ಪ್ಲಾಸಿ ಕದನದ ಬಗ್ಗೆ ಮಾಹಿತಿ | Information about the Battle of Plassey in Kannada

ಪ್ಲಾಸಿ ಕದನದ ಬಗ್ಗೆ ಮಾಹಿತಿ Information about the Battle of Plassey Plassey Kadanada bagge Mahithi in Kannada

ಪ್ಲಾಸಿ ಕದನದ ಬಗ್ಗೆ ಮಾಹಿತಿ

Information about the Battle of Plassey in Kannada
ಪ್ಲಾಸಿ ಕದನದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಪ್ಲಾಸಿ ಕದನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಪ್ಲಾಸಿ ಕದನಕ್ಕೆ ಕಾರಣಗಳು :

ರಾಜಕೀಯ ಕಾರಣಗಳು :

  • ಆಲಿವರ್ಧಿಖಾನನ 2ನೇ ಮಗಳ ಮಗ ಮತ್ತು ಪೂರ್ನಿಯಾದ ಸುಬೇದಾರನಾಗಿದ್ದ ಶೌಕತ್‌ ಸಿಂಗ್‌, ಮೊದಲ ಮಗಳಾದ ಢಾಕಾದ ಘಸ್ತಿ ಬೇಗಂ, ಘಸ್ತಿ ಬೇಗಳಂ ದಿವಾನನಾಗಿದ್ದ ರಾಜವಲ್ಲಬ್‌, ರಾಜವಲ್ಲಬನ ಮಗ ಕಿಶನದಾಸ್‌ /ಕೃಷ್ಣ ವಲ್ಲಬ್‌ ಈ ಎಲ್ಲಾ ಸದಸ್ಯರು ನವಾಬ ವಿರುದ್ದ ದಂಗೆ ಮತ್ತು ಪಿತೂರಿ ನಡೆಸಿದರು.
  • ಈ ಎಲ್ಲಾ ಸದ್ಯಸರಿಗೂ ಬ್ರಿಟೀಷರು ಆಶ್ರಯ ನೀಡಿ ಬೆಂಬಲಿಸಿದರು.

ದಸ್ತಕಗಳ ದುರುಪಯೋಗ :

  • 1711ರಲ್ಲಿ ಮೊಗಲ್‌ ದೊರೆ ಫರೂಕ್ಸಿಯಾರ್‌ ಇಂಗ್ಲೀಷರಿಗೆ ಬಂಗಾಳದಲ್ಲಿ ತೆರಿಗೆ ರಹಿತ ವ್ಯಾಪಾರಕ್ಕಾಗಿ ಅನುಮತಿ ನೀಡಿದ್ದನು.
  • ದಸ್ತಕಗಳನ್ನು ಬಂಗಾಳದ ಸರ್ಕಾರ “ಈಸ್ಟ್‌ ಇಂಡಿಯಾ ಕಂಪನಿ” ಗೆ ನೀಡಿತ್ತು ಮತ್ತು ಅವು ವ್ಯಾಪಾರದಲ್ಲಿ ಸುಂಕ ವಿನಾಯಿತಿಯನ್ನು ಒದಗಿಸಿದವು.
  • ದಸ್ತಕಗಳನ್ನು ಸುಂಕರಹಿತ ವ್ಯಾಪಾರಕ್ಕೆ ಬಳಸಿದ್ದು ಮತ್ತು ದಸ್ತಕಗಳನ್ನು ಭಾರತೀಯ ವರ್ತಕರಿಗೆ ಮಾರಿ ಲಾಭಗಳಿಸಿದ್ದು.
  • ದಸ್ತಕಗಳನ್ನು ಈಸ್ಟ್‌ ಇಂಡಿಯಾ ಕಂಪನಿಯ ನೌಕರರು ತಮ್ಮ ಖಾಸಗಿ ವ್ಯಾಪಾರಕ್ಕಾಗಿ ದುರುಪಯೋಗ ಪಡಿಸಿಕೊಂಡು ಮತ್ತು ಲಾಭಕ್ಕಾಗಿ ಸ್ಥಳೀಯ ವ್ಯಾಪಾರಗಳಿಗೆ ಮಾರಿದರು. ಇದರಿಂದಾಗಿ ರಾಜ್ಯದ ಆದಾಯಕ್ಕೆ ನಷ್ಟವಾಯಿತು.
  • ದಸ್ತಕಗಳನ್ನು ಕೊಂಡು ಮೋಸ ಮಾಡಿದ ಭಾರತೀಯ ವರ್ತಕರಿಗೆ ನವಾಬನು ಶಿಕ್ಚಿಸಲು ಮುಂದಾದಾಗ ಬ್ರಿಟೀಷರು ಆಶ್ರಯ ಕೊಟ್ಟಿದ್ದು.

