ಕರ್ನಾಟಿಕ್‌ ಯುದ್ದಗಳ ಬಗ್ಗೆ ಮಾಹಿತಿ | Information about the Carnatic Wars in Kannada

ಕರ್ನಾಟಿಕ್‌ ಯುದ್ದಗಳ ಬಗ್ಗೆ ಮಾಹಿತಿ Information about the Carnatic Wars Karnatika Yuddagala bagge Mahithi in Kannada

ಕರ್ನಾಟಿಕ್‌ ಯುದ್ದಗಳ ಬಗ್ಗೆ ಮಾಹಿತಿ

ಕರ್ನಾಟಿಕ್‌ ಯುದ್ದಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಕರ್ನಾಟಿಕ್‌ ಯುದ್ದಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಕರ್ನಾಟಿಕ್‌ ಯುದ್ದಗಳು :

  • ದಖ್ಖನ್‌ ಪ್ರಾಂತ್ಯದಲ್ಲಿ ತಮ್ಮ ಮೇಲುಗೈ ಸ್ಥಾಪಿಸುವದಕ್ಕಾಗಿ ಬ್ರಿಟೀಷರ ಮತ್ತು ಫ್ರೆಂಚರ ನಡುವೆ ನಡೆದ ಯುದ್ದಗಳೇ ಕರ್ನಾಟಿಕ್‌ ಯುದ್ದಗಳು.
  • ಕೋರಮಂಡಲ ತೀರ ಪ್ರದೇಶವನ್ನು ಬ್ರಿಟೀಷರು ಕಾರ್ನಾಟಿಕ್‌ ಎಂದು ಕರೆದರು.
  • ಇದರ ರಾಜಧಾನಿ – ಆರ್ಕಾಟ್‌
  • ಕ್ರಿ.ಶ.1707 ರಲ್ಲಿ ಔರಂಗಜೇಬ್‌ ಸಾವನ್ನಪ್ಪಿದಾಗ ಬಹುತೇಕ ಮೊಘಲ್‌ ಸುಭಾಗಳು ಸ್ವತಂತ್ರವಾಗತೊಡಗಿದವು.
  • ದಖ್ಖನ್‌ ಪ್ರಾಂತ್ಯದ ಸುಭೇದಾರನಾಗಿದ್ದ ಅಸಬ್‌ ಜಾ ಅಥವಾ ನಿಜಾಮ್‌ ಉಲ್‌ ಮುಲ್ಕ್‌ ಕ್ರಿ.ಶ.1724ರಲ್ಲಿ ಸ್ವತಂತ್ರ ಹೈದರಾಬಾದ್‌ ರಾಜ್ಯವನ್ನು ಸ್ಥಾಪಿಸಿದರು.
  • ಕ್ರಿ.ಶ.1740 ರಲ್ಲಿ ಆರ್ಕಾಟ್‌ ನವಾಬ ದೋಸ್ತ್‌ ಅಲಿಯನ್ನುಕೊಂದು ಹಾಕಿ ಮರಾಠರು ಅವನ ಅಳಿಯ ಚಂದಾ ಸಾಹೇಬನನ್ನು ಸಾತಾರ ಜೈಲಿನಲ್ಲಿಟ್ಟರು. ಆಗ ಅಸಬ್‌ ಜಾನ ಸೇನಾನಿಯಾದ ಅನ್ವರುದ್ದೀನ್‌ ಆರ್ಕಾಟಿಕ್‌ ನವಾಬನಾದನು.

1ನೇ ಕರ್ನಾಟಿಕ್‌ ಯುದ್ದ :

ಕಾರಣಗಳು :

  • ಯುರೋಪಿನಲ್ಲಿ ಫ್ರೆಂಚರ ಮತ್ತು ಬ್ರಿಟೀಷರ ಮಧ್ಯ ನಡೆದ ಆಸ್ಟ್ರೀಯಾ ಉತ್ತರಾಧಿಕಾತ್ವದ ಕದನ.
  • ದಖ್ಖನ್‌ ಪ್ರಾಂತ್ಯದಲ್ಲಿರುವ ರಾಜಕೀಯ ಅಸ್ಥಿರತೆ

