ವಿಶ್ವ ಗುಬ್ಬಚ್ಚಿ ದಿನದ ಬಗ್ಗೆ ಮಾಹಿತಿ | Information about World Sparrow Day in Kannada

ವಿಶ್ವ ಗುಬ್ಬಚ್ಚಿ ದಿನದ ಬಗ್ಗೆ ಮಾಹಿತಿ Information about World Sparrow Day Vishwa Gubbachi Dinada bagge Mahithi in Kannada

ವಿಶ್ವ ಗುಬ್ಬಚ್ಚಿ ದಿನದ ಬಗ್ಗೆ ಮಾಹಿತಿ

ವಿಶ್ವ ಗುಬ್ಬಚ್ಚಿ ದಿನದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ವಿಶ್ವ ಗುಬ್ಬಚ್ಚಿ ದಿನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ವಿಶ್ವ ಗುಬ್ಬಚ್ಚಿ ದಿನ :

ನಮ್ಮ ಮನೆ ಅಂಗಳಕ್ಕೆ ಬರುವ ಗುಬ್ಬಚ್ಚಿಗಳು ಹಾಗೂ ಇನ್ನಿತರೆ ಪಕ್ಷಿಗಳ ಬಗ್ಗೆ ಜಾಗೃತಿ ಉಂಟುಮಾಡಿ ಅವುಗಳ ಸಂಕುಲಕ್ಕೆ ಉಂಟಾಗುತ್ತಿರುವ ಭೀತಿಯನ್ನು ತಡೆಗಟ್ಟುವ ಪ್ರಯತ್ನದಿಂದ ಪ್ರತಿವರ್ಷ ಮಾರ್ಚ್‌ 20 ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತದೆ. ಭಾರತದ ನೇಚರ್‌ ಫಾರೆವರ್‌ ಸೊಸೈಟಿಯ ಪ್ರಮುಖ ಆಸಕ್ತಿಯ ಮೇರೆಗೆ ಪ್ರಾರಂಭಗೊಂಡಿರುವ ಈ ಆಚರಣೆಗೆ, ಫ್ರಾನ್ಸಿನ ಇಕೋಸಿಸ್‌ ಆಕ್ಷನ್‌ ಪೌಂಡೇಷನ್‌ ಮತ್ತು ವಿಶ್ವದ ಅನೇಕ ಸಂಸ್ಥೆಗಳು ಸಹಯೋಗ ನೀಡಿವೆ.

ವಿಶ್ವ ಗುಬ್ಬಚ್ಚಿ ದಿನದ ಇತಿಹಾಸ :

ಸಂರಕ್ಷಣಾವಾದಿಗಳಾದ ಮೊಹಮ್ಮದ್‌ ದಿಲಾವರ್‌ ಅವರು ನಾಸಿಕ್ ನಲ್ಲಿ ಮನೆ ಗುಬ್ಬಚ್ಚಿಗಳಿಗೆ ಕಾಳಜಿಯನ್ನು ನೀಡುವ ಅಭಿಯಾನವನ್ನು ಆರಂಭ ಮಾಡಿದರು. ನೇಚರ್‌ ಫಾರೆವರ್‌ ಸೊಸೈಟಿಯ ಕಚೇರಿಯಲ್ಲಿ ನಡೆದ ಅನೌಪಚಾರಿಕ ಚರ್ಚೆಯ ಸಂದರ್ಭದಲ್ಲಿ ಅಭಿಯಾನವನ್ನು ಅಧಿಕೃತಗೊಳಿಸುವ ಆಲೋಚನೆ ಹುಟ್ಟಿಕೊಂಡಿತು. ನಂತರ 2010 ರಲ್ಲಿ ಪ್ರಪಂಚದಾದ್ಯಂತ ಮೊದಲ ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಯಿತು.

