ಜೀವಕೋಶದ ಬಗ್ಗೆ ಮಾಹಿತಿ | Information about the cell in Kannada

ಜೀವಕೋಶದ ಬಗ್ಗೆ ಮಾಹಿತಿ Information about the cell Jeevakoshada bagge Mahithi in Kannada

ಜೀವಕೋಶದ ಬಗ್ಗೆ ಮಾಹಿತಿ

Information about the cell in Kannada
ಜೀವಕೋಶದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಜೀವಕೋಶದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಜೀವಕೋಶ :

  • ಜೀವಕೋಶವು ಜೀವಿಯ ರಚನಾತ್ಮಕ ಮತ್ತು ಕಾರ್ಯ ನಿರ್ವಾಹಕ ಘಟಕವಾಗಿರುತ್ತದೆ.
  • ಜೀವಕೋಶದ ಮೂಲ ಘಟಕಕ್ಕೆ ಜೀವಕೋಶವೆಂದು ಹೆಸರಿಸಿದವರು ರಾಬರ್ಟ್‌ ಹುಕ್.‌
  • ಜೀವಕೋಶದಲ್ಲಿ ಮೂರು ಪ್ರಮುಖ ಭಾಗಗಳು ಇವೆ ಅವುಗಳೆಂದರೆ ಕೋಶಪೊರೆ, ಕೋಶದ್ರವ, ಕೋಶ ಬೀಜ
  • ಕೋಶಪೊರೆ : ಇದು ಪ್ರೋಟೀನ್‌ ನಿಂದ ಮಾಡಲ್ಪಟ್ಟಿದ್ದು ವಸ್ತುಗಳ ವಿನಿಮಯ ಕಾರ್ಯವನ್ನು ನಿರ್ವಹಿಸುತ್ತದೆ.
  • ಕೋಶದ್ರವ : ಜೀವಕೋಶದಲ್ಲಿನ ಜಲ್ಲಿಯಂತಹ ದ್ರವ ರೂಪದ ವಸ್ತುವಿಗೆ ಕೋಶದ್ರವ ಎನ್ನುತ್ತೇವೆ. ಇದರಲ್ಲಿ 2 ರೀತಿಯ ಕಣದಂಗಗಳಿವೆ ಪೊರೆಸಹಿತ, ಪೊರೆರಹಿತ
  • ಪೊರೆಸಹಿತ : ಮೈಟೊಕಾಂಡ್ರಿಯಾ, ಗಾಲ್ಗಿ ಸಂಕೀರ್ಣ, ಲೈಸೋಸೋಮ್‌, ಕೋಶಕೇಂದ್ರ, ಪ್ಲಾಸ್ಟಿಡ್‌
  • ಪೊರೆರಹಿತ : ರೈಬೋಸೋಮ್‌, ಸೆಂಟ್ರಿಯೋಲ್‌

ಮೈಟೋಕಾಂಡ್ರಿಯಾ :

  • ಇದು ಗ್ಲೂಕೋಸನ್ನು ಆಮ್ಲಜನಕದ ಉಪಸ್ಥಿತಿಯಲ್ಲಿ ಉತ್ಕರ್ಷಿಸಿ ಶಕ್ತಿಯನ್ನು ಬಿಡುಗಡೆ ಮಾಡುವುದರಿಂದ ಇದನ್ನು ಶಕ್ತಿ ಉತ್ಪಾದನಾ ಕೇಂದ್ರ ಎನ್ನುತ್ತೇವೆ.
  • ಜೀವಕೋಶದ ಉಸಿರಾಟದ ಅಂಗವಾಗಿದೆ.
  • ಕೋಶಕೇಂದ್ರವನ್ನು ಹೊರತು ಪಡಿಸಿ DNA ಅನ್ನು ಹೊಂದಿರುವ ಏಕೈಕ ಕಣದಂಗವಾಗಿದೆ.
  • ಅಲ್ಟಮನ್‌ ಎಂಬ ವಿಜ್ಞಾನಿ ಕಂಡುಹಿಡಿದನು.ಆದರೆ ಕಾರ್ಲ್‌ ಬೆಂಡಾ ಎಂಬ ವಿಜ್ಞಾನಿ ಮೈಟೊಕಾಂಡ್ರಿಯಾ ಎಂದು ಹೆಸರು ನೀಡಿದನು.
  • ಇದರಲ್ಲಿರುವ ಬೆರಳಿನಾಕಾರದ ರಚನೆಯ ಮಧ್ಯದಲ್ಲಿರುವ ರಚನೆಗೆ ಮ್ಯಾಟ್ರಿಕ್ಸ್‌ ಎನ್ನುವರು.

