ವೇದಕಾಲದ ಸಂಸ್ಕೃತಿಯ ಬಗ್ಗೆ ಮಾಹಿತಿ | Information about Vedic culture in Kannada

ವೇದಕಾಲದ ಸಂಸ್ಕೃತಿಯ ಬಗ್ಗೆ ಮಾಹಿತಿ Information about Vedic culture Vedhakalada Samskruthi bagge Mahithi in Kannada

ವೇದಕಾಲದ ಸಂಸ್ಕೃತಿಯ ಬಗ್ಗೆ ಮಾಹಿತಿ

Information about Vedic culture in Kannada
ವೇದಕಾಲದ ಸಂಸ್ಕೃತಿಯ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ವೇದಕಾಲದ ಸಂಸ್ಕೃತಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ವೇದಕಾಲದ ಸಂಸ್ಕೃತಿ :

ಮಧ್ಯ ಏಷ್ಯಾ ಮೂಲದ ಆರ್ಯ ಜನಾಂಗದ ಆಗಮನದೊಂದಿಗೆ ಭಾರತದಲ್ಲಿ ಹೊಸ ಸಂಸ್ಕೃತಿಯೊಂದು ಆರಂಭವಾಯಿತು. ಅದನ್ನು ವೇದಕಾಲದ ಸಂಸ್ಕೃತಿ ಎಂದು ಕರೆಯಲಾಗಿದೆ. ವೇದಗಳ ಸಂಸ್ಕೃತಿಯು ಮೊದಲು ಸರಸ್ವತಿ ನದಿ ಬಯಲಿನಲ್ಲಿ, ನಂತರ ಗಂಗಾ ನದಿ ಬಯಲಿನಲ್ಲಿ ತಲೆ ಎತ್ತಿತು. ವೇದಸಾಹಿತ್ಯ ರೂಪುಗೊಂಡ ಕಾಲವನ್ನು ವೇದಕಾಲ ಎಂದು ಕರೆಯುತ್ತಾರೆ.

ವೇದ ಎಂದರೇ ಜ್ಞಾನ. ವೇದಗಳು ನಾಲ್ಕು ಋಗ್ವೇದ, ಯಜರ್ವೇದ, ಸಾಮವೇದ ಮತ್ತು ಅಥರ್ವವೇದ. ಇವುಗಳಲ್ಲಿ ಋಗ್ವೇದವು ಪ್ರಾಚೀನವಾದುದು. ಸಂಸ್ಕೃತ ಭಾಷೆಯಲ್ಲಿರುವ ಈ ವೇದಗಳು ಸಾವಿರಾರು ವರ್ಷಗಳ ಕಾಲ ಮೌಖಿಕವಾಗಿಯೇ ಇದ್ದವು. ಆರ್ಯರ ಕಾಲದಲ್ಲಿ ನಾಲ್ಕು ವೇದಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಸಾಹಿತ್ಯ ರಚನೆಯಾಯಿತು. ವೇದಕಾಲದ ಇತಿಹಾಸವನ್ನು ತಿಳಿಯಲು ವೈದಿಕ ಸಾಹಿತ್ಯವೇ ಆಧಾರ ಋಗ್ವೇದದ ಕಾಲವನ್ನು ಪೂರ್ವ ವೇದಕಾಲವೆಂದು, ಆನಂತರದ ಕಾಲವನ್ನು ಉತ್ತರ ವೇದ ಕಾಲವೆಂದು ಕರೆಯಲಾಗುವುದು.

ಪೂರ್ವ ವೇದ ಕಾಲ :

ಸಾಮಾಜಿಕ ಜೀವನ :

ಪೂರ್ವ ವೇದಕಾಲದಲ್ಲಿ ಕುಟುಂಬವು ಸಮಾಜದ ಮೂಲ ಘಟಕವಾಗಿತ್ತು. ತಂದೆಯ ಕುಟುಂಬದ ಮುಖ್ಯಸ್ಥನಾಗಿದ್ದನು. ಅವಿಭಕ್ತ ಕುಟುಂಬ ವ್ಯವಸ್ಥೆ ಸಮಾಜದಲ್ಲಿ ರೂಡಿಯಲ್ಲಿತ್ತು. ಯುದ್ದದಲ್ಲಿ ತಾವು ಗೆದ್ದ ದಾಸ, ದಸ್ಯುಗಳನ್ನು ಗುಲಾಮರಂತೆ ನೋಡುತ್ತಿದ್ದರು. ಆರ್ಯರಿಗೆ ಸೋಮ ಮತ್ತು ಸುರ ಎಂಬ ಪಾನೀಯಗಳ ಪರಿಚಯವಿತ್ತು.

