ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯ ಪ್ರಮುಖ ಯೋಜನೆಗಳ ಬಗ್ಗೆ ಮಾಹಿತಿ | Information about important projects of Karnataka State Police Department in Kannada

ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯ ಪ್ರಮುಖ ಯೋಜನೆಗಳ ಬಗ್ಗೆ ಮಾಹಿತಿ Information about important projects of Karnataka State Police Department Karnataka Rajya Police Ilakeya Pramuka Yojanegala bagge Mahithi in Kannada

ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯ ಪ್ರಮುಖ ಯೋಜನೆಗಳ ಬಗ್ಗೆ ಮಾಹಿತಿ

Karnataka State Police Department in Kannada
ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯ ಪ್ರಮುಖ ಯೋಜನೆಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯ ಪ್ರಮುಖ ಯೋಜನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯ ಪ್ರಮುಖ ಯೋಜನೆಗಳು :

ಅಪರಾಧ ಮತ್ತು ಕ್ರಿಮಿನಲ್‌ ಟ್ರ್ಯಾಕಿಂಗ್‌ ನೆಟವರ್ಕ್‌ ಮತ್ತು ಸಿಸ್ಟಮ್ಸ್‌ :

  • ಇದನ್ನು 2008ರಲ್ಲಿ ರಾಷ್ಟ್ರೀಯ ಇ-ಆಡಳಿತ ಯೋಜನೆಯಡಿ ನೈಜ ಸಮಯದಲ್ಲಿ ಮಾಹಿತಿಯನ್ನು ರಾಷ್ಟ್ರವ್ಯಾಪಿ ನೆಟವರ್ಕ್‌ ಮಾಡಲಾದ ವಾತಾವರಣದಲ್ಲಿ ರೂಪಿಸಲು ಅಭಿವೃದ್ದಿಪಡಿಸಿದ ಮಿಷನ್‌ ಮೋಡ್‌ ಯೋಜನೆ.
  • ಉದ್ದೇಶಗಳು : ಪೊಲೀಸ್‌ ಇಲಾಖೆಯ ವಿವರ ಕಛೇರಿಗಳ ನಡುವೆ ಸುಧಾರಿತ ಸಮನ್ವಯ, ಕಾಗದ ರಹಿತ ಕೆಲಸ ಹಾಗೂ ಹಸ್ತಚಾಲಿತ ರಿಜಿಸ್ಟರ್‌ ನಿರ್ವಹಣೆಯಲ್ಲಿನ ನಿಯಂತ್ರಣ, ಮಾಹಿತಿಗೆ ಸುಲಭ ಪ್ರವೇಶ ಮತ್ತು ನೈಜ ಸಮಯದ ಅಂಕಿ ಅಂಶಗಳ ಬಳಕೆ(FIR)̤

ವಿಧಿ ವಿಜ್ಞಾನ ಪ್ರಯೋಗಾಲಯ :

  • ಪೊಲೀಸ್‌ ಇಲಾಖೆಗೆ ನೆರವಾಗುವ ಪರೀಕ್ಷಾ ಪ್ರಯೋಗಾಲಯವಾಗಿದ್ದು, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಪ್ರಯೋಗಾಲಯ ಹೊಂದಿದೆ. ಪೊಲೀಸ್‌ ಇಲಾಖೆ ಮತ್ತು ಇತರ ಸರ್ಕಾರಿ ಇಲಾಖೆಗಳಿಂದ ಬರುವ ವಿನಂತಿಗಳ ಮೇಲೆ ವಿವಿಧ ಪರೀಕ್ಷೆಗಳನ್ನು ನಡೆಸುವುದು.

ಮಾಹಿತಿ ನಿರ್ವಹಣಾ ವ್ಯವಸ್ಥೆ :

  • ಇದು ಪೊಲೀಸ್‌ ಐಟಿಯ ಡ್ಯಾಷ್‌ ಬೋರ್ಡ್‌ ಆಗಿದೆ. ಇದು ಪೊಲೀಸ್‌ ಐಟಿಯ ಎಲ್ಲಾ ಮಾಡ್ಯೂಲ್‌ ಗಳಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಕೋಷ್ಠಕ ಮತ್ತು ಚಿತ್ರಾತ್ಮಕ ರೂಪದಲ್ಲಿ ನೀಡುತ್ತದೆ.

