್ತಿ ಲಭಿಸಿತು?

1930

ಇತರೆ ವಿಷಯಗಳು :

ಬೆಳಕಿನ ಬಗ್ಗೆ ಮಾಹಿತಿ

ಛತ್ರಪತಿ ಶಿವಾಜಿಯ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