ಗಾಲ್ಗಿ ಸಂಕೀರ್ಣ :

  • ಕೆಮಿಲಿಯೋ ಗಾಲ್ಗಿ ಇದನ್ನು ಕಂಡುಹಿಡಿದವರು.
  • ಎಂಡೋಪ್ಲಾಸ್ಮಿಕ್‌ ರೆಟಿಕ್ಯಲಮ್ ನಲ್ಲಿ ಉತ್ಪಾದನೆಯಾಗುವ Protien ಮತ್ತು lipid ಗಳನ್ನು pack ಮಾಡುವ ಕಣದಂಗವಾಗಿರುವುದರಿಂದ ಇದನ್ನು food packaging ಕಣದಂಗ ಎನ್ನುವರು.
  • ಕೆಲವು ರಾಸಾಯನಿಕ ವಸ್ತುಗಳನ್ನು ಸ್ರವಿಸುವುದರಿಂದ ಇದನ್ನು ರಾಸಾಯನಿಕ ಸ್ರವಿಕೆಯ ಕಣದಂಗ ಎನ್ನುವರು.

ಲೈಸೋಸೋಮ್‌ :

ಜೀವಕೋಶದಲ್ಲಿನ ನಾಶವಾದ ಕೋಶಗಳನ್ನು ಅಥವಾ ಅವಧಿಯನ್ನು ಮೀರಿರುವ ಕೋಶಗಳನ್ನು ಜಲವಿಭಜಕ ಕಿಣ್ವಗಳ ಮೂಲಕ ನಾಶಗೊಳಿಸುವುದರಿಂದ ಇದನ್ನು ಜೀವಕೋಶದ “ಆತ್ಮಹತ್ಯಾ ಸಂಚಿ” ಎನ್ನುತ್ತೇವೆ. ಕಂಡುಹಿಡಿದವರು ಡಿಡುವೆ.

ಎಂಡೋಪ್ಲಾಸ್ಮಿಕ್‌ ರೆಟಿಕ್ಯಲಮ್‌ :

  • ಇದನ್ನು ಕಂಡುಹಿಡಿದವರು – ಪೊರ್ಟರ್‌
  • ಇದರಲ್ಲಿ 2 ವಿಧಗಳಿವೆ ಅವು Rough Endoplasmic Reticulu̧m(RER) and Smooth Endoplasmic Reticulum(SER)
  • RER :
  • ರೈಬೋಸೋಮಗಳಿಗೆ ಅಂಟಿಕೊಂಡಿರುವ ERಗಳನ್ನು RER ಎನ್ನುತ್ತೇವೆ
  • ಇವುಗಳು protien ಉತ್ಪತ್ತಿಮಾಡುತ್ತವೆ.
  • SER :
  • ರೈಬೋಸೋಮಗಳಿಗೆ ಅಂಟಿಕೊಳ್ಳದೇ ಇರುವ ERಗಳನ್ನು SER ಎನ್ನುವರು.
  • ಇವುಗಳು ಲಿಪಿಡ್ಸ್‌ ಗಳನ್ನು ಉತ್ಪಾದನೆ ಮಾಡುತ್ತದೆ.
  • ಒಟ್ಟಾಗಿ ER ಗಳನ್ನುಸಾಗಾಣಿಕೆಯ ಕಣದಂಗ ಎಂದು ಕರೆಯುತ್ತೇವೆ.

ಕೋಶಕೇಂದ್ರ :

  • ಜೀವಕೋಶದಲ್ಲಿನ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸುವ ಮುಖ್ಯ ಕಣದಂಗವಾಗಿದೆ.
  • ಕೋಶಕೇಂದ್ರವು DNA ಮತ್ತು ಕ್ರೋಮೋಸೋಮಗಳನ್ನು ಒಳಗೊಂಡಿದೆ.
  • DNA ಕಂಡುಹಿಡಿದವರು – ವ್ಯಾಟ್ಸನ್‌ ಮತ್ತು ಕ್ರಿಕ್‌
  • DNA ರಚನೆ ದ್ವಿಸುರುಳಿನಂತೆ ಇದೆ.
  • ವರ್ಣತಂತುಗಳ ಸಂಖ್ಯೆ 46
  • ಲಿಂಗವನ್ನು ನಿರ್ಧಾರ ಮಾಡುವಂತಹ ಕ್ರೊಮೋಸೋಮ್‌ XY

