ಜಲ ಸಂರಕ್ಷಣೆ ಬಗ್ಗೆ ಪ್ರಬಂಧ | Essay on Water Conservation in Kannada

ಜಲ ಸಂರಕ್ಷಣೆ ಬಗ್ಗೆ ಪ್ರಬಂಧ Essay on Water Conservation Jala Samrakshaneya bagge Mahithi in Kannada

ಜಲ ಸಂರಕ್ಷಣೆ ಬಗ್ಗೆ ಪ್ರಬಂಧ

ಜಲ ಸಂರಕ್ಷಣೆ ಬಗ್ಗೆ ಪ್ರಬಂಧ

ಈ ಲೇಖನಿಯಲ್ಲಿ ಜಲ ಸಂರಕ್ಷಣೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಪೀಠಿಕೆ :

ಪ್ರಕೃತಿ ನಮಗೆ ನೀಡಿರುವ ಸಂಪನ್ಮೂಲಗಳಲ್ಲಿ ಅತ್ಯಮೂಲ್ಯವಾದುದು ನೀರು. ನೀರಿಲ್ಲದೆ ಭೂಮಿಯ ಮೇಲೆ ಯಾವ ಜೀವಿಗಳೂ ಬದುಕುಳಿಯುವುದು ಅಸಾಧ್ಯ. ನೀರಿನ ಸಮಸ್ಯೆಯನ್ನು ತಡೆಗಟ್ಟಲು ಇರುವ ಒಂದೇ ಒಂದು ಮಾರ್ಗವೆಂದರೆ ನೀರಿನ ಸಂರಕ್ಷಣೆ. ನೀರಿನ ಮಿತವಾದ ಬಳಕೆ, ಅಂತರ್ಜಲವನ್ನು ಹೆಚ್ಚಿಸುವುದು, ನೀರಿನ ಮೂಲಗಳನ್ನು ಶುದ್ದವಾಗಿಟ್ಟುಕೊಳ್ಳುವುದು ಮತ್ತು ನೀರಿನ ಮರುಬಳಕೆ ಇವನ್ನು ಒಟ್ಟಾರೆಯಾಗಿ ನಾವು “ಜಲ ಸಂರಕ್ಷಣೆ” ಎಂದು ಕರೆಯುತ್ತೇವೆ.

ವಿಷಯ ವಿವರಣೆ :

ಲಭ್ಯವಿರುವ ನೀರನ್ನು ಜಾಗರೂಕತರಯಿಂದ ಮತ್ತು ಮಿತವ್ಯಯದಿಂದ ಬಳಸಿ ಮುಂದಿನ ಪೀಳಿಗೆಗೆ ನೀರನ್ನು ಉಳಿಸುವುದೇ ಜಲಸಂರಕ್ಷಣೆ. ಜೀವ ಸಂಕುಲದ ಉಗಮ, ಅಸ್ತಿತ್ವ ಮತ್ತು ಬೆಳವಣಿಗೆಗೆ ಕಾರಣವಾಗಿರುವ ನೀರನ್ನು ಸಮರ್ಪಕವಾಗಿ ನಿರ್ವಹಿಸುವುದರ ಮೂಲಕ ಸಂರಕ್ಷಿಸಬಹುದು. ನೀರಿನ ಸಮರ್ಪಕ ನಿರ್ವಹಣೆಯು ಈ ಕೆಳಗಿನ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

