ಸೂಫಿ ಪಂಥದ ಬಗ್ಗೆ ಮಾಹಿತಿ | Information about the Sufi sect in Kannada

ಸೂಫಿ ಪಂಥದ ಬಗ್ಗೆ ಮಾಹಿತಿ Information about the Sufi sect Sufi Panthada bagge Mahithi in Kannada

ಸೂಫಿ ಪಂಥದ ಬಗ್ಗೆ ಮಾಹಿತಿ

Information about the Sufi sect in Kannada
ಸೂಫಿ ಪಂಥದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಸೂಫಿ ಪಂಥದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ಬಲ್ಲಿ ನೀಡಲಾಗಿದೆ.

ಸೂಫಿ ಪಂಥ :

  • ಸೂಫಿ ಎಂಬ ಶಬ್ದವು ಸಾಫ್‌ ಎಂಬ ಅರೇಬಿಯಾ ಪದದಿಂದ ಬಂದಿದೆ.
  • ಸಾಫ್‌ ಎಂದರೆ ಉಣ್ಣೆ ಎಂದರ್ಥ/ಪರಿಶುದ್ದ ನಡತೆಯುಳ್ಳವನೆಂದರ್ಥ.
  • ಸೂಫಿ ಸಂತರು ಉಣ್ಣೆಯ ನಿಲುವಂಗಿಯನ್ನು ಧರಿಸುತ್ತಿದ್ದರಿಂದ ಸೂಫಿ ಎಂಬ ಪದ ಬಂದಿದೆ.
  • ದೆಹಲಿ ಸುಲ್ತಾನರ ಕಾಲದಲ್ಲಿ ಇಸ್ಲಾಂ ಧರ್ಮದ ಮೇಲೆ ಹಿಂದೂ ಧರ್ಮದ ಪ್ರಭಾವದಿಂದ ಸೂಫಿ ಪಂಥ ಉದಯಿಸಿತು.
  • ಭಾರತದಲ್ಲಿ ಮೊದಲು ಸೂಫಿ ಪಂಥ ಪ್ರಚಾರ ಮಾಡಿದವರು – ಆಲ್‌ ಹುಜಿವಿ
  • ಸೂಫಿ ಸಂತರ ಗುಡಿಸಲುಗಳನ್ನು – ಖಾಹಂಕಗಳು ಎನ್ನುವರು.
  • ಮುಸ್ಲೀಂ ಸಂತರಿಗೆ ಔಲಿಯಾ ಎನ್ನುತ್ತಿದ್ದರು.
  • ಸೂಫಿ ಪಂಥದ ಉದ್ದೇಶಗಳು – ಸ್ವಾವಲಂಬನೆ ಸಾಧಿಸುವುದು, ಮಾನವ ಸೇವೆ ಮಾಡುವುದು, ಹಿಂದೂ ಮುಸ್ಲೀಮರ ಏಕತೆ.

ಸೂಫಿ ಪಂಥದ ಪಂಥಗಳು :

ಚಿಸ್ತಿ ಪಂಥ :

  • ಖ್ವಾಜಾ ಅಬ್ದುಲ್‌ ಚಿಸ್ತಿ ಸ್ಥಾಪಿಸಿದರು.
  • ಚಿಸ್ತಿ ಪಂಥವು ಲಾಹೋರ್‌, ನಾಗೌರ್‌, ಬದೌನ್‌, ಅಜ್ಮೀರ್‌, ಮುಲ್ತಾನ, ಸಿಂಧ್‌ ಮತ್ತು ಹನ್ಸಿಗಳಲ್ಲಿ ಜನಪ್ರಿಯವಾಗಿ ರೂಢಿಯಲ್ಲಿತ್ತು.
  • ಚಿಸ್ತಿ ಪಂಥದ ಪ್ರಮುಖ ಸಂತರು – ಮೊಯಿನುದ್ದೀನ್‌ ಚಿಸ್ತಿ, ಫರಿದುದ್ದೀನ್‌ ಶಕರ್‌, ಷೇಕ್‌ ನಿಜಾಮುದ್ದೀನ್‌ ಔಲಿಯಾ, ಷೇಕ್‌ ಸಲೀಂ ಚಿಸ್ತಿ, ಷೇಕ್‌ ಬಂದೇ ನವಾಜ್‌ ಮತ್ತು ಹಮೀದ್‌ ಉದ್‌ ನಗೌರಿ.

