ಹೆಲೋ ಸ್ನೇಹಿತರೆ ನಮಸ್ಕಾರ, ನಿಮ್ಮ ಗ್ರಾಮದ ಜಮೀನುಗಳ ವಹಿವಾಟು ಹೇಗಿದೆ? ಯಾರ ಜಮೀನು ಯಾರ ಹೆಸರಿಗೆ ವರ್ಗಾವಣೆಯಾಗಿದೆ? ನಿಮ್ಮ ಆಸ್ತಿಯ ಮ್ಯುಟೇಷನ್ (ಪಹಣಿ ಬದಲಾವಣೆ) ಸ್ಥಿತಿ ಏನಿದೆ? ಈ ಎಲ್ಲಾ ಮಾಹಿತಿಗಾಗಿ ಇನ್ಮುಂದೆ ನೀವು ತಹಶೀಲ್ದಾರ್ ಕಚೇರಿಗೋ ಅಥವಾ ನಾಡಕಚೇರಿಗೋ ಅಲೆಯಬೇಕಾದ ಅಗತ್ಯವಿಲ್ಲ. ಕರ್ನಾಟಕ ಸರ್ಕಾರದ ‘ಈ-ಚಾವಡಿ’ (E-Chavadi) ಪೋರ್ಟಲ್ ಮೂಲಕ ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್‌ನಲ್ಲಿ ಎಲ್ಲವನ್ನೂ ಉಚಿತವಾಗಿ ವೀಕ್ಷಿಸಬಹುದು.

ಏನಿದು ‘ಈ-ಚಾವಡಿ’?
ಹಿಂದಿನ ಕಾಲದಲ್ಲಿ ಗ್ರಾಮದ ಚಾವಡಿಯಲ್ಲಿ ಜಮೀನು ದಾಖಲೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು. ಅದನ್ನೇ ಈಗ ಡಿಜಿಟಲ್ ರೂಪಕ್ಕೆ ತರಲಾಗಿದ್ದು, ‘ಬೂಮಿ’ (Bhoomi) ತಂತ್ರಾಂಶದ ಅಡಿಯಲ್ಲಿ ಈ ಸೌಲಭ್ಯ ಸಿಗುತ್ತಿದೆ. ನಿಮ್ಮ ಹಳ್ಳಿಯಲ್ಲಿ ನಡೆಯುವ ಪ್ರತಿಯೊಂದು ಜಮೀನು ವಹಿವಾಟಿನ ಪಾರದರ್ಶಕ ಮಾಹಿತಿ ಇಲ್ಲಿ ಲಭ್ಯವಿರುತ್ತದೆ.
ನೀವು ಇಲ್ಲಿ ಏನೇನು ನೋಡಬಹುದು?
- ಗ್ರಾಮದ ಎಲ್ಲಾ ಜಮೀನುಗಳ ಪಟ್ಟಿ: ನಿಮ್ಮ ಊರಿನಲ್ಲಿ ಯಾರ್ಯಾರ ಹೆಸರಲ್ಲಿ ಎಷ್ಟೆಷ್ಟು ಜಮೀನು ಇದೆ ಎಂದು ತಿಳಿಯಬಹುದು.
- ಮ್ಯುಟೇಷನ್ ವರದಿ: ಜಮೀನು ಮಾರಾಟವಾದಾಗ ಅಥವಾ ಹಂಚಿಕೆಯಾದಾಗ ಹೆಸರು ಬದಲಾಗುವ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂದು ನೋಡಬಹುದು.
- ದಿನನಿತ್ಯದ ವಹಿವಾಟು: ಇತ್ತೀಚೆಗೆ ನಿಮ್ಮ ಗ್ರಾಮದಲ್ಲಿ ಯಾವೆಲ್ಲಾ ಸರ್ವೆ ನಂಬರ್‌ಗಳಲ್ಲಿ ಬದಲಾವಣೆಗಳಾಗಿವೆ ಎಂಬ ಲೈವ್ ಅಪ್‌ಡೇಟ್ ಸಿಗುತ್ತದೆ.
ಮೊಬೈಲ್‌ನಲ್ಲಿ ವೀಕ್ಷಿಸುವುದು ಹೇಗೆ?
- ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು ಗೂಗಲ್‌ನಲ್ಲಿ https://rdservices.karnataka.gov.in/echawadi/ಎಂದು ಸರ್ಚ್ ಮಾಡಿ ಅಥವಾ ಅಧಿಕೃತ ಭೂಮಿ ಪೋರ್ಟಲ್‌ಗೆ ಲಾಗಿನ್ ಆಗಿ.
- ಈ-ಚಾವಡಿ ಆಯ್ಕೆ ಮಾಡಿ: ಅಲ್ಲಿ ಮುಖಪುಟದಲ್ಲಿ ಕಾಣಿಸುವ ‘View RTC and MR’ ವಿಭಾಗದಲ್ಲಿ ಅಥವಾ ನೇರವಾಗಿ ‘E-Chavadi’ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ವಿವರಗಳನ್ನು ಭರ್ತಿ ಮಾಡಿ: ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಿ.
- ವರದಿ ವೀಕ್ಷಿಸಿ: ಈಗ ‘View Report’ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಗ್ರಾಮದ ಜಮೀನು ವಹಿವಾಟುಗಳ ಸಂಪೂರ್ಣ ಪಟ್ಟಿ ತೆರೆದುಕೊಳ್ಳುತ್ತದೆ.
ಪ್ರಮುಖ ಲಿಂಕ್ಗಳು:
| ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಇತರೆ ಮಾಹಿತಿಗಾಗಿ | Click Here |
| ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಈ-ಚಾವಡಿ ಡೌನ್ಲೋಡ್ | Click Here |
ಇದರಿಂದ ರೈತರಿಗೆ ಆಗುವ ಲಾಭಗಳೇನು?
ನಮ್ಮ ಜನರಿಗೆ ಅದೆಷ್ಟೋ ಬಾರಿ ತಮ್ಮ ಜಮೀನಿನ ಮ್ಯುಟೇಷನ್ ಆಗಿದೆಯೋ ಇಲ್ಲವೋ ಎಂಬ ಗೊಂದಲವಿರುತ್ತದೆ. ಮಧ್ಯವರ್ತಿಗಳ ಕಾಟವಿಲ್ಲದೆ, ಯಾರಿಗೂ ಹಣ ನೀಡದೆ ನೇರವಾಗಿ ಸರ್ಕಾರಿ ದಾಖಲೆಗಳನ್ನು ಪರಿಶೀಲಿಸಬಹುದು. ಜಮೀನು ಖರೀದಿಸುವ ಮುನ್ನ ಆ ಜಮೀನಿನ ಇತಿಹಾಸ ತಿಳಿಯಲು ಇದು ಅತ್ಯುತ್ತಮ ಮಾರ್ಗ.