ಯುದ್ದ ಗತಿ :

  • ಕ್ರಿ.ಶ. 1746 ರಲ್ಲಿ ಬ್ರಿಟೀಷ ಸೇನಾನಿ ಬಾರ್ನೆಟ್‌ ಫ್ರೆಂಚರ ಹಡಗುಗಳನ್ನು ವಶಪಡಿಸಿಕೊಂಡು ಫ್ರೆಂಚರ ನೆಲೆಯಾದ ಪಾಂಡಿಚೇರಿಯನ್ನು ಆಕ್ರಮಿಸುತ್ತಾನೆ. ಆಗ ಉತ್ಸಾಹಿ ಫ್ರೆಂಚ್‌ ಗವರ್ನರ್‌ ಡೂಪ್ಲೆ ತನ್ನಲ್ಲಿ ನೌಕಾಬಲ ಇಲ್ಲದಿದ್ದರೂ ಮಾರಿಸಸ್ ನ ಫ್ರೆಂಚ್‌ ಗವರ್ನರ್‌ ಲಾಬೋರ್ಡೆ ನಾಯಿಸ್‌ ನ ಸಹಾಯದಿಂದ ಮದ್ರಾಸನ್ನು ಆಕ್ರಮಿಸಿ ವಶಪಡಿಸಿಕೊಂಡನು.
  • ಆಗ ಮದ್ರಾಸನ ಬ್ರಿಟೀಷ್‌ ಗವರ್ನರ್‌ ವೋರ್ಸ್‌ ಫ್ರೆಂಚರಿಗೆ ಶರಣಾದನು.
  • ಬ್ರಿಟೀಷರ ಸ್ನೇಹಿತನಾದ ಅನ್ವರುದ್ದೀನ್‌ ಮದ್ರಾಸ್‌ ನ್ನು ಬ್ರಿಟೀಷರಿಗೆ ಹಿಂದಿರುಗಿಸುವಂತೆ ಡೂಪ್ಲೆಗೆ ಆದೇಶ ನೀಡುತ್ತಾನೆ. ಡೂಪ್ಲೆ ಅದನ್ನು ತಿರಸ್ಕರಿಸುತ್ತಾನೆ.
  • ಡೂಪ್ಲೆ ಮತ್ತು ಅನ್ವರುದ್ದೀನ್‌ ಮಧ್ಯ 1748 ರಲ್ಲಿ ಅಡಿಯಾರ್‌ ಕದನ ಅಥವಾ ಸೇಂಟ್‌ ಥೋಂ ಕದನ ನಡೆಯತ್ತದೆ. ಈ ಯುದ್ದದಲ್ಲಿ ಅನ್ವರುದ್ದೀನ್ ಸೋಲುತ್ತಾನೆ.

ಒಪ್ಪಂದ :

  • 1748 ರಲ್ಲಿ ಆಸ್ಟ್ರೀಯಾ ಉತ್ತರಾಧಿಕಾರತ್ವದ ಕದನ ಎಕ್ಸ್‌ ಲಾ ಚಾಪೆಲ್‌ ಒಪ್ಪಂದದೊಂದಿಗೆ ಮುಕ್ತಾಯವಾಗುತ್ತದೆ. ಅದೇ ಒಪ್ಪಂದದೊಂದಿಗೆ 1ನೇ ಕರ್ನಾಟಿಕ್‌ ಯುದ್ದವು ಮುಕ್ತಾಯವಾಗುತ್ತದೆ.

ಒಪ್ಪಂದದ ಕರಾರುಗಳು :

  • ಫ್ರೆಂಚರ ಬ್ರಿಟೀಷರ ಮದ್ರಾಸನ್ನು ಮರಳಿ ಕೊಟ್ಟರು.
  • ಅದಕ್ಕೆ ಪ್ರತಿಯಾಗಿ ಬ್ರಿಟೀಷರು ಅಮೇರಿಕಾದಲ್ಲಿರುವ ಲೂಯಿಸಬರ್ಗ್‌ ವನ್ನು ಬಿಟ್ಟು ಕೊಟ್ಟರು