ಸುಹರ್‌ವರ್ದಿ ಪಂಥ :

  • ಬಾಗ್ದಾದಿನ ಷೇಕ್‌ ಶಹಾಬುದ್ದೀನ್‌ ಸ್ಥಾಪಿಸಿದರು.
  • ಸುಹರ್‌ವರ್ದಿ ಪಂಥವು ಬಿಹಾರ, ಬಂಗಾಳದಲ್ಲಿ ರೂಢಿಯಲ್ಲಿತ್ತು.
  • ಅಬುಲ್‌ ಫಜಲ್‌ ನ ಪ್ರಕಾರ ಸೂಫಿಗಳಲ್ಲಿ 14 ಪಂಥಗಳಿದ್ದವು. ಅವುಗಳೆಂದರೆ, ಫಿರ್‌ ದೌಸಿ, ಖಾದ್ರಿ, ಶತ್ತಾರ, ಮಹದಾವಿ, ರೌಷನಿಯತ್‌, ಮತ್ತು ನಕ್ಚ್‌ ಬಂದಿ.

ಸೂಫಿ ಪಂಥದ ಪ್ರಮುಖ ತತ್ವಗಳು :

  • ದೇವರು ಸರ್ವಶಕ್ತ, ಜಗತ್ತಿನ ಸೃಷ್ಟಿಕರ್ತ, ಮುಕ್ತಿಗೆ ಭಕ್ತಿಯೇ ಪ್ರಧಾನ.
  • ದೇವರು ಒಬ್ಬನೇ, ಮಾನವರೆಲ್ಲರೂ ಅವನ ಮಕ್ಕಳು.
  • ನಮಾಜ್‌, ರೋಜಾ ಮತ್ತು ಹಜ್‌ ಗಳಲ್ಲಿ ನಂಬಿಕೆ ಇರಲಿಲ್ಲ ಮತ್ತು ಕಾಯಕಕ್ಕೆ ಮಹತ್ವ ನೀಡಿದ್ದರು.
  • ಬ್ರಹ್ಮಚರ್ಯ, ಸನ್ಯಾಸ ಜೀವನಕ್ಕೆ ವಿರುದ್ದ.
  • ಮಾನವನು ಶ್ರೇಷ್ಠನಾಗುವುದು ಕಾರ್ಯದಿಂದ, ಗುಣ ಕರ್ಮದಿಂದ ಹೊರತು ಧರ್ಮದಿಂದಲ್ಲ.
  • ದೇಚರ ಪ್ರೀತಿಗೆ ಪಾತ್ರರಾಗಬೇಕಾದರೆ ಇತರರನ್ನು ಪ್ರೀತಿಸಬೇಕು.

ಪ್ರಮುಖ ಸೂಫಿ ಸಂತರು :

ಷೇಕ್‌ ಮುಯಿನುದ್ದೀನ್‌ ಚಿಸ್ತಿ :

  • ಚಿಸ್ತಿ ಪಂಥದ ಸ್ಥಾಪಕ
  • ಪರ್ಷಿಯಾದಿಂದ 1192ರಲ್ಲಿ ಭಾರತಕ್ಕೆ ಬಂದನು.
  • ಮಾನವರೆಲ್ಲರೂ ಸರಿಸುಮಾರು, ಹಿಂದೂ ಮುಸ್ಲಿಂರು ಸಂಕುಚಿತ ಭಾವನೆ ತೊರೆದು ಭ್ರಾತೃತ್ವ ಭಾವನೆ ಬೆಳೆಸಿಕೊಳ್ಳಬೇಕು.
  • ಭಕ್ತಿಯಿಂದ ಜನಸೇವೆ ಮಾಡಬೇಕೆಂದರು.
  • ಆತ್ಮ ಮತ್ತು ಪರಮಾತ್ಮ ಎರಡೂ ಒಂದೇ ಎಂದು ಶಂಕರರ ಅದ್ವೈತ ಸಿದ್ದಾಂತವನ್ನು ಬೋಧಿಸಿದರು.
  • ಷೇಕ್‌ ಮುಯಿನುದ್ದೀನ್‌ ಚಿಸ್ತಿಯು 1236ರಲ್ಲಿ ನಿಧನರಾದರು.
  • ಇವರ ದರ್ಗಾ ಇರುವುದು – ಅಜ್ಮೀರ್‌
  • ಭಗವಂತನ ಹತ್ತಿರ ಸಾಗಲು ಭಕ್ತಿಗೀತೆ ಒಂದೇ ಸಾಧನ ಎಂದು ಸಾರಿದರು.

ಷೇಕ್‌ ನಿಜಾಮುದ್ದೀನ್‌ ಔಲಿಯಾ :

  • 1236ರಲ್ಲಿ ಬದೌನಿಯಲ್ಲಿ ಜನಿಸಿದರು.
  • ಬಾಬಾ ಫರೀದ್‌ ನ ಶಿಷ್ಯ
  • ಔಲಿಯಾ ಎಂದರೆ – ದೇವರ ಪ್ರತಿನಿಧಿ
  • ಹಿಂದೂ ಮುಸ್ಲಿಂರ ಭಾವೈಕ್ಯತೆ ಪ್ರತಿಪಾದಿಸಿ ದೆಹಲಿ ಸುಲ್ತಾನನನ್ನು ಕೆರಳಿಸಿದ.
  • ನಿಜಾಮುದ್ದೀನ್‌ ಔಲಿಯಾ ದರ್ಗಾ- ದೆಹಲಿಯಲ್ಲಿದೆ.
  • ಅಮೀರಖುಸ್ರು ನಿಜಾಮುದ್ದೀನ್‌ ಔಲಿಯಾನ ಶಿಷ್ಯನಾಗಿದ್ದನು.

