ಮಧ್ವಾಚಾರ್ಯರ ಜೀವನ ಚರಿತ್ರೆ | Biography of Madhvacharya in Kannada

ಮಧ್ವಾಚಾರ್ಯರ ಜೀವನ ಚರಿತ್ರೆ Biography of Madhvacharya information in Kannada

ಮಧ್ವಾಚಾರ್ಯರ ಜೀವನ ಚರಿತ್ರೆ

Biography of Madhvacharya in Kannada
Biography of Madhvacharya in Kannada

ಈ ಲೇಖನಿಯಲ್ಲಿ ಮಧ್ವಾಚಾರ್ಯರ ಜೀವನ ಚರಿತ್ರೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದೇವೆ.

ಮಧ್ವಾಚಾರ್ಯರು

ವೇದಾಂತ ದರ್ಶನದಲ್ಲಿ, ಮಧ್ವಚಾರ್ಯರು ದ್ವೈತ ಸಿದ್ಧಾಂತದ ಉಗ್ರ ಪ್ರತಿಪಾದಕರು. ಅವರು ಹದಿಮೂರು ಹದಿನಾಲ್ಕನೇ [೧೨೩೮-೧೩೧೭] ಶತಮಾನದಲ್ಲಿ ಇದ್ದವರು. ಅವರು ಭಕ್ತಿ ಮಾರ್ಗದ ಪ್ರವರ್ತಕರಲ್ಲಿ ಪ್ರಮುಖರು. ಅವರು ವಾಯುವಿನ ಅವತಾರದಲ್ಲಿ ಮೂರನೆಯವರಾದ ಮಾರುತಿ ಭೀಮರ ನಂತರ ಬಂದ ಅವತಾರವೆಂದು ಹೇಳುತ್ತಾರೆ.

ಮಧ್ವಾಚಾರ್ಯರ ಜೀವನ

ಶ್ರೀ ಮಧ್ವಾಚಾರ್ಯರು ಉಡುಪಿಯ ಹತ್ತಿರದಲ್ಲಿರುವ ಪಾಜಕ ಗ್ರಾಮದಲ್ಲಿ ತಂದೆ ಮಧ್ಯಗೇಹ ಭಟ್ಟ ಮತ್ತು ತಾಯಿ ವೇದಾವತಿಗೆ ಜನಿಸಿದರು. ತಂದೆ ತಾಯಿ ವಾಸುದೇವನೆಂದು ಹೆಸರಿಟ್ಟಿದ್ದರು. ಬಾಲ್ಯದಲ್ಲೆ ಅಸಾಧಾರಣ ಪ್ರತಿಭೆ ತೋರಿದ ವಾಸುದೇವ, ತನ್ನ ಹನ್ನೆರಡೆನೆಯ ವಯಸ್ಸಿನಲ್ಲಿ ವಿಧ್ಯಾಭ್ಯಾಸ ಮತ್ತು ವೇದಾಭ್ಯಾಸಗಳೆರಡನ್ನು ಮುಗಿಸಿ ಗುರು ಅಚ್ಯುತ ಪ್ರಜ್ಞ ಸನ್ಯಾಸವನ್ನು ಪಡೆದು ಪೂರ್ಣಪ್ರಜ್ಞರೆಂಬ ಹೆಸರು ಪಡೆದರು. ಅವರ ಅನುಯಾಯಿ ಭಕ್ತರು, ಸರ್ವೊತ್ತಮನಾದ ಶ್ರೀಪತಿಯಾದ ಪರಮಾತ್ಮನ ಅದೇಶವನ್ನು ಪಾಲಿಸಲು ಜೀವೋತ್ತಮನಾದ ಪವಮಾನನು ಶ್ರೀಮದಾನಂದತೀರ್ಥರಾಗಿ ಜನಿಸಿದರು ಎಂದು ಭಾವಿಸುತ್ತಾರೆ.