ಕರ್ನಾಟಕ ರಾಜ್ಯ ಪೊಲೀಸ್‌ ವೈಡ್‌ ಏರಿಯಾ ನೆಟವರ್ಕ್‌ :

  • ಇದು ಡಿಪಿಒಗಳಲ್ಲಿ ಚಾಲ್ತಿಯಲ್ಲಿರುವ ಸಣ್ಣ ಕಂಪ್ಯೂಟರ್‌ ನೆಟವರ್ಕ್‌, ಸಿಒಪಿ, ಸಿಐಡಿ, ಮುಖ್ಯ ಕಛೇರಿ ಇತ್ಯಾದಿಗಳಲ್ಲಿನ ಕ್ಯಾಂಪಸ್‌ ನೆಟವರ್ಕಗಳು ಹಾಗೂ ಪೊಲೀಸ್‌ ಠಾಣೆ, ವಲಯಗಳು, SDPO ಗಳು ಮತ್ತು ವಿಶೇಷ ಘಟಕಗಳ ಇತರ ಕಛೇರಿಗಳನ್ನು ಒಂದೇ ನೆಟವರ್ಕಗೆ ಸಂಯೋಜಿಸುವ ಮೂಲಕ ಪೊಲೀಸ್‌ ಇಲಾಖೆಯಲ್ಲಿನ ಮಾಹಿತಿಯನ್ನು ವಿನಿಮಯ ನೆರವಾಗಿದೆ.

ಇ-ಬೀಟ್‌ :

  • ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಹೊಣೆಗಾರಿಕೆ ಮತ್ತು ದಕ್ಷತೆಯನ್ನು ಖಾತರಿಪಡಿಸುವ ತಂತ್ರಜ್ಞಾನವನ್ನು ಪರಿಚಯಿಸುವ ಉದ್ದೇಶದಿಂದ ರೂಪಿಸಿಕೊಂಡ ಹೊಸ ವ್ಯವಸ್ಥೆ. ಇ-ಬೀಟ್‌ ವ್ಯವಸ್ಥೆಯು ಸಿಸ್ಟಂ ರೇಡಿಯೋ ಫ್ರಿಕ್ವೆನ್ಸಿ ಆಧಾರಿತ ತಂತ್ರಜ್ಞಾನವನ್ನು ಬಳಸಲಾಗುವುದು. ಇದರಲ್ಲಿ ಬೀಟ್‌ ಪ್ರದೇಶದಲ್ಲಿನ ಪಾಯಿಂಟ್‌ ಪುಸ್ತಕಗಳ ಬದಲಿಗೆ ರೇಡಿಯೋ ಆವರ್ತನ ಗುರುತಿಸುವಿಕೆ ಟ್ಯಾಗ್‌ ಸ್ಥಾಪಿಸಲಾಗಿದೆ. ಇದು ಸಂಗ್ರಹವಾಗಿರುವ ಅನನ್ಯ ಗುರುತಿಸುವಿಕೆ, ಮೈಕ್ರೋಚಿಪ್‌ ಹೊಂದಿರುತ್ತದೆ. ಬೀಟ್‌ ನಿರ್ವಹಿಸುವ ಬೀಟ್‌ ಕಾನ್ಸಟೇಬಲಗಳು, ಬೀಟ್‌ ಸೇವೆಗೆ ಅದನ್ನು ಬಳಸಬೇಕಾದ ಬೀಟ್‌ ಸಂಖ್ಯೆ, ಭೇಟಿ ನೀಡಬೇಕಾದ ಬೀಟ್‌ ಪಾಯಿಂಟ್‌ ಸ್ಥಳಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಬೀಟ್‌ ಕಾನ್ಸಟೇಬಲಿಗೆ ನಿಯೋಜಿಸುವ ಮೊದಲು ನೀಡಲಾಗುವುದು. ಅಪರಾಧ ತಡೆಗಟ್ಟುವಿಕೆ ಮತ್ತು ಮಾನವ ಸಂಪನ್ಮೂಲದ ಮೇಲ್ವಿಚಾರಣೆಗೆ ತಂತ್ರಗಳನ್ನು ರೂಪಿಸಲು SHO ಗೆ ಇದು ಸಹಾಯ ಮಾಡುತ್ತದೆ.

ಪಿಂಕ್‌ ಹೊಯ್ಸಳ :

  • ಬೆಂಗಳೂರು ಪೊಲೀಸ್‌ ಇಲಾಖೆ ವತಿಯಿಂದ 2017ರ ಏಪ್ರಿಲ್‌ ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮ್ಮಯ್ಯನವರು ಪಿಂಕ್‌ ಹೊಯ್ಸಳ ಕಾರ್ಯಾಚರಣೆಗೆ ಚಾಲನೆ ನೀಡಿದ್ದರು. ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಯ ಬಗೆಗಿನ ಕಳವಳಗಳನ್ನು ಪ್ರತ್ಯೇಕಾಗಿ ಪರಿಹರಿಸುವ ಉದ್ದೇಶದ ಹೊಸ ಉಪಕ್ರಮ. ವಿಶೇಷ ಪ್ರತಿಕ್ರಿಯಾ ವಾಹನವು ಸುರಕ್ಷಾ ಯಾಪ್‌ ಮೂಲಕ ಕಾರ್ಯ ನಿರ್ವಹಿಸಲಿದೆ.

