ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳ ಬಗ್ಗೆ ಮಾಹಿತಿ | Information about Central Armed Police Forces in Kannada

ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳ ಬಗ್ಗೆ ಮಾಹಿತಿ Information about Central Armed Police Forces Kendriya sashastra Police Padegala bagge Mahithi in Kannada

ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳ ಬಗ್ಗೆ ಮಾಹಿತಿ

Information about Central Armed Police Forces in Kannada
ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಸಿ.ಆರ್.ಎಫ್‌ :

  • ಇದು ಸಶಸ್ತ್ರ ಪೊಲೀಸ್‌ ಪಡೆಗಳಲ್ಲಿ ಅತ್ಯಂತ ಪಡೆಗಳಲ್ಲಿ ಅತ್ಯಂತ ದೊಡ್ಡ ಘಟಕ. ಕೇಂದ್ರೀಯ ಮೀಸಲು ಪೊಲೀಸ್‌ ಪಡೆ ಎನಿಸಿರುವ ಇದು 245 ಬೆಟಾಲಿಯನ್ನಲ್ಲಿ 3131678 ಉದ್ಯೋಗಿಗಳನ್ನು ಹೊಂದಿದೆ. ಈ ಘಟಕವು 15 ಬೆಟಾಲಿಯನ್‌ ನ ಜನದೊಂಬಿ ನಿಯಂತ್ರಣಕ್ಕೆ RAF-Rapid Action Force ಮತ್ತು COBRA -Commando Battalion for Resolution Action ನಕ್ಸಲ್‌ ನಿಗ್ರಹ ಪಡೆ ಹೊಂದಿದೆ. 1949 ಡಿಸೆಂಬರ್‌ 28 ರಂದು CRPF ಕಾಯ್ದೆಯನ್ನು ರಚನೆಗೊಂಡಿದೆ.

ಗಡಿ ಭದ್ರತಾ ಪಡೆ :

  • ಇದು ಪರ್ವತಗಳನ್ನು ಹೊರತುಪಡಿಸಿ ಭೂಗಡಿ ರಕ್ಷಣೆ ಜವಬ್ದಾರಿ ಹೊಂದಿದೆ. ಅಂದರೆ ಭಾರತ ಪಾಕಿಸ್ತಾನ ಹಾಗೂ ಭಾರತ ಬಾಂಗ್ಲಾದೇಶಗಳ ಗಡಿ ನಿಯಂತ್ರಣದ ಪ್ರಮುಖ ಜವಬ್ದಾರಿ. 186 ಬೆಟಾಲಿಯನ್‌ ಹೊಂದಿದೆ. 1965ರ ಡಿಸೆಂಬರ್‌ 1 ರಂದು BSF ಆರಂಭ.

ಇಂಡೋ – ಟಿಬೆಟಿಯನ್‌ ಗಡಿ ಪೊಲೀಸ್‌ :

  • ಇದು ಚೀನಾ ಬಳಿಯ ಲಡಾಕನ ಕಾರಕೋರಂ ಕಣಿವೆ ಮಾರ್ಗದಿಂದ ಅರುಣಾಚಲ ಪ್ರದೇಶದ ದಿಪುಲಾ ಸೇರಿದಂತೆ 3488 ಕಿ.ಮೀ. ದೂರ ವರೋನ ಪ್ರದೇಶದಲ್ಲಿ ನಿಯೋಜಿಸಲಾಗಿದೆ. 2018ರಲ್ಲಿ 25 ವರ್ಷದ ಪ್ರಕೃತಿ ರಾಯ್‌ ಅವರು ಈ ITBP ಘಟಕಕ್ಕೆ ನೇಮಕ ಹೊಂದಿದ ಮೊದಲ ಮಹಿಳೆಯಾಗಿದ್ದಾರೆ. 1962ರ ಅಕ್ಟೋಬರ್‌ 24 ರಂದು ITBP ರಚನೆ.

