ಏಕಕೋಶಿಯ ಜೀವಿಗಳ ಬಗ್ಗೆ ಮಾಹಿತಿ | Information about unicellular organisms in Kannada

ಏಕಕೋಶಿಯ ಜೀವಿಗಳ ಬಗ್ಗೆ ಮಾಹಿತಿ Information about unicellular organisms Ekakoshiya Jivigala bagge Mahithi in Kannada

ಏಕಕೋಶಿಯ ಜೀವಿಗಳ ಬಗ್ಗೆ ಮಾಹಿತಿ

Information about unicellular organisms in Kannada
ಏಕಕೋಶಿಯ ಜೀವಿಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಏಕಕೋಶಿಯ ಜೀವಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಏಕಕೋಶಿಯ ಜೀವಿಗಳು :

ಅಮೀಬಾ :

  • ಅಮೀಬಾ ಏಕಕೋಶೀಯ ಸೂಕ್ಷ್ಮಜೀವಿಯಾಗಿದೆ. ಸಿಹಿನೀರಿನಲ್ಲಿ ಸ್ವತಂತ್ರವಾಗಿ ಜೀವಿಸುವ ಅಮೀಬಾದ ದೇಹವು ಕೋಶಪೊರೆಯಿಂದ ಆವೃತವಾದ ಕೋಶದ್ರವ್ಯ ಹಾಗೂ ಕೋಶಕೇಂದ್ರವನ್ನು ಹೊಂದಿದೆ.
  • ಕೋಶದ್ರವ್ಯದಲ್ಲಿ ಎರಡು ರೀತಿಯರಸದಾನಿಗಳಿವೆ. ಅವುಗಳು ಆಹಾರ ಮತ್ತು ಸಂಕುಚಿತರಸದಾನಿಗಳು.
  • ಆಹಾರರಸದಾನಿ ಆಹಾರವನ್ನು ಸಂಗ್ರಹಿಸಲು ಹಾಗೂ ಸಂಕುಚಿತರಸದಾನಿ ವಿಸರ್ಜನೆಯಲ್ಲಿ ನೆರವಾಗುತ್ತವೆ.
  • ಅಮೀಬಾವು ಮಿಥ್ಯಾ ಪಾದಗಳ ನೆರವಿನಿಂದದಲಿಸುತ್ತದೆ.

ಏಕಕೋಶಿಯ ಜೀವಿಗಳ ಲಕ್ಷಣಗಳು :

  • ಏಕಕೋಶ ಜೀವಿಗಳ ಗಾತ್ರ 2 ರಿಂದ 200 ಮೈಕ್ರಾನ್‌ ಗಳನ್ನು ಹೊಂದಿರುತ್ತದೆ.
  • ಏಕಕೋಶೀಯ ಜೀವಿಗಳ ದೇಹದಲ್ಲಿ ಒಂದೇ ಕೋಶವು ಎಲ್ಲ ಜೈವಿಕ ಚಟುವಟಿಕೆಗಳನ್ನು ನಡೆಸುತ್ತದೆ.
  • ಇವುಗಳಲ್ಲಿ ಕೆಲವು ಸ್ವತಂತ್ರವಾಗಿ ಜೀವಿಸಿದರೆ, ಇನ್ನು ಕೆಲವು ಪರಾವಲಂಬಿಗಳಾಗಿವೆ.
  • ಏಕಕೋಶ ಜೀವಿಗಳು ಮಿಥ್ಯಪಾದ, ಲೋಮಾಂಗ ಅಥವಾ ಕಶಾಂಗಳಿಂದ ಚಲಿಸುತ್ತವೆ.
  • ಅಮೀಬಾ ಮಿಥ್ಯಪಾದಗಳಿಂದ ಚಲಿಸುತ್ತವೆ.
  • ಪ್ಯಾರಾಮೀಸಿಯಂ ಲೋಮಾಂಗಗಳಿಂದ ಚಲಿಸುತ್ತವೆ.
  • ಯೂಗ್ಲಿನ ಮತ್ತು ಟ್ರಿಪನೋಸೋಮ ಕಶಾಂಗಗಳಿಂದ ಚಲಿಸುತ್ತವೆ.