ಸ್ತ್ರೀಯರ ಸ್ಥಾನಮಾನ :

ಮಹಿಳೆಯೆಇಗೆ ಸಮಾಜದಲ್ಲಿ ಸೂಕ್ತ ಸ್ಥಾನಮಾನಗಳಿದ್ದವು. ಇವರು ರಾಜಕೀಯ ಸಂಸ್ಥೆಗಳಲ್ಲಿಯೂ ಭಾಗವಹಿಸುತ್ತಿದ್ದರು. ವಿಧವಾ ವಿವಾಹ ಆಚರಣೆಯಲ್ಲಿತ್ತು. ಹೆಣ್ಣು ಮಕ್ಕಳು ಸಹ ವೇದಾಧ್ಯಯನ ಮಾಡುತ್ತಿದ್ದರು. ಘೋಷಾ, ಅಪಾಲಾ, ಲೋಪಮುದ್ರ, ಇಂದ್ರಾಣಿ, ವಿಶ್ವವರಾ ಮುಂತಾದವರು ವೇದಕಾಲದ ಮಹಿಳಾ ವಿದ್ವನ್ಮಣಿಗಳಾಗಿದ್ದರು. ರಾಜಕೀಯ ಸಂಸ್ಥೆಗಳಾದ ಸಭಾ ಮತ್ತು ಸಮಿತಿಗಳಲ್ಲಿ ಮಹಿಳೆಯರೂ ಭಾಗವಹಿಸುತ್ತಿದ್ದರು.

ಆರ್ಥಿಕ ಜೀವನ :

ಪಶ ಪಾಲನಾ ಮತ್ತು ಬೇಸಾಯವು ಆರ್ಯರ ಮುಖ್ಯ ಉದ್ಯೋಗವಾಗಿತ್ತು. ಹಲವು ಬಗೆಯ ಧಾನ್ಯಗಳನ್ನು ಅವರು ಬೆಳೆಯುತ್ತಿದ್ದರು. ಬಾರ್ಲಿ, ಅಕ್ಕಿ, ಮೀನು, ಮಾಂಸಗಳನ್ನು ಬಳಸುತ್ತಿದ್ದರು. ಕಬ್ಬಿಣ ಮುಂತಾದ ಲೋಹಗಳ ಉಪಯೋಗವನ್ನು ಅರಿತ್ತಿದ್ದರು. ಹತ್ತಿ ಮತ್ತು ಉಣ್ಣೆ ನೇಯುವವರು, ಬಡಗಿಗಳು, ಕಮ್ಮಾರರು ಮತ್ತು ಕುಂಬಾರರು ಇದ್ದರು. ವೃತ್ತಿಗಳಲ್ಲಿ ಕೃಷಿ, ವೈದ್ಯಕೀಯ ಮತ್ತು ಪುರೋಹಿತ ವೃತ್ತಿಗಳು ಮುಖ್ಯವಾಗಿದ್ದವು. ಆದರೆ ಯಾರೇ ಆಗಲಿ ಯಾವ ವೃತ್ತಿಯನ್ನಾದರೂ ಮಾಡಬಹುದಿತ್ತು. ಹಸುಗಳನ್ನು ಸಂಪತ್ತು ಎಂದು ಪರಿಗಣಿಸುತ್ತಿದ್ದರು. ಅವುಗಳಿಗಾಗಿ ಯುದ್ದಗಳು ನಡೆಯುತ್ತಿದ್ದವು.