ವಾಸುದೇವ ಮದ್ವಾಚಾರ್ಯರಾಗಿದ್ದು

ವಾಸುದೇವನು ಚಿಕ್ಕ ಬಾಲಕನಾಗಿದ್ದಾಗಲೇ ಅಸಾಧಾರಣ ಪ್ರತಿಭೆಯನ್ನು ತೋರಿದನು. ಅವನು ಹನ್ನೊಂದನೇ ವರ್ಷದಲ್ಲಿ ಉಡುಪಿಯಲ್ಲಿದ್ದ ಅಚ್ಯುತ ಪ್ರೇಕ್ಷರಿಂದ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿದನು. ಅವರು ಅವನಿಗೆ ಸನ್ಯಾಸ ದೀಕ್ಷೆ ಕೊಡುವಾಗ ಪೂರ್ಣಪ್ರಜ್ಞರೆಂದು ನಾಮಕರಣ ಮಾಡಿದರು. ಅವರು ಸನ್ಯಾಸ ದೀಕ್ಷೆಯನ್ನು ತೆಗೆದುಕೊಂಡ ಒಂದು ತಿಂಗಳ ನಂತರ ಪಂಡಿತೋತ್ತಮರನ್ನು ವೇದಾಂತ ತರ್ಕದಲ್ಲಿ ಸೋಲಿಸಿದರು. ಅದನ್ನು ನೋಡಿ ಅಚ್ಯುತಪ್ರೇಕ್ಷರು ಅವರಿಗೆ ವೇದಾಂತ ಸಾಮ್ರಾಜ್ಯದ ಚಕ್ರವರ್ತಿಯೆಂದು ಹೇಳಿ ಆನಂದತೀರ್ಥ ರೆಂಬ ಬಿರುದನ್ನು ಕೊಟ್ಟರು. ನಂತರ ಅವರು ವೇದದ ಬಲಿಷ್ಟ ಸೂಕ್ತದಲ್ಲಿ ಇರುವ ಮಧ್ವ ಹೆಸರನ್ನು ಆಯ್ದುಕೊಂಡು ಆ ಹೆಸರಿನಲ್ಲಿ ಗ್ರಂಥ ರಚಿಸಿ, ಮಧ್ವಾಚಾರ್ಯರೆಂದು ಪ್ರಸಿದ್ಧರಾದರು. ಅವರು ಪ್ರಚುರಪಡಿಸಿದ ದ್ವೈತ ಸಿದ್ಧಾಂತ ತತ್ವವಾದ ಅಥವಾ ದ್ವೈತ ಮತವೆಂದು ಪ್ರಸಿದ್ಧವಾಗಿದೆ.

ಮದ್ವಾಚಾರ್ಯರು ಅವತರಿಸಿದ್ದು ಹೇಗೆ?

ಅವರು ಈ ಭೂಮಿಯಲ್ಲಿ ಅವತರಿಸಿದ ರೀತಿ ಅದ್ಭುತ. ಎಲ್ಲರೂ ತಂದೆಯ ಮುಖಾಂತರ ತಾಯಿಯ ದೇಹವನ್ನು ಹೊಕ್ಕು ಅಲ್ಲಿ ಬೆಳೆದು ಒಂಭತ್ತು ತಿಂಗಳ ನಂತರ ಹುಟ್ಟಿದರೆ ನಮ್ಮ ಮುಖ್ಯಪ್ರಾಣದೇವರು ನೇರವಾಗಿ ಸತ್ಯಲೋಕದಿಂದ ಉಡುಪಿಗೆ ಬಂದು, ಅಲ್ಲಿ ಅನಂತಾಸನನನಿಗೆ ಸಾಷ್ಟಾಂಗವೆರಗಿ ಅಲ್ಲಿಂದ ಪಾಜಕಕ್ಕೆ ಬಂದು ಆ ಪಾಜಕದ ಪವಿತ್ರ ಮನೆಯಲ್ಲಿ ಆ ಸಾಧ್ವೀ ಬ್ರಾಹ್ಮಣೀ, ಮಧ್ಯಗೇಹಾರ್ಯರ ಮಡದಿ ಆಗ ತಾನೇ ಹಡೆದಿದ್ದ ಮಗುವಿನ ದೇಹದಲ್ಲಿ ರಾಜನಂತೆ ಪ್ರವೇಶಿಸಿ, ಲೋಕದ ಕಣ್ಣಿಗೆ ಮಗುವಾಗಿ ಕಂಡವರು. ಹನ್ನೆರಡು ವರ್ಷಗಳ ದೀರ್ಘ ಅವಧಿಯ, ಸಾಮಾನ್ಯರಿಗೆ ಮನಸ್ಸಿನಲ್ಲಿ ಊಹಿಸಿಕೊಳ್ಳಲೂ ಸಾಧ್ಯವಾಗದಂಥಹ ಘೋರ ತಪ್ಪಸ್ಸನ್ನು ಮಾಡಿದ ಆ ಮಧ್ಯಗೇಹಾರ್ಯದಂಪತಿಗಳ ಎಲ್ಲ ದೈಹಿಕ, ಮಾನಸಿಕ ಶ್ರಮಗಳನ್ನು ಒಂದೇ ಕ್ಷಣದಲ್ಲಿ ಕಳೆದುಬಿಟ್ಟ ಅದ್ಭುತ ದೇಹಕಾಂತಿಯ ಶ್ರೀಮದಾಚಾರ್ಯರವರು.

