ಗ್ರಾಹಕರ ಹಕ್ಕುಗಳು ಮತ್ತು ಸಮಸ್ಯೆಗಳ ಬಗ್ಗೆ ಪ್ರಬಂಧ | Essay on Consumer Rights and Issues in Kannada

ಗ್ರಾಹಕರ ಹಕ್ಕುಗಳು ಮತ್ತು ಸಮಸ್ಯೆಗಳ ಬಗ್ಗೆ ಪ್ರಬಂಧ Essay on Consumer Rights and Issues Grahakara hakkugalu mattu Samasyegala bagge Prabandha in Kannada

ಗ್ರಾಹಕರ ಹಕ್ಕುಗಳು ಮತ್ತು ಸಮಸ್ಯೆಗಳ ಬಗ್ಗೆ ಪ್ರಬಂಧ

Essay on Consumer Rights and Issues in Kannada
ಗ್ರಾಹಕರ ಹಕ್ಕುಗಳು ಮತ್ತು ಸಮಸ್ಯೆಗಳ ಬಗ್ಗೆ ಪ್ರಬಂಧ

ಈ ಲೇಖನಿಯಲ್ಲಿ ಗ್ರಾಹಕರ ಹಕ್ಕುಗಳು ಮತ್ತು ಸಮಸ್ಯೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಪೀಠಿಕೆ :

ಇಂದು ವಿಶ್ವವೇ ಒಂದು ಮಾರುಕಟ್ಟೆಯಾಗಿದ್ದು, ಒಂದಲ್ಲ ಒಂದು ರೀತಿಯ ವ್ಯವಹಾರದಲ್ಲಿ ಎಲ್ಲರೂ ತೊಡಗಿದ್ದಾರೆ. ಯಾವುದೇ ಉತ್ಪನ್ನಗಳು, ಸೇವೆಗಳು ಗ್ರಾಹಕನನ್ನು ಅವಲಂಭಿಸಿವೆ. ಹಾಗಾಗಿ ಗ್ರಾಹಕನನ್ನು ಮಾರುಕಟ್ಟೆಯ ರಾಜ ಎಂದೇ ಕರೆಯಬಹುದು. ಮಾರುಕಟ್ಟೆಯು ಎಲ್ಲಾ ಕಾರ್ಯಚಟುವಟಿಕೆಗಳು ಗ್ರಾಹಕನನ್ನು ಸೆಳೆಯುವ, ಅವನ ಅವಶ್ಯಕತೆಗಳು ಮತ್ತು ಅಭಿಲಾಷಗಳನ್ನು ತೃಪ್ತಿಪಡಿಸುವ ಉದ್ದೇಶವನ್ನು ಹೊಂದಿದೆ. ಗ್ರಾಹಕನನ ಇಚ್ಛೆ, ಆಸಕ್ತಿಗಳಿಗೆ ಅನುಗುಣವಾಗಿ ಎಲ್ಲಾ ವ್ಯವಹಾರಗಳು ನಡೆಯುತ್ತವೆ. ಚಿಕ್ಕ ವ್ಯಾಪಾರಿಯಿಂದ ಹಿಡಿದು ಮಾರಾಟಗಾರನೂ ಗ್ರಾಹಕನನ್ನೆ ಅವಲಂಭಿಸಿದ್ದಾನೆ.

ವಿಷಯ ವಿವರಣೆ :

ಗ್ರಾಹಕ ಎಂದರೆ ಯಾವುದೇ ಒಂದು ಸರಕು ಅಥವಾ ಸೇವೆಯನ್ನು ಒಂದು ನಿರ್ದಿಷ್ಟ ಬೆಲೆ ಅಥವಾ ಹಣ ಪಾವತಿಸಿ ಸ್ವಂತ ಅಥವಾ ಅನ್ಯರ ಉಪಯೋಗಕ್ಕಾಗಿ ಖರೀದಿಸುವವನನ್ನು ಗ್ರಾಹಕ ಎಂದು ಕರೆಯುತ್ತಾರೆ. ಆದರೆ ವ್ಯವಹಾರದ ಉದ್ದೇಶಕ್ಕೆ ಅಂದರೆ ಆ ಸರಕು ಅಥವಾ ಸೇವೆಯನ್ನು ಮರು ಮಾರಾಟ ಮಾಡುವ ಉದ್ದೇಶದಿಂದ ಖರೀದಿಸುವವನು ಗ್ರಾಹಕನಾಗುವುದಿಲ್ಲ.