  • ನೀರಿನ ಕ್ಲೋರಿನ ಅಂಶಗಳಂತಹ ರೋಗನಿವಾರಕ ರಾಸಾಯನಿಕಗಳನ್ನು ಬೆರೆಸಿ, ಶುದ್ದೀಕರಿಸುವುದರ ಮೂಲಕ ಶುದ್ದ ಕುಡಿಯುವ ನೀರನ್ನು ಪೂರೈಸುವುದು.
  • ತ್ಯಾಜ್ಯ ವಸ್ತುಗಳನ್ನು ಕೆರೆ, ನದಿಗಳಂತಹ ನೀರಿನ ಆಕರಗಳಲ್ಲಿ ಹಾಕುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು.
  • ಕೈಗಾರಿಕಾ ತ್ಯಾಜ್ಯ ವಸ್ತುಗಳನ್ನು ನೀರಿನ ಆಕರಗಳಿಗೆ ವಿಸರ್ಜಿಸುವ ಮೊದಲು ವೈಜ್ಞಾನಿಕ ಸಂಸ್ಕರಣೆಗೆ ಒಳಪಡಿಸುವುದು.
  • ನೀರಿನಲ್ಲಿರುವ ಕಲುಷಿತ ಅಂಶಗಳನ್ನು ವಿವಿಧ ವಿಧಾನಗಳಿಂದ ಬೇರ್ಪಡಿಸಿ, ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡುವುದು.
  • ಮಳೆಗಾಲದಲ್ಲಿ ಭೂಮಿಗೆ ಬಿದ್ದ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಪ್ಪಿಸಲು ಸಣ್ಣ ಹಳ್ಳ ತೊರೆಗಳಿಗೆ ಚೆಕ್‌ ಡ್ಯಾಮ್‌ ಗಳನ್ನು ನಿರ್ಮಿಸಿ ನೀರು ಸಂಗ್ರಹಿಸುವುದು.
  • ಅರಣ್ಯ ನಾಶವನ್ನು ತಡೆಗಟ್ಟುವುದು ಮತ್ತು ಪ್ರಾಣಿಗಳ ಅತಿಯಾದ ಮೇಯಿಸುವಿಕೆಯನ್ನು ನಿಯಂತ್ರಿಸುವುದು.
  • ಮಳೆನೀರು ಕೊಯ್ಲುವಿನ ಮೂಲಕ ನೀರನ್ನು ಸಂಗ್ರಹಿಸುವುದು.
  • ಮಳೆನೀರು ಹರಿದು ಹೋಗದಂತೆ ತಡೆಯೊಡ್ಡಿ ಭೂಮಿಯಲ್ಲಿ ಇಂಗುವಂತೆ ಮಾಡುವುದರಿಂದ ಅಂತರ್ಜಲ ಮಟ್ಟವು ಮರುಪೂರ್ಣದಿಂದ ಹೆಚ್ಚುವುದು ಮತ್ತು ವರ್ಷದ ಎಲ್ಲಾ ಕಾಲದಲ್ಲಿಯೂ ನೀರು ದೊರೆಯುವಂತಾಗುವುದು.
  • ಕೊಳಾಯಿಗಳಲ್ಲಿ ಹಾಗೂ ಸರಬರಾಜು ವ್ಯವಸ್ಥೆಯಲ್ಲಿ ನೀರಿನ ಅನಗತ್ಯ ಪೋಲನ್ನು ತಡೆಯುವಲ್ಲಿ ತುರ್ತು ಗಮನಹರಿಸುವುದು.
  • ನೀರನ್ನು ಮಿತವಾಗಿ ಬಳಸುವುದು. ಮನೆಯಲ್ಲಿ ನಲ್ಲಿ, ಪೈಪುಗಳು ಕೆಟ್ಟು ಹೋಗಿ ನೀರು ಪೋಲಾಗುತ್ತಿದ್ದರೆ ತಕ್ಷಣ ದುರಸ್ತಿ ಮಾಡುವುದು.
  • ಕೆರೆ, ನದಿಗಳ ಮೂಲ ಮಲಿನವಾಗದಂತೆ ಎಚ್ಚರವಹಿಸುವುದು.
  • ಸಭೆ ಸಮಾರಂಭಗಳಲ್ಲಿ ಹೆಚ್ಚು ನೀರು ಪೋಲಾಗದಂತೆ ಜಾಗೃತಿ ವಹಿಸುವುದು.
  • ಪ್ರಕೃತಿ/ಪರಿಸರದ ರಕ್ಷಣೆಗೆ ಇತ್ತು ನೀಡುವುದು.
  • ವ್ಯರ್ಥವಾಗಿ ಹರಿದುಹೋಗುವ ನೀರನ್ನು ಮರುಸಂಸ್ಕರಿಸಿ ಇತರ ಉಪಯೋಗಗಳಿಗೆ ಬಳಸಿಕೊಳ್ಳುವ ಯೋಜನೆಗಳಲ್ಲಿ ಗಮನ ಹರಿಸುವುದು.