ಪ್ಲಾಸ್ಟಿಡ್‌ :

  • ಇವುಗಳು ಸಸ್ಯಜೀವಕೋಶದಲ್ಲಿ ಮಾತ್ರ ಕಂಡುಬರುತ್ತದೆ.
  • ಪ್ಲಾಸ್ಟಿಡಗಳಲ್ಲಿನ ನಾಣ್ಯಗಳ ರೀತಿಯ ರಚನೆಗೆ ಗ್ರಾನಾ ಎನ್ನುತ್ತೇವೆ.
  • ಗ್ರಾನಾ ದ್ಯುತಿಸಂಶ್ಲೇಷಣೆಯಲ್ಲಿ ಹಗಲಿನ ವೇಳೆ ಕಾರ್ಯನಿರ್ವಹಿಸುತ್ತದೆ.
  • ಒಟ್ಟುಗೂಡಿದ ಗ್ರಾನಾಗಳ ರಚನೆಗೆ ಥೈಲಾಯ್ಡ್‌ ಎನ್ನುತ್ತೇವೆ.
  • ಪ್ಲಾಸ್ಟಿಡಗಳಲ್ಲಿನ ಖಾಲಿ ಸ್ಥಳಾವಕಾಶವನ್ನು ಸ್ಟ್ರೋಮಾ ಎನ್ನುತ್ತೇವೆ.
  • ಸ್ಟ್ರೋಮಾ ದ್ಯುತಿಸಂಶ್ಲೇಷಣೆಗೆ ರಾತ್ರಿ ವೇಳೆ ಕಾರ್ಯನಿರ್ವಹಿಸುತ್ತದೆ.
  • ಸೌರಶಕ್ತಿಯನ್ನು ರಾಸಾಯನಿಕ ಶಕ್ತಿಯಾಗಿ ಪರಿವರ್ತಿಸುವ ಕಣದಂಗ ಕ್ಲೋರೋಪ್ಲಾಸ್ಟ್‌
  • ಸಸ್ಯಗಳ ಹಸಿರು ಬಣ್ಣಕ್ಕೆ ಕಾರಣವಾಗಿರುವುದು – ಕ್ಲೋರೋಫಿಲ್‌

ಕ್ರೋಮೋಪ್ಲಾಸ್ಟ್‌ :

ಸಸ್ಯಕೋಶಗಳಲ್ಲಿ ಕಂಡುಬರುವ ಹಸಿರಾದ ಮತ್ತು ದ್ಯುತಿಸಂಶ್ಲೇಷಣೆ ಕ್ರಿಯೆನಡೆಯುವ ಕೇಂದ್ರ ಮತ್ತು ಸೌರಶಕ್ತಿಯನ್ನು ರಾಸಾಯನಿಕ ಶಕ್ತಿಯನ್ನಾಗಿ ಪರಿವರ್ತಿಸುವುದು.‌

ರೈಬೋಸೋಮ್ :

  • ಇವುಗಳು ಪ್ರೋಕ್ಯಾರಿಯೋಟಿಕ್‌ ಮತ್ತು ಯೂಕ್ಯಾರಿಯೋಟಿಕ್‌ ಜೀವಿಗಳಲ್ಲಿ ಕಂಡುಬರುವ ಏಕೈಕ ಕಣದಂಗ.
  • ಇದು ಪಪ್ರೋಟಿನ್‌ ಅನ್ನು ಉತ್ಪಾದನೆ ಮಾಡುವುದರಿಂದ ಪ್ರೋಟೀನ್‌ ಕಾರ್ಖಾನೆ ಎನ್ನುತ್ತೇವೆ.

ಸೆಂಟ್ರಿಯೋಲ್‌ :

  • ಇದು ಪ್ರಾಣಿ ಜೀವಕೋಶದಲ್ಲಿ ಮಾತ್ರ ಕಂಡುಬರುತ್ತದೆ.
  • ಕೋಶವಿಭಜನೆಯ ಸಂದರ್ಭದಲ್ಲಿ ಕದಿರೆಳೆಗಳು ಉತ್ಪತ್ತಿ ಮಾಡುತ್ತದೆ.

