ಬಕ್ಸಾರ್‌ ಕದನದ ಬಗ್ಗೆ ಮಾಹಿತಿ | Information about the Battle of Buxar in Kannada

ಬಕ್ಸಾರ್‌ ಕದನದ ಬಗ್ಗೆ ಮಾಹಿತಿ Information about the Battle of Buxar Baxar Kadanada bagge Mahithi in Kannada

ಬಕ್ಸಾರ್‌ ಕದನದ ಬಗ್ಗೆ ಮಾಹಿತಿ

Information about the Battle of Buxar in Kannada
ಬಕ್ಸಾರ್‌ ಕದನದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಬಕ್ಸಾರ್‌ ಕದನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಬಕ್ಸಾರ್‌ ಕದನದ ಹಿನ್ನಲೆ :

ಪ್ಲಾಸಿ ಕದನದ ನಂತರ ಮೀರಜಾಫರ್‌ ಬಂಗಾಳದ ನವಾಬನಾದನು. ಸಿರಾಜ್‌ ಉದ್‌ ದೌಲ್‌ ನನ್ನು ವಂಚಿಸಿ ಬಂಗಾಳದ ನವಾಬನಾಗಿದ್ದರಿಂದ ಬ್ರಿಟೀಷರ ಗುಲಾಮನಾಗಬೇಕಾಯಿತು. ಅಲ್ಲದೇ ಬ್ರಿಟೀಷ್‌ ಕಂಪನಿಗೆ, ಬ್ರಿಟೀಷ್‌ ನೌಕರರಿಗೆ ಅಪಾರ ಹಣ ಕೊಟ್ಟನು. ಇದರಿಂದಾಗಿ ಶ್ರೀಮಂತ ಬಂಗಾಳ ಬರಡು ಬಂಗಾಳವಾಯಿತು.

  • ರಾಬರ್ಟಕ್ಲೈವನ ನಂತರ 1760 ರಲ್ಲಿ ವ್ಯಾನ್ಸಿಟಾರ್ಟ್‌ ಬಂಗಾಳದ ಗವರ್ನರ್‌ ಆಗಿ ಬಂದನು.
  • ಕಂಪನಿಗೆ ಹಣ ಕಟ್ಟಲಿಲ್ಲ ಎಂಬ ಕಾರಣದಿಂದ ಮೀರ್‌ ಜಾಫರ್‌ ನನ್ನು ಕೆಳಗಿಳಿಸಿ ಅವನ ಅಳಿಯ ಮೀರ್‌ ಕಾಸಿಂನನ್ನು ಬಂಗಾಳದ ನವಾಬನನ್ನಾಗಿ ಮಾಡಿದನು.
  • ಈತನೂ ಆರಂಭದಲ್ಲಿ ಕಂಪನಿಗೆ, ಬ್ರಿಟೀಷ್‌ ಅಧಿಕಾರಿಗಳಿಗೆ ಅಪಾರ ಹಣ ಕೊಟ್ಟನು. ಅಲ್ಲದೆ ಮಿಡ್ನಾಪುರ್‌ ಚಿತ್ತಗಂಗಾ, ಬರ್ದ್ವಾನ ಜಿಲ್ಲೆಗಳ ಜಮೀನ್ದಾರಿಕೆಯ ಹಕ್ಕನ್ನು ಕೊಟ್ಟನು.
  • ಅನಂತರ ಬ್ರಿಟೀಷರ ನಿರ್ಬಂಧಗಳಿಂದ ದೂರ ಇರಲು ಬಯಸಿ, ತನ್ನ ರಾಜಧಾನಿಯನ್ನು ಮುರ್ಸಿದಾಬಾದನಿಂದ ಮೋಂಗಿರ್‌ ಗೆ ವರ್ಗಾಯಿಸಿದನು.
  • ತನ್ನ ರಾಜ್ಯದಲ್ಲಿ ನಡೆಯುವ ಭ್ರಷ್ಟಾಚಾರವನ್ನು ತಡೆಗಟ್ಟಿದ.
  • ಅಪಾರವಾದ ಹಣವನ್ನು ಸಂಗ್ರಹಿಸಿ ಬ್ರಿಟೀಷರಿಗೆ ಕೊಡಬೇಕಾದ ಕಂದಾಯ ಕಟ್ಟಿದನು.
  • ತನ್ನ ಸೈನಿಕರಿಗೆ ಐರೋಪ್ಯ ಮಾದರಿಯಲ್ಲಿ ತರಬೇತಿಗೊಳಿಸಿದನು.
  • ಮೋಂಗಿರನಲ್ಲಿ ಮದ್ದು ಗುಂಡುಗಳ ತಯಾರಿಕಾ ಕೇಂದ್ರವನ್ನು ಸ್ಥಾಪಿಸಿದನು.

