ಜ್ಞಾನೇಂದ್ರಿಯಗಳ ಬಗ್ಗೆ ಮಾಹಿತಿ | Information about the senses in Kannada

ಜ್ಞಾನೇಂದ್ರಿಯಗಳ ಬಗ್ಗೆ ಮಾಹಿತಿ Information about the senses Jnanendriyagala bagge Mahithi in Kannada

ಜ್ಞಾನೇಂದ್ರಿಯಗಳ ಬಗ್ಗೆ ಮಾಹಿತಿ

Information about the senses in Kannada
ಜ್ಞಾನೇಂದ್ರಿಯಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಜ್ಞಾನೇಂದ್ರಿಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಜ್ಞಾನೇಂದ್ರಿಯಗಳು :

ಪರಿಸರದಲ್ಲಿನ ಪ್ರಚೋದನೆಗಳಿಗೆ ಅನುಗುಣವಾಗಿ ಪ್ರತಿಕ್ರಿಯೆಯನ್ನು ನೀಡಲು ಇರುವ ಅಂಗಗಳಿಗೆ ಜ್ಞಾನೇಂದ್ರಿಯಗಳು ಎನ್ನುವರು. ಕಣ್ಣು, ಮೂಗು, ನಾಲಿಗೆ, ಚರ್ಮ, ಕಿವಿ.

ಕಣ್ಣುಗಳು :

ಕಣ್ಣಿನಲ್ಲಿ ಸ್ಕ್ಲೀರಾ, ಕೊರಾಯಿಡ್‌, ರೆಟಿನಾ ಎಂಬ ಮೂರು ಮುಖ್ಯ ಭಾಗಗಳು.

ಸ್ಕ್ಲೀರಾ :

  • ಕಣ್ಣಿನ ಅತ್ಯಂತ ಹೊರಗಿನ ಪದರವಾಗಿದ್ದು ಅಪಾರದರ್ಶಕವಾಗಿದೆ.
  • ಸ್ಕ್ಲೀರಾದ ಮುಂದುವರೆದ ಭಾಗವನ್ನು ಕಾರ್ನೀಯಾ ಎನ್ನುತ್ತೇವೆ.
  • ಸ್ಕ್ಲೀರಾದಲ್ಲಿ ಯಾವುದೇ ರೀತಿಯ ರಕ್ತನಾಳಗಳು ಇರುವುದಿಲ್ಲ.
  • ಕಾರ್ನಿಯಾದ ಮೇಲಿರುವ ತೆಳುವಾದ ಪದರವನ್ನು ಕಂಜೆಕ್ಟೀವಾ ಎನ್ನುತ್ತೇವೆ.
  • ವ್ಯಕ್ತಿ ಸತ್ತ ನಂತರ 6 ಗಂಟೆ ಅವಧಿಯೊಳಗಡೆ ಕಾರ್ನಿಯಾವನ್ನು ಬೇರೊಬ್ಬರಿಗೆ ವರ್ಗಾಯಿಸಬಹುದು ಅಥವಾ ದಾನಮಾಡಬಹುದು.
  • ಪ್ರತಿಫಲನಗೊಂಡ ಬೆಳಕನ್ನು ಮೊದಲು ಗ್ರಹಿಸುವ ಕಣ್ಣಿನ ಭಾಗ ಕಾರ್ನಿಯಾ

ಕೊರಾಯಿಡ್‌ :

  • ಕಣ್ಣಿನ 2ನೇಯ ಪದರವಾಗಿದ್ದು ರಕ್ತನಾಳಗಳನ್ನು ಒಳಗೊಂಡಿದೆ.
  • ಕೊರಾಯಿಡನ ಮುಂದುವರೆದ ಭಾಗವನ್ನು ಸಿಲಿಯರಿ ಸ್ನಾಯುಗಳೆನ್ನುವರು.
  • ಬೆಳಕಿನ ಪ್ರಮಾಣಕ್ಕನುಗುಣವಾಗಿ ಕಣ್ಣನ್ನು ಹೊಂದಾಣಿಕೆಗೆ ಏರ್ಪಡಿಸುವ ಸ್ನಾಯುಗಳು ಸಿಲಿಯರಿ ಸ್ನಾಯುಗಳು.
  • ಕಣ್ಣಿನ ಬಣ್ಣಕ್ಕೆ ಕಾರಣವಾದ ವರ್ಣಕ – ಐರಿಷ್‌
  • ಕಣ್ಣಿನಲ್ಲಿರುವ ಕಡು ಕಪ್ಪಾದ ಭಾಗವನ್ನು ಪಾಪೆ – ಪಿಯುಪಿಲ್‌ ಎನ್ನುತ್ತೇವೆ.