ರಾಜಕೀಯ ಜೀವನ :

ಆರ್ಯರ ಬಣದ ಮುಖ್ಯಸ್ಥನನ್ನು ರಾಜನ್‌ ಎಂದು ಕರೆಯುತ್ತಿದ್ದರು. ರಾಜನ್‌ ಸರ್ವಾಧಿಕಾರಿಯಾಗಿರಲಿಲ್ಲ ಮತ್ತು ರಾಜತ್ವವು ವಂಶಪಾರಂಪರ್ಯವೂ ಆಗಿರಲಿಲ್ಲ. ಸಭಾ, ಸಮಿತಿ ಮತ್ತು ವಿಧಾತಗಳೆಂಬ ರಾಜಕೀಯ ಸಂಸ್ಥೆಗಳು ಆಡಳಿತದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದವು. ರಾಜನು ಹಿರಿಯರ ಸಲಹೆಗಳನ್ನು ಪಡೆದು ತೀರ್ಮಾನಕೊಡುವ ನ್ಯಾಯಾಧೀಶನೂ ಆಗಿದ್ದ. ಯುದ್ದದಲ್ಲಿ ಹೋರಾಡುವುದು, ಜನರ ಜೀವ, ಸ್ವತ್ತು ಮತ್ತು ಗೋವುಗಳ ರಕ್ಷಣೆ ಹಾಗೂ ಜನಕಲ್ಯಾಣ ರಾಜನ ಕರ್ತವ್ಯಗಳಾಗಿದ್ದವು.

ಧಾರ್ಮಿಕ ಜೀವನ :

ಆರ್ಯರು ಇಂದ್ರ, ಸೂರ್ಯ, ಸೋಮ, ವರುಣ, ಮಿತ್ರ, ಯಮ, ಅಶ್ವಿನಿ ಮುಂತಾದ ದೇವತೆಗಳನ್ನು ಆರಾಧಿಸುತ್ತಿದ್ದರು. ಆರ್ಯರು ದೇವತಾರಾಧನೆಯನ್ನು ಯಜ್ಞದ ಮೂಲಕ ಮಾಡುತ್ತಿದ್ದರು. ಸತ್ಯವು ಒಂದೇ ಆಗಿದೆ. ತಿಳಿದವರು ಅದನ್ನು ಹಲವು ರೀತಿಯಲ್ಲಿ ವರ್ಣಿಸುತ್ತಾರೆ. ವಿಶ್ವದ ಎಲ್ಲಾ ಮೂಲೆಗಳಿಂದಲೂ ಉತ್ತಮ ವಿಚಾರಗಳು ನಮ್ಮತ್ತ ಬರಲಿ ಇವು ವೇದಗಳೊಳಗಿನ ಸಂದೇಶಗಳಾಗಿವೆ.

ಉತ್ತರ ವೇದ ಕಾಲ :

ರಾಜಕೀಯ ಬದಲಾವಣೆಗಳು :

ಉತ್ತರ ವೇದ ಕಾಲದಲ್ಲಿ ರಾಜನು ಬಲಿಷ್ಠನಾದನು. ವಿಧಾತ ಸಂಪೂರ್ಣವಾಗಿ ಕಣ್ಮರೆಯಾದರೆ ಸಭಾ ಮತ್ತು ಸಮಿತಿಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡವು. ರಾಜನು ತನ್ನ ರಾಜ್ಯದ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಾರಂಭಿಸಿದನು. ರಾಜತ್ವವು ವಂಶಪಾರಂಪರ್ಯವಾಯಿತು. ರಾಜನು ರಾಜ್ಯ ವಿಸ್ತರಣೆಗಾಗಿ ಅಶ್ವಮೇಧ, ರಾಜಸೂಯ ಮೊದಲಾದಯಾಗಗಳನ್ನು ಮಾಡಲಾರಂಭಿಸಿದನು.