ಸುರಕ್ಷಾ ಯಾಪ್‌ :

  • ಬೆಂಗಳೂರು ಪೊಲೀಸ್‌ ಘಟಕದಿಂದ ಮಹಿಳೆಯರಿಗೆ ಭದ್ರತೆ, ಸುರಕ್ಷತೆ ಮತ್ತು ನೆರವು ನೀಡಲು ಅಭಿವೃದ್ದಿಪಡಿಸಿದ ಅಪ್ಲಿಕೇಷನ್.‌ ಇದು 2017ರ ಏಪ್ರಿಲ್‌ ನಲ್ಲಿ ಉದ್ಘಾಟನೆಯಾಗಿದೆ.

ಜಿಐಎಸ್‌ ಆಧಾರಿತ ಅಪರಾಧ ವಿಶ್ಲೇಷಣೆ ಮತ್ತು ವರದಿ :

  • ಇಂಜಿನ್‌ ಒಂದು ಡೆಸ್ಕಟಾಪ್‌ ಆಧಾರಿತ ಬೌಗೋಳಿಕ ಮಾಹಿತಿ ವ್ಯವಸ್ಥೆ, ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯು ರಾಜ್ಯ ಅಪರಾಧ ದಾಖಲೆಗಳ ಸಂಸ್ಥೆ. ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯ ಕೇಂದ್ರ ಮೂಲಕ ಅಪರಾಧ ಮಾಹಿತಿ ವ್ಯವಸ್ಥೆ ದತ್ತ ಸಂಚಯನದಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ನಕ್ಷೆಯ ಮೂಲಕ ವೀಕ್ಷಿಸಬಹುದು. ಅಪರಾಧ ಮ್ಯಾಪಿಂಗ್‌, ಅಪರಾಧ ವಿಶ್ಲೇಷಣೆ, ಗ್ರಾಮ ವಿಶ್ಲೇಷಣೆ, ಹಾಟ್‌ ಸ್ಪಾಟ್‌ ವಿಶ್ಲೇಷಣೆ, ಡೇಟಾ ಕ್ಯಾಪ್ಟರ್‌ ನಕ್ಷೆಯ ಸರಿಯಾದ ಸ್ಥಳದಲ್ಲಿ ಪ್ರತಿಯೊಂದು FIR ಸಂಖ್ಯೆಯನ್ನು ಸೆರೆಹಿಡಿಯುವ ಮೂಲಕ ದತ್ತಾಂಶವನ್ನು ರಚಿಸುವುದು.

ಬ್ಲಾಕ್‌ ಬೆರ್ರಿ :

  • ಬೆಂಗಳೂರ ಟ್ರಾಫಿಕ್‌ ಪೊಲೀಸರ ಉಪಕ್ರಮವಾಗಿದ್ದು, ಬ್ಲಾಕ್‌ ಬೆರ್ರಿ ಸ್ಮಾರ್ಟ್‌ ಫೋನ್‌ ಮತ್ತು ಬ್ಲೂಟೂತ್‌, ಪ್ರಿಂಟರ್‌ ಮೂಲಕ ಯಾವುದೇ ಚಾಲಕ ಮತ್ತು ವಾಹನದ ಸಂಚಾರ ಅಪರಾಧಗಳ ಸಮಸ್ಯೆಯ ಚಲನ್‌ ಇತಿಹಾಸವನ್ನು ತಿಳಿಯಲು ಸಹಾಯಕ.

ಡಯಲ್‌ 100 – ಸಾರ್ವಜನಿಕ ಪ್ರತಿಕ್ರಿಯಾ ವ್ಯವಸ್ಥೆ :

  • ಪೊಲೀಸ್‌ ನಿಯಂತ್ರಣ ಕೊಠಡಿ ಮೂಲಕ ಕಂಪ್ಯೂಟರ್‌ ಆಧಾರಿತ ಆದೇಶ ಮತ್ತು ನಿಯಂತ್ರಣದ ಮಾಹಿತಿ ಹಾಗೂ ಸಾರ್ವಜನಿಕ ಅಗತ್ಯ ಸೇವೆ ನೀಡಿಕೆ.