ಕೋಶಭಿತ್ತಿ :

  • ಇದು ಸಸ್ಯಜೀವಕೋಶದಲ್ಲಿ ಕಂಡುಬರುತ್ತದೆ.
  • ಕೋಶಭಿತ್ತಿಯ ಸೆಲ್ಯುಲೋಸ್‌, ಹೆಮಿಸೆಲ್ಯುಲೋಸ್‌ ಮತ್ತು ಪೆಕ್ಟಿನ್‌ ಅಂತಹ ವಸ್ತುವಿನಿಂದ ಮಾಡಲ್ಪಟ್ಟಿದೆ.

ಕೋಶ ವಿಭಜನೆ :

ಒಂದು ಜೀವಕೋಶ ಪೌಢವಸ್ಥೆ ತಲುಪಿದಾಗ ವಿಭಜನೆ ಹೊಂದಿ ಎರಡು ಮರಿಕೋಶಗಳಾಗುವ ಕ್ರಿಯೆಗೆ ಕೋಶ ವಿಭಜನೆ ಎನ್ನುವರು. ಢಕಕೋಶ ಜೀವಿಗಳಲ್ಲಿ ಈ ವಿಭಜನೆ ಆ ಜೀವಿಗಳಸಂಖ್ಯೆಯನ್ನು ಹೆಚ್ಚಿಸುತ್ತದೆ, ಆದರೆ ಬಹುಕೋಶ ಜೀವಿಗಳಲ್ಲಿ ಬೆಳವಣಿಗೆ, ಸವದ ಭಾಗಗಳ ದುರಸ್ತಿ, ಪ್ರಜನನ ಕ್ರಿಯೆಗಳು ನಡೆಯುತ್ತದೆ.

ಮೈಟಾಸಿಸ್‌ :

ಇದು ಮೇಲ್ವರ್ಗದ ಸಸ್ಯ ಹಾಗೂ ಪ್ರಾಣಿಗಳ ವರ್ಧನ ಜೀವಕೋಶಗಳಲ್ಲಿ ಸಾಮಾನ್ಯವಾಗಿರುತ್ತದೆ. ಪ್ರೌಢಕೋಶವು ಎರಡು ಮರಿಕೋಶಗಳಾಗಿ ವಿಭಜಿಸುತ್ತದೆ. ಈ ವಿಭಜಿತ ಕೋಶಗಳಲ್ಲಿ ಪ್ರೌಢಕೋಶದಲ್ಲಿದಷ್ಟೇ ವರ್ಣರೇಖೆಗಳು ಇರುತ್ತವೆ.

ಮಿಯಾಸಿಸ್‌ :

ಮಿಯಾಸಿಸ್‌ ಕೋಶವಿಭಜನೆಯು ಪ್ರಜನನ ಕೋಶಗಳಲ್ಲಿ ಕಂಡುಬರುತ್ತದೆ. ಮಿಯಾಸಿಸ್‌ ಕೋಶವಿಭಜನೆಯಲ್ಲಿ 4 ಮರಿ ಕೋಶಗಳಾಗಿ ವಿಭಜನೆಯಾಗುತ್ತದೆ. ವರ್ಣತೋತುಗಳು ಕೋಶ ವಿಭಜನೆಯಲ್ಲಿ ಕಡಿಮೆಯಾಗುವುದರಿಂದ ಇದನ್ನು ಸಂಖ್ಯಾಕ್ಷೀಣ ಕೋಶ ವಿಭಜನೆ ಎನ್ನುತ್ತೇವೆ.

FAQ :

ಶಕ್ತಿ ಉತ್ಪಾದನಾ ಕೇಂದ್ರ ಎಂದು ಯಾವುದನ್ನು ಕರೆಯುತ್ತಾರೆ?

ಮೈಟೋಕಾಂಡ್ರಿಯಾ.

ಆತ್ಮಹತ್ಯಾ ಸಂಚಿ ಎಂದು ಯಾವುದನ್ನು ಕರೆಯುತ್ತಾರೆ?

ಲೈಸೋಸೋಮ್.

ಇತರೆ ವಿಷಯಗಳು :

ಜ್ವಾಲಾಮುಖಿಯ ಬಗ್ಗೆ ಮಾಹಿತಿ

ಭೂಕಂಪನದ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