ಮಧ್ವಾಚಾರ್ಯರು ಬೆಳೆದ ರೀತಿ

ಅವರು ಆ ಪಾಜಕದ ಮನೆಯಲ್ಲಿ ಬೆಳೆದ, ಬೆಳೆಯುತ್ತಿದ್ದ ರೀತಿ ಅದ್ಭುತ. ಒಂದು ಕೋಲಿನಿಂದ ಭೂಮಿಯನ್ನು ಕೆತ್ತಿ ಮನೆಯ ಹಿಂಬದಿಯಲ್ಲಿ ಸರೋವರವನ್ನು ನಿರ್ಮಿಸಿ ಬಿಟ್ಟರು. ಅದೇ ತರಹದ ಒಂದು ಕೋಲನ್ನು ನೆಟ್ಟು ಅದಕ್ಕೆ ನೀರೆರದು ಚಿಗುರಿಸಿ ಬೆಳೆಸಿದರು. ಮಧ್ಯಗೇಹಾರ್ಯರನ್ನು ವಿಸ್ಮಯದ ಕಡಲಿನಲ್ಲಿ ಮುಳುಗಿಸಿ ಬಿಟ್ಟರು. ಗಿಡವೊಂದನ್ನು ತಲೆಕೆಳಕಾಗಿ ನೆಟ್ಟು ಗಾಳಿಯಲ್ಲಿ ಬೇರು ಬೆಳೆಯುವಂತೆ ಮಾಡಿದರು. ಇವತ್ತಿಗೂ ಅದನ್ನು ನೋಡಿದ ಜನ ಮಾತು ಹೊರಡದೇ ವಿಸ್ಮಿತರಾಗಿ ನಿಂತು ಬಿಡುತ್ತಾರೆ. ಕಾಡಿನ ಮಧ್ಯದಲ್ಲಿ ತೋಟಂತಿಲ್ಲಾಯರ ಮಗ, ತನ್ನ ಗೆಳೆಯ, ಆತನ ಹೆಸರೂ ವಾಸುದೇವನೆಂದೇ, ಅವನು ತಲೆ ನೋವಿನಿಂದ ಚೀರಿ ಕುಸಿದು ಕೆಳಗೆ ಬಿದ್ದರೆ, ಅವನನ್ನು ತೊಡೆಯ ಮೇಲೆ ಮಲಗಿಸಿಕೊಂಡು, ಕಿವಿಯಲ್ಲಿ ಒಮ್ಮೆ ಜೋರಾಗಿ ಗಾಳಿಯೂದಿ ಅವನ ಖಾಯಿಲೆಯನ್ನು ಕಳೆದವರು. ನನ್ನ ಈ ಗೆಳೆಯ ಸಾಮಾನ್ಯ ಮನುಷ್ಯನಲ್ಲ, ಜಗತ್ಪ್ರಾಣನಾದ ಮುಖ್ಯಪ್ರಾಣ ಎಂದು ತಿಳಿದಾಗ ಆ ವಾಸುದೇವ ಕುತೂಹಲದಿಂದ ತಾನು ಹಿಂದಿನ ಜನ್ಮಗಳನ್ನು ತಿಳಿಯುವ ಬಯಕೆಯನ್ನು ತೋರಿದರೆ ಅವನಿಗೆ ಅವನ ಅನಂತ ಜನ್ಮಗಳನ್ನು ನೆನಪಿಗೆ ತಂದು ಕೊಟ್ಟು ಅವನ್ನು ಆಶ್ಚರ್ಯದ ಕಡಲಿನಲ್ಲಿ ಮುಳುಗಿಸಿ ಬಿಟ್ಟವರು. ಅವರ ನಡಿಗೆ ಅದ್ಭುತ. ಹಿಮಾಲಯದ ಬದರಿಯ ಯಾತ್ರೆಗೆ ಹೋದಾಗ, ಆ ಬದರಿಯಿಂದ ಮಹಾಬದರಿಗೆ ಹೋಗುವ ಮನಸ್ಸಾಗಿ ಆ ಹಿಮಾಲಯದ ದುರ್ಗಮವಾದ ಪರ್ವತಗಳನ್ನು ಮೆಟ್ಟಿಲುಗಳನ್ನು ಹತ್ತುವವರ ಹಾಗೆ, ಕಲ್ಲುಗಳನ್ನು ದಾಟುವವರ ಹಾಗೆ ಆಟವಾಡಿಕೊಂಡು ನಡೆದು ಹೋದ ಶ್ರೀಮದಾಚಾರ್ಯರನ್ನು ಕಂಡ ಸತ್ಯತೀರ್ಥರು ತಾವು ಕಂಡು ಆಶ್ಚರ್ಯವನ್ನು ದಾಖಲಿಸಿ ಇಟ್ಟಿದ್ದಾರೆ. ಅವರ ಧ್ವನಿ ಅದ್ಭ್ಭುತ. ಭೋರ್ಗರೆವ ಸಮುದ್ರದ ತೀರದಲ್ಲಿ ಅವರು ಕುಳಿತು ಶಿಷ್ಯರಿಗೆ ಪಾಠ ಹೇಳುತ್ತಿದ್ದರೆ ಕಿವಿಗಡಚಿಕ್ಕುವ ಆ ಸಮುದ್ರದ ಧ್ವನಿಯನ್ನೂ ಮೀರಿಸುವ ಧ್ವನಿ ಅವರದಾಗಿತ್ತು. ಅಷ್ಟು ಗಂಭೀರವಾದ ಧ್ವನಿಯಾದರೂ, ಹತ್ತಿರದಲ್ಲೇ, ಎದುರಿನಲ್ಲೇ ಕುಳಿತ ಶಿಷ್ಯರಿಗೆ ಸುಶ್ರಾವ್ಯವಾಗಿ ಮಧುರವಾಗಿ ಕೇಳಿಸುತ್ತಿತ್ತು. ಅಂದರೆ, ಅದೆಂಥ ಅದ್ಭುತ ವಸ್ತುವಾಗಿರಲಿಕ್ಕಿಲ್ಲ ಆ ಧ್ವನಿ ? ಗುಡುಗಿನ ಧ್ವನಿಯನ್ನೂ ಮೀರಿಸುವ ಜೋರು. ಪಕ್ಕದಲ್ಲಿ ಕುಳಿತವರಿಗೆ ಮತ್ತೆ ಮತ್ತೆ ಕೇಳಬೇಕನ್ನುವಷ್ಟು ಇಂಪು. ಇದಕ್ಕಿಂತ ಅದ್ಭುತವೆಂದರೆ ಈ ಎರಡೂ ಗುಣಗಳೂ ಒಂದೇ ಬಾರಿಗೆ ಅವರ ಧ್ವನಿಯಲ್ಲಿ ತೋರುತ್ತಿದ್ದವು. ಮತ್ತೂ ಅದ್ಭುತವೆಂದರೆ, ತತ್ವವನ್ನು ತಿಳಿಯಲಿಕ್ಕೆ ಯೋಗ್ಯರಲ್ಲದ ಜನ ಆಚಾರ್ಯರ ಪ್ರವಚನವನ್ನು ಕೇಳಿದರೆ ಅವರಿಗೆ ಶಬ್ದಗಳು ಕೇಳದೇ ಕೇವಲ ಒಂದು ಧ್ವನಿ ಮಾತ್ರ ಕೇಳಿಸುತ್ತಿತ್ತಂತೆ. ”ಅನಾನಾವಯವೇತ್ಯೇವ ದವೀಯೋಭಿಃ ಪ್ರತರ್ಕಿತಾ”

ಮಧ್ವಾಚಾರ್ಯರು ನೋಡಲು ಹೇಗಿದ್ದರು?