ಪ್ರಸ್ತುತ ಸಮಾಜದಲ್ಲಿ ಗ್ರಾಹಕರು ಅತ್ಯಂತ ನಿರ್ಲಕ್ಷಕ್ಕೆ ಒಳಗಾಗಿದ್ದಾರೆ. ವ್ಯಾಪಾರ ಘಟಕವು ಅದು ಅಭಿವೃದ್ದಿ ಹೊಂದಲು ಬಯಸಿದರೆ ತನ್ನ ಗ್ರಾಹಕರನ್ನು ನಿರ್ಲಕ್ಷಿಸಲು ಧೈರ್ಯ ಮಾಡಲಾರದು. ಆದರೆ ಸಾಕಷ್ಟು ಕಾಯಿದೆಗಳು ಮತ್ತು ನಿಯಮಗಳ ನಂತರವೂ ಗ್ರಾಹಕರು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಾರೆ.

ಗ್ರಾಹಕರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು :

  • ಮಾಹಿತಿಯು ಕೊರತೆ – ಗ್ರಾಹಕರು ಎದುರಿಸುತ್ತಿರುವ ಮುಖ್ಯ ಸಮಸ್ಯೆಯೆಂದರೆ ಮಾಹಿತಿಯ ಕೊರತೆ. ಮಾಹಿತಿ ಪಡೆಯುವ ಮೂಲಗಳು ಕೂಡ ಗ್ರಾಹಕರಿಗೆ ತಿಳಿದಿಲ್ಲ.
  • ಅನಕ್ಷರತೆ – ಹೆಚ್ಚಿನ ಗ್ರಾಹಕರು ಅನಕ್ಷರಸ್ಥರಾಗಿದ್ದಾರೆ ಮತ್ತು ಅವರು ಸಂಸ್ಥೆಯ ಅಥವಾ ಸರ್ಕಾರದ ನೀತಿಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇವರುಉತ್ಪಮ್ಮಗಳ ಬಳಕೆ ಅಥವಾ ದುರುಪಯೋಗವನ್ನು ಅರ್ಥಮಾಡಿಕೊಳ್ಳುವುದಿಲ್ಲ.
  • ನ್ಯಾಯೋಚಿತವಾದ ತೃಪ್ತಿ ಇರುವುದಿಲ್ಲ – ಗ್ರಾಹಕರು, ಸರಕುಗಳಿಗೆ ಹೆಚ್ಚಿನ ಬೆಲೆ ನೀಡಿ ಖರೀದಿಸಿದವರೂ, ಅನೇಕ ಬಾರಿ ಅವರು ಖರೀದಿಸಿದ ಸರಕುಗಳಿಂದ ತೃಪ್ತಿಯನ್ನು ಪಡೆಯುವುದಿಲ್ಲ.
  • ಶೋಷಣೆ – ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರು ಮಾರಾಟಗಾರರಿಂದ ಶೋಷಣೆಗೆ ಒಳಗಾಗುತ್ತಾರೆ. ಮಾರಾಟಗಾರರು ಕೃತಕ ಅಭಾವ, ಸಂಗ್ರಹಣೆ, ಕಪ್ಪು ಮಾರುಕಟ್ಟೆ, ಹೆಚ್ಚಿನ ಬೆಲೆ ಇತ್ಯಾದಿಗಳನ್ನು ಸೃಷ್ಟಿಸುತ್ತಾರೆ.