ಸಶಸ್ತ್ರ ಪೊಲೀಸ್‌ ಪಡೆ :

  • ಇಂಡೋ-ನೇಪಾಳ ಮತ್ತು ಇಂಡೋ ಭೂತಾನ್‌ ಗಡಿ ರಕ್ಷಣೆ ಮಾಡುವ ಸಶಸ್ತ್ರ‌ ಪೊಲೀಸ್ ಘಟಕ. ಇದು 67 ಬೆಟಾಲಿಯನ್‌ ಹೊಂದಿದ್ದು, ಮೀಸಲು ಬೆಟಾಲಿಯನ್‌ ಕೂಡ ಹೊಂದಿದೆ. 2016ರಲ್ಲಿ IPS ಅಧಿಕಾರಿಗೆ ಅರ್ಚನಾ ರಾಮಸುಂದರಂ ಅವರು SSB ಯ ಡಿಜಿಪಿಯಾಗಿ ನೇಮಕ ಹೊಂದಿದ ಮೊದಲು ಮಹಿಳಾ ಅಧಿಕಾರಣಿ ಎನಿಸಿದ್ದಾರೆ. 1963ರ ಡಿಸೆಂಬರ್‌ 20 ರಂದು ರಚನೆ.

ಕೇಂದ್ರೀಯ ಕೈಗಾರಿಕಾ ರಕ್ಷಣಾ ಪಡೆ :

  • ಇದು ಜಗತ್ತಿನ ಅತಿ ದೊಡ್ಡ ಕೈಗಾರಿಕಾ ರಕ್ಷಣಾ ಪಡೆಗಳಲ್ಲಿ ಒದಾಗಿದೆ. 1969ರ ಮಾರ್ಚ್‌ 10ರಂದು ಸ್ಥಾಪನೆಯಾಗಿದ್ದು, ಕೇಂದ್ರ ಗೃಹ ವ್ಯವಹಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ನವದೆಹಲಿಯಲ್ಲಿ ಕೇಂದ್ರ ಕಛೇರಿ ಹೊಂದಿದೆ. ದೇಶದ ಪ್ರಮುಖ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು, ಸಾರ್ವಜನಿಕ ಉದ್ದಿಮೆಗಳು ಹಾಗೂ ಸಂದಿಗ್ದ ಮೂಲ ಸೌಕರ್ಯ ಘಟಕಗಳಲ್ಲೂ ಭದ್ರತೆ ಜವಾಬ್ದಾರಿ ಹೊಂದಿದೆ. ಭದ್ರತೆ ಮತ್ತು ರಕ್ಷಣೆ ಈ ಘಟಕದ ಧ್ಯೇಯವಾಗಿದೆ. ಆಶಾ ಸಿನ್ಹಾ ಅವರು 1992ರಲ್ಲಿ ಭಾರತದ ಅರೆ ಮಿಲಿಟರಿ ಪಡೆಗೆ ನೇಮವಾದ ಮೊದಲ ಮಹಿಳಾ ಕಮಾಂಡೆಂಟ್‌ ಎನಿಸಿದ್ದಾರೆ. ಪ್ರತಿ ವರ್ಷ ಮಾರ್ಚ್‌ 10 ರಂದು CISF ಉದಯ ದಿನ ಆಚರಣೆ. (National Industrial Security Academy – ಹೈದರಾಬಾದನಲ್ಲಿ CISF ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿಗೆ ತರಬೇತಿ).

