ಆಂಗ್ಲೋ – ಮರಾಠ ಯುದ್ದಗಳ ಬಗ್ಗೆ ಮಾಹಿತಿ | Information about the Anglo-Maratha Wars in Kannada

ಆಂಗ್ಲೋ – ಮರಾಠ ಯುದ್ದಗಳ ಬಗ್ಗೆ ಮಾಹಿತಿ Information about the Anglo-Maratha Wars Anglo – Marata yuddagala bagge Mahithi in Kannada

ಆಂಗ್ಲೋ – ಮರಾಠ ಯುದ್ದಗಳ ಬಗ್ಗೆ ಮಾಹಿತಿ

Information about the Anglo-Maratha Wars in Kannada
ಆಂಗ್ಲೋ – ಮರಾಠ ಯುದ್ದಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಆಂಗ್ಲೋ – ಮರಾಠ ಯುದ್ದಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಒಂದನೇ ಆಂಗ್ಲೋ ಮರಾಠ ಯುದ್ದ – 1775-1782 :

  • 1772ರಲ್ಲಿ ಮಾಧವರಾಯ್‌ ನಿಧನ ಹೊಂದಿದಾಗ ಮಗ ನಾರಾಯಣ್ರಾವ್‌ ಮರಾಠ ಪೇಶ್ವೆಯಾದನು. ನಾರಾಯಣ್ರಾವ್‌ ನನ್ನು ಕೊಲ್ಲಿಸಿ ಚಿಕ್ಕಪ್ಪ ರಘುನಾಥರಾವ್‌ ಮರಾಠ ಪೇಶ್ವೆಯಾದರು.
  • ಮರಾಠ ಪ್ರಮುಖರು ರಘುನಾಥರಾವರನ್ನು ವಿರೋಧಿಸಿ, ನಾನಾ ಫಡ್ನವೀಸ್‌ ನೇತೃತ್ವದಲ್ಲಿ ನಾರಾಯಣರಾವನ ಮಗ 2ನೇ ಮಾಧವರಾವನನ್ನು ಬೆಂಬಲಿಸಿದರು.
  • 1775 ರಲ್ಲಿ ರಘುನಾಥರಾವ್‌ ಬ್ರಿಟೀಷರ ಆಶ್ರಯ ಪಡೆದು, ಬಾಂಬೆಯ ಗವರ್ನರ್‌ ಎಲ್ಫಿನಸ್ಟೋನ್‌ ನೊಂದಿಗೆ ಸೂರತ್‌ ಒಪ್ಪಂದ ಮಾಡಿಕೊಂಡನು.

ಸೂರತ್‌ ಒಪ್ಪಂದದ ಪ್ರಮುಖ ಪ್ರಕಾರಗಳು :

  • ಬ್ರಿಟೀಷರ ಸೈನ್ಯವು ರಘುನಾಥರಾವ್‌ ಪೇಶ್ವೆಯಾಗಲು ಬೆಂಬಲಿಸುವುದು.
  • ಸಾಲ್ಸೇಟ್‌, ಬೆಸ್ಸೀನಗಳನ್ನು ಬ್ರಿಟೀಷರಿಗೆ ಕೊಡುವುದು.
  • ಸೈನಿಕ ವೆಚ್ಚವಾಗಿ ರಘುನಾಥರಾವ 1,50,000 ರೂ ನೀಡುವುದು.
  • ರಘುನಾಥರಾವ ಮತ್ತು ಬ್ರಿಟೀಷರ ಸಂಯುಕ್ತ ಸೈನ್ಯಕ್ಕೂ, ಮರಾಠರ ಪ್ರಮುಖರಿಗೂ ಪೂನಾದಲ್ಲಿ ಯುದ್ದ ನಡೆಯಿತು. ಆದರೆ ಪೇಶ್ವೆ ಸವಾಯ್‌ ಮಾಧವರಾಯನ ಪ್ರಧಾನಿ ನಾನಾ ಫಡ್ನವೀಸನು ಕಲ್ಲತ್ತಾದಲ್ಲಿದ್ದ ಬ್ರಿಟೀಷ ಗೌವರ್ನರ್‌ ಜನರಲ್‌ ಹೇಸ್ಟಿಂಗ್ಸನ ಸಹಾಯ ಪಡೆಯುವಲ್ಲಿ ಯಶಸ್ವಿಯಾದನು.