  • ಕಲಬೆರಕೆ – ಹೆಚ್ಚಿನ ಬಾರಿ ಗ್ರಾಹಕರು ಹೆಚ್ಚಿನ ಬೆಲೆಯನ್ನು ಪಾವತಿಸಿದ ನಂತರವೂ ಶುದ್ದತೆಯನ್ನು ಪಡೆಯುವುದಿಲ್ಲ ಅಥವಾ ನಾವು ಗುಣಮಟ್ಟದ ಸರಕುಗಳು ಎಂದು ಹೇಳಬಹುದು. ಸಂಸ್ಥೆಯು ಸಾಮಾನ್ಯವಾಗಿ ತಮ್ಮ ಲಾಭವನ್ನು ಹೆಚ್ಚಿಸಲು ಕಲಬೆರಕೆ ಸರಕುಗಳನ್ನು ಪೂರೈಸುತ್ತದೆ.
  • ಅನಿಯಮಿತ ಪೂರೈಕೆ – ಗ್ರಾಹಕರು ಎದುರಿಸುವ ಸಾಮಾನ್ಯ ಸಮಸ್ಯೆಗಳೆಂದರೆ ಸರಕುಗಳ ಅನಿಯಮಿತ ಪೂರೈಕೆ. ಇದು ಸರಕುಗಳ ಕೊರತೆಯಿಂದಾಗಿ ಸಂಸ್ಥೆಗಳು ಈ ಸರಕುಗಳನ್ನು ಸಂಗ್ರಹಿಸುವ ಮೂಲಕ ಅಗತ್ಯ ವಸ್ತುಗಳ ಕೃತಕ ಕೊರತೆಯನ್ನು ಸೃಷ್ಟಿಸಿ ಹೆಚ್ಚಿನ ಬೆಲೆಗೆ ಕಾರಣವಾಗುತ್ತದೆ.
  • ಆಕರ್ಷಕ ಪ್ಯಾಕಿಂಗ್‌ – ಮಾರುಕಟ್ಟೆಯಲ್ಲಿ ಸರಬರಾಜು ಮಾಡಲಾದ ಪ್ಯಾಕ್‌ ಮಾಡಲಾದ ಸರಕುಗಳು ಅಷ್ಟು ಗುಣಮಟ್ಟವನ್ನು ಹೊಂದಿರುವುದಿಲ್ಲ. ಪ್ಯಾಕಿಂಗ್‌ ಬಹಳ ಆಕರ್ಷಕವಾಗಿದೆ ಮತ್ತು ಇದು ಗ್ರಾಹಕರ ಗಮನವನ್ನು ಸೆಳೆಯುತ್ತದೆ. ಪ್ಯಾಕೆಟಗಳು ಕೆಳದರ್ಜೆಯ ಸರಕುಗಳನ್ನು ಹೊಂದಿದ್ದು ಗ್ರಾಹಕರನ್ನು ಮೂರ್ಖರನ್ನಾಗಿಸಬಹುದು.
  • ಅಸ್ತವ್ಯಸ್ತವಾಗಿರುವ ಗ್ರಾಹಕರು – ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಇದೂ ಕೂಡ ಒಂದು. ಗ್ರಾಹಕರು ವ್ಯಾಪಕವಾಗಿ ಚದುರಿಹೋಗಿದ್ದಾರೆ ಮತ್ತು ಅವರು ಒಂದಾಗಿಲ್ಲ, ಇದರ ವಿರುದ್ದ ಮಾರಾಟಗಾರರು ಒಂದು ರೀತಿಯಲ್ಲಿ ಸಂಘಟಿತರಾಗಿ ಒಗ್ಗಟ್ಟಾಗಿದ್ದಾರೆ. ವಿವಿಧ ಕಾರಣಗಳಿಂದ ಗ್ರಾಹಕರು ಒಂದೆಡೆ ಸೇರಲು ಮತ್ತು ಜಗಳವಾಡಲು ಸಾಧ್ಯವಾಗುತ್ತಿಲ್ಲ. ಇದು ಗ್ರಾಹಕರ ಶೋಷಣೆಗೆ ಕಾರಣವಾಗುತ್ತದೆ. ವ್ಯಾಪಾರ ವ್ಯವಹಾರ ಸಂಘಟನೆಗಳಲ್ಲಿ ಹೆಚ್ಚುತ್ತಿರುವ ಪೈಪೋಟಿ, ಮಾರಾಟದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಹಾಗೂ ಮಾರುಕಟ್ಟೆಯಲ್ಲಿ ತಮ್ಮ ಸಾಮರ್ಥ್ಯವನ್ನು ವೃದ್ದಿಸಿಕೊಳ್ಳುವ ಉದ್ದೇಶದಿಂದ ಅನುಚಿತ ವ್ಯಾಪಾರ ಪದ್ದತಿಗಳಾದ ಕಲಬೆರಕೆ, ಕಾಳಸಂತೆ ವ್ಯಾಪಾರ, ತಪ್ಪು ಮಾಹಿತಿ ನೀಡುವ ಜಾಹಿರಾತು ಮುಂತಾದವುಗಳಿಂದ ಗ್ರಾಹಕರನ್ನುವಂಚಿಸುತ್ತಿದ್ದು ಅವನ ರಕ್ಷಣೆ ಅತ್ಯವಶ್ಯಕವಾಗಿದೆ. ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿ ಒಂದಲ್ಲ ರೀತಿಯಲ್ಲಿ ಗ್ರಾಹಕನಾಗಿರುತ್ತಾನೆ. ಮನುಷ್ಯ ಸಂಘ ಜೀವಿಯಾದರೂ ವ್ಯಾಪಾರ, ವ್ಯವಹಾರ ಮತ್ತು ಸೇವಾ ಕ್ಷೇತ್ರಕ್ಕೆ ಬಂದರೆ ಸಹಜವಾಗಿ ಸ್ವಾರ್ಥಿಯಾಗುತ್ತಾನೆ. ಇದರಿಂದ ದೋಷಪೂರಿತವಾದ ಮಾರಾಟ ಅಥವಾ ನ್ಯೂನ್ಯತೆಗಳನ್ನು ಒಳಗೊಂಡ ಸೇವೆಯಿಂದಾಗಿ ಗ್ರಾಹಕರು ಒಂದಲ್ಲ ಒಂದು ರೀತಿಯಲ್ಲಿ ನಷ್ಟ ಮತ್ತು ಕಷ್ಟಗಳನ್ನು ಅನುಭವಿಸುವುದು ಸರ್ವೇಸಾಮಾನ್ಯವಾಗಿದೆ. ಇಂತಹ ಕಷ್ಟಕ್ಕೆ ಸೂಕ್ತ ಪರಿಹಾರ ನೀಡಲೆಂದು ಭಾರತ ಸರ್ಕಾರ ಗ್ರಾಹಕರ ಹಿತರಕ್ಷಣಾ ಕಾಯ್ದೆ 1986 ಅನ್ನು ಜಾರಿಗೆ ತಂದಿದೆ.

