ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ | Rashtriya Bhavaikya Prabandha in Kannada

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ Rashtriya Bhavaikya Prabandha national spirituality essay in Kannada

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ

Rashtriya Bhavaikya Prabandha in Kannada
Rashtriya Bhavaikya Prabandha in Kannada

ಈ ಲೇಖನಿಯಲ್ಲಿ ರಾಷ್ಟ್ರೀಯ ಭಾವೈಕ್ಯತೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದೇವೆ.

ಪಿಠೀಕೆ

ಒಂದು ರಾಷ್ಟ್ರದ ಜನರು ಜಾತಿ, ಧರ್ಮ, ಭಾಷೆ, ಮತ, ಹಾಗು ಪ್ರಾದೇಶಿಕತೆಗಳ ಭೇದ ಭಾವವನ್ನು ಬಿಟ್ಟು ತಾವೆಲ್ಲರೂ ಒಂದೇ ಎಂಬ ಭಾವನೆಯನ್ನ ಬೆಳೆಸಿಕೊಳ್ಳುವುದಾಗಿದೆ. ನಮ್ಮ ದೇಶವು ಪ್ರಜಾಪ್ರಭುತ್ವದ ತಳಹದಿಯಾಗಿದೆ. ಭಾರತವು ಒಂದು ಜಾತ್ಯತೀತ ರಾಷ್ಟ್ರವಾಗಿದೆ. ನಮ್ಮ ದೇಶದಲ್ಲಿ ಅನೇಕ ಧರ್ಮಗಳು, ಭಾಷೆಗಳು ,ವೇಷಭೂಷಣಗಳು, ಆಹಾರ ಪದ್ದತಿಗಳು ಆಚರಣೆಗಳು ಸಂಸೃತಿಗಳು ಕಂಡು ಬರುತ್ತವೆ. ನಮ್ಮ ದೇಶವು ವೈವಿಧ್ಯತೆಗೆ ಹೆಸರುವಾಸಿಯಾದ ದೇಶವಾಗಿದೆ. ಭೌಗೋಳಿಕ ವಾಗಿ, ರಾಜಕೀಯವಾಗಿ, ನೈಸರ್ಗಿಕ ಸಂಪತ್ತುಗಳು, ಹವಾಮಾನ, ಜನರ ಉಡುಗೆ ತೊಡುಗೆ, ಎಲ್ಲವು ವೈವಿಧ್ಯಮಯವು. ಇಷ್ಟೇಲ್ಲಾ ವೈವಿಧ್ಯತೆಗಳಿದ್ದರೂ ನಾವೆಲ್ಲಾ ಒಂದೇ ಎಂಬ ಭಾವನೆಯೇ ಭಾವೈಕೆತೆ ನಾವೆಲ್ಲರೂ ಭಾರತೀಯರು ಎಂಬ ಐಕ್ಯತೆಯೇ ರಾಷ್ಟ್ರಿಯ ಭಾವೈಕ್ಯತೆ ಯಾಗಿದೆ.