ಅವರ ಆ ಪರಮಾದ್ಭುತ ದೇಹವೇ ಹಾಗಿತ್ತು. ಎಂಟಡಿ ಎತ್ತರದ, ನಿಖರವಾಗಿ ೯೬ ಅಂಗುಲದ ಎತ್ತರದ ದೇಹ. ಬಂಗಾರದ ಮೈಬಣ್ಣ. ಪ್ರಖರ ಸೂರ್ಯನ ಹೊಳಪು. ಪೂರ್ಣ ಚಂದ್ರನ ಕಾಂತಿ. ಆ ದೇಹಕ್ಕೆ ತಕ್ಕುದಾದ ಹದಿಮೂರು ಮುಕ್ಕಾಲು ಅಂಗುಲದಷ್ಟು ಉದ್ದನೆಯ ಪಾದ. ಪದ್ಮಾಸನ ಹಾಕಿ ಕುಳಿತರೆ ಕಾವಿ ಬಟ್ಟೆಯ ಮೇಲೆ ನಸುಗೆಂಪಿನ ಕೆಂದಾವರೆಯನ್ನಿಟ್ಟಾದ್ದಾರೇನೋ ಎಂಬಂತಿರುವ ಪಾದ ತಲಗಳು. ಮುಂಜಾವಿನ ಸೂರ್ಯನೇ ಇವರ ಕಾಲನಲ್ಲಿ ಹತ್ತುರೂಪ ತೊಟ್ಟು ನಿಂತಂತೆ ಪ್ರಕಾಶಮಾನವಾದ ಉಗುರುಗಳು. ನಮಸ್ಕರಿಸುವಾಗ ಅವರ ಕಾಲುಗಳನ್ನು ಗಟ್ಟಿಯಾಗಿ ಹಿಡಿದು ಪರೀಕ್ಷಿಸಿದರೂ ಹಿಮ್ಮಡಿಯಲ್ಲಿ ಗಂಟುಗಳಿರುವದೇ ಗೊತ್ತಾಗುತ್ತಿರಲಿಲ್ಲ, ಇನ್ನು ಕಾಣಿಸುವದಂತೂ ಬಹಳ ದೂರ. ದುಂಡಗೆ ದಪ್ಪಗಾಗಿ ಹೋಗುವ ನೀಳವಾದ ಕಾಲುಗಳು. ತೆಳುವಾದ ಹೊಟ್ಟೆ. ಆಳವಾದ ಪ್ರದಕ್ಷಿಣಾಕಾರದ ನಾಭಿ. ಇಡಿಯ ಜಗತ್ತು ಎದುರಾಗಿ ಬಂದರೂ ಮಣಿಸಬಲ್ಲೆ ಎಂದು ಸಾರಿ ಹೇಳುವಂತೆ ಉಬ್ಬಿನಿಂತ ವಿಶಾಲವಾದ ಎದೆ. ಸುಮ್ಮನೆ ಸಹಜವಾಗಿ ನಿಂತರೆ ಮೊಣಕಾಲನ್ನು ಮುಟ್ಟುವ ದಪ್ಪ ಹಾವಿನಂತಹ ಕೈಗಳು. ಮೊಣಕೈಯಿಂದ ಲೆಕ್ಕ ಹಾಕಿದರೆ ಬೆರಳಿನವರೆಗೆ ಸರಿಯಾಗಿ ಎರಡು ಅಡಿಗಳು. ನುಣುಪಾದ ದುಂಡಗಿನ ಕಂಠ. ಅದಕ್ಕೆ ಶೋಭೆ ನೀಡುವಂತೆ ಸ್ವಾಭಾವಿಕವಾಗಿ ಮೂಡಿರುವ ಮೂರುಗೆರೆಗಳು. ಬೆಳೆದಿಂಗಳನ್ನು ಚೆಲ್ಲಿ ನಲಿವ ಸಾವಿರ ಪೂರ್ಣ ಚಂದ್ರರನ್ನು ನಿಲ್ಲಿಸಿದರೂ ಕಳೆಗುಂದದ, ಆ ಚಂದ್ರರ ಕಳೆಯನ್ನೇ ಮೀರಿಸುವ ಅದ್ಭುತ ಕಳೆಯನ್ನು ಹೊತ್ತು ನಿಂತ ಮುಖ. ಎಂಥ ದುಃಖದಲ್ಲಿ ಬಿದ್ದವನನ್ನೂ ಸಂತಸದಲ್ಲಿ ಮುಳುಗಿಸಿಬಿಡುವ ಮಂದಹಾಸ. ಕೆಂಪಾದ ತುಟಿಗಳು. ಮಾಣಿಕ್ಯದ ಕಟ್ಟಿನಲ್ಲಿ ಜೋಡಿಸಿಟ್ಟ ಮುತ್ತುಗಳಂತೆ, ಅವುಗಳ ಮಧ್ಯದಲ್ಲಿ ಹಲ್ಲುಗಳು. ನೀಳವಾದ ನಾಸಿಕ. ಅನಂತ ಜ್ಞಾನದ ಹೊಳಪನ್ನು ತುಂಬಿಕೊಂಡ ಪ್ರಕಾಶಮಯವಾದ ಕಣ್ಣುಗಳು. ಸಂಶಯ, ಅಜ್ಞಾನ, ಭ್ರಾಂತಿಗಳನ್ನು ನಿರ್ಮೂಲ ಮಾಡಿ ಬಿಡುವ ನೋಟ. ತಿದ್ದಿ ತೀಡಿದಂತಹ ಹುಬ್ಬುಗಳು. ವಿಶಾಲವಾದ ಹಣೆ. ಇಡಿಯ ದೇಹಕ್ಕೆ ಮತ್ತಷ್ಟು ಮೆರಗು ನೀಡಿದ ಊರ್ಧ್ವ ಪುಂಢ್ರಗಳು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಕಲ ಸೌಂದರ್ಯನಿಧಿಯಾದ ಭಗವಂತನ ಪಡಿಯಚ್ಚು. ಅವನ ಸಾಕ್ಷಾತ್ ಪ್ರತಿಮೆ. ಒಮ್ಮೆ ಕಣ್ಣು ನೆಟ್ಟರೆ ಹಿಂತೆಗೆಯಲಿಕ್ಕೆ ಸಾಧ್ಯವೇ ಇಲ್ಲದ ಮನಮೋಹಕ ಸೌಂದರ್ಯ. ಹೀಗಿದ್ದರು ನಮ್ಮ ಶ್ರೀ ಮದಾಚಾರ್ಯರು.