  • ನೀರಿನ ಬಳಕೆಯ ಬಗೆಗಿನ ಜಾಗೃತಿಗಾಗಿ ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು.
  • ಲಭ್ಯವಿರುವ ಅತ್ಯಲ್ಪ ಜೀವಜಲವನ್ನು ಸುರಕ್ಷಿತವಾಗಿ ಸಂರಕ್ಷಿಸುವುದರ ಜೊತೆಗೆ ಮುಂಬರುವ ದಿನಗಳಲ್ಲಿ ಸಮೃದ್ದ ಮಳೆಯಾಗಲು ಹಾಗೂ ಭೂಮಿ ಸದಾಕಾಲ ತಂಪಾಗುವಂತೆ ಮಾಡುವುದು ಅತಿ ಮುಖ್ಯವಾಗಿದೆ. ಅದಕ್ಕಾಗಿ ಸಾರ್ವಜನಿಕರಲ್ಲಿ ನೀರಿನ ಅಗತ್ಯ, ಮಹತ್ವ ಹಾಗೂ ನೀರಿನ ಪೋಲು ಮತ್ತು ಮಾಲಿನ್ಯದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಸೂಕ್ತ ಮಾಹಿತಿಗಳೊಂದಿಗೆ ಅರಿವು ಮೂಡಿಸಬೇಕು. ಗಿಡ ಮರಗಳನ್ನು ನೆಟ್ಟು ರಕ್ಷಿಸಬೇಕು. ಇದರಿಂದ ಹಸಿರುಯುತ ಪರಿಸರ ಹಾಗೂ ಅರಣ್ಯ ಹೆಚ್ಚಾಗಿ ಉತ್ತಮ ಮಳೆಯಾಗುವುದಲ್ಲದೇ ಉಸಿರಾಡಲು ಶುದ್ದ ಆಮ್ಲಜನಕ ದೊರಕುತ್ತದೆ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಕೈಗಾರಿಕೆಗಳ ತ್ಯಾಜ್ಯ ಹಾಗೂ ಉಪಯುಕ್ತ ರಾಸಾಯನಿಕ ಪದಾರ್ಥಗಳು ನೀರಿನ ಮೂಲಗಳಿಗೆ ಸೇರದಂತೆ ಕಠಿಣ ಕಾನೂನು ರೂಪಿಸಿ ಜಾರಿಗೆ ಬರುವಂತೆ ಒತ್ತಾಯ ಮಾಡಬೇಕು.
  • ಮಳೆ ನೀರು ಕೊಯ್ಲು ಎಂಬುದು ಮಳೆ ನೀರನ್ನು ಒಟ್ಟುಗೂಡಿಸುವ ಅಥವಾ ಸಂಚಯನ ಮಾಡುವ ಮತ್ತು ಶೇಖರಿಸಿಟ್ಟುಕೊಳ್ಳಲು ವಿಧಾನಕ್ಕಿರುವ ಹೆಸರು. ಕುಡಿಯುವ ನೀರನ್ನು ಒದಗಿಸಲು, ಜಾನುವಾರುಗಳಿಗೆ ನೀರುಣಿಸಲು, ನೀರಾವರಿಗಾಗಿ ನೀರಿನ ವ್ಯವಸ್ಥೆ ಮಾಡಲು ಅಥವಾ ಅಂತರ್ಜಲ ಪುನರ್ಭರ್ತಿಕಾರ್ಯ ಎಂದು ಕರೆಯಲಾಗುವ ಪ್ರಕ್ರಿಯೆಯೊಂದರಲ್ಲಿ ನೀರು ಪೊಟರೆಯನ್ನು ಪುನಃ ತುಂಬಿಸಲು ಮಳೆನೀರು ಕೊಯ್ಲು ಪದ್ದತಿಯನ್ನು ಬಳಸಿಕೊಂಡು ಬರಲಾಗಿದೆ.
  • ಮನೆಗಳು, ಗುಡಾರಗಳು ಮತ್ತು ಸ್ಥಳೀಯ ಸಾರ್ವಜನಿಕ ಕಟ್ಟಡಗಳ ಛಾವಣಿಗಳಿಂದ ಅಥವಾ ವಿಶೇಷವಾಗಿ ಸಿದ್ದಗೊಳಿಸಲಾದ ನೆಲದ ಪ್ರದೇಶಗಳಿಂದ ಸಂಗ್ರಹಿಸಲಾದ ಮಳೆನೀರು, ಕುಡಿಯುವ ನೀರಿಗೆ ತನ್ನದೇ ಆದ ಪ್ರಮುಖ ಕೊಡುಗೆಯನ್ನು ನೀಡಬಲ್ಲದು. ಛಾವಣಿಯ ಮಳೆನೀರು ಸಾಮಾನ್ಯವಾಗಿ ಉತ್ತಮ ಗುಣಮಟ್ಟದ್ದಾಗಿ ಇರುತ್ತದೆ. ಆದ್ದರಿಂದ ಬಳಕೆಗೆ ಮೊದಲು ಅದನ್ನು ಸಂಸ್ಕರಿಸುವ ಅಗತ್ಯ ಕಂಡು ಬರುವುದಿಲ್ಲ.