ವಿಷಯ ವಿವರಣೆ

ಜನತೆಯಲ್ಲಿ ನಿರ್ದಿಷ್ಟ ಗುರಿ ಉದ್ದೇಶಕ್ಕಾಗಿ ಕೂಡಿ ದುಡಿಯುವ ಭಾವನೆ ಜಾತಿ, ಧರ್ಮ, ಭಾಷೆ, ಪ್ರಾಂತ್ಯ ಮತ್ತು ಸ್ಥಾನಮಾನಗಳನ್ನು ಮರೆತು ನಾವೆಲ್ಲ ಒಂದೇ ಎಂದು ಬಾಳುವುದು . ರಾಷ್ಟ್ರದ ಜನರೆಲ್ಲರೂ ಒಂದಾಗಿ ಬಾಳಬೇಕಾದ ಅಗತ್ಯತೆಯು ಇದೆ. ರಾಷ್ಟ್ರದಲ್ಲಿ ಶಾಂತಿ, ಶಿಸ್ತು, ನೆಮ್ಮದಿ, ಪರಸ್ಪರ ಸಹಕಾರ ಹಾಗು ಕಷ್ಟ ಸುಖಕ್ಕೆ ಬಾಗಿಯಾಗುವುದರಿಂದ ನಮ್ಮ ರಾಷ್ಟ್ರದ ರಾಷ್ಟ್ರಿಯತೆಯನ್ನು ಕಾಪಾಡಿಕೊಳ್ಳಬಹುದು. ಭಾರತವು ವಿಶಾಲವಾದ ರಾಷ್ಟ್ರವಾಗಿದೆ ಮತ್ತು ಬೃಹತ್ ಸಂವಿಧಾನವನ್ನು ಹೊಂದಿದೆ. ಈ ಸಂವಿಧಾನದ ದೃಷ್ಟಿಯಲ್ಲಿ ಬಡವ – ಬಲ್ಲಿಗ ಎಲ್ಲರೂ ಸಮಾನರು. ನಮ್ಮ ರಾಷ್ಟ್ರದಲ್ಲಿ ಹಿಂದೂ, ಬೌದ್ಧರು, ಜೈನರು, ಮುಸ್ಲಿಂರು, ಕ್ರೈಸ್ತರು ಹೀಗೆ ಹಲವಾರು ಧರ್ಮದವರು ಸಾಕಷ್ಟು ಜನಸಂಖ್ಯೆಯಲ್ಲಿ ಇದ್ದರೂ ಕೂಡ ಎಲ್ಲರೂ ಭಾರತೀಯರು ಎಂಬ ಒಂದೇ ಭಾವನೆಯಿಂದ ಸಹಬಾಳ್ವೆ ನಡೆಸುತ್ತಿದ್ದಾರೆ. ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶ ನಮ್ಮ ಭಾರತ ಎಂದು ಹೆಮ್ಮಯಿಂದ ಹೇಳಿಕೊಳ್ಳುವಂತದ್ದು. ವಿವಿಧತೆಯಲ್ಲಿ ಏಕತೆ ; ನಾವೆಲ್ಲ ಭಾರತಿಯರು, ಭಾರತ ಮಕ್ಕಳೆಂಬ ಒಂದು ಬಾಂಧವ್ಯ ನಮ್ಮಲ್ಲಿ ಸೃಷ್ಟಿಯಾಗಿದೆ. ಇದು ನಮ್ಮ ರಾಷ್ಟಿಯ ಭಾವೈಕ್ಯತೆಯಾಗಿದೆ.

ರಾಷ್ಟ್ರಿಯ ಭಾವೈಕ್ಯತೆಯನ್ನು ಮೂಡಿಸುವಂತ ಅಂಶಗಳು

  • ಒಂದು ರಾಷ್ಟ್ರದಲ್ಲಿ ವಾಸಿಸುವ ಜನರು ಮೂಲತಃ ಯಾವುದೇ ಭಾಷೆ, ವರ್ಣ, ಜಾತಿ, ಮತದವರಾಗಿದ್ದರೂ ಕೂಡ ಅವರೆಲ್ಲ ಒಂದೇ ಕುಟಂಬದ ಸದಸ್ಯರೆಂದು ಭಾವಿಸಿದಾಗ ಮಾತ್ರ ಅಲ್ಲಿ ಏಕತೆಯನ್ನು ಸಾಧಿಸಬಹುದು.
  • ಈ ಏಕತೆಯನ್ನು ಮೂಡಿಸುವಲ್ಲಿ ರಾಷ್ಟ್ರಗೀತೆ , ರಾಷ್ಟ್ರಲಾಂಛನಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ.
  • ಪ್ರಮುಖವಾಗಿ ರಾಷ್ಟ್ರಿಯ ಹಬ್ಬಗಳನ್ನು ಆಚರಿಸುವುದರಿಂದ ಜನರಲ್ಲಿ ರಾಷ್ಟ್ರಿಯ ಭಾವೈಕೆತೆಯನ್ನು ಮೂಡಿಸುವುದು.
  • ರಾಷ್ಟ್ರಿಯ ಹಬ್ಬಗಳಾದ

