ದ್ಯುತಿಸಂಶ್ಲೇಷಣೆ ಕ್ರಿಯೆಯ ಬಗ್ಗೆ ಮಾಹಿತಿ | Information about the process of photosynthesis in Kannada

ದ್ಯುತಿಸಂಶ್ಲೇಷಣೆ ಕ್ರಿಯೆಯ ಬಗ್ಗೆ ಮಾಹಿತಿ Information about the process of photosynthesis Dyuthisamshleshane Kriyeya bagge Mahithi in Kannada

ದ್ಯುತಿಸಂಶ್ಲೇಷಣೆ ಕ್ರಿಯೆಯ ಬಗ್ಗೆ ಮಾಹಿತಿ

Information about the process of photosynthesis in Kannada
ದ್ಯುತಿಸಂಶ್ಲೇಷಣೆ ಕ್ರಿಯೆಯ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ದ್ಯುತಿಸಂಶ್ಲೇಷಣೆ ಕ್ರಿಯೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ದ್ಯುತಿ ಸಂಶ್ಲೇಷಣೆ :

  • ಸಸ್ಯಗಳ ದ್ಯುತಿಸಂಶ್ಲೇಷಣೆ ಕ್ರಿಯೆ ಹಗಲಿನಲ್ಲಿ ಮಾತ್ರ ನಡೆಯುತ್ತದೆ.
  • ಸಸ್ಯಗಳಲ್ಲಿ ಉಸಿರಾಟ ಕ್ರಿಯೆ ಹಗಲು ಮತ್ತು ರಾತ್ರಿಯಲ್ಲಿಲೂ ನಡೆಯುತ್ತದೆ.
  • ಉಸಿರಾಟ ಕ್ರಿಯೆಯಲ್ಲಿ ಸಸ್ಯಗಳು ಆಮ್ಲಜನಕವನ್ನು ತಗೆದುಕೊಂಡು ಇಂಗಾಲದ ಡೈ ಆಕ್ಸೈಡ್ ನ್ನು ಬಿಡಡುಗಡೆ ಮಾಡುತ್ತದೆ.
  • ದ್ಯುತಿಸಂಶ್ಲೇಷಣೆ ಕ್ರಿಯೆಯು ಸಸ್ಯದ ಎಲೆಗಳಲ್ಲಿ ನಡೆಯುತ್ತದೆ.
  • ಸಸ್ಯಗಳು ನೀರು ಮತ್ತು ಇಂಗಾಲದ ಡೈಆಕ್ಸೈಡ್‌ ನ್ನು ಉಪಯೋಗಿಸಿ ಬೆಳಕಿನ ಶಕ್ತಿಯಿಂದ ಆಹಾರ ತಯಾರಿಸುವ ಕ್ರಿಯೆಗೆ ದ್ಯುತಿಸಂಶ್ಲೇಷಣೆ ಎನ್ನುವರು.
  • ಹಸಿರು ಸಸ್ಯಗಳು ನಿರವಯವ ಪದಾರ್ಥಗಳ ಸಹಾಯದಿಂದ ಸಾವಯವ ಪದಾರ್ಥವನ್ನು ತಯಾರಿಸುವ ಕ್ರಿಯೆಗೆ ದ್ಯುತಿಸಂಶ್ಲೇಷಣೆ ಕ್ರಿಯೆ ಎನ್ನುವರು.
  • ಇಂಗಾಲದ ಡೈ ಆಕ್ಸೈಡ್‌ ಮತ್ತು ಆಕ್ಸಿಜನ್‌ ಅನಿಲ ವಿನಿಮಯ ಎಲೆಗಳಲ್ಲಿನ ಪತ್ರರಂಧ್ರಗಳ ಮೂಲಕ ನಡೆಯುತ್ತದೆ.
  • ದ್ಯುತಿಸಂಶ್ಲೇಷಣೆಗೆ ಸಂಬಂಧಪಟ್ಟ ಕಣದಂಗ – ಕ್ಲೋರೋಪ್ಲಾಸ್ಟ್‌
  • ಪತ್ರಹರಿತ್ತು ಆಹಾರ ತಯಾರಿಕೆಯಲ್ಲಿ ಪಾಲ್ಗೊಳ್ಳುತ್ತದೆ.
  • ಕ್ಲೋರೋಪ್ಲಾಸ್ಟ್ಗಳಿಲ್ಲದಿದ್ದರೂ ಕ್ಲೋರೋಫಿಲ್‌ ಹೊಂದಿದ ಮೊನೆರಾ ಸಾಮ್ರಾಜ್ಯದ ಸಯನೋ ಬ್ಯಾಕ್ಟೀರಿಯಾ ದ್ಯುತಿಸಂಶ್ಲೇಷಣೆ ನಡೆಸುತ್ತವೆ.
  • ಕ್ಲೋರೋಫಿಲ್‌ ನಿಂದಬೆಳಕಿನ ಶಕ್ತಿ ಹೀರಿಕೆಯಾಗುತ್ತದೆ.
  • ಬೆಳಕಿನ ಶಕ್ತಿಯು ರಾಸಾಯನಿಕ ಶಕ್ತಿಯಾಗಿ ಪರಿವರ್ತನೆಯಾಗುವುದು ಮತ್ತು ನೀರಿನ ಅಣುಗಳು ಹೈಡ್ರೋಜನ್‌ ಮತತು ಆಕ್ಸಿಜನ್‌ ಆಗಿ ವಿಭಜಿಸಲ್ಪಡುವುವು.
  • ಕಾರ್ಬನ್‌ ಡೈಆಕ್ಸೈಡ್‌ ಕಾರ್ಬೋಹೈಡ್ರೇಟ್‌ ಆಗಿ ಪರಿವರ್ತಿಸಲ್ಪಡುವುದು.
  • ಮರುಭೂಮಿಯ ಸಸ್ತಗಳು ರಾತ್ರಿ ವೇಳೆಯಲ್ಲಿ ಕಾರ್ಬನ್‌ ಡೈ ಆಕ್ಸೈಡ್‌ ನ್ನು ತೆಗೆದುಕೊಂಡು ಮಧ್ಯಂತರ ವಸ್ತುವೊಂದನ್ನು ತಯಾರಿಸುತ್ತವೆ. ನಂತರ ಹಗಲಿನ ವೇಳೆಯಲ್ಲಿ ಕ್ಲೋರೊಫಿಲ್‌ ಹೀರಿಕೊಂಡ ಶಕ್ತಿಯು ಈ ವಸ್ತುವಿನ ಮೇಲೆ ವರ್ತಿಸುತ್ತದೆ.
  • ಸ್ವಪೋಷಕ ಜೀವಿಗಳ ಕಾರ್ಬನ್‌ ಮತ್ತು ಶಕ್ತಿ ಅವಶ್ಯಕತೆಗಳು ದ್ಯುತಿಸಂಶ್ಲೇಷಣೆಯ ಮೂಲಕ ಪೂರೈಕೆಯಾಗುತ್ತದೆ.
  • ಇದು ಸ್ವಪೋಷಕಗಳು ಹೊರಗಿನಿಂದ ವಸ್ತುಗಳನ್ನು ತೆಗೆದುಕೊಂಡು ಶಕ್ತಿಯ ಸಂಗ್ರಹ ರೂಪವಾಗಿ ಪರಿವರ್ತಿಸುವ ವಿಧಾನವಾಗಿದೆ.
  • ಉತ್ಪಾದಕಗಳು ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ವರ್ಣಕಗಳ ಸಹಾಯದಿಂದ ಬೆಳಕಿನ ಶಕ್ತಿಯನ್ನು ಹೀರಿಕೊಂಡು ನರವಯವ ವಸ್ತುಗಳನ್ನು ಸಾವಯವ ವಸ್ತುಗಳಾಗಿ ಪರಿವರ್ತಿಸುತ್ತದೆ.