2ನೇ ಕರ್ನಾಟಿಕ್‌ ಯುದ್ದ :

ಕಾರಣಗಳು :

  • ಹೈದ್ರಾಬಾದ್‌ ಮತ್ತು ಆರ್ಕಾಟಗಳಲ್ಲಿ ಉತ್ತರಾಧಿಕತ್ವದ ಸಂಘರ್ಷವೇ 2ನೇ ಕಾರ್ನಾಟಿಕ್‌ ಯುದ್ದಕ್ಕೆ ಕಾರಣ.
  • ಕ್ರಿ.ಶ.1748 ರಲ್ಲಿ ಅಸಬ್‌ ಜಾ ಸಾವನ್ನಪ್ಪಿದಾಗ ಹೈದರಾಬಾದ್‌ ಉತ್ತರಾಧಿಕತ್ವಕ್ಕಾಗಿ ಅಸಬಜಾ ನ ಮಗ ನಾಸಿರಜಂಗ್‌ ಮತ್ತು ಅವನ ಮೊಮ್ಮಗ ಮುಜಫರ್‌ ಜಂಗ್‌ ಮಧ್ಯ ಸಂಘರ್ಷ ಏರ್ಪಟ್ಟಿತು.
  • ಇತ್ತ ಮರಾಠರಿಂದ ಬಿಡುಗಡೆಯಾದ ಚಂದಾಸಾಹೇಬ ಅನ್ವರುದ್ದೀನ್‌ ಪದಚ್ಯುತಿಗೊಳಿಸಿ ಆರ್ಕಾಟದ ನವಾಬನಾಗಲು ಹವಣಿಸುತ್ತಿದ್ದ.
  • ಮುಜಾಫರ್‌ ಜಂಗ್‌ ಚಂದಾಸಾಹೇಬನಿಗೆ ಫ್ರೆಂಚರು ಬೆಂಬಲಿಸಿದ ಬ್ರಿಟೀಷರು ನಾಸಿರಜಂಗ್‌ ಮತ್ತು ಅನ್ವರುದ್ದೀನ್‌ ಬೆಂಬಲ ನೀಡಿದರು.

ಯುದ್ದದಗತಿ :

  • ಮುಜಫರ್‌ ಜಂಗ್‌ ಚಂದಾಸಾಹೇಬ ಮತ್ತು ಫ್ರೆಂಚರ ಸಂಯುಕ್ತ ಸೇನೆ 1749 ರಲ್ಲಿ ಅಂಬೂರ ಕದನದಲ್ಲಿ ಅನ್ವರುದ್ದೀನ್‌ ಸೋಲಿಸಿ ಕೊಲೆ ಮಾಡಿತು.
  • ಆರಂಭದಲ್ಲಿ ನಾಸಿರಜಂಗ್‌ ಹೈದರಾಬಾದಿನ ರಾಜನಾದ. ಆದರೆ ಡೂಪ್ಲೆನ ಕುತಂತ್ರದಿಂದ 1750 ರಲ್ಲಿ ಕಡಪಾದ ಪಠಾಣನೊಬ್ಬ ನಾಸಿರ ಜಂಗನನ್ನು ಕೊಲೆ ಮಾಡಿದ. ಆಗ ಮುಜಫರ್‌ ಜಂಗ್‌ ರಾಜನಾದ.
  • ಮುಜಫರ್‌ ಜಂಗ್‌ ರಾಜನಾದ ಮೇಲೆ ಫ್ರೆಂಚ್‌ ಗವರ್ನರ್‌ ಡೂಪ್ಲೆ ಬುಸ್ಸಿಯ ನೇತೃತ್ವದಲ್ಲಿ ಸೈನ್ಯದ ಒಂದು ತುಕಡಿಯನ್ನು ಹೈದರಾಬಾದನಲ್ಲಿ ಇರಿಸಿದನು.
  • ಕ್ರಿ.ಶ.1751 ರಲ್ಲಿ ಅರಮನೆಯ ಅಂತಃಕಲಹದಲ್ಲಿ ಮುಜಫರ್‌ ಜಂಗನ ಕೊಲೆಯಾಯಿತು. ಆಗ ಅಸಬ್‌ ಜಾನ ಮೂರನೇ ಮಗ ಸಲಾಬತ್‌ ಜಂಗ್‌ ಹೈದರಾಬಾದಿನ ರಾಜನಾದ.
  • ಕ್ರಿ.ಶ.1751 ರಲ್ಲಿ ರಾಬರ್ಟ್‌ ಕ್ಲೈವ್, ಚಂದಾಸಾಹೇಬ ಮತ್ತು ಡೂಪ್ಲೆಯನ್ನು ಸೋಲಿಸಿದನು. ಓಡಿಹೋಗುತ್ತಿದ್ದ ಚಂದಾಸಾಹೇಬನನ್ನು ತಂಜಾವೂರಿನ ರಾಜ ಕೊಲೆ ಮಾಡಿದನು. ಆಗ ಅನ್ವರುದ್ದೀನನ ಮಗ ಮಹಮ್ಮದ್‌ ಅಲಿ ಆರ್ಕಾಟದ ನವಾಬನಾದನು.
  • ಈ ಸಂದರ್ಭದಲ್ಲಿ ಸೋತ ಡೂಪ್ಲೆಯನ್ನು ಫ್ರೆಂಚ್‌ ಸರ್ಕಾರ ವಾಪಾಸ್‌ ಕರೆಯಿಸಿಕೊಂಡು ಆತನ ಉತ್ತರಾಧಿಕಾರಿಯಾಗಿ ಗುಡೆಹ್ಯೊನನ್ನು ಗವರ್ನರ್‌ ಆಗಿ ಕಳುಹಿಸಿತು.