೧ ) ಸ್ವತಂತ್ರ ದಿನಾಚರಣೆ

೨ ) ಗಾಂಧಿ ಜಯಂತಿ

೩ ) ಗಣರಾಜ್ಯೋತ್ಸವ

೪ ) ಕರ್ನಾಟಕ ರಾಜ್ಯೋತ್ಸವ

೫ ) ಮಕ್ಕಳ ದಿನಾಚರಣೆ

೬ ) ಶಿಕ್ಷಕರ ದಿನಾಚರಣೆ

  • ಕ್ರೀಡೆಯ ಮೂಲಕವು ರಾಷ್ಟ್ರಿಯ ಭಾವೈಕ್ಯತೆಯನ್ನು ಮೂಡಿಸುವಂತ ಪ್ರಮುಖವಾದ ಅಂಶವಾಗಿದೆ. ಹಾಕಿ ಆಟವು ನಮ್ಮ ರಾಷ್ಟ್ರಿಯ ಕ್ರೀಡೆ ಯಾಗದೆ.
  • ಜಾತಿಯ ಹೆಸರಿನಲ್ಲಿ ಮೇಲುಕೀಳು ಭಾವವನ್ನು ಹೊಗಲಾಡಿಸಬೇಕು.
  • ಭಾಷೆಯಿಂದ ಜನರನ್ನು ವರ್ಗೀಕರಿಸುವುದುದನ್ನು ನಿಲ್ಲಿಸಬೇಕು.
  • ಅಲ್ಲದೇ ವಂದೇ ಮಾತರಂ, ಸಾರೇ ಜಹಾಂಸೆ ಅಚ್ಚಾ, ಜನಗಣಮನ ಅಧಿನಾಯಕ ಈ ರೀತಿಯ ದೇಶ ಭಕ್ತಿಗೀತೆಗನ್ನು ರಾಷ್ಟ್ರಿಯ ಹಬ್ಬಗಳಲ್ಲಿಹೇಳುವುದರಿಂದ ಎಲ್ಲರಲ್ಲೂ ದೇಶಪ್ರೇಮ, ದೇಶಾಭಿಮಾನವನ್ನು ಹುಟ್ಟಿಸುವುದರಿಂದ ರಾಷ್ಟ್ರಿಯ ಭಾವೈಕ್ಯತೆಯನ್ನು ಮೂಡಿಸುವಲ್ಲಿ ಪ್ರಮುಖವಾದ ಅಂಶವಾಗಿದೆ.
  • ರಾಷ್ಟ್ರಿಯ ಭಾವೈಕ್ಯವನ್ನು ಉಂಟುಮಾಡುವ ಕಾರ್ಯಕ್ರಮಗಳನ್ನು ಶಾಲಾ ಕಾಲೇಜು, ಕೆಲವು ಸಮಾರಂಭಗಳಲ್ಲಿ ನಡೆಸುವುದರ ಮೂಲಕ ಯುವಕರಲ್ಲಿ ಹಾಗು ಪ್ರತಿಯೊಬ್ಬರಲ್ಲು ದೇಶಾಭಿಮಾನವನ್ನು ಮೂಡಿಸಬೇಕು.