ಪುರಂದರ ಒಪ್ಪಂದ -1776- ಮಾರ್ಚ್‌ 1 :

  • 2ನೇ ಮಾಧವರಾವ ಮತ್ತು ವಾರನ್‌ ಹೇಸ್ಟಿಂಗ್ಸ್‌ ನೊಂದಿಗೆ ನಡೆಯಿತು.
  • ಈ ಒಪ್ಪಂದದ ಪ್ರಕಾರ ಬ್ರಿಟೀಷರು ರಘುನಾಥರಾವನಿಗೆ ನೀಡಿದ ಬೆಂಬಲವನ್ನು ಹಿಂಪಡೆಯಲು ಒಪ್ಪಿದರು.
  • ರಘುನಾಥರಾವನಿಗೆ ಮರಾಠ ಪೇಶ್ವೆ ಸರ್ಕಾರವು ಮಾಸಿಕ 25,000 ರೂಗಳ ನಿವೃತ್ತಿ ವೇತನ ನೀಡುವುದು.
  • ಬಾಂಬೆ ಸರ್ಕಾರವು ಇದನ್ನು ವಿರೋಧಿಸಿತು. ಎಲ್ಫಿನ್‌ ಸ್ಟೋನ್‌ ಯುದ್ದವನ್ನು ಪುನರಾರಂಭಿಸಿದನು.
  • 1779 ರಲ್ಲಿ ಸೋತ ಇಂಗ್ಲೀಷರು ವಡಗಾಂವ್‌ ಒಪ್ಪಂದಕ್ಕೆ ಸಹು ಹಾಕಿದರು.
  • 1773 ಕ್ಕಿಂತ ಮುಂಚೆ ಬ್ರಿಟೀಷರು ಗೆದ್ದ ಎಲ್ಲಾ ಮರಾಠ ಪ್ರದೇಶಗಳನ್ನು ಮರಳಿ ಕೊಡುವುದು.
  • ಮರಾಠರಿಗೆ ರಘುನಾಥರಾವ ನನ್ನು ಒಪ್ಪಿಸುವುದು.
  • ವಾರನ್‌ ಹೇಸ್ಟಿಂಗ್‌ ಕಲ್ಲತ್ತಾ ಒಂದು ದೊಡ್ಡ ಸೈನ್ಯವನ್ನು ಗೋಡಾರ್ಡ್‌ ಮತ್ತು ಪೋಪ್‌ ಹ್ಯಾಂ ನೇತೃತ್ವದಲ್ಲಿ ಕಳುಹಿಸಿದನು. ಈ ಬೃಹತ್‌ ಸೈನ್ಯವು 1781 ರಲ್ಲಿ ಮರಾಠರನ್ನು ಸೋಲಿಸಿತು ಮತ್ತು ಸಾಲ್ಬಾಯ್‌ ಒಪ್ಪಂದ ಮಾಡಿಕೊಂಡಿತು.

ಸಾಲ್ಬಾಯ್‌ ಒಪ್ಪಂದ – 1782 ಮೇ 17 :

  • ಬ್ರಿಟೀಷರು 2ನೇ ಮಾಧವರಾವನನ್ನು ಮರಾಠರ ಪೇಶ್ವೆ ಎಂದು ಒಪ್ಪುವುದು.
  • ಪುರಂದರ ಒಪ್ಪಂದದಲ್ಲಿ ಬ್ರಿಟೀಷರು ಮರಾಠರಿಂದ ಪಡೆದ ಪ್ರದೇಶಗಳನ್ನು ವಾಪಸ್ಸು ಕೊಡುವುದು.
  • ಸಾಲ್ಸೇಟ್‌ ಮತ್ತು ಬ್ರೋಚಗಳನ್ನು ಬ್ರಿಟೀಷರು ತಮ್ಮಲ್ಲಿಯೇ ಇಟ್ಟುಕೊಳ್ಳುವುದು.
  • ಪೇಶ್ವೆ ಬ್ರಿಟೀಷರಿಗೆ 12 ಲಕ್ಷ ಯುದ್ದ ವೆಚ್ಚ ನೀಡಬೇಕು.
  • ರಘುನಾಥರಾವನಿಗೆ ನೀಡಿದ್ದ ಬ್ರಿಟೀಷರ ಬೆಂಬಲ ಹಿಂಪಡೆಯುವುದು ಮತ್ತು ಅವರಿಗೆ ಮಾಸಿಕ ವಿಶ್ರಾಂತಿ ವೇತನ ನೀಡುವುದು.