ದ್ಯುತಿ ಸಂಶ್ಲೇಷಣೆ ಕ್ರಿಯೆಯ 2 ಹಂತಗಳು :

ಬೆಳಕಿನ ಕ್ರಿಯೆ :

  • ಇದು ಬೆಳಕಿನ ಸಹಾಯದಿಂದ ಕ್ಲೋರೋಪ್ಲಾಸ್ಟ್‌ ನಲ್ಲಿರುವ ಗ್ರಾನಾದಲ್ಲಿ ನಡೆಯುತ್ತದೆ.
  • ಈ ಪ್ರತಿಕ್ರಿಯೆಯಲ್ಲಿ ಗ್ರಾನಾದಲ್ಲಿ ಕ್ಲೋರೋಫಿಲ್‌ ಅಥವಾ ಪತ್ರ ಹರಿತ್ತು ಸೌರಶಕ್ತಿಯನ್ನು ಹೀರಿಕೊಂಡು ರಾಸಾಯನಿಕ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ.
  • ಈ ಪ್ರತಿಕ್ರಿಯೆಯಲ್ಲಿ ನೀರಿನ ಅನು ವಿಭಜನೆಗೊಂಡು ಆಮ್ಲಜನಕ ಉತ್ಪತ್ತಿಯಾಗುತ್ತದೆ. ಈ ಕ್ರಿಯೆಗೆ ನೀರಿನ ಅಣುವಿನ ವಿಭಜನೆ ಎನ್ನುವರು.