ಬಕ್ಸಾರ್‌ ಕದನಕ್ಕೆ ಕಾರಣಗಳು :

  • ರಾಜಕೀಯ ಕಾರಣಗಳು :

ಬ್ರಿಟೀಷರು ಮತ್ತು ಮೀರಕಾಸಿಂ ಇಬ್ಬರು ಬಂಗಾಳದ ಮೇಲೆ ಪರಮಾಧಿಕಾರ ಸ್ಥಾಪಿಸಲು ಮುಂದಾದರು. ಸ್ವಾತಂತ್ರ್ಯಪ್ರಿಯನಾದ ಮೀರ್‌ ಕಾಸಿಂ ತಮ್ಮ ಕೈಗೊಂಬೆಯಾಗಿರಲು ಬ್ರಿಟೀಷರು ಬಯಸದೇ ಬ್ರಟೀಷರು ಕೇವಲ ವ್ಯಾಪಾರಿಗಳಾಗಿ ಇರಬೇಕೆಂದು ಮೀರ್‌ ಕಾಸಿಂ ಬಯಸಿದನು. ಇದು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿತು.

  • 2ನೇ ಆಲಂನ ಪ್ರಕರಣ :

ಮೊಗಲ್‌ ದೊರೆ 2ನೇ ಆಲಿಂಗೀರನ ಮರಣ ನಂತರ ಅವನ ಮಗ ಷಹಜಾದ್‌ 2ನೇ ಷಾ ಅಲಂ ಎಂಬ ಹೆಸರಿನೊಂದಿಗೆ ಮೊಘಲ್‌ ದೊರೆಯಾಗಿ ಅಧಿಕಾರ ಸ್ವೀಕರಿಸಿದನು. ಆದರೆ ಮೀರಕಾಸಿಂ ಇವನ ಅಧಿಕಾರವನ್ನು ಒಪ್ಪಲಿಲ್ಲ. ಇದು ಬ್ರಿಟೀಷರ ಕೋಪಕ್ಕೆ ಕಾರಣವಾಯಿತು.

  • ರಾಮನಾರಾಯಣ ಪ್ರಕರಣ :

ಮೀರಕಾಸಿಂನ ಉಚ್ಛಾಟಿತ ದಿವಾನ ರಾಮನಾರಾಯಣನಿಗೆ ಬ್ರಿಟೀಷರು ಆಶ್ರಯ ನೀಡಿದ್ದರು. ಅವನನ್ನು ತನಗೆ ಒಪ್ಪಿಸುವಂತೆ ಮೀರಕಾಸಿಂ ಕೇಳಿದಾಗ ವ್ಯಾನ್ಸಿಟಾರ್ಟ ಒಪ್ಪಿಸಿದನು. ಇವರಿಂದ ಮೀರಕಾಸಿಂ ಬ್ರಿಟೀಷರನ್ನು ಎದುರಿಸುವ ಧೈರ್ಯ ತಂದುಕೊಂಡನು.

  • ಆರ್ಥಿಕ ಕಾರಣ :

ಫರುಕ್ಸಿಯಾರ್‌ ಬಂಗಾಳದಲ್ಲಿ ಸುಂಕರಹಿತ ವ್ಯಾಪಾರ ಮಾಡಲು ದಸ್ತಕಗಳನ್ನು ಕೊಟ್ಟಿದ್ದನು. ಆದರೆ ಈ ರಿಯಾಯಿತಿ ಭಾರತೀಯ ವರ್ತಕರಿಗೆ ಇರಲಿಲ್ಲ. ಇದನ್ನು ಗಮನಿಸಿ ನವಾಬನು ದಸ್ತಕಗಳನ್ನು ರದ್ದು ಮಾಡಿದನು. ಆಗ ಮೀರ್‌ ಕಾಸಿಂನನ್ನು ಕೆಳಗಿಳಿಸಿ ಮೀರ್‌ ಜಾಫರನನ್ನು ಬಂಗಾಳದ ನವಾಬನನ್ನಾಗಿಸಲಾಯಿತು. ಇದರಿಂದ ಕೋಪಗೊಂಡ ಮೀರಕಾಸಿಂ ಪಾಟ್ನಾದ ಮೇಲೆ ದಾಳಿ ಮಾಡಿದಾಗ ಬ್ರಿಟೀಷರ ಅಧಿಕಾರಿ ಎಲ್ಲಿಸ್‌ ಪಾಟ್ನಾವನ್ನು ವಶಪಡಿಸಿಕೊಂಡರು. ಕೆರಳಿದ ಮೀರ್‌ ಕಾಸಿಂ ಮರಳಿ ಪಾಟ್ನಾವನ್ನು ವಶಪಡಿಸಿಕೊಂಡು 148ಜನ ಯುರೋಪಿಯನ್ನರನ್ನು ಕೊಂದು ಹಾಕಿದನು. ಕೊನೆಗೆ ಮೇಜರ್‌ ಯಾಡಮ್ಸನನ್ನು ಎದುರಿಸಲಾಗದೆ ಸೋತು ಔದಗೆ ಓಡಿ ಹೋದನು.