ರೈಲ್ವೆ ರಕ್ಷಣಾ ಪಡೆ :

  • ಭಾರತೀಯ ರೈಲ್ವೆ ವಲಯದಲ್ಲಿ ರಕ್ಷಣೆ ಜವಾಬ್ದಾರಿ ಹೊಂದಿದ್ದು, 1872ರಲ್ಲಿ ಮೊದಲ ಬಾರಿ ರಚನೆಗೊಂಡಿದೆ. ಕೇಂದ್ರ ರೈಲ್ವೆ ವಲಯದ ಮೇಲ್ವಿಚಾರಣೆ ಹೊಂದಿದ್ದು, ನವದೆಹಲಿಯಲ್ಲಿ ಕಾರ್ಯ ಕಛೇರಿ ಹೊಂದಿದೆ. ಈ ಪಡೆಯು 1957ರ ರೈಲ್ವೇ ರಕ್ಷಣಾ ಭದ್ರತಾ ಕಾಯ್ದೆಯನ್ವಯ ಕಾರ್ಯನಿರ್ವಹಿಸುತ್ತದೆ. ರೈಲ್ವೇ ಆಸ್ತಿ ಮತ್ತು ರೇಲ್ವೇ ಪ್ರಯಾಣಿಕರ ಭದ್ರತೆ ಮತ್ತು ರಕ್ಷಣೆಯ ಜವಾಬ್ದಾರಿ ಹೊಂದಿದೆ. UPSC ನಡೆಸುವ ಭಾರತೀಯ ರೇಲ್ವೆ ಭದ್ರತಾ ಪಡೆ ಸೇವೆ(IRPFS) ಪರೀಕ್ಷೆಯ ಮೂಲಕ ಈ ಪಡೆಯ ಗ್ರೂಪ್‌ -ಎ ಅಧಿಕಾರಿಗಳನ್ನು ನೇಮಿಸಲಾಗುವುದು.

ವಿಶೇಷ ರಕ್ಷಣಾ ಗುಂಪು :

  • 1988 ರಲ್ಲಿ ರಚಿಸಲಾಯಿತು. ಪ್ರಧಾನಮಂತ್ರಿಗೆ ಮತ್ತು ಅವನ ಹತ್ತಿರದ ಸಂಬಂಧಿಗಳಿಗೆ ರಕ್ಷಣೆ ಒದಗಿಸುವ ಜವಬ್ದಾರಿ ಹೊಂದಿದೆ. ಕೇಂದ್ರ ಕಛೇರಿ ನವದೆಹಲಿಯಲ್ಲಿದೆ.

ರಾಷ್ಟ್ರೀಯ ಭದ್ರತಾ ಪಡೆ :

  • ಈ ಪಡೆಯ ಭಯೋತ್ಪಾದನೆ ನಿಗ್ರಹಿಸಲು ಮತ್ತು ಆಂತರಿಕ ಗಲಭೆಯಿಂದ ದೇಶವನ್ನು ಸಂರಕ್ಷಿಸಲು ಸ್ಥಾಪಿಸಲಾಗಿದೆ. 1986ರಲ್ಲಿ ಉದಯವಾಗಿದೆ. ಇದನ್ನು The Black Cats ಎನ್ನುವರು. 1984 ಜೂನ್‌ 1-10ರಲ್ಲಿ ನಡೆದ ಆಪರೇಷನ್‌ ಬ್ಲೂಸ್ಟಾರ್‌ ಕಾರ್ಯಾಚರಣೆ ಮತ್ತು 1984ರ ಅಕ್ಟೋಬರ್‌ 31ರ ಇಂದಿರಾಗಾಂಧಿ ಹತ್ಯೆಯ ನಂತರ ಈ ಘಟಕ ಹೆಚ್ಚು ಮಹತ್ವ ಪಡೆದುಕೊಂಡಿದೆ.

FAQ :

COBRA ವಿಸ್ತೃತ ರೂಪ ತಿಳಿಸಿ?

Commando Battalion for Resolution Action

ಆಪರೇಷನ್‌ ಬ್ಲೂಸ್ಟಾರ್‌ ಕಾರ್ಯಾಚರಣೆ ಯಾವಾಗ ನಡೆಯಿತು?

1984

ಇತರೆ ವಿಷಯಗಳು :

ಗುಪ್ತಚರ ಸಂಘಟನೆಗಳ ಬಗ್ಗೆ ಮಾಹಿತಿ

ಕ್ರಾಂತಿಕಾರರ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