ಗ್ರಾಹಕನ ಹಕ್ಕುಗಳು :

  • ಸುರಕ್ಷತೆಯ ಹಕ್ಕು – ಗ್ರಾಹಕರ ಆರೋಗ್ಯ ಹಾಗೂ ಜೀವಕ್ಕೆ ಹಾನಿಯನ್ನುಂಟು ಮಾಡುವ ಉತ್ಪಾದನಾ ಮತ್ತು ಇತರೆ ನ್ಯೂನ್ಯತೆಗಳನ್ನು ಹೊಂದಿರುವ ಆಹಾರ ವಸ್ತುಗಳು, ಔಷಧಿ, ವಿದ್ಯುತ್‌ ಉಪಕರಣಗಳು, ಗ್ಯಾಸ್‌ ಸಿಲಿಂಡರ್‌ ಗಳು, ಕುಕ್ಕರಗಳಿಂದ ರಕ್ಷಣೆಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.
  • ಮಾಹಿತಿ ಪಡೆಯುವ ಹಕ್ಕು – ಗ್ರಾಹಕರು ತಾವು ಖರೀದಿಸಲು ಇಚ್ಛಿಸುವ ಸರಕುಗಳ ಬಗ್ಗೆ ಅದರ ಸರಕಿನ ಪ್ರಮಾಣ, ಗುಣಮಟ್ಟ, ಬೆಲೆ, ಉತ್ಪದನೆ ಹಾಗೂ ವಾಯಿದೆ ದಿನಾಂಕ ಮುಂತಾದವುಗಳು ಬಗ್ಗೆ ನೈಜ ಮತ್ತು ಸಂಪೂರ್ಣ ಮಾಹಿತಿಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.
  • ಆಯ್ಕೆಯ ಹಕ್ಕು – ಮಾರಾಟಗಾರ ನಿರ್ದಿಷ್ಟ ವಸ್ತುಗಳನ್ನು ಖರೀದಿಸುವಂತೆ ಒತ್ತಾಯಪೂರ್ವಕ ಕ್ರಮಗಳನ್ನು ಕೈಗೊಂಡರು ವೈವಿಧ್ಯಮಯ ಸರಕುಗಳಲ್ಲಿ ತಮ್ಮ ಅಗತ್ಯಕ್ಕನುಗುಣವಾದ ಸರಕುಗಳನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಗ್ರಾಹಕರು ಹೊಂದಿರುತ್ತಾರೆ.
  • ಆಲಿಸುವ ಹಕ್ಕು – ಗ್ರಾಹಕರು ಶೋಷಣೆಗೆ ಒಳಗಾಗಿದ್ದಲ್ಲಿ ಅಥವಾ ಖರೀದಿಸಿದ ಸರಕು ಅಥವಾ ಸೇವೆಗಳಿಂದ ಅತೃಪ್ತಿಯನ್ನು ಹೊಂದಿದ್ದಲ್ಲಿ ಸಂಬಂಧಿಸಿದ ಗ್ರಾಹಕ ನ್ಯಾಯಾಲಯಕ್ಕೆ ದೂರನ್ನು ಸಲ್ಲಿಸುವ ಹಕ್ಕನ್ನು ಹೊಂದಿರುತ್ತಾರೆ. ಅದೇ ರೀತಿ ಅನೇಕ ವ್ಯವಹಾರ ಸಂಸ್ಥೆಗಳು ತಮ್ಮದೇ ಆದ ಸೇವಾ ಹಾಗೂ ಕುಂದುಕೊರತೆಗಳನ್ನು ನಿವಾರಿಸುವ ಕೇಂದ್ರಗಳನ್ನು ಸ್ಥಾಪಿಸುವುದರ ಮೂಲಕ ಗ್ರಾಹಕರ ಸಮಸ್ಯೆಯನ್ನು ಆಲಿಸುತ್ತಿದೆ.
  • ಕುಂದುಕೊರತೆಗಳನ್ನು ನಿವಾರಿಸುವಕೊಳ್ಳುವ ಹಕ್ಕು – ಗ್ರಾಹಕರು ತಾವು ಖರೀದಿಸಿದ ವಸ್ತುಗಳಲ್ಲಿ ದೋಷಗಳಿದ್ದಲ್ಲಿ ಅಥವಾ ಪಡೆಯುವ ಸೇವೆಗಳಲ್ಲಿ ನ್ಯೂನ್ಯತೆಗಳಿದ್ದಲ್ಲಿ ಅವುಗಳಿಗೆ ಪರಿಹಾರಗಳನ್ನು ಬದಲಿ ವಸ್ತುಗಳನ್ನು ಪಡೆಯುವ ಅಥವಾ ದೋಷಗಳನ್ನುನಿವಾರಿಸಿಕೊಳ್ಳುವ ಹಾಗೂ ಸರಕುಗಳ ಖರೀದಿಯಿಂದಾದ ನಷ್ಟವನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.
  • ಗ್ರಾಹಕರ ಶಿಕ್ಷಣದ ಹಕ್ಕು – ಗ್ರಾಹಕರು ಸರಕು ಮತ್ತು ಸೇವೆಗಳನ್ನು ಉಪಯೋಗಿಸುವ ಸಂದರ್ಭದಲ್ಲಿ ಸಂಒಪೂರ್ಣ ಜ್ಞಾನ ಹಾಗೂ ಪರಿಣಿತಿಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಅದೇ ರೀತಿ ವ್ಯಾಪಾರಿ ಸಂಸ್ಥೆಗಳ ಅನುಚಿತ ವ್ಯಾಪಾರಿ ಪದ್ದತಿಗಳಿಂದ ರಕ್ಷಣೆ ಪಡೆಯುವ ಸೂಕ್ತ ಕಾನೂನುಗಳು ಅಸ್ತಿತ್ವದಲ್ಲಿರುವುದರ ಬಗ್ಗೆ ಹಾಗೂ ತಮಗೆ ದೊರೆಯುವ ವಿವಿಧ ಹಕ್ಕುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.