ಸಾಮಾಜಿಕ ಬದಲಾವಣೆಗಳು :

ಉತ್ತರ ವೇದಗಳ ಕಾಲದಲ್ಲಿ ಗೋತ್ರ ಪದ್ದತಿ ಆರಂಭವಾಯಿತು. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಎಂಬ ನಾಲ್ಕು ಆಶ್ರಮಗಳ ವ್ಯವಸ್ಥೆಆರಂಭವಾಯಿತು. ಸ್ತ್ರೀಯರ ಸ್ಥಾನಮಾನದಲ್ಲಿ ಬಾರಿ ಕುಸಿತ ಉಂಟಾಯಿತು.ಸ್ತ್ರೀಯರು ಶಿಕ್ಷಣದಿಂದ ವಂಚಿತರಾದರು. ರಾಜಕೀಯ ಸಂಸ್ಥೆಗಳಿಂದ ದೂರವಾದರು. ಬ್ರಾಹ್ಮಣ, ಕ್ಷತ್ರೀಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ವರ್ಣ ವ್ಯವಸ್ಥೆ ಸಮಾಜದಲ್ಲಿ ತಲೆ ಎತ್ತಿತು.ಸತಿಸಹಗಮನ ಪದ್ದತಿ, ಬಾಲ್ಯವಿವಾಹಗಳು ಆರಂಭವಾದವು. ರಾಜಶಾಹಿಯೇ ಮೊದಲಾದವು. ರಾಜಶಾಹಿಯೇ ಮೊದಲಾದ ಉನ್ನತ ವರ್ಗದಲ್ಲಿ ಬಹುಪತ್ನಿತ್ವ ರೂಢಿಯಲ್ಲಿತ್ತು.

ಧಾರ್ಮಿಕ ಜೀವನ :

ಧಾರ್ಮಿಕ ಆಚರಣೆಗಳು ಸಂಕೀರ್ಣವೂ, ಕಠಿಣವೂ ಆದವು. ಯಾಗಯಜ್ಞಗಳ ಆಚರಣೆ ತೀವ್ರವಾಯಿತು. ಹವಿಸ್ಸಿನ ಹೆಸರಿನಲ್ಲಿ ಹಾಲು, ತುಪ್ಪ, ಧಾನ್ಯಗಳನ್ನು ಬೆಂಕಿಗೆ ಅರ್ಪಿಸುವುದು ಹೆಚ್ಚಾದಂತೆ ಆಹಾರದ ಬಿಕ್ಕಟ್ಟು ಉಲ್ಬಣಿಸಿತು. ಬ್ರಹ್ಮ, ವಿಷ್ಣು ಮತ್ತು ಶಿವ ಪ್ರಭಾವಿ ದೇವರುಗಳಾದರು. ಜೊತೆಗೆ ಲಕ್ಷ್ಮೀ, ಸರಸ್ವತಿ, ಪಾರ್ವತಿ, ಗಣೇಶ, ಸ್ಕಂದ ಮೊದಲಾದ ಪರಿವಾರ ದೇವ ದೇವತೆಗಳು ಪ್ರಾಮುಖ್ಯತೆಗೆ ಬಂದವು.

ಮಹಾಕಾವ್ಯಗಳು :

ಭಾರತೀಯರಲ್ಲಿ ಅತ್ಯಂತ ಜನಪ್ರಿಯವಾದ ಎರಡು ಮಹಾಕಾವ್ಯಗಳೆಂದರೆ ವಾಲ್ಮೀಕಿಯ ರಾಮಾಯಣ ಮತ್ತು ವ್ಯಾಸನ ಮಹಾಭಾರತ. ಈ ಮಹಾಕಾವ್ಯಗಳು ಸಾವಿರಾರು ವರ್ಷಗಳ ಕಾಲ ಭಾರತೀಯ ಜನಜೀವನ, ಸಾಹಿತ್ಯ ಮತ್ತು ಕಲೆಗಳನ್ನು ರೂಪಿಸಿವೆ.

FAQ :

ವೇದಗಳಲ್ಲಿ ಎಷ್ಟು ವಿಧ?

4(ನಾಲ್ಕು)

ನಾಲ್ಕು ವೇದಗಳನ್ನು ತಿಳಿಸಿ?

ಋಗ್ವೇದ, ಯಜರ್ವೇದ, ಸಾಮವೇದ ಮತ್ತು ಅಥರ್ವವೇದ

ಇತರೆ ವಿಷಯಗಳು :

ಜಲ ಸಂಪನ್ಮೂಲಗಳ ಬಗ್ಗೆ ಮಾಹಿತಿ

ಜನಪದ ಚರಿತ್ರೆ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