ನಮಸ್ಕಾರ ರೈತ ಬಾಂಧವರೇ, ಕೇಂದ್ರ ಸರ್ಕಾರವು ದೇಶದ ರೈತರ ಆರ್ಥಿಕ ನೆರವಿಗಾಗಿ ಜಾರಿಗೆ ತಂದಿರುವ ಅತ್ಯಂತ ಜನಪ್ರಿಯ ಯೋಜನೆ ‘ಪಿಎಂ ಕಿಸಾನ್ ಸಮ್ಮಾನ್ ನಿಧಿ’ (PM-Kisan). ಈ ಯೋಜನೆಯಡಿ ಅರ್ಹ ರೈತರಿಗೆ ಪ್ರತಿ ವರ್ಷ 3 ಕಂತುಗಳಲ್ಲಿ ಒಟ್ಟು ₹6,000 ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ನೀವಿನ್ನು ಈ ಯೋಜನೆಗೆ ನೋಂದಾಯಿಸಿಕೊಂಡಿಲ್ಲವೇ? ಅಥವಾ ನಿಮ್ಮ ಮನೆಯಲ್ಲಿ ಹೊಸದಾಗಿ ಜಮೀನು ಹೊಂದಿದವರು ಅರ್ಜಿ ಸಲ್ಲಿಸಬೇಕೇ? ಹಾಗಿದ್ದರೆ ತಡ ಮಾಡಬೇಡಿ, ಮೊಬೈಲ್ ಮೂಲಕವೇ ಸುಲಭವಾಗಿ ಅರ್ಜಿ ಸಲ್ಲಿಸುವ ವಿಧಾನ ಮತ್ತು ಲಿಂಕ್ ಇಲ್ಲಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಜಮೀನಿನ ಪಹಣಿ (RTC) ದಾಖಲೆಗಳು.
- ಬ್ಯಾಂಕ್ ಪಾಸ್ಬುಕ್
- ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ.
ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲಿಗೆ ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ https://pmkisan.gov.in/ ಗೆ ಭೇಟಿ ನೀಡಿ
- ಹೋಮ್ ಪೇಜ್ನಲ್ಲಿರುವ ‘New Farmer Registration’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ರಾಜ್ಯವನ್ನು ಆಯ್ಕೆ ಮಾಡಿ.
- ನಿಮ್ಮ ಮೊಬೈಲ್ಗೆ ಬರುವ OTP ಯನ್ನು ಎಂಟರ್ ಮಾಡಿ.
- ನಂತರ ನಿಮ್ಮ ವೈಯಕ್ತಿಕ ವಿವರ ಮತ್ತು ಜಮೀನಿನ ವಿವರಗಳನ್ನು (Survey Number, Khata Number) ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ‘Submit’ ಬಟನ್ ಒತ್ತಿ.
ಪ್ರಮುಖ ಲಿಂಕ್ಗಳು:
| ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಇತರೆ ಮಾಹಿತಿಗಾಗಿ | Click Here |
| ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಪಿಎಂ ಕಿಸಾನ್ ಯೋಜನೆ ಡೌನ್ಲೋಡ್ | Click Here |
ಗಮನಿಸಿ: ಅರ್ಜಿ ಸಲ್ಲಿಸಿದ ನಂತರ ನಿಮ್ಮ ಅರ್ಜಿಯು ಕಂದಾಯ ಇಲಾಖೆಯ ಪರಿಶೀಲನೆಗೆ ಒಳಪಡುತ್ತದೆ. ಎಲ್ಲವೂ ಸರಿಯಾಗಿದ್ದರೆ ಮುಂದಿನ ಕಂತಿನಿಂದ ನಿಮ್ಮ ಖಾತೆಗೆ ಹಣ ಬರಲು ಪ್ರಾರಂಭವಾಗುತ್ತದೆ.