ಷೇಕ್‌ ಸಲೀಂ ಚಿಸ್ತಿ :

  • ಅಕ್ಬರನ ಸಮಕಾಲೀನ ಸೂಫಿ ಸಂತ
  • ಅಕ್ಬರನ ಹರಕೆಯಂತೆ ಜಹಾಂಗೀರ್‌ ಜನಿಸಿದ್ದರಿಂದ ಸಲೀಂ ಎಂಬ ಹೆಸರಿಟ್ಟನು.
  • ಷೇಕ್‌ ಸಲೀಂ ಚಿಸ್ತಿಯ ದರ್ಗಾ ಇರುವುದು – ಉತ್ತರ ಪ್ರದೇಶದ ಫತೇಪುರ ಸಿಕ್ರಿ
  • 1580ರಲ್ಲಿ ಸಲೀಂ ಚಿಸ್ತಿಯ ದರ್ಗಾ ಮೊಘಲರು ಕಟ್ಟಿಸಿದರು.

ಖ್ವಾಜಾ ಬಂದೇ ನವಾಜ್‌ :

  • ಮೊದಲ ಹೆಸರು – ಸೈಯದ್‌ ಮಹ್ಮದ್‌ ಹುಸೇನ್‌
  • ಗುಲ್ನರ್ಗಾದ ಶ್ರೇಷ್ಠ ಸೂಫಿ ಸಂತ
  • ಬಿರುದುಗಳು – ಗೇಸುದರಾಜ್‌ ಮತ್ತು ಬಂದೇನವಾಜ್‌
  • ಗುರು – ನಿಜಾಮುದ್ದೀನ್‌ ಚಿಸ್ತಿ
  • ಮೂಲಸ್ಥಳ – ಪರ್ಷಿಯಾದ ಹೀರತ್‌
  • “ದಖನಿ ಉರ್ದು ಸಾಹಿತ್ಯದ ಪಿತಾಮಹಾ ಎಂದೇ ಖ್ಯಾತಿಯಾಗಿದ್ದರು.
  • ಖ್ವಾಜಾ ಬಂದೇ ನವಾಜ್‌ ದರ್ಗಾ ಇರುವುದು – ಕಲ್ಬುರ್ಗಿ

ಸೂಫಿ ಸಂತರು ಮತ್ತು ದರ್ಗಾಗಳು :

  • ಷೇಕ್‌ ಬಹಾವುದ್ದೀನ್‌ ಜಕಾರಿಯಾ – ಮುಲ್ತಾನ್‌
  • ಷೇಕ್‌ ಇಸ್ಮಾಯಿಲ್‌ ದಂತಾಗಂಜ್‌ – ಬಿಕ್ಷ್‌
  • ಟಿಪ್ಪು ಮಸ್ತಾರ ಔಲಿಯಾ – ಆರ್ಕಾಟ್‌
  • ಷೇಕ್‌ ಫರೀದಾ ಯಜ್ದಾನಿ – ದೆಹಲಿ
  • ಹಜರತ್‌ ಸೈಯದ್‌ ಕ್ವಾತಲಾ ಷಾ – ಬೆಳಗಾವಿ
  • ಮುರ್ತಾಜ್‌ ಖಾದರಿ – ವಿಜಯಪುರ
  • ಹಜರತ್‌ ಬುರಸುದ್ದೀನ್‌ ಷಾ – ಬಾಬಾ ಬುಡನಗಿರಿ
  • ಹಜರತ್‌ ದಾಲಿವುಲ್ಲಾ ಖಾದರಿ – ಧಾರವಾಡ

FAQ :

ಖ್ವಾಜಾ ಬಂದೇ ನವಾಜ್‌ ದರ್ಗಾ ಎಲ್ಲಿದೆ?

ಕಲ್ಬುರ್ಗಿ

ಸಾಫ್‌ ಎಂದರೆ ಏನು?

ಉಣ್ಣೆ ಎಂದರ್ಥ/ಪರಿಶುದ್ದ ನಡತೆಯುಳ್ಳವನೆಂದರ್ಥ.

ಇತರೆ ವಿಷಯಗಳು :

ಇಸ್ಲಾಂ ಧರ್ಮದ ಬಗ್ಗೆ ಮಾಹಿತಿ

ಬಕ್ಸಾರ್‌ ಕದನದ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