ಇರುಳಿನ ಕ್ರಿಯೆ :

  • ಇದು ಬೆಳಕಿನ ಸಹಾಯವಿಲ್ಲದೆ ಕ್ಲೊರೋಪ್ಲಾಸ್ಟ್‌ ನ ಸ್ಟ್ರೋಮಾದಲ್ಲಿ ನಡೆಯುತ್ತದೆ. ಇದನ್ನು ಕೆಲ್ವಿನ್‌ ಚಕ್ರ ಎನ್ನುವರು.
  • ಸ್ಟ್ರೋಮಾದಲ್ಲಿ ಕರಗಿರುವ ಇಂಗಾಲದ ಡೈ ಆಕ್ಸೈಡ್‌ ಬೆಳಕಿನ ಪ್ರತಿಕ್ರಿಯೆಯಲ್ಲಿ ಉತ್ಪತ್ತಿಯಾದ ರಾಸಾಯನಿಕ ಶಕ್ತಿಯನ್ನು ಉಪಯೋಗಿಸಿಕೊಂಡು ಆಹಾರವಾಗಿ ಉತ್ಪಾದನೆಯಾಗುತ್ತದೆ.
  • ಇರುಳಿನ ಪ್ರತಿಕ್ರಿಯೆಯ ಕೇಂದ್ರ ಸ್ಟ್ರೋಮಾ ಆಗಿದೆ.
  • ದ್ಯುತಿ ಸಂಶ್ಲೇಷಣೆಯಲ್ಲಿ ಬಿಡುಗಡೆಯಾಗುವ ಆಮ್ಲಜನಕವು ನೀರಿನ ಕಚ್ಛಾ ವಸ್ತುವಿನಿಂದ ಬಂದಿರುತ್ತದೆ.
  • ದ್ಯುತಿ ಸಂಶ್ಲೇಷಣೆ ಕ್ರಿಯೆ ಕಬ್ಬು ಬೆಳೆಯಲ್ಲಿ ಹೆಚ್ಚಾಗಿರುತ್ತದೆ.
  • ದ್ಯುತಿ ಸಂಶ್ಲೇಷಣೆ ವೇಗದ ದರವು ಬೆಳಕಿನಲ್ಲಿ ಕನಿಷ್ಠವಾಗಿರುತ್ತದೆ.
  • ದ್ಯುತಿ ಸಂಶ್ಲೇಷಣೆ ಉಷ್ಣಗ್ರಸಹಕ ಪ್ರಕ್ರಿಯೆಯಾಗಿದೆ.
  • ದ್ಯುತಿ ಸಂಶ್ಲೇಷಣೆ ಕ್ರಿಯೆಯು ರಾಸಾಯನಿಕ ಪ್ರಕ್ರಿಯೆಯಾಗಿದೆ.
  • ಆಕ್ಸಿಜನ್‌ ಪ್ರಮಾಣ ಹೆಚ್ಚಿದಂತೆ ದ್ಯುತಿ ಸಂಶ್ಲೇಷಣೆಯ ವೇಗ ಕುಂಠಿತವಾಗುತ್ತದೆ.

ದ್ಯುತಿ ಸಂಶ್ಲೇಷಣೆಯ ಮೇಲೆ ಪ್ರಭಾವ ಬೀರುವ ಅಂಶಗಳು :

ಬಾಹ್ಯ ಅಂಶಗಳು :

  • ಸೂರ್ಯನ ಬೆಳಕು
  • ಇಂಗಾಲದ ಡೈಆಕ್ಸೈಡ್‌
  • ಉಷ್ಣಾಂಶ 30 ಡಿಗ್ರಿ – 35 ಡಿಗ್ರಿ ಸೂಕ್ತ
  • ನೀರು ಕಚ್ಛಾಪದಾರ್ಥವಾಗಿದೆ

ಆಂತರಿಕ ಅಂಶಗಳು :

  • ಕ್ಲೋರೋಫಿಲ್/ಪತ್ರಹರಿತ್ತು

FAQ :

ದ್ಯುತಿ ಸಂಶ್ಲೇಷಣೆಯ ಮೇಲೆ ಪ್ರಭಾವ ಬೀರುವ ಅಂಶಗಳಾವುವು?

ಸೂರ್ಯನ ಬೆಳಕು
ಇಂಗಾಲದ ಡೈಆಕ್ಸೈಡ್‌
ಉಷ್ಣಾಂಶ
ನೀರು
ಕ್ಲೋರೋಫಿಲ್

ದ್ಯುತಿ ಸಂಶ್ಲೇಷಣೆ ಎಂದರೇನು?

ಸಸ್ಯಗಳು ನೀರು ಮತ್ತು ಇಂಗಾಲದ ಡೈಆಕ್ಸೈಡ್‌ ನ್ನು ಉಪಯೋಗಿಸಿ ಬೆಳಕಿನ ಶಕ್ತಿಯಿಂದ ಆಹಾರ ತಯಾರಿಸುವ ಕ್ರಿಯೆಗೆ ದ್ಯುತಿಸಂಶ್ಲೇಷಣೆ ಎನ್ನುವರು.

ಇತರೆ ವಿಷಯಗಳು :

ಜ್ವಾಲಾಮುಖಿಯ ಬಗ್ಗೆ ಮಾಹಿತಿ

ಭೂಕಂಪನದ ಬಗ್ಗೆ ಮಾಹಿತಿ

Leave your vote

-8 Points
Upvote Downvote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