ರೆಟಿನಾ :

  • ಕಣ್ಣಿನ ಮೂರನೇಯ ಪದರವಾಗಿದ್ದು ಪ್ರತಿಬಿಂಬ ಉಂಟಾಗುವ ಭಾಗವಾಗಿದೆ.
  • ಪ್ರತಿಬಿಂಬವು ಸತ್ಯ ಮತ್ತು ತಲೆಕೆಳಗಾದ/ನೈಜ ಮತ್ತು ತಲೆಕೆಳಗಾದ ಪ್ರತಿಬಿಂಬ ಉಂಟಾಗುತ್ತದೆ.
  • ರೆಟಿನಾದಲ್ಲಿ ರಾಡ್/ಕೋನ್‌ ಎಂಬ 2 ಕೋಶಗಳಿವೆ.
  • ಕೋನ್‌ ಕೋಶಗಳಿಗಿಂತ ರಾಡ್‌ ಕೋಶಗಳ ಸಂಖ್ಯೆ ಅಧಿಕವಾಗಿರುತ್ತದೆ.
  • ರಾಡ್‌ ಕೋಶಗಳು ಮಂದವಾದ ಬೆಳಕನ್ನು ಗ್ರಹಿಸುತ್ತದೆ. ಆದರೆ ಬಣ್ಣವನ್ನು ಗುರುತಿಸುವುದಿಲ್ಲ.
  • ಕೋನ್‌ ಕೋಶಗಳು ಪ್ರಕಾಶಮಾನವಾದ ಬೆಳಕನ್ನು ಗ್ರಹಿಸುವುದರ ಜೊತೆಗೆ ಬಣ್ಣವನ್ನು ಗುರುತಿಸುತ್ತದೆ.
  • ಕಣ್ಣಿನಲ್ಲಿ ಪಾರದರ್ಶಕವಾದ ದ್ವಿಪೀನ ಮಸೂರವಿದೆ.
  • ಕಣ್ಣಿನ ಸಾಮಾನ್ಯ ಕನಿಷ್ಠ ದೃಷ್ಟಿ ದೂರ – 25cm

ಕಣ್ಣಿಗೆ ಸಂಬಂಧಿಸಿದ ದೃಷ್ಟಿದೋಷಗಳು :

  • ಸಮೀಪ ದೃಷ್ಟಿದೋಷ
  • ದೂರ ದೃಷ್ಟಿದೋಷ
  • ಪ್ರೆಸ್‌ ಬಯೋಫಿಯಾ
  • ನಿಕ್ಟೋಲೊಪಿಯಾ
  • ಕ್ಸಿರೋಸಿಸ್‌
  • ಕಿರೋಥಾಲ್ಮಿಯಾ
  • ಬಣ್ಣಗುರುಡುತನ
  • ಡಯಾಬೆಟಿಕ್‌ ರೆಟಿನೋಪತಿ
  • ಅಸಮದೃಷ್ಠಿ ದೋಷ
  • ಗ್ಲುಕೋಮ

ಕಿವಿಗಳು :

ಹೊರಕಿವಿ :

  • ಇದು ಕಿವಿಯ ಅತ್ಯಂತ ಹೊರಗಿನ ಭಾಗವಾಗಿದ್ದು ಹಾಲೆ ಎಂದು ಕರೆಯುತ್ತೇವೆ.
  • ಹಾಲೆಯು ಮೃದ್ವಸ್ಥಿಯಿಂದ ಮಾಡಲ್ಪಟ್ಟಿದೆ.
  • ಹೊರಕಿವಿ ಮತ್ತು ಮಧ್ಯಕಿವಿ ಸಂಪರ್ಕಿಸುವ ನಾಳ ಕರ್ಣನಾಳ.

