ಜ್ವಾಲಾಮುಖಿಯ ಬಗ್ಗೆ ಮಾಹಿತಿ | Information about volcano in Kannada

ಜ್ವಾಲಾಮುಖಿಯ ಬಗ್ಗೆ ಮಾಹಿತಿ Information about volcano Jwalamukiya bagge Mahithi in Kannada

ಜ್ವಾಲಾಮುಖಿಯ ಬಗ್ಗೆ ಮಾಹಿತಿ

Information about volcano in Kannada
ಜ್ವಾಲಾಮುಖಿಯ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಜ್ವಾಲಾಮುಖಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಜ್ವಾಲಾಮುಖಿ :

ಭೂಮಿಯ ಅಂತರಾಳದಲ್ಲಿರುವ ಒತ್ತಡ ಮತ್ತು ಉಷ್ಣತೆಯಿಂದ ಲಾವಾರಸವು ಭೂ ಮೇಲ್ಮ್ಯೆಗೆ ಬರುವ ಪ್ರಕ್ರಿಯೆಗೆ ಜ್ವಾಲಾಮುಖಿ ಎಂದು ಕರೆಯುವರು. ಜ್ವಾಲಾಮುಖಿಯ ಕುರಿತು ಅಧ್ಯಯನ ಮಾಡುವ ಶಾಸ್ತ್ರಕ್ಕೆ ಜ್ವಾಲಾಮುಖಿ ಶಾಸ್ತ್ರ ಅಥವಾ ಓಲ್ಕೋನೋಲಾಜಿ ಎಂದು ಕರೆಯುವರು.

ವಿಧಗಳು :

ಜೀವಂತ ಜ್ವಾಲಾಮುಖಿ – ಒಂದು ಪ್ರದೇಶದಲ್ಲಿ ಮೇಲಿಂದ ಮೇಲೆ ಜ್ವಾಲಾಮುಖಿಗಳು ಸಂಭವಿಸುತ್ತಿದ್ದರೆ ಅದಕ್ಕೆ ಜೀವಂತ ಜ್ವಾಲಾಮುಖಿ ಅಥವಾ ಜಾಗೃತ ಜ್ವಾಲಾಮುಖಿ ಎಂದು ಕರೆಯುವರು.

ಹವಾಯಿಮೌನಲೋವಾ
ಇಕ್ವೆಡಾರ್ಕೋಟೋಪಾಕ್ಷಿ
ಅಮೇರಿಕಾಹ್ಯಾಲೆನ್ಸ್
ಭಾರತಬ್ಯಾರನ್(ಅಂಡಮಾನ್‌ ಮತ್ತು ನಿಕೋಬಾರ್)
ಮಧ್ಯ ಅಮೇರಿಕಾ ಇಜಾವೊಲ್ಕೊ
ಮೆಡಿಟೇರಿಯಸ್ಯಾಂಬೋಲಿ
ಮೆಕ್ಸಿಕೋಪ್ಯಾರಾಕುಟಿನ
ಸಿಸಿಲಿಎಟ್ನಾ
ಅಂಟಾರ್ಟಿಕಏರ್ಬಸ್

ಸುಪ್ತ ಜ್ವಾಲಾಮುಖಿ

ಒಮ್ಮೆ ಜ್ವಾಲಾಮುಖಿ ಸಂಭವಿಸಿ ಹಲವಾರು ವರ್ಷಗಳ ನಂತರ ಮತ್ತೆ ಆ ಪ್ರದೇಶದಲ್ಲಿ ಜ್ವಾಲಾಮುಖಿ ಸಂಭವಿಸಿದರೆ ಅದಕ್ಕೆ ಸುಪ್ತ ಅಥವಾ ನಿದ್ರಿಸುತ್ತಿರುವ ಜ್ವಾಲಾಮುಖಿ ಎನ್ನುವರು.

ಜಪಾನ್ಪ್ಯೂಜಿಯಾಮಾ
ಭಾರತನಾರ್ಕೋಂಡಾಮ
ತಾಂಜೇನಿಯಾಕಿಲಿ ಮಂಜಾರೋ
ಅಮೇರಿಕಾಲಾಸ್ಸನ್ಸ್
ಹವಾಯಿಹಲಿಕಲಿ
ಮೆಕ್ಸಿಕೋಪ್ರೊಪೋ ಕೆಟಿಪಿಟ
ಇಂಡೋನೇಷ್ಯಾಕಕ್ರಟೋಲ್
ಇಟಲಿಮೌಂಟ್‌ ವೆಸುವೇಸ್

ಲುಪ್ತ ಜ್ವಾಲಾಮುಖಿ :

ಒಮ್ಮೆ ಜ್ವಾಲಾಮುಖಿ ಸಂಭವಿಸಿ ಮತ್ತೆ ಆ ಪ್ರದೇಶದಲ್ಲಿ ಜ್ವಾಲಾಮುಖಿ ಸಂಭವಿಸದೇ ಇದ್ದರೆ ಅದಕ್ಕೆ ಲುಪ್ತ, ಸತ್ತ, ಆರಿದ, ನಂದಿದ, ಜ್ವಾಲಾಮುಖಿ ಎನ್ನುವರು.

ಅರ್ಜೈಂಟನ್ಅಕಾಂಕಗುವಾ
ತಾಂಜೇನಿಯಾಗೊರಾಂಗೊರೊ
ಭಾರತಗಿರಿನಾನ್‌ ಬೆಟ್ಟ
ಅಮೇರಿಕಾಮೌಂಟ್ ಹುಡ್‌, ಮೌಂಟ್‌ ಶಾಸ್ತ್ರ
ಸ್ಕಾಟ್ಲೆಂಡ್ಅರ್ಥರಸೀಟ್

ಜ್ವಾಲಾಮುಖಿಯಿಂದ ಹೊರ ಬೀಳುವ ವಸ್ತುಗಳು :

  • ದ್ರವ ವಸ್ತುಗಳು – ಜ್ವಾಲಾಮುಖಿಯಿಂದ ಹೊರ ಬೀಳುವ ದ್ರವ ವಸ್ತು ಎಂದರೆ ಲಾವಾರಸ.
  • ಘನ ವಸ್ತುಗಳು – ಜ್ವಾಲಾಮುಖಿಯಿಂದ ಹೊರ ಬೀಳುವ ಶಿಲಾ ಚೂರುಗಳಿಗೆ ಅಥವಾ ಘನವಸ್ತುಗಳಿಗೆ ಪೈರೋಕ್ಲಾಸ್ಟ್‌ ಎನ್ನುವರು.
  • ಜ್ವಾಲಾಮುಖಿಯಿಂದಾಗಿ ಲಾವಾರಸವು ಅತಿ ಎತ್ತರವಾಗಿ ಚಲಿಸಿದಾಗ ಅದು ವಾಯುಮಂಡಲದ ಸಂಪರ್ಕದಿಂದ ಅತಿ ದೊಡ್ಡದಾದ ಗುಂಡುಗಳ ರೂಪದಲ್ಲಿ ನಿರ್ಮಾಣಗೊಳ್ಳುತ್ತದೆ. ಇವುಗಳಿಗೆ ಜ್ವಾಲಾಮುಖಿ ಗುಂಡುಗಳು ಎಂದು ಕರೆಯುವರು.
  • ಜ್ವಾಲಾಮುಖಿ ಗುಂಡುಗಳಿಗಿಂತ ಗಾತ್ರದಲ್ಲಿ ಚಿಕ್ಕದಾಗಿರುವ ಗುಂಡುಗಳಿಗೆ ಲ್ಯಾಪೆಲ್ಲಿ ಅಥವಾ ಜ್ವಾಲಾಮುಖಿ ಕಿಟ್ಟ ಎಂದು ಕರೆಯುವರು.
  • ಜ್ವಾಲಾಮುಖಿಯಿಂದ ಹೊರ ಬೀಳುವ ಸೂಕ್ಷ್ಮ ಕಣಗಳಿಗೆ ಜ್ವಾಲಾಮುಖಿ ಧೂಳು ಎಂದು ಕರೆಯುವರು.
  • ಅನಿಲಗಳು – ಲಾವಾರಸವು ಭೂಮಿಯ ಅಂತರಾಳದಲ್ಲಿದ್ದಾಗ ಮ್ಯಾಗ್ಮಾ ಎಂತಲೂ ಭೂ ಮೇಲ್ಮೈಗೆ ಬಂದಾಗ ಶಿಲಾರಸ ಅಥವಾ ಲಾವಾರಸ ಎಂದು ಕರೆಯುವರು.
  • ಲಾವಾರಸವು ಭೂ ಮೇಲ್ಮೈಗೆ ಹೊರಬರುವ ಮಾರ್ಗಕ್ಕೆ ಜ್ವಾಲಾಮುಖಿ ದ್ವಾರ ಎನ್ನುವರು.
  • ಲಾವಾರಸವು ವಿವಿಧ ನಾಳಗಳ ಮೂಲಕ ಹರಿದು ಬರುವ ಮಾರ್ಗಕ್ಕೆ ಜ್ವಾಲಾಮುಖಿ ನಾಳ ಎನ್ನುವರು.
  • ಭೂ ಮೇಲ್ಮೈಗೆ ಲಾವಾರಸವು ಹೊರ ಬರುವ ಮಾರ್ಗಕ್ಕೆ ಬಾಯಿ, ಕುಂಡ,, ಕ್ರೇಟರ್‌ ಎಂದು ಕರೆಯುವುರು.
  • ಜ್ವಾಲಾಮುಖಿ ದ್ವಾರದ ಸುತ್ತಲೂ ಕಂಡು ಬರುವ ತಗ್ಗುಗಳಿಗೆ ಕಾಲ್ಟೆರಾ ಎನ್ನುವರು.

ಜ್ವಾಲಾಮುಖಿ ಹಂಚಿಕೆ :

  • ಫೆಸಿಫಿಕ್‌ ಸಾಗರ ಅಥವಾ ಫೆಸಿಫಿಕ್‌ ಅಗ್ನಿ ವೃತ್ತ – ಫಿಲಿಫೈನ್ಸ್‌, ಜಪಾನ್‌, ಮಧ್ಯ ಅಮೇರಿಕಾ, ದಕ್ಷಿಣ ಅಮೇರಿಕಾ
  • ಮಧ್ಯ ಅಂಟ್ಲಾಂಟಿಕ ವಲಯ – ವೆಸ್ಟ್‌ ಇಂಡೀಸ್‌, ಐಸ್ಲ್ಯಾಂಡ್‌
  • ಮಧ್ಯ ಬೂ ಖಂಡಗಳ ವಲಯ – ಇಟಲಿ, ಸ್ಪೇನ್‌, ಟರ್ಕಿ, ಗ್ರೀಕ್‌
  • ಪ್ರಮುಖ ದ್ವೀಪಗಳು – ಇಂಡೋನೇಷ್ಯಾ, ಹವಾಯಿ

FAQ :

ಜೀವಂತ ಜ್ವಾಲಾಮುಖಿ ಎಂದರೇನು?

ಒಂದು ಪ್ರದೇಶದಲ್ಲಿ ಮೇಲಿಂದ ಮೇಲೆ ಜ್ವಾಲಾಮುಖಿಗಳು ಸಂಭವಿಸುತ್ತಿದ್ದರೆ ಅದಕ್ಕೆ ಜೀವಂತ ಜ್ವಾಲಾಮುಖಿ ಅಥವಾ ಜಾಗೃತ ಜ್ವಾಲಾಮುಖಿ ಎಂದು ಕರೆಯುವರು.

ಜ್ವಾಲಾಮುಖಿಯ ಕುರಿತು ಅಧ್ಯಯನ ಮಾಡುವ ಶಾಸ್ತ್ರಕ್ಕೆ ಏನೆಂದು ಕರೆಯುವರು?

ಓಲ್ಕೋನೋಲಾಜಿ ಎಂದು ಕರೆಯುವರು.

ಇತರೆ ವಿಷಯಗಳು :

ಹರಪ್ಪ ನಾಗರಿಕತೆಯ ಬಗ್ಗೆ ಮಾಹಿತಿ

ವೇದಕಾಲದ ಸಂಸ್ಕೃತಿಯ ಬಗ್ಗೆ ಮಾಹಿತಿ

Leave your vote

15 Points
Upvote Downvote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