ಎರಡನೇ ಆಂಗ್ಲೋ-ಮರಾಠ ಯುದ್ದ – 1803-1806 :

  • 1800 ರಲ್ಲಿ ನಾನಾ ಫಡ್ನವೀಸನು ಮರಣ ಹೊಂದಿದ ನಂತರ 2ನೇ ಬಾಜಿರಾವನ ಮೇಲೆ ಹಿಡಿತ ಸಾಧಿಸಲು ಮರಾಠ ಸಾಧಿಸಲು ಮರಾಠ ಸರದಾರರು ಆದ ಹೋಳ್ಕರ್‌ ಮತ್ತು ಸಿಂಧಿಯಾಗಳು ಪ್ರಯತ್ನಿಸುತ್ತಿದ್ದರು.
  • ಪೂನಾದಲ್ಲಿ ಪ್ರಭುತ್ವ ಸ್ಥಾಪಿಸಲು ಜಸವಂತರಾಯ್‌ ಹೋಳ್ಕರ್‌ ಹಾಗೂ ದೌಲತ್ ರಾವ್‌ ಸಿಂಧ್ಯಾರ ನಡುವೆ ಪ್ರಬಲ ಹೋರಾಟ ಪ್ರಾರಂಭವಾಯಿತು.
  • ಹೋಳ್ಕರ್‌ ಪೇಶ್ವೆಯು ಸಿಂಧಿಯಾರ ಸೈನ್ಯವನ್ನು ಹದೀಸಪುರದಲ್ಲಿ ಸೋಲಿಸಿ ಪೂನಾ ವಶಪಡಿಸಿಕೊಂಡನು.
  • ಪೇಶ್ವೆ 2ನೇ ಬಾಜಿರಾವನು ಬೆಸ್ಸೀನಗೆ ಓಡಿಹೋಗಿ ಬ್ರಿಟೀಷರು ಆಶ್ರಯ ಪಡೆದನು. ಪೇಶ್ವೆಯಾಗಿ ವಿನಾಯಕರಾವವ ಬಂದರು.

ಬೆಸ್ಸೀನ್‌ ಒಪ್ಪಂದ – 1802 ಡಿಸೆಂಬರ್‌ 31 :

  • 2ನೇ ಬಾಜಿರಾವನು ಸಹಾಯಕ ಸೈನ್ಯ ಪದ್ದತಿಗೆ ಸಹಿ ಹಾಕಿದರು.
  • 2ನೇ ಬಾಜಿರಾವ್‌ ಮತ್ತು ಲಾರ್ಡ್‌ ವೆಲ್ಲೆಸ್ಲಿ ನಡುವೆ ಒಪ್ಪಂದ ನಡೆಯಿತು.
  • ರಕ್ಷಣೆಗಾಗಿ ಪೇಶ್ವೆ 6000 ಬ್ರಿಟೀಷರ ಸೈನಿಕರನ್ನು ಇಟ್ಟುಕೊಳ್ಳಲು ಒಪ್ಪಿದನು ಹಾಗೂ ಸೈನ್ಯದ ನಿರ್ವಹಣೆಗಾಗಿ ಪ್ರತೀ ವರ್ಷ 26 ಲಕ್ಷ ರೂಪಾಯಿಗಳನ್ನು ನೀಡಲು ಒಪ್ಪಿದನು.
  • ಬೆಸ್ಸೀನ ಒಪ್ಪಂದವು ಬ್ರಿಟೀಷರಿಗೆ ಮರಾಠರ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಲಿ ಅನುಕೂಲಕರ ಅವಕಾಶವನ್ನು ಒದಗಿಸಿಕೊಟ್ಟಿತು.
  • ಪೇಶ್ವೆಯು ತನ್ನ ಸಾಮ್ರಾಜ್ಯದ ಉತ್ತರದ ಭಾಗವನ್ನು ಬ್ರಿಟೀಷರಿಗೆ ಒಪ್ಪಿಸಿದನು.

ದೇವಗಾಂವ್‌ ಒಪ್ಪಂದ – 1803 ಡಿಸೆಂಬರ್‌ 17 :

ಬೊನ್ಸ್ಲೆ ಕಟಕ್‌, ಬಾಲಸೂರಗಳನ್ನು ಇಂಗ್ಲೀಷರಿಗೆ ಕೊಟ್ಟು, ಸಹಾಯಕ ಸೈನ್ಯ ಪದ್ದತಿಗೆ ಸಹಿ ಹಾಕಿದನು.