ಸ್ವಯಂ ಚಾಲಿತ ಫಿಂಗರ್‌ ಗುರುತಿನ ವ್ಯವಸ್ಥೆ :

  • ಅಪರಾಧ ಶಂಕಿತರು ಮತ್ತು ಬಂಧಿತ, ಶಿಕ್ಷೆಗೊಳಗಾದ ವ್ಯಕ್ತಿಗಳ ಫಿಂಗರ್‌ ಪ್ರಿಂಟ್‌ ಸೆರೆಹಿಡಿಯಲು ಮತ್ತು ಹುಡುಕಲು ಬಳಸುವ ಸಾಫ್ಟವೇರ್‌ ಇದು ಪೊಲೀಸ್‌ ಇಲಾಖೆಗೆ ಹೆಚ್ಚಿನ ನೆರವು ನೀಡಿಕೆ.

GPS ಆಧಾರಿತ ಸ್ವಯಂ ಚಾಲಿತ ವಾಹನ ಸ್ಥಳ ವ್ಯವಸ್ಥೆ :

  • ಇದು ಒಂದು ಎಲೆಕ್ಟ್ರಾನಿಕ್‌ ಸಾಧನವಾಗಿದ್ದು, ಕರ್ನಾಟಕ ರಾಜ್ಯ ಪೊಲೀಸರು ತಮ್ಮ ಎಲ್ಲಾ ನಿಯೋಜನಾ ವಾಹನಗಳನ್ನು AVLS ಗೆ ಒಳಪಡಿಸಲು ನಿರ್ಧಾರ ತೆಗೆದುಕೊಂಡಿದ್ದಾರೆ. ಯಾವುದೇ ವಾಹನದ ನಿಯೋಜನ ಸ್ಥಳವನ್ನು ನೈಜ ಸಮಯದಲ್ಲಿ ಕಂಡುಹಿಡಿಯಲು, ಹಿರಿಯ ಅಧಿಕಾರಿಗಳು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ನೆರವಾಗಲಿದೆ.

ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ :

  • 1986 ಮಾರ್ಚ್‌ 11 ರಂದು ಕೇಂದ್ರ ಗೃಹ ವ್ಯವಹಾರ ಸಚಿವಾಲಯದ ಅಧೀನದಲ್ಲಿ ನೇಮಕ. ಇದರ ಕೇಂದ್ರ ಕಛೇರಿ ನವದೆಹಲಿಯಲ್ಲಿದೆ. IPC ಮತ್ತು ವಿಶೇಷ ಕಾನೂನುಗಳ ವ್ಯಾಖ್ಯಾನಿಸಿದ ಅಪರಾಧ ದತ್ತಾಂಶದ ಸಂಗ್ರಹಣೆ ಮತ್ತು ವಿಶ್ಲೇಷಣೆಯ ಜವಬ್ದಾರಿ ಹೊಂದಿದ ಭಾರತದ ಸರ್ಕಾರಿ ಏಜೆನ್ಸಿ.

FAQ :

ಅಪರಾಧ ಮತ್ತು ಕ್ರಿಮಿನಲ್‌ ಟ್ರ್ಯಾಕಿಂಗ್‌ ನೆಟವರ್ಕ್‌ ಮತ್ತು ಸಿಸ್ಟಮ್ಸ್ನ ಉದ್ದೇಶವೇನು?

ಉದ್ದೇಶಗಳು : ಪೊಲೀಸ್‌ ಇಲಾಖೆಯ ವಿವರ ಕಛೇರಿಗಳ ನಡುವೆ ಸುಧಾರಿತ ಸಮನ್ವಯ, ಕಾಗದ ರಹಿತ ಕೆಲಸ ಹಾಗೂ ಹಸ್ತಚಾಲಿತ ರಿಜಿಸ್ಟರ್‌ ನಿರ್ವಹಣೆಯಲ್ಲಿನ ನಿಯಂತ್ರಣ, ಮಾಹಿತಿಗೆ ಸುಲಭ ಪ್ರವೇಶ ಮತ್ತು ನೈಜ ಸಮಯದ ಅಂಕಿ ಅಂಶಗಳ ಬಳಕೆ(FIR)̤

ಪೊಲೀಸ್‌ ಇಲಾಖೆಗೆ ನೆರವಾಗುವ ಪರೀಕ್ಷಾ ಪ್ರಯೋಗಾಲಯ ಯಾವುದು?

ವಿಧಿ ವಿಜ್ಞಾನ ಪ್ರಯೋಗಾಲಯ

ಇತರೆ ವಿಷಯಗಳು :

ಪ್ಲಾಸಿ ಕದನದ ಬಗ್ಗೆ ಮಾಹಿತಿ

ಕ್ರಾಂತಿಕಾರರ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