ಗುಬ್ಬಚ್ಚಿಗಳ ಬಗ್ಗೆ :

  • ಗುಬ್ಬಚ್ಚಿ ಹೆಚ್ಚಿನ ದೇಶಗಳಲ್ಲಿ ಕಂಡುಬರುವ ಒಂದು ಸಣ್ಣ ಹಕ್ಕಿಯಾಗಿದೆ.
  • ಇದು ಕಂದು, ಬೂದು ಮತ್ತು ಬಿಳಿ ಬಣ್ಣವನ್ನು ಹೊಂದಿದೆ.
  • ಇದು ಸಣ್ಣ ದೇಹ, ಸಣ್ಣ ಬಾಲ ಮತ್ತು ಚೂಪಾದ ಕೊಕ್ಕನ್ನು ಹೊಂದಿದೆ.
  • ಗುಬ್ಬಚ್ಚಿಯನ್ನು ಮನೆ ಗುಬ್ಬಚ್ಚಿಯೆಂದು ಕರೆಯುತ್ತಾರೆ.
  • ಗುಬ್ಬಚ್ಚಿಗಳ ಗುಂಪನ್ನು ಹಿಂಡು ಎಂದು ಕರೆಯುತ್ತಾರೆ.
  • ಇದು ಮನೆ, ಕಟ್ಟಡಗಳ ಬಳಿ ತನ್ನ ಗೂಡನ್ನು ನಿರ್ಮಿಸುತ್ತದೆ.
  • ಗುಬ್ಬಚ್ಚಿ ತನ್ನ ಗೂಡನ್ನು ಹುಲ್ಲು, ಒಣ ಎಲೆಗಳು ಬಟ್ಟೆಯ ತುಂಡುಗಳಿಂದ ನಿರ್ಮಿಸುತ್ತದೆ.
  • ಗುಬ್ಬಚ್ಚಿ ಹಣ್ಣುಗಳು, ಬೀಜಗಳು, ಕೀಟಗಳನ್ನು ತಿನ್ನುತ್ತವೆ.
  • ಮನೆ ಗುಬ್ಬಚ್ಚಿ ಈಗ ಕಣ್ಮರೆಯಾಗುತ್ತಿರುವ ಜಾತಿಯಾಗಿದೆ.
  • ಇದರ ಜೀವಿತಾವಧಿ 4 ರಿಂದ 7 ವರ್ಷಗಳು

ಮನೆ ಗುಬ್ಬಚ್ಚಿಗಳು :

ಮನೆ ಗುಬ್ಬಚ್ಚಿ ಅಥವಾ ಹೌಸ್ ಸ್ಪ್ಯಾರೋ ಪ್ರಪಂಚದಲ್ಲಿ ಅತ್ಯಂತ ವ್ಯಾಪಕವಾದ, ಸಾಮಾನ್ಯವಾಗಿ ಕಂಡುಬರುವ ಕಾಡು ಪಕ್ಷಿಯಾಗಿದೆ. ಇದನ್ನು ಯುರೋಪಿಯನ್ ವಸಾಹತುಗಾರರು ಪ್ರಪಂಚದಾದ್ಯಂತ ಸಾಗಿಸಿದ್ದಾರೆ ಮತ್ತು ಈಗ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಉತ್ತರ ಅಮೇರಿಕಾ, ಭಾರತ ಮತ್ತು ಯುರೋಪ್ ಸೇರಿದಂತೆ ವಿಶ್ವದ ಮೂರನೇ ಎರಡರಷ್ಟು ಭೂಪ್ರದೇಶಗಳಲ್ಲಿ ಇವುಗಳು ಕಾಣಸಿಗುತ್ತವೆ. ದಕ್ಷಿಣ ಭಾರತದಲ್ಲಿ, ಮನೆ ಗುಬ್ಬಚ್ಚಿಗಳು ಗೋಡೆಯಗಳಲ್ಲಿ ಗೂಡು ಕಟ್ಟಿದರೆ ಜನರು ಅದನ್ನು ಒಳ್ಳೆಯ ಶಕುನವೆಂದು ಭಾವಿಸುತ್ತಾರೆ. ಈ ಗುಬ್ಬಚ್ಚಿಯ ವೈಜ್ಞಾನಿಕ ಹೆಸರು ಪಾಸರ್ ಡೊಮೆಸ್ಟಿಕಸ್. ಹೌಸ್ ಸ್ಪ್ಯಾರೋ ಬಹಳ ಸಾಮಾಜಿಕ ಪಕ್ಷಿಯಾಗಿದೆ ಆಗಾಗ್ಗೆ ಇತರ ರೀತಿಯ ಪಕ್ಷಿಗಳೊಂದಿಗೆ ಹಿಂಡುಗಳನ್ನು ರೂಪಿಸುತ್ತದೆ. ಇದು ಸಾಮುದಾಯಿಕವಾಗಿ ನೆಲೆಸುತ್ತದೆ, ಅದರ ಗೂಡುಗಳನ್ನು ಸಾಮಾನ್ಯವಾಗಿ ಗುಂಪುಗಳಾಗಿ ಮಾಡಲಾಗುತ್ತದೆ.

