ವಿಶ್ವ ಜಲ ದಿನಾಚರಣೆಯ ಬಗ್ಗೆ ಮಾಹಿತಿ | Information about World Water Day in Kannada

ವಿಶ್ವ ಜಲ ದಿನಾಚರಣೆಯ ಬಗ್ಗೆ ಮಾಹಿತಿ Information about World Water Day Vishwajala Dinacharaneya bagge Mahithi in Kannada

ವಿಶ್ವ ಜಲ ದಿನಾಚರಣೆಯ ಬಗ್ಗೆ ಮಾಹಿತಿ

Information about World Water Day in Kannada
ವಿಶ್ವ ಜಲ ದಿನಾಚರಣೆಯ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ವಿಶ್ವ ಜಲ ದಿನಾಚರಣೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ವಿಶ್ವ ಜಲ ದಿನಾಚರಣೆ :

ಭೂಮಿಯ ಮೇಲೆ ನೀರು ಅತ್ಯವಶ್ಯಕವಾಗಿದೆ, ನೀರಿಲ್ಲದೆ ಯಾವುದೇ ಜೀವಿ ಈ ಭೂಮಿ ಮೇಲೆ ಬದುಕಲು ಆಗುವುದಿಲ್ಲ. ಆದರೆ ಈ ಭೂಮಿ ಶೇ.97.5 ರಷ್ಟು ಉಪ್ಪು ನೀರು, ಶೇ 2.5 ರಷ್ಟು ಶುದ್ದ ನೀರಿದೆ. ನೀರು ಪ್ರತಿಯೊಂದು ಜೀವಿಗಳಿಗೂ ಅತ್ಯಗತ್ಯ ವಾಗಿರುವ ಒಂದು ಅಂಶವಾಗಿದೆ, ಹಾಗಾಗಿ ನೀರಿನ ಮಹತ್ವವನ್ನು ಅರಿಯಲು ಮತ್ತು ಅದರ ಸಂರಕ್ಷಣೆ ಮಾಡಲು ಪ್ರತಿ ವರ್ಷ ಮಾರ್ಚ್‌ 22 ನ್ನು ವಿಶ್ವ ಜಲ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.

ವಿಶ್ವ ಜಲ ದಿನಾಚರಣೆಯ ಇತಿಹಾಸ :

1993ರ ಬ್ರೆಜಿಲ್‌ ನ ರಿಯೋದಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಹಾಗೂ ಅಭಿವೃದ್ದಿ ಸಮಾವೇಶದಲ್ಲಿ ಜಲ ಸಂರಕ್ಷಣೆಯ ಮಹತ್ವದ ತೀರ್ಮಾನ ಕೈಗೊಂಡು ಪ್ರತಿ ವರ್ಷ ಮಾರ್ಚ್‌ 22 ರಂದು ವಿಶ್ವ ಜಲ ದಿನಾಚರಣೆಯನ್ನು ಆಚರಿಸಲು ನಿರ್ಧರಿಸಿತು.

ನೀರಿನ ಮಹತ್ವ :

ನೀರು ಅಥವಾ ಜಲ ಸಕಲ ಜೀವರಾಶಿಗಳ ಮೂಲವಾಗಿದೆ. ನೀರು ಇಡೀ ವಿಶ್ವಕ್ಕೆ ಆಧಾರವಾಗಿದೆ, ನೀರಿಲ್ಲದೆ ಬದುಕಿಲ್ಲ, ಅಷ್ಟೊಂದು ಮಹತ್ವ ನೀರಿಗಿದೆ. ನೀರು ಇದ್ದ ಕಡೆ ಜೀವಸಂಕುಲಗಳು ಇರುತ್ತವೆ. ನೀರಿಲ್ಲದ ಕಡೆ ಬರಡು ಮನೆಮಾಡಿರುತ್ತದೆ. ಭಾರತದಲ್ಲಿ ನೀರನ್ನು ದೇವಸ್ವರೂಪಿಯಂತೆ ಪೂಜಿಸಲಾಗುತ್ತದೆ. ಜಲ ಮೂಲಗಳಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಇಂತಹ ಪವಿತ್ರ ಜಲ ನಮಗೆ ಮಾತ್ರವಲ್ಲ ನಮ್ಮ ಮುಂದಿನ ಪೀಳಿಗೆಗೈ ಸಿಗಬೇಕು. ಈ ನೀರು ಸ್ವಚ್ಛ ಮತ್ತು ಶುದ್ದವಾಗಿರಬೇಕೆಂಬುದೇ ಈಗಿನ ಪ್ರಮುಖ ಕಳಕಳಿಯಾಗಿದೆ. ಈ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳು ನಡೆಯುತ್ತಿವೆ. ಇದರ ಒಂದು ಭಾಗವೇ ವಿಶ್ವ ಜಲ ದಿನ.