ಮಧ್ಯಕಿವಿ :

  • ಮಧ್ಯಕಿವಿಯಲ್ಲಿ ತಮಟೆ ಎಂಬ ಸೂಕ್ಷ್ಮ ಅಂಗವಿದೆ. ಮಧ್ಯಕಿವಿಯಲ್ಲಿ 3 ಮೂಳೆಗಳು ಮ್ಯಾಲಿಯಸ್‌, ಇಂಕಸ್‌, ಸ್ಟೇಪಿಸ್.‌
  • ಸ್ಟೆಪಿಸ್‌ ಮಾನವನ ದೇಹದ ಅತ್ಯಂತ ಚಿಕ್ಕ ಮೂಳೆಗಳು.
  • ಮಧ್ಯಕಿವಿಯಲ್ಲಿ ಚಿಕ್ಕ ಸ್ನಾಯು ಸ್ಟೇಪಿಡಿಯಸ್
  • ಮಧ್ಯಕಿವಿ ಮತ್ತು ಗಂಟಲನ್ನು ಸಂಪರ್ಕಿಸುವ ನಾಳ ಯುಸ್ಟೇಪಿಯನ್‌ ನಾಳ

ಒಳಕಿವಿ :

  • ಒಳಕಿವಿಯಲ್ಲಿರುವ ಮೇಲಿನ ಭಾಗವನ್ನು ಯುಟ್ರಿಕ್ಯುಲಸ್‌ ಎನ್ನುತ್ತೇವೆ.
  • ಯುಟ್ರಿಕ್ಯುಲಸನ ಕೆಳಗಿನ ಭಾಗವನ್ನು ಸ್ಯಾಕುಲಸ್‌ ಎನ್ನುತ್ತೇವೆ.
  • ಒಳಕಿವಿಯಲ್ಲಿರುವ ಹೊರಗಿನ ದ್ರವರೂಪದ ವಸ್ತುವನ್ನು ಪೆರಿಲಿಂಫ್‌ ಎನ್ನುತ್ತೇವೆ.
  • ಒಳಗಿನ ದ್ರವರೂಪದ ವಸ್ತುವನ್ನು ಎಂಡೋಲಿಂಫ್‌ ಎನ್ನುತ್ತೇವೆ.
  • ಒಳಕಿವಿಯಲ್ಲಿರುವ ವೃತ್ತಾಕಾರದ ಬಸವನಹುಳುವಿನ ರೀತಿಯರಚನೆಗೆ ಕಾಕ್ಲಿಯಾ ಎನ್ನುತ್ತೇವೆ. ಅದರಲ್ಲಿರುವ ವಿಶೇಷ ಅಂಗವನ್ನು ಕಾರ್ಟಿಯಾ ಎನ್ನುತ್ತೇವೆ.

ನಾಲಿಗೆ :

  • ಸ್ನಾಯುವಿನಿಂದ ಮಾಡಲ್ಪಟ್ಟ ಅಂಗವಾಗಿದೆ.
  • ನಾಲಿಗೆಯ ಮೇಲಿರುವ ಚಿಕ್ಕ ಚಿಕ್ಕ ರಂಧ್ರಗಳನ್ನು ಸ್ವಾದಗ್ರಂಥಿ ಎನ್ನುವರು.
  • ನಾಲಿಗೆಯ ಮುಖ್ಯ ಕಾರ್ಯ ರುಚಿಯನ್ನು ಗ್ರಹಿಸುವುದು.
  • ಉಪ್ಪನ್ನು ಗ್ರಹಿಸುವ ರಸಾಂಕುರಗಳು ನಾಲಿಗೆಯ ಮುಂಭಾಗದ ತುದಿಯ ಪಾರ್ಶ್ವಭಾಗದಲ್ಲಿ ಕಂಡುಬರುತ್ತವೆ.
  • ಸಿಹಿಯನ್ನು ಗ್ರಹಿಸುವ ರಸಾಂಕುರಗಳು ನಾಲಿಗೆಯ ಮುಂಭಾಗದಲ್ಲಿ ಕಂಡುಬರುತ್ತದೆ.
  • ಹುಳಿಯನ್ನು ಗ್ರಹಿಸುವ ರಸಾಂಕುರಗಳ ನಾಲಿಗೆಯ ಪಾರ್ಶ್ವಭಾಗದಲ್ಲಿ ಕಂಡುಬರುತ್ತದೆ.
  • ಕಹಿಯನ್ನು ಗ್ರಹಿಸುವ ರಸಾಂಕುರಗಳು ನಾಲಿಗೆಯ ಹಿಂಭಾಗದಲ್ಲಿ ಕಂಡುಬರುತ್ತದೆ.