ವಿಶ್ವ ಗುಬ್ಬಚ್ಚಿ ದಿನ ಆಚರಣೆ :

2010 ಮಾರ್ಚ 20 ರಂದು ಮೊದಲ ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಯಿತು. ಇದರ ಥೀಮ್‌ ” ನಾನು ಗುಬ್ಬಚ್ಚಿಗಳನ್ನು ಪ್ರೀತಿಸುತ್ತೇನೆ” ಎಂಬುದಾಗಿದೆ. ಮಾನವ-ಗುಬ್ಬಚ್ಚಿ ಪರಸ್ಪರ ಕ್ರಿಯೆಯ ಪ್ರಾಮುಖ್ಯತೆಯನ್ನು ಹೆಚ್ಚು ಜನರು ಗುರುತಿಸುತ್ತಾರೆ ಎಂಬ ಭರವಸೆಯಿಂದ ಇದು ಪ್ರೇರಿತವಾಗಿದೆ. 2022 ರ ವಿಶ್ವ ಗುಬ್ಬಚ್ಚಿ ದಿನಾಚರಣೆಯ ಥೀಮ್‌ “ಗುಬ್ಬಚ್ಚಿಗಳು ಮತ್ತು ಇತರೆ ಸಾಮಾನ್ಯ ಪಕ್ಷಿಗಳ ಮೇಲ್ವಿಚಾರಣೆ ಮಾಡಿ” ವಿಶ್ವ ಗುಬ್ಬಚ್ಚಿ ದಿನದ ಸಚಿವಾಲಯವು ಈ ವರ್ಷ ಗುಬ್ಬಚ್ಚಿಗಳು ಮತ್ತು ಇತರ ಸಾಮಾನ್ಯ ಪಕ್ಷಿಗಳನ್ನು ಮೇಲ್ವಿಚಾರಣೆ ಮಾಡಲು ಜನರನ್ನು ಪ್ರೇರೇಪಿಸುತ್ತಿದೆ.

FAQ :

ವಿಶ್ವ ಗುಬ್ಬಚ್ಚಿಯನ್ನು ಯಾವಾಗ ಆಚರಿಸಲಾಗುತ್ತದೆ?

ಮಾರ್ಚ್ 20

2022 ಮಾರ್ಚ್‌ 20ರ ವಿಶ್ವ ಗುಬ್ಬಚ್ಚಿ ದಿನದ ಥೀಮ್‌ ಏನು?

“ಗುಬ್ಬಚ್ಚಿಗಳು ಮತ್ತು ಇತರೆ ಸಾಮಾನ್ಯ ಪಕ್ಷಿಗಳ ಮೇಲ್ವಿಚಾರಣೆ ಮಾಡಿ”

ಇತರೆ ವಿಷಯಗಳು :

ಗ್ರಾಹಕರ ಹಕ್ಕುಗಳು ಮತ್ತು ಸಮಸ್ಯೆಗಳ ಬಗ್ಗೆ ಪ್ರಬಂಧ

ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳ ಬಗ್ಗೆ ಮಾಹಿತಿ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