ರಾಷ್ಟ್ರಿಯ ಭಾವೈಕ್ಯತೆಯ ಅವಶ್ಯಕತೆ

  • ವಿವಿಧತೆಯಲ್ಲೂ ಏಕತೆಯನ್ನು ಕಾಣುವುದೇ ಭಾವೈಕ್ಯತೆ ಇದನ್ನು ಸಾಧಿಸುವುದು ನಮ್ಮ ರಾಷ್ಟ್ರಕ್ಕೆ ಅವಶ್ಯಕವಾಗಿದೆ.
  • ಜಾತಿ ಜಾತಿಗಳ ಮಧ್ಯ ನಡೆಯುತ್ತಿರುವ ಗಲಭೆಗಳನ್ನು ತಡೆಯುವುದು ಅವಶ್ಯಕ ವಾಗಿದೆ.
  • ಕಲೆ ಸಾಹಿತ್ಯ, ಸಂಸೃತಿಯ ಬೆಳವಣಿಗೆಗಾಗಿ ಇದು ಅವಶ್ಯಕವಾಗಿದೆ.
  • ರಾಷ್ಟ್ರದ ಆರ್ಥಿಕ ಅಭಿವೃದ್ದಿಗಾಗಿ ರಾಷ್ಟ್ರಿಯ ಭಾವೈಕ್ಯತೆಯು ಅವಶ್ಯಕತೆಯಾಗಿದೆ.

ಉಪಸಂಹಾರ

ರಾಷ್ಟ್ರಿಯ ಭಾವೈಕ್ಯವನ್ನು ಉಂಟುಮಾಡುವ ಕಾರ್ಯಕ್ರಮಗಳನ್ನು ಶಾಲಾ ಕಾಲೇಜು, ಕೆಲವು ಸಮಾರಂಭಗಳಲ್ಲಿ ನಡೆಸುವುದರ ಮೂಲಕ ಯುವಕರಲ್ಲಿ ಹಾಗು ಪ್ರತಿಯೊಬ್ಬರಲ್ಲು ದೇಶಾಭಿಮಾನವನ್ನು ಮೂಡಿಸಬೇಕು. ಪ್ರತಿ ಮನೆ, ಗ್ರಾಮ, ಪಟ್ಟಣ, ನಗರಗಳಲ್ಲಿ ಇದು ನಮ್ಮ ಹಬ್ಬ ವೆಂದು ಸಂಭ್ರಮವಿರಬೇಕು.

FAQ

ರಾಷ್ಟ್ರಿಯ ಭಾವೈಕ್ಯತೆ ಎಂದರೇನು?

ರಾಷ್ಟ್ರೀಯ ಭಾವೈಕ್ಯತೆ ಎಂದರೆ ಒಂದು ದೇಶದಲ್ಲಿ ವಾಸಿಸುವ ಎಲ್ಲ ಜನರೂ ಧರ್ಮ, ಜಾತಿ, ವರ್ಣ ಮುಂತಾದ ಅಂಶಗಳನ್ನು ತೊರೆದು ಎಲ್ಲರು ಒಂದೇ ಎಂಬ ಭಾವನೆಯಿಂದ ಸಾಮರಸ್ಯ ಏಕತೆ, ಒಗ್ಗಟ್ಟುಗಳಿಂದ ಸಹಬಾಳ್ವೆ ಮಾಡುವ ಗುಣಧರ್ಮವೇ ರಾಷ್ಟ್ರೀಯ ಭಾವೈಕತೆ.

ರಾಷ್ಟ್ರೀಯ ಭಾವೈಕ್ಯತೆ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ?

ಅಕ್ಟೋಬರ್ 31 ರಂದು ರಾಷ್ಟೀಯ ಐಕ್ಯತಾ ಅಥವಾ ಭಾವೈಕ್ಯತೆ ದಿನವನ್ನು ಆಚರಿಸಲಾಗುತ್ತದೆ.

ಇತರೆ ವಿಷಯಗಳು:

ಅಂಬಿಗರ ಚೌಡಯ್ಯ ಜೀವನ ಚರಿತ್ರೆ 

ಇಂಟರ್ನೆಟ್ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಪ್ರಬಂಧ

Leave your vote

47 Points
Upvote Downvote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