ಫ್ರೆಂಚರಿಗೆ ನೆರವು :

  • ಬ್ರಿಟೀಷರು ಮತ್ತು ಫ್ರೆಂಚರು ವೈರಿಗಳಾಗಿದ್ದರು. 1756ರಲ್ಲಿ ಫ್ರೆಂಚರ ವ್ಯಾಪಾರಿ ಕೇಂದ್ರವಾದ ಚಂದ್ರನಾಗೂರನ್ನು ಗೆದ್ದು ಅಲ್ಲಿಂದ ಫ್ರೆಂಚರನ್ನು ಹೊರಹಾಕಿದರು. ಆಗ ಬಂಗಾಳದ ನವಾಬ ಸಿರಾಜ್‌ ಉದ್‌ ದೌಲನು ಕೆಲವು ಫ್ರೆಂಚರಿಗೆ ಆಶ್ರಯ ನೀಡಿದ್ದು, ಬ್ರಿಟೀಷರು ಕೆರಳಿಸಿತು.
  • ಆಗ ರಾಬರ್ಟ್‌ ಕ್ಲೈವ್‌ ನು ಆಡ್ಮಿರಲ್‌ ವ್ಯಾಟ್ಸನ್‌ ಕಲ್ಕತ್ತವನ್ನು 1757 ಜನವರಿ 2 ರಂದು ಮರು ವಶಪಡಿಸಿಕೊಂಡನು.
  • ರಾಬರ್ಟ್‌ ಕ್ಲೈವ್‌ ಮತ್ತು ಸಿರಾಜ್‌ ಉದ್ದೌಲನ ನಡುವೆ ಫೆಬ್ರವರಿ 9, 1757ರಂದು ಆಲಿನಗರ ಒಪ್ಪಂದವಾಯಿತು.

ಆಲಿನಗರ ಒಪ್ಪಂದದ ಕರಾರುಗಳು :

  • ಸಿರಾಜ್‌ ಉದ್‌ ದೌಲನು ಅವರದೇ ಆದ ನಾಣ್ಯಗಳನ್ನು ಠಂಕಿಸಲು ಇಂಗ್ಲೀಷರಿಗೆ ಅನುಮತಿ ನೀಡುವುದು.
  • ಇಂಗ್ಲೀಷರಿಗೆ ಯುದ್ದ ಪರಿಹಾರವನ್ನು ಒದಗಿಸುವುದು.
  • ಕಲ್ಕತ್ತಾದಲ್ಲಿ ಬ್ರಿಟೀಷರಿಗೆ ಕೋಟೆ ಕಟ್ಟಲು ನವಾಬ ಅನುಮತಿ ನೀಡಬೇಕು.

ಕಲ್ಕತ್ತಾ ಕೋಟೆಯ ಆಕ್ರಮಣ :

  • ಫ್ರೆಂಚರಿಗೆ ಹೆದರಿದ ಇಂಗ್ಲೀಷರು ನವಾಬನ ಅನುಮತಿ ಇಲ್ಲದೇ ಕಲ್ಕತ್ತಾ ಕೋಟೆಯನ್ನು ಭದ್ರಪಡಿಸಿಕೊಂಡರು. ಸಿರಾಜ್‌ ಉದ್‌ ದೌಲನು ಅದನ್ನು ಕೆಡವಲು ಆದೇಶಿಸಿದರು.
  • ಇದರಿಂದಾಗಿ ಸಿರಾಜ್‌ ಉದ್‌ ದೌಲ ಜೂನ್‌ 1756ರಲ್ಲಿ ಕಲ್ಕತ್ತಾ ಕೋಟೆಯನ್ನು ವಶಕ್ಕೆ ಪಡೆದುಕೊಂಡರು. ಆದರೆ ರಾಬರ್ಟ್‌ ಕ್ಲೈವ್‌ ಇದನ್ನು ಪುನಃ ವಶಪಡಿಸಿಕೊಂಡಾಗ ನವಾಬ ಯುದ್ದಕ್ಕೆ ಸಿದ್ದನಾದನು.