ಏಕಕೋಶಿಯ ಜೀವಿಗಳಿಂದ ಉಂಟಾಗುವ ರೋಗಗಳು :

  • ಎಂಟಮೀಬಾ ಆಮಶಂಕೆ ರೋಗಕ್ಕೆ ಕಾರಣವಾಗಿದೆ.
  • ಟ್ರಿಪನೋಸೋಮ ನಿದ್ರಾರೋಗಕ್ಕೆ ಕಾರಣವಾಗಿದೆ.
  • ಪ್ಲಾಸ್ಮೋಡಿಯಂ ಮಲೇರಿಯಾ ರೋಗಕ್ಕೆ ಕಾರಣವಾಗಿದೆ.
  • ಬ್ಯಾಕ್ಟೀರಿಯಾಗಿಂತ ಅಮೀಬಿಯಾ ಮೂರು ಸಾವಿರ ಪಟ್ಟುದೊಡ್ಡದಾಗಿದೆ.
  • ಕೆಲವು ಪ್ರೋಟೋಜೋವಾಗಳು ಮನುಷ್ಯರಲ್ಲಿ ರೋಗಗಳನ್ನುಂಟು ಮಾಡುತ್ತವೆ.
  • ಪ್ಲಾಸ್ಮೋಡಿಯಂನಿಂದ ಮಲೇರಿಯಾ ರೋಗ ಉಂಟಾಗುವುದು.
  • ಲೆಶ್ಮೆನಿಯಾದಿಂದ ಕಾಲಾ ಅಜಾರ್‌ ರೋಗ ಬರುವುದು.
  • ಜಿಯಾರ್ಡಿಯಾದಿಂದ ಜಿಯಾಡಿಯಾಸಿಸ್‌ ರೋಗ ಬರುವುದು.

ಶೈವಲಗಳು :

  • ಶೈವಲಗಳಿಗೆ ಪ್ರಮುಖ ಉದಾಹರಣೆ ಎಂದರೆ ಕ್ಲಾಮಿಡೊಮೊನಾಸ್‌ ಆಗಿದೆ.
  • ಇದು ಸ್ವತಂತ್ರವಾಗಿ ಜೀವಿಸುವ ಏಕಕೋಶೀಯ ಹಸಿರು ಶೈವಲವಾಗಿದೆ.
  • ಇದು ಸಿಹಿ ನೀರಿನ ಕೊಳ, ಕೆರೆ, ಹೊಂಡ ಹಾಗೂ ಸರೋವರಗಳಲ್ಲಿ ಕಂಡುಬರುತ್ತದೆ.
  • ಇದರ ಕೋಶವು ಅಂಡಾಕಾರವಾಗಿದೆ, ಹಾಗೂ ಕೋಶವು ಸೆಲ್ಯುಲೋಸ್‌ ನಿಂದ ಮಾಡಲ್ಪಟ್ಟು ನಿರ್ದಿಷ್ಟವಾದ ಕೋಶಭತ್ತಿಯಿಂದ ಆವರಿಸಿದೆ.
  • ಕೋಶದ ಮುಂಭಾಗದಲ್ಲಿ ಎರಡು ಕಶಾಂಗಗಳಿವೆ ಹಾಗೂ ಕೋಶದಲ್ಲಿ ಬಟ್ಟಲಿನಾಕಾರದ ಒಂದುದೊಡ್ಡ ಕ್ಲೋರೊಫಾಸ್ಟ್‌
  • ಶೈವಲಗಳಕುರಿತ ಅಧ್ಯಯನಕ್ಕೆ ಅಲ್ಗಾಲಜಿ ಎನ್ನುವರು.