ಒಪ್ಪಂದ :

ಭಾರತಕ್ಕೆ ಬಂದ ಗುಡೆಹ್ಯೂ 1754 ರಲ್ಲಿ ಪಾಂಡಿಚೇರಿ ಒಪ್ಪಂದದೊಂದಿಗೆ ಈ ಯುದ್ದವನ್ನು ಕೊನೆಗೊಳಿಸಿದನು.

ಒಪ್ಪಂದದ ಕರಾರುಗಳು :

  • ಎರಡು ಕಂಪನಿಗಳು ಸ್ಥಳೀಯ ಅರಸರ ವಿಚಾರದಲ್ಲಿ ಹಸ್ತಕ್ಷೇಪ ಮಾಡದಿರುವದು.
  • ಯುದ್ದ ಪೂರ್ವ ಪ್ರದೇಶಗಳನ್ನು ಹಾಗೂ ಯುದ್ದ ಕೈದಿಗಳನ್ನು ಬಿಟ್ಟು ಕೊಡುವದು.

3ನೇ ಕಾರ್ನಾಟಿಕ್‌ ಯುದ್ದ 1758-1763 :

ಯುರೋಪಿನಲ್ಲಿ ಇಂಗ್ಲೀಷರ ಮತ್ತು ಫ್ರೆಂಚರ ಮದ್ಯ ನಡೆದ ಸಪ್ತವಾರ್ಷಿಕ ಯುದ್ದವೇ 3ನೇ ಕಾರ್ನಾಟಿಕ್‌ ಯುದ್ದಕ್ಕೆ ಕಾರಣ.

ಯುದ್ದದ ಗತಿ :