ಮೂರನೇ ಆಂಗ್ಲೋ ಮರಾಠ ಯುದ್ದ – 1817-1818 :

  • ಕಳೆದು ಹೋಗಿದ್ದ ಮರಾಠರ ವೈಭವವನ್ನು ಪುನರ್‌ ಸ್ಥಾಪಿಸಲು ಮತ್ತು ತನ್ನ ಅಧಿಕಾರ, ಪ್ರತಿಷ್ಠೆಗಳನ್ನು ಪೇಶ್ವೆ 2ನೇ ಬಾಜಿರಾವ್‌ ಬ್ರಿಟೀಷರ ವಿರುದ್ದ ಬೊನ್ಸ್ಲೆ, ಹೋಳ್ಕರ್‌ ಮತ್ತು ಸಿಂಧಿಯಾರನ್ನು ಒಂದಿಗೂಡಿಸಿದನು.
  • ಈ ಉದ್ದೇಶಕ್ಕಾಗಿ ಪಠಾಣರು ಮತ್ತು ಪಿಂಡಾರಿಗಳ ಬೆಂಬಲವನ್ನು ಪಡೆದರು ಮತ್ತು ಕಿರ್ಕಿಯ ಬ್ರಿಟೀಷರ ಸೇನಾ ಶಿಬಿರಕ್ಕೆ ದಾಳಿ ಮಾಡಿದರು. ಇದು 3ನೇ ಆಂಗ್ಲೋ ಮರಾಠರ ಯುದ್ದಕ್ಕೆ ತತಕ್ಷಣದ ಕಾರಣವಾಗಿದೆ. ಕಿರ್ಕಿ ಕದನದಲ್ಲಿ ಬ್ರಿಟೀಷರ ಸೈನ್ಯ ಪೇಶ್ವೆಯನ್ನು ಸೋಲಿಸಿ ಪೂನಾವನ್ನು ವಶಪಡಿಸಿಕೊಂಡಿತು.
  • 1817 ರಲ್ಲಿ ಬ್ರಿಟೀಷರು ಹೋಳ್ಕರನನ್ನು ಮಹಿದಪುರ ಎಂಬಲ್ಲಿ ಸೋಲಿಸಿದನು.
  • ಎಲ್ಲಾ ಮರಾಠ ಸರದಾರರು ಸಹಾಯಕ ಸೈನ್ಯ ಪದ್ದತಿಯನ್ನು ಒಪ್ಪಿಕೊಂಡರು.
  • ಅಸಿರಘರ್‌ ಕೋಟೆ ಬ್ರಿಟೀಷರ ವಶವಾಗುವುದರೊಂದಿಗೆ 3ನೇ ಆಂಗ್ಲೋ-ಮರಾಠ ಯುದ್ದವು ಕೊನೆಗೊಂಡಿತು.

ಯುದ್ದದ ಪರಿಣಾಮಗಳು :

  • ಮರಾಠರು ಸೋತು ಸಂಪೂರ್ಣವಾಗಿ ಪತನವಾದರು.
  • ಪೇಶ್ವೆ ಬಾಜಿರಾವನಿಗೆ ವಾರ್ಷಿಕ 8,00,000 ರೂಪಾಯಿಗಳ ವಿಶ್ರಾಂತಿ ವೇತನ ನೀಡಿ ಬೆಥೂರಿಗೆ ಕಳುಹಿಸಲಾಯಿತು.
  • ಛತ್ರಪತಿ ವಂಶಸ್ಥ ಪ್ರತಾಪಸಿಂಗ್‌ ನಿಗೆ ಸತಾರ ಪ್ರಾಂತ್ಯವನ್ನು ನೀಡಿ ಉಳಿದ ಪ್ರದೇಶಗಳನ್ನು ಬಾಂಬೆ ಫ್ರೆಸಿಡೆನ್ಸಿಯಲ್ಲಿ ವಿಲೀನಗೊಳಿಸಿದರು.

FAQ :

ಒಂದನೇ ಆಂಗ್ಲೋ ಮರಾಠ ಯುದ್ದ ಯಾವಾಗ ನಡೆಯಿತು?

1775-1782 ರಲ್ಲಿ ನಡೆಯಿತು.

ಮೂರನೇ ಆಂಗ್ಲೋ ಮರಾಠ ಯುದ್ದದ ಪರಿಣಾಮ ತಿಳಿಸಿ?

ಮರಾಠರು ಸೋತು ಸಂಪೂರ್ಣವಾಗಿ ಪತನವಾದರು.
ಪೇಶ್ವೆ ಬಾಜಿರಾವನಿಗೆ ವಾರ್ಷಿಕ 8,00,000 ರೂಪಾಯಿಗಳ ವಿಶ್ರಾಂತಿ ವೇತನ ನೀಡಿ ಬೆಥೂರಿಗೆ ಕಳುಹಿಸಲಾಯಿತು.

ಇತರೆ ವಿಷಯಗಳು :

ಭಾರತದ ರೈಲ್ವೆ ಸಾರಿಗೆ ಬಗ್ಗೆ ಮಾಹಿತಿ

ಸರ್.ಸಿ.ವಿ.ರಾಮನ್ ರವರ ಬಗ್ಗೆ ಮಾಹಿತಿ

Leave your vote

-1 Points
Upvote Downvote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