ಶೈವಲಗಳ ಲಕ್ಷಣಗಳು :

  • ಶೈವಲಗಳು ಏಕಕೋಶದಿಂದ ರಚಿತವಾಗಿದ್ದು, ಸೂಕ್ಷ್ಮದರ್ಶಕದಲ್ಲಿ ಮಾತ್ರ ಕಾಣುತ್ತದೆ.
  • ಕೆಲವು ಶೈವಲಗಳು ಅನೇಕ ಕೋಶಗಳಿಂದ ರಚಿತವಾಗಿ ನೀರಿನಲ್ಲಿ ತೇಲುತ್ತಿರುತ್ತದೆ.
  • ಶೈವಲಗಳ ಗಾತ್ರ 1.0 ಮೈಕ್ರಾನ್‌ ನಿಂದ ಹಲವು ಮೀಟರ್‌ ಉದ್ದದವರೆಗೆ ಬೆಳೆದಿರುತ್ತವೆ.
  • ಶೈವಲಗಳು ಹರಿತ್ತು ಕಣವನ್ನು ಹೊಂದಿದ್ದು ಹಸಿರಾಗಿರುತ್ತದೆ.
  • ಕೆಂಪುಶೈವಲಗಳಲ್ಲಿ ರೋಡೋಫಿಲ್‌ ವರ್ಣಕವಿರುತ್ತದೆ.
  • ಹಳದಿ, ಹಸಿರು ಶೈವಲಗಳಲ್ಲಿ ಕ್ಸಾಂತೋಫಿಲ್‌ ವರ್ಣಕವಿರುತ್ತದೆ.
  • ಕಂದು ಬಣ್ಣದ ಶೈವಲಗಳು ಸಮುದ್ರದಡಿಯಲ್ಲಿ 60 ಮೀಟರ್‌ ಉದ್ದದವರೆಗೆ ಬೆಳೆಯುತ್ತವೆ.

ಶೈವಲಗಳ ಉಪಯೋಗಗಳು :

  • ಕೆಲವು ಶೈವಲಗಳನ್ನು ಮಾನವನ ಆಹಾರದ ಮೂಲವನ್ನಾಗಿ ಉಪಯೋಗಿಸುತ್ತಾರೆ.
  • ಅನೇಕ ಹಸಿರು ಶೈವಲಗಳು ಜಲಚರ ಪ್ರಾಣಿಗಳಿಗೆ ಆಹಾರವನ್ನು ಒದಗಿಸುತ್ತದೆ.
  • ಈ ಶೈವಲಗಳಿಂದ ಪಡೆದ ಸಾರವನ್ನು ಅನೇಕ ವಾಣಿಜ್ಯೋತ್ಸವಗಳಲ್ಲಿ ಉಪಯೋಗಿಸಲಾಗುವುದು.
  • ಶೈವಲಗಳಿಂದ ಪಡೆದ ಸಾರದಿಂದ ತಯಾರಿಸಿದ ಅಗಾರ್‌ ಮತ್ತು ಆಲ್ಮಿನಿಕ್‌ ಆಮ್ಲಗಳನ್ನು ಔಷಧಿ ಮತ್ತು ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.

FAQ :

ಶೈವಲಗಳ ಒಂದು ಉಪಯೋಗ ತಿಳಿಸಿ?

ಶೈವಲಗಳನ್ನು ಮಾನವನ ಆಹಾರದ ಮೂಲವನ್ನಾಗಿ ಉಪಯೋಗಿಸುತ್ತಾರೆ.

ಎಂಟಮೀಬಾ ಯಾವ ರೋಗಕ್ಕೆ ಕಾರಣವಾಗಿದೆ?

ಆಮಶಂಕೆ

ಇತರೆ ವಿಷಯಗಳು :

ಜ್ವಾಲಾಮುಖಿಯ ಬಗ್ಗೆ ಮಾಹಿತಿ

ಸಮಾಜೀಕರಣದ ಬಗ್ಗೆ ಮಾಹಿತಿ

Leave your vote

-1 Points
Upvote Downvote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