ಕೃತಿಗಳು

ಶ್ರೀ ಮಧ್ವಾಚಾರ್ಯರು ಅನೇಕ ಕೃತಿಗಳನ್ನು ಸಂಸ್ಕೃತದಲ್ಲಿ ಬರೆದಿದ್ದಾರೆ. ಅವರ ಗ್ರಂಥಗಳನ್ನು ಸರ್ವಮೂಲಗ್ರಂಥಗಳು ಎಂದು ಕರೆಯಲಾಗುತ್ತದೆ. ಅವುಗಳಲ್ಲಿ ಇಂದು ಉಪಲಬ್ಧವಾದವುಗಳು ಹೀಗಿವೆ:

  • ಗೀತಾಭಾಷ್ಯ
  • ಗೀತಾತಾತ್ಪರ್ಯ
  • ಬ್ರಹ್ಮಸೂತ್ರ ಭಾಷ್ಯ
  • ಅನುವ್ಯಾಖ್ಯಾನ
  • ನ್ಯಾಯವಿವರಣ
  • ಅಣುಭಾಷ್ಯ
  • ದಶೋಪನಿಷದ್ಭಾಷ್ಯಗಳು
  • ಮಹಾಭಾರತ ತಾತ್ಪರ್ಯ ನಿರ್ಣಯ
  • ಯಮಕಭಾರತ
  • ದಶ ಪ್ರಕರಣಗಳು

FAQ

ಮಧ್ವಾಚಾರ್ಯರ ಮೊದಲ ಹೆಸರೇನು?

ವಾಸುದೇವ

ಮಧ್ವಾಚಾರ್ಯರ ಕೃತಿಗಳನ್ನು ತಿಳಿಸಿ ?

ಯಮಕಭಾರತ ದಶ ಪ್ರಕರಣಗಳು

ಇತರೆ ವಿಷಯಗಳು:

ಹಂಪಿ ಬಗ್ಗೆ ಮಾಹಿತಿ ಕನ್ನಡದಲ್ಲಿ

ಅಂಬಿಗರ ಚೌಡಯ್ಯ ಜೀವನ ಚರಿತ್ರೆ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