ಉಪಸಂಹಾರ :

ಇಂದಿನ ಆಧುನಿಕ ಸ್ಪರ್ಧಾ ಜಗತ್ತಿನಲ್ಲಿ ಗ್ರಾಹಕನು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಆ ಸಮಸ್ಯೆಗಳನ್ನು, ಕುಂದುಕೊರತೆಗಳನ್ನು ಹೋಗಲಾಡಿಸಲು ಗ್ರಾಹಕರ ರಕ್ಷಣೆ ಮಾಡುವ ಸಲುವಾಗಿ ಗ್ರಾಹಕರ ಹಿತರಕ್ಷಣಾ ಕಾಯ್ದೆಯೂ ಇದೆ. ಈ ಗ್ರಾಹಕರ ಹಿತರಕ್ಷಣಾ ಕಾಯ್ದೆಯ ಸವಲತ್ತುಗಳನ್ನು, ತನ್ನ ಹಕ್ಕುಗಳನ್ನು ಗ್ರಾಹಕನು ಸರಿಯಾದ ರೂಪದಲ್ಲಿ ಉಪಯೋಗಿಸಬೇಕು ಹಾಗೂ ಹಕ್ಕುಗಳು ಜೊತೆಜೊತೆಯಲ್ಲಿಯೇ ಗ್ರಾಹಕನಾಗಿ ತನ್ನ ಕರ್ತವ್ಯಗಳಾದ ಹಕ್ಕುಗಳ ಕುರಿತಾದ ಜಾಗೃತಿ, ಗುಣಮಟ್ಟ ಅರಿವು, ದೂರು ನೀಡಲು ಸಿದ್ದರಿರಬೇಕು. ನಗದು ರಶೀದಿಗಾಗಿ ಬೇಡಿಕೆಯಿಡಬೇಕು, ಪರಿಸರ ರಕ್ಚಣೆಯ ಜವಬ್ದಾರಿ ವಹಿಸಬೇಕು, ಅವಸರದಲ್ಲಿ ಖರೀದಿಸಬಾರದು, ದೂರನ್ನು ಎಲ್ಲಿ, ಯಾರಿಗೆ, ಯಾವಾಗ ಸಲ್ಲಿಸಬೇಕು ಎಂಬೆಲ್ಲಾ ಮಾಹಿತಿ ತಿಳಿದೂ ತನ್ನ ಹಕ್ಕುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕೆ ಹೊರತು ದುರುಪಯೋಗಪಡಿಸಿಕೊಳ್ಳಬಾರದು.

FAQ :

ಗ್ರಾಹಕರು ಎದುರಿಸುತ್ತಿರುವ ಒಂದು ಸಮಸ್ಯೆ ತಿಳಿಸಿ?

ಮಾಹಿತಿಯು ಕೊರತೆ – ಗ್ರಾಹಕರು ಎದುರಿಸುತ್ತಿರುವ ಮುಖ್ಯ ಸಮಸ್ಯೆಯೆಂದರೆ ಮಾಹಿತಿಯ ಕೊರತೆ. ಮಾಹಿತಿ ಪಡೆಯುವ ಮೂಲಗಳು ಕೂಡ ಗ್ರಾಹಕರಿಗೆ ತಿಳಿದಿಲ್ಲ.

ಗ್ರಾಹಕನ ಒಂದು ಹಕ್ಕುಗಳನ್ನು ತಿಳಿಸಿ?

ಸುರಕ್ಷತೆಯ ಹಕ್ಕು – ಗ್ರಾಹಕರ ಆರೋಗ್ಯ ಹಾಗೂ ಜೀವಕ್ಕೆ ಹಾನಿಯನ್ನುಂಟು ಮಾಡುವ ಉತ್ಪಾದನಾ ಮತ್ತು ಇತರೆ ನ್ಯೂನ್ಯತೆಗಳನ್ನು ಹೊಂದಿರುವ ಆಹಾರ ವಸ್ತುಗಳು, ಔಷಧಿ, ವಿದ್ಯುತ್‌ ಉಪಕರಣಗಳು, ಗ್ಯಾಸ್‌ ಸಿಲಿಂಡರ್‌ ಗಳು, ಕುಕ್ಕರಗಳಿಂದ ರಕ್ಷಣೆಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.

ಇತರೆ ವಿಷಯಗಳು :

ನಾಗರೀಕ ಕಾನೂನು ಭಂಗ ಚಳುವಳಿಯ ಬಗ್ಗೆ ಮಾಹಿತಿ

ಗುಪ್ತಚರ ಸಂಘಟನೆಗಳ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