ಮೂಗು :

  • ಇದು ವಾಸನೆಯನ್ನು ಗ್ರಹಿಸುವ ಅಂಗವಾಗಿದೆ.
  • ಆವಿಯ ರೂಪದಲ್ಲಿರುವ ವಾಸನೆಯು ಗಾಳಿಯ ಮೂಲಕ ಮೂಗನ್ನು ತಲುಪಿದಾಗ ಮೂಗಿನಲ್ಲಿರುವ ಘ್ರಾನಾಸೂಚಕ ನರಗಳು ವಾಸನೆಯನ್ನು ಗ್ರಹಿಸಿ ಮೆದುಳಿನ ವಾಸನೆ ಕೇಂದ್ರಕ್ಕೆ ತಲುಪಿಸುತ್ತದೆ. ಇದರಿಂದ ನಮಗೆ ವಾಸನೆಯ ಅನುಭವ ಉಂಟಾಗುತ್ತದೆ.

ಚರ್ಮ :

  • ಚರ್ಮವು ಮಾನವನ ದೇಹದ ಅತ್ಯಂತ ದೊಡ್ಡ ಅಂಗವಾಗಿದೆ. ಇದರಲ್ಲಿ 2 ವಿಧಗಳಿವೆ.
  • ಹೊರಚರ್ಮ
  • ಒಳಚರ್ಮ
  • ಹೊರಚರ್ಮದಲ್ಲಿ ಮೆಲಾನೋಸೈಟ್ಸ್‌ ಮತ್ತು ಬೆವರುಗ್ರಂಥಿಯನ್ನು ಒಳಗೊಂಡಿದೆ.
  • ಮೆಲಾನೋಸೈಟ್ಸಗಳಿಂದ ಮೆಲಾನಿನ್‌ ಉತ್ಪತ್ತಿಯಾಗುತ್ತದೆ. ಇದು ಚರ್ಮದ ಬಣ್ಣಕ್ಕೆ ಕಾರಣವಾಗಿದೆ.
  • ಒಳ ಚರ್ಮವು ರಕ್ತನಾಳಗಳು, ತೈಲಗ್ರಂಥಿಗಳು ಮತ್ತು ರೋಮಕೂಪಗಳನ್ನು ಹೊಂದಿದೆ.
  • ಇದು ಉಷ್ಣಾಂಶ, ತಾಪ ಮತ್ತು ತಂಪಿನ ಅನುಭವಗಳನ್ನು ನಿಯಂತ್ರಿಸುತ್ತದೆ.
  • ಸೂರ್ಯನಿಂದ ಬರುವ ನೈಸರ್ಗಿಕ ವಿಟಮಿನ್‌ ಡಿ ಯನ್ನು ಚರ್ಮವು ಹೀರಿಕೊಳ್ಳುತ್ತದೆ.

FAQ :

ಪ್ರತಿಫಲನಗೊಂಡ ಬೆಳಕನ್ನು ಮೊದಲು ಗ್ರಹಿಸುವ ಕಣ್ಣಿನ ಭಾಗ ಯಾವುದು?

ಕಾರ್ನಿಯಾ

ಕಣ್ಣಿನ ಸಾಮಾನ್ಯ ಕನಿಷ್ಠ ದೃಷ್ಟಿ ದೂರ ಯಾವುದು?

25cm

ಇತರೆ ವಿಷಯಗಳು :

ಸರ್.ಸಿ.ವಿ.ರಾಮನ್ ರವರ ಬಗ್ಗೆ ಮಾಹಿತಿ

ಬೆಳಕಿನ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