ಉಪಸಂಹಾರ :

ನೀರಿನ ಅಭಾವನನ್ನು ತಡೆಗಟ್ಟುವ ಕಡೆ ನಾವೆಲ್ಲರೂ ಗಮನಹರಿಸಬೇಕು. ಇಲ್ಲದಿದ್ದರೆ ಭೂಮಿಯ ಮೇಲೆ ಜೀವಿಗಳು ಬದುಕುಳಿಯುವುದು ಅಸಾಧ್ಯವಾಗುತ್ತದೆ. ಜಲ ಜಾಗೃತಿ ಆಂದೋಲನ ಜಲಸಂರಕ್ಷಣಾ ಆಂದೋಲನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕು. ಹೀಗೆ ಎಲ್ಲರೂ ಜಾಗೃತರಾದಾಗ ಮಾತ್ರ ನಾವು ನೀರಿನ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗಾದರೂ ಪರಿಹರಿಸಬಹುದು.

FAQ :

ಜಲ ಸಂರಕ್ಷಣೆ ಎಂದರೇನು?

ನೀರಿನ ಮಿತವಾದ ಬಳಕೆ, ಅಂತರ್ಜಲವನ್ನು ಹೆಚ್ಚಿಸುವುದು, ನೀರಿನ ಮೂಲಗಳನ್ನು ಶುದ್ದವಾಗಿಟ್ಟುಕೊಳ್ಳುವುದು ಮತ್ತು ನೀರಿನ ಮರುಬಳಕೆ ಇವನ್ನು ಒಟ್ಟಾರೆಯಾಗಿ ನಾವು “ಜಲ ಸಂರಕ್ಷಣೆ” ಎಂದು ಕರೆಯುತ್ತೇವೆ.

ನೀರಿನ ಸಂರಕ್ಷಣೆ ಒಂದು ವಿಧಾನ ತಿಳಿಸಿ?

ನೀರಿನ ಕ್ಲೋರಿನ ಅಂಶಗಳಂತಹ ರೋಗನಿವಾರಕ ರಾಸಾಯನಿಕಗಳನ್ನು ಬೆರೆಸಿ, ಶುದ್ದೀಕರಿಸುವುದರ ಮೂಲಕ ಶುದ್ದ ಕುಡಿಯುವ ನೀರನ್ನು ಪೂರೈಸುವುದು.
ತ್ಯಾಜ್ಯ ವಸ್ತುಗಳನ್ನು ಕೆರೆ, ನದಿಗಳಂತಹ ನೀರಿನ ಆಕರಗಳಲ್ಲಿ ಹಾಕುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು.

ಇತರೆ ವಿಷಯಗಳು :

ಭಾರತೀಯ ಸೇನಾ ಪಡೆಯ ಬಗ್ಗೆ ಮಾಹಿತಿ

ಗ್ರಾಹಕರ ಹಕ್ಕುಗಳು ಮತ್ತು ಸಮಸ್ಯೆಗಳ ಬಗ್ಗೆ ಪ್ರಬಂಧ

Leave your vote

16 Points
Upvote Downvote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