  • ಬ್ರಿಟೀಷರ ರಾಬರ್ಟಕ್ಲೈವ್‌ 1757 ರಲ್ಲಿ ಫ್ರೆಂಚರ ನೆಲೆಯಾದ ಚಂದ್ರನಾಗೋರನ್ನು ವಶಪಡಿಸಿಕೊಂಡನು.
  • 1758 ರಲ್ಲಿ ಫ್ರೆಂಚ್‌ ಗವರ್ನರ್‌ ಕೌಂಟ್‌ ಡಿ ಲ್ಯಾಲಿ ಬ್ರಿಟೀಷರ ನೆಲೆಯಾದ ಸೇಂಟ್‌ ಡೇವಿಡ್‌ ಕೋಟೆಯನ್ನು ಆಕ್ರಮಿಸಿ ವಶಪಡಿಸಿಕೊಂಡರು.
  • 1760 ರಲ್ಲಿ ಫ್ರೆಂಚ್‌ ಗವರ್ನರ್‌ ಕೌಂಟ್‌ ಡಿ ಲ್ಯಾಲಿ ಮತ್ತು ಬ್ರಿಟೀಷರ ಸರ್‌ ಐರ್‌ ಕೂಟ್‌ ಮಧ್ಯ ವಾಂಡಿವಾಷ್‌ ಕದನ ನಡೆಯಿತು. ಈ ಕದನದಲ್ಲಿ ಹೈದರಾಬಾದಿನ ಫ್ರೆಂಚ್‌ ದಳಪತಿ ಬುಸ್ಸಿಯನ್ನು ಸೆರೆಹಿಡಿಯಲಾಯಿತು. ಸೋತ ಲ್ಯಾಲಿ ಪಾಂಡಿಚೇರಿಗೆ ಓಡಿ ಹೋದನು.
  • ಹೈದರಾಬಾದನ ನವಾಬ ಸಲಾಬತ್‌ ಜಂಗ್‌ ಫ್ರೆಂಚರ ಪಕ್ಷ ತೊರೆದು ಬ್ರಿಟೀಷರ ಪಕ್ಷ ಸೇರಿದನು.
  • ಈ ವಾಂಡಿವಾಷ್‌ ಕದನದಿಂದ ಫ್ರೆಂಚರ ಅವನತಿ ಆರಂಭವಾಯಿತು.

ಒಪ್ಪಂದ :

  • ಕ್ರಿ.ಶ.1763 ರಲ್ಲಿ ಸಪ್ತವಾರ್ಷಿಕ ಯುದ್ದ ಪ್ಯಾರಿಸ್‌ ಒಪ್ಪಂದದಂತೆ ಕೊನೆಗೊಂಡಿತು. ಅದೇ ಒಪ್ಪಂದದೊಂದಿಗೆ 3ನೇ ಕಾರ್ನಾಟಿಕ್‌ ಯುದ್ದವು ಮುಕ್ತಾಯವಾಯಿತು.
  • ಫ್ರೆಂಚರ ಪ್ರದೇಶಗಳನ್ನು ಮರಳಿಸಲಾಯಿತು.
  • ಅಲ್ಲಿ ಕೋಟೆ ಕಟ್ಟುವುದನ್ನು ಸೈನ್ಯ ಕಲೆ ಹಾಕುವುದನ್ನು ನಿಷೇಧಿಸಲಾಯಿತು.

FAQ :

ಕೋರಮಂಡಲ ತೀರ ಪ್ರದೇಶವನ್ನು ಬ್ರಿಟೀಷರು ಏನೆಂದು ಕರೆದರು?

ಕರ್ನಾಟಿಕ್

3ನೇ ಕಾರ್ನಾಟಿಕ್‌ ಯುದ್ದದ ಒಪಂದ ಏನು?

ಕ್ರಿ.ಶ.1763 ರಲ್ಲಿ ಸಪ್ತವಾರ್ಷಿಕ ಯುದ್ದ ಪ್ಯಾರಿಸ್‌ ಒಪ್ಪಂದದಂತೆ ಕೊನೆಗೊಂಡಿತು. ಅದೇ ಒಪ್ಪಂದದೊಂದಿಗೆ 3ನೇ ಕಾರ್ನಾಟಿಕ್‌ ಯುದ್ದವು ಮುಕ್ತಾಯವಾಯಿತು.
ಫ್ರೆಂಚರ ಪ್ರದೇಶಗಳನ್ನು ಮರಳಿಸಲಾಯಿತು.
ಅಲ್ಲಿ ಕೋಟೆ ಕಟ್ಟುವುದನ್ನು ಸೈನ್ಯ ಕಲೆ ಹಾಕುವುದನ್ನು ನಿಷೇಧಿಸಲಾಯಿತು.

ಇತರೆ ವಿಷಯಗಳು :

ಭಾರತದ ರೈಲ್ವೆ ಸಾರಿಗೆ ಬಗ್ಗೆ ಮಾಹಿತಿ

ಕರ್ನಾಟಕದ ಖನಿಜ ಸಂಪನ್ಮೂಲಗಳ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