ಬಕ್ಸಾರ್‌ ಕದನ – 1764 ಅಕ್ಟೋಬರ್‌ 22 :

ಔದನ ನವಾಬ ಶುಜ್‌ ಉದ್‌ ದೌಲ್‌ ಮೊಘಲ್‌ ದೊರೆ 2ನೇ ಷಾ ಅಲಂ ಮತ್ತು ಮೀರಕಾಸಿಂ ಒಂದು ತ್ರಿಕೂಟವನ್ನು ರಚಿಸಿಕೊಂಡರು. ಕ್ರಿ.ಶ.1764 ಅಕ್ಟೋಬರ್‌ 22 ರಂದು ಬಿಹಾರದ ಬಕ್ಸಾರ್‌ ಎಂಬಲ್ಲಿ ಬ್ರಿಟೀಷರ ಮೇಜರ್‌ ಹೆಕ್ಟೇರ್‌ ಮನ್ರೋನನ್ನು ಎದುರಿಸಿದರು. ಇದೇ ಬಕ್ಸಾರ್‌ ಕದನ. ಈ ಯುದ್ದದಲ್ಲಿ ಸೋತ ಶುಜ್‌ ಉದ್‌ ದೌಲ್‌ ರೋಹಿಲ್‌ ಖಂಡಕ್ಕೆ ಓಡಿ ಹೋದನು. ಸೋತ ಮೀರಕಾಸಿಂ ದೆಹಲಿಗೆ ಓಡಿ ಹೋದನು. ಮೊಘಲ್‌ ದೊರೆ 2ನೇ ಷಾ ಅಲಂ ಬ್ರಟೀಷರೊಂದಿಗೆ ಹೊಂದಿಕೊಂಡು ಕ್ರಿ.ಶ.1765 ರಲ್ಲಿ ರಾಬರ್ಟಕ್ಲೈವ ನೊಂದಿಗೆ ಅಲಹಬಾದ್‌ ಒಪ್ಪಂದ ಮಾಡಿ ಕೊಳ್ಳುವುದರ ಮೂಲಕ ಈ ಯುದ್ದಕ್ಕೆ ಮುಕ್ತಾಯ ಹಾಡಿದನು.

ಒಪ್ಪಂದದ ಕರಾರುಗಳು :

  • ಬಂಗಾಳದಲ್ಲಿ ರಾಬರ್ಟ ಕ್ಲೈವ್‌ ದ್ವಿಮುಖ ಸರ್ಕಾರ ಪದ್ದತಿ ಜಾರಿಗೆ ಬಂದಿತು.
  • ದಿವಾನಿ ಆಡಳಿತ ಬ್ರಿಟೀಷರ ಬಳಿ ಉಳಿಯಿತು.
  • ನಿಜಾಮತ್‌ ಆಡಳಿತ ಇದು ನವಾಬನ ಬಳು ಉಳಿಯಿತು.
  • ಔದನ ಅಲಹಬಾದ್‌ ಮತ್ತು ಕಾರಾ ಪ್ರದೇಶಗಳನ್ನು ಮೊಘಲ್‌ ದೊರೆಗೆ ಬಿಟ್ಟುಕೊಡಲಾಯಿತು.
  • ಉಳಿದ ಔದನ್ನು ಔದನ ನವಾಬನಿಗೆ 50ಲಕ್ಷಕ್ಕೆ ಮಾರಲಾಯಿತು.
  • ರಾಬರ್ಟ ಕ್ಲೈವ್‌ 2ನೇ ಷಾ ಅಲಂನಿಂದ ಬಂಗಾಳದಲ್ಲಿ ದಿವಾನಿ ಹಕ್ಕನ್ನು ಪಡೆದನು.

FAQ :

ಬಕ್ಸಾರ್‌ ಕದನಕ್ಕೆ ರಾಜಕೀಯ ಕಾರಣಗಳನ್ನು ತಿಳಿಸಿ?

ಬ್ರಿಟೀಷರು ಮತ್ತು ಮೀರಕಾಸಿಂ ಇಬ್ಬರು ಬಂಗಾಳದ ಮೇಲೆ ಪರಮಾಧಿಕಾರ ಸ್ಥಾಪಿಸಲು ಮುಂದಾದರು. ಸ್ವಾತಂತ್ರ್ಯಪ್ರಿಯನಾದ ಮೀರ್‌ ಕಾಸಿಂ ತಮ್ಮ ಕೈಗೊಂಬೆಯಾಗಿರಲು ಬ್ರಿಟೀಷರು ಬಯಸದೇ ಬ್ರಟೀಷರು ಕೇವಲ ವ್ಯಾಪಾರಿಗಳಾಗಿ ಇರಬೇಕೆಂದು ಮೀರ್‌ ಕಾಸಿಂ ಬಯಸಿದನು. ಇದು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿತು.

ಬಕ್ಸಾರ್‌ ಕದನ ಯಾವಾಗ ನಡೆಯಿತು?

1764 ಅಕ್ಟೋಬರ್‌ 22

ಇತರೆ ವಿಷಯಗಳು :

ಕರ್ನಾಟಿಕ್‌ ಯುದ್ದಗಳ ಬಗ್ಗೆ ಮಾಹಿತಿ

ದ್ಯುತಿಸಂಶ್ಲೇಷಣೆ ಕ್ರಿಯೆಯ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