ಬ್ರಿಟೀಷರಿಂದ ದಿವಾನ ರಾಜವಲ್ಲಭನಿಗೆ ಆಶ್ರಯ :

  • ದಿವಾನ ರಾಜವಲ್ಲಭನು ಸಿರಾಜ್‌ ಉದ್ದೌಲನ ಕಛೇರಿಯ ಲೆಕ್ಕಪತ್ರಗಳನ್ನು ಒಪ್ಪಿಸದಿದ್ದಾಗ ನವಾಬನು ಒತ್ತಾಯಿಸಿದನು. ಅವುಗಳನ್ನು ಕೊಡದೆ ದಿವಾನ ಬ್ರಿಟೀಷರ ಆಶ್ರಯ ಪಡೆದನು. ಇದು ಸಿರಾಜನನ್ನು ಕೆರಳಿಸಿತು.
  • ಸಿರಾಜ್‌ ಉದ್‌ ದೌಲನು ಧಾರ್ಮಿಕ ಮತಾಂಧನಾಗಿದ್ದು, ಹಿಂದೂಗಳಿಗೆ ಬ್ರಿಟೀಷರು ಆಶ್ರಯ ನೀಡಿದ್ದು ನವಾಬನನ್ನು ಕೆರಳಿಸಿತು.
  • ನವಾಬ ಸಿರಾಜ್‌ ಉದ್‌ ದೌಲನು ಇಂಗ್ಲೀಷರ ವ್ಯಾಪಾರ ಕೇಂದ್ರಗಳಾದ ಖಾಸಿಂ ಬಜಾರ್‌, ಕಲ್ಕತ್ತಾಗಳನ್ನು ಆಕ್ರಮಿಸಿಕೊಂಡಿದ್ದು, ಬ್ರಿಟೀಷರನ್ನು ಯುದ್ದಕ್ಕೆ ಪ್ರೇರೇಪಿಸಿತು.

ಪ್ಲಾಸಿ ಕದನದ ತತಕ್ಷಣದ ಕಾರಣಗಳು :

ಬಂಗಾಳದಲ್ಲಿ ಶಾಶ್ವತ ಬ್ರಿಟೀಷ್‌ ಸಾಮ್ರಾಜ್ಯ ಸ್ಥಾಪಿಸುವ ಉದ್ದೇಶದಿಂದ ಸಿರಾಜ್‌ ಉದ್ದೌಲನು ಬ್ರಿಟೀಷರಿಗೆ ನಿಗದಿತ ಮೊತ್ತ ಕೊಡುತ್ತಿಲ್ಲವೆಂದು ಮತ್ತು ಫ್ರೆಂಚರೊಂದಿಗೆ ನವಾಬ ಸ್ನೇಹಯುತವಾಗಿದ್ದಾನೆಂಬ ನೆಪ ಹೇಳಿ ರಾಬರ್ಟ್‌ ಕ್ಲೈವ್‌ ಯುದ್ದ ಪ್ರಾರಂಭಿಸಿದನು.

ಪ್ಲಾಸಿ ಕದನದ ಗತಿ :

  • ನವಾಬನ ಸೈನ್ಯದ ನಾಯಕತ್ವ ಮೀರಜಾಫರ್‌ ವಹಿಸಿದ್ದು, ಬ್ರಿಟೀಷರ ಕುತಂತ್ರದಿಂದ ಅವನು ನೆಪ ಮಾತ್ರಕ್ಕೆ ಯುದ್ದದಲ್ಲಿ ಭಾಗವಹಿಸಿದನು.
  • ಸಿರಾಜ್‌ ಉದ್ದೌಲನ ಸೇನಾನಿಗಳಾದ ಮೀಹನ್‌ ಲಾಲ್‌ ಮತ್ತು ಮೀರ್‌ ಮದನ್‌ ವೀರಾವೇಶದಿಂದ ಹೋರಾಡಿ ನಿಧನರಾದರು. ಆದರೆ ಮೀರಜಾಫರ್‌ ಮತ್ತು ಸೇನಾನಿ ರಾಯದರ್ಲಬರು ವಿಶ್ವಾಸಘಾತಕರಾಗಿ ವರ್ತಿಸಿ ಹೋರಾಡದೇ ತಟಸ್ಥರಾಗಿ ಉಳಿದರು.
  • ನವಾಬ ತನ್ನ ಪತ್ನಿ ಉನ್ನೀಸಳೊಂದಿಗೆ ಮುರ್ಷಿದಾಬಾದ್‌ ಗೆ ಓಡಿ ಹೋದನು. ಮೀರ್‌ ಜಾಫರ್‌ ನ ಮಗ ಮಿರಾನನಿಂದ ನವಾಬ ಕೊಲೆಯಾದನು.

ಪ್ಲಾಸಿ ಕದನದ ಪರಿಣಾಮಗಳು :

  • ಮೀರ್‌ ಜಾಫರ್‌ ಬಂಗಾಳದ ನಾಮಮಾತ್ರ ನವಾಬನಾದನು.
  • ರಾಜಕೀಯವಾಗಿ ಬ್ರಿಟೀಷರು ಬಂಗಾಳದ ನೈಜ ಒಡೆಯರಾದರು.
  • ಮೀರ್‌ ಜಾಫರ್‌ ಕಲ್ಕತ್ತಾ ಬಳಿ 24 ಪರಗಣಗಳ ಜಮೀನ್ದಾರಿಕೆಯನ್ನು ಬ್ರಿಟೀಷರಿಗೆ ಬಿಟ್ಟುಕೊಟ್ಟನು.
  • ನವಾಬ 1 ಕೋಟಿ 73 ಲಕ್ಷ ಯುದ್ದ ವೆಚ್ಚಕ್ಕಾಗಿ ಕೊಟ್ಟನು.
  • ಕಂಪನಿಗೆ ಬಂಗಾಳ, ಬಿಹಾರ ಮತ್ತು ಒಡಿಶಾಗಳಲ್ಲಿ ತೆರಿಗೆ ರಹಿತ ವ್ಯಾಪಾರ ನಡೆಸಲು ಹಕ್ಕುಗಳನ್ನು ನೀಡಲಾಯಿತು.
  • ಬಕ್ಸಾರ್‌ ಕದನಕ್ಕೆ ಸ್ಪೂರ್ತಿಯಾಯಿತು.

FAQ :

ಪ್ಲಾಸಿ ಕದನಕ್ಕೆ ರಾಜಕೀಯ ಕಾರಣಗಳನ್ನು ತಿಳಿಸಿ?

ಆಲಿವರ್ಧಿಖಾನನ 2ನೇ ಮಗಳ ಮಗ ಮತ್ತು ಪೂರ್ನಿಯಾದ ಸುಬೇದಾರನಾಗಿದ್ದ ಶೌಕತ್‌ ಸಿಂಗ್‌, ಮೊದಲ ಮಗಳಾದ ಢಾಕಾದ ಘಸ್ತಿ ಬೇಗಂ, ಘಸ್ತಿ ಬೇಗಳಂ ದಿವಾನನಾಗಿದ್ದ ರಾಜವಲ್ಲಬ್‌, ರಾಜವಲ್ಲಬನ ಮಗ ಕಿಶನದಾಸ್‌ /ಕೃಷ್ಣ ವಲ್ಲಬ್‌ ಈ ಎಲ್ಲಾ ಸದಸ್ಯರು ನವಾಬ ವಿರುದ್ದ ದಂಗೆ ಮತ್ತು ಪಿತೂರಿ ನಡೆಸಿದರು.

ಪ್ಲಾಸಿ ಕದನದ ಒಂದು ಪರಿಣಾಮ ತಿಳಿಸಿ?

ಮೀರ್‌ ಜಾಫರ್‌ ಬಂಗಾಳದ ನಾಮಮಾತ್ರ ನವಾಬನಾದನು.
ರಾಜಕೀಯವಾಗಿ ಬ್ರಿಟೀಷರು ಬಂಗಾಳದ ನೈಜ ಒಡೆಯರಾದರು

ಇತರೆ ವಿಷಯಗಳು :

ಮೊಘಲ್‌ ದೊರೆ ಅಕ್ಬರ್‌ ನ ಬಗ್ಗೆ ಮಾಹಿತಿ

ಕರ್ನಾಟಕದ ಖನಿಜ ಸಂಪನ್ಮೂಲಗಳ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