ನಮ್ಮ ಭೂಮಿಯು ಮುಕ್ಕಾಲು ಭಾಗ ನೀರಿನಿಂದ ಆವೃತವಾಗಿದೆ ಎಂಬುದೇನೋ ನಿಜ, ಆದರೆ ವಿಪರಾಸ್ಯವೆಂದರೆ ಜಗತ್ತಿನ ಸುಮಾರು 783 ದಶಲಕ್ಷ ಜನರಿಗೆ ಈಗಲೂ ನೀರು ಸಿಗುತ್ತಿಲ್ಲ, ಕೇವಲ 2.5 ದಶಲಕ್ಷ ಜನರಿಗೆ ಮಾತ್ರ ನೀರಿನ ಲಭ್ಯತೆ ಇದೆ. ಅಲ್ಲದೇ ಈಗಿನ ಅಭಿವೃದ್ದಿ, ಕಾಮಗಾರಿ ಮತ್ತು ಬೃಹತ್‌ ಕೈಗಾರಿಕೆಗಳಿಂದ ನೀರು ಕಲುಷಿತವಾಗಿದೆ.

ಕೃಷಿ ಕ್ಷೇತ್ರವಂತು ನೀರಿಲ್ಲದೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಹಾಗಾಗಿ ನೀರನ್ನು ಮಿತವಾಗಿ ಬಳಸಿಕೊಂಡು ಹೋಗಬೇಕು. ನೀರು ವಿಶಿಷ್ಟವಾದ ವಸ್ತು ಜೀವಜಲ ಎನ್ನುತ್ತೇವೆ. ಮನುಷ್ಯ ಕೇವಲ ನೀರನ್ನು ಮಾತ್ರ ಸೇವಿಸಿ 21 ದಿನಗಳ ಕಾಲ ಬದುಕಬಹುದು. ಹೀಗಿರುವಾಗ ನೀರಿನ ಸಂರಕ್ಷಣೆ ಎಷ್ಟು ಮುಖ್ಯ ತಿಳಿಯುತ್ತದೆ. ಅರಬ್‌ ದೇಶದಲ್ಲಿ ಏನೆಲ್ಲಾ ಐಷರಾಮಿ ವಸ್ತುಗಳು ದೊರೆಯುತ್ತವೆ, ಆದರೆ ನೀರನ್ನು ದುಡ್ಡು ಕೊಟ್ಟು ಕೊಳ್ಳುತ್ತಾರೆ. ಹಾಗಿದ್ದಾಗ ನೀರನ್ನು ನಾವು ಮಿತವಾಗಿ ಬಳಸಬೇಕು. ಮುಂದಿನ ಪೀಳಿಗೆಗೂ ಸ್ವಚ್ಛಂದವಾದ ನೀರನ್ನು ಇಡಬೇಕು.

ನೀರಿನ ಸಂರಕ್ಷಣೆಯ ವಿಧಾನಗಳು :

  • ನೀರಿಗೆ ಕ್ಲೋರಿನ್ ಅಂಶಗಳಂತಹ ರೋಗನಿವಾರಕ ರಾಸಾಯನಿಕಗಳನ್ನು ಬೆರೆಸಿ, ಶುದ್ದಿಕರಿಸುವುದರ ಮೂಲಕ ಶುದ್ದ ಕುಡಿಯುವ ನೀರನ್ನು ಪೂರೈಸುವುದು.
  • ತ್ಯಾಜ್ಯ ವಸ್ತುಗಳನ್ನು ಕೆರೆ, ನದಿಗಳಂತಹ ನೀರಿನ ಆಕರಗಳಲ್ಲಿ ಹಾಕುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು.
  • ಕೈಗಾರಿಕಾ ತ್ಯಾಜ್ಯ ವಸ್ತುಗಳನ್ನು ನೀರಿನ ಆಕರಗಳಿಗೆ ವಿಸರ್ಜಿಸುವ ಮೊದಲು ವೈಜ್ಞಾನಿಕ ಸಂಸ್ಕರಣೆಗೆ ಒಳಪಡಿಸುವುದು.
  • ನೀರಿನಲ್ಲಿರುವ ಕಲುಷಿತ ಅಂಶಗಳನ್ನು ವಿವಿಧ ವಿಧಾನಗಳಿಂದ ಬೇರ್ಪಡಿಸಿ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡುವುದು.
  • ಮಳೆಗಾಲದಲ್ಲಿ ಭೂಮಿಗೆ ಬಿದ್ದ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಪ್ಪಿಸಲು ಸಣ್ಣ ಹಳ್ಳ ತೊರೆಗಳಿಗೆ ಚೆಕ್‌ ಡ್ಯಾಮ್ಗಳನ್ನು ನಿರ್ಮಿಸಿ ನೀರು ಸಂಗ್ರಹಿಸುವುದು.
  • ಅರಣ್ಯ ನಾಶವನ್ನು ತಡೆಗಟ್ಟುವುದು ಮತ್ತು ಪ್ರಾಣಿಗಳ ಅತಿಯಾದ ಮೇಯಿಸುವಿಕೆಯನ್ನು ನಿಯಂತ್ರಿಸುವುದು.
  • ಶವಗಳನ್ನು ನೀರಿನಲ್ಲಿ ಎಸೆಯುವುದು ನಿಲ್ಲಿಸಬೇಕು ಮತ್ತು ದನಕರುಗಳನ್ನು ನೀರಿನಲ್ಲಿ ತೊಳೆಯುವುದು, ಬಟ್ಟೆ ಒಗೆಯುವುದು ನಿಲ್ಲಿಸಬೇಕು.
  • ಸಮುದ್ರದಲ್ಲಿ ತೈಲ ಸಾಗಾಣಿಕೆ ಮಾಡುವಾಗ ಸೋರಿಕೆಯಾಗದಂತೆ ನೋಡಿಕೊಳ್ಳಬೇಕು.
  • ಜಲಮೂಲಗಳಲ್ಲಿ ತುಂಬಿರುವ ಹೂಳು ತೆಗೆಯುವ ಕಾರ್ಯ ನಡೆಸಬೇಕು.
  • ಮಳೆ ಬಿದ್ದ ಸ್ಥಳದಲ್ಲಿಯೇ ನೀರನ್ನು ಸಂಗ್ರಹಿಸುವುದು.
  • ಮಳೆ ಬಿದ್ದು ಹರಿಯುವ ನೀರನ್ನು ಸಂಗ್ರಹಿಸುವುದು.
  • ಮಳೆ ನೀರು ಹರಿದು ಹೋಗದಂತೆ ತಡೆಯೊಡ್ಡಿ ಭೂಮಿಯಲ್ಲಿ ಇಂಗುವಂತೆ ಮಾಡುವುದರಿಂದ ಅಂತರ್ಜಾಲ ಮಟ್ಟವು ಮರುಪೂರ್ಣದಿಂದ ಹೆಚ್ಚುವುದು ಮತ್ತು ವರ್ಷದ ಎಲ್ಲಾ ಕಾಲದಲ್ಲಿಯೂ ನೀರು ದೊರೆಯುವಂತಾಗುವುದು.

ವಿಶ್ವಜಲ ದಿನ 2022 ಥೀಮ್‌ :

“ಅಂತರ್ಜಲ ಅದೃಶ್ಯವನ್ನು ಗೋಚರಿಸುವಂತೆ ಮಾಡುವುದು”, ಇದನ್ನು ಅಂತರಾಷ್ಟ್ರೀಯ ಅಂತರ್ಜಲ ಸಂಪನ್ಮೂಲಗಳ ಮೌಲ್ಯಮಾಪನ ಕೇಂದ್ರ ಪ್ರಸ್ತಾಪಿಸಿದೆ. ಅಂತರ್ಜಲವು ಒಂದು ನಿರ್ಣಾಯಕ ಸಂಪನ್ಮೂಲವಾಗಿದ್ದು ಅದು ಪ್ರಪಂಚದಾದ್ಯಂತ ಕುಡಿಯುವ ನೀರಿನ ಅರ್ಧದಷ್ಟು ಭಾಗವನ್ನು ಒದಗಿಸುತ್ತದೆ.

ವಿಶ್ವಜಲ ದಿನದ ಮಹತ್ವ :

ವಿಶ್ವಜಲ ದಿನವು ನೀರಿನ ಕೊರತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಭೂಮಿಯ ಮೇಲಿನ ಜೀವಗಳಿಗೆ ನೀರು ಅತ್ಯಮೂಲವಾಗಿದೆ. ಗ್ರಹದ ಸುಮಾರು 70 ಪ್ರತಿಶತದಷ್ಟು ನೀರು ಆವರಿಸಿದೆ. ಸಿಹಿನೀರು ಅದರ 3% ರಷ್ಟಿದೆ. ಅದರಲ್ಲಿ 3ನೇ ಎರಡರಷ್ಟು ಹೆಪ್ಪುಗಟ್ಟಿರುತ್ತದೆ ಅಥವಾ ಪ್ರವೇಶಿಸಲಾಗುವುದಿಲ್ಲ ಮತ್ತು ಬಳಕೆಗೆ ಲಭ್ಯವಿಲ್ಲ. ನಮಗೆ ಕುಡಿಯಲು ಶುದ್ದ ನೀರು, ಇತರ ಗೃಹಪಯೋಗಿ ವಸ್ತುಗಳು ಮತ್ತು ಜಮೀನುಗಳಿಗೆ ನೀರುಣಿಸಲು ಅಗತ್ಯವಿದೆ.

FAQ :

ವಿಶ್ವಜಲ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ?

ಮಾರ್ಚ್‌ 22

ವಿಶ್ವಜಲ ದಿನ 2022 ಥೀಮ್‌ ಏನು?

ಅಂತರ್ಜಲ ಅದೃಶ್ಯವನ್ನು ಗೋಚರಿಸುವಂತೆ ಮಾಡುವುದು

ಇತರೆ ವಿಷಯಗಳು :

ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳ ಬಗ್ಗೆ ಮಾಹಿತಿ

ಭಾರತೀಯ ಸೇನಾ ಪಡೆಯ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