ಹಲೋ ಸ್ನೇಹಿತರೇ, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ (KSEAB) ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಕಾಯುವಿಕೆ ಕೊನೆಗೊಂಡಿದೆ. ರಾಜ್ಯಾದ್ಯಂತ ಕುತೂಹಲ ಮೂಡಿಸಿರುವ 10ನೇ ತರಗತಿ ಫಲಿತಾಂಶದ ಕ್ಷಣಗಳು ಹತ್ತಿರ ಬಂದಿವೆ. ನಿಮ್ಮ ಅಥವಾ ನಿಮ್ಮ ಮಕ್ಕಳ ಭವಿಷ್ಯದ ಮೊದಲ ಮೆಟ್ಟಿಲಾದ ಈ ಫಲಿತಾಂಶವನ್ನು ಸುಲಭವಾಗಿ ನೋಡುವುದು ಹೇಗೆ? ರಿಸಲ್ಟ್ ಬಂದ ಮೇಲೆ ಮಾಡಬೇಕಾದ ಪ್ರಮುಖ ಕೆಲಸಗಳೇನು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕದಲ್ಲಿ 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಮಾರ್ಚ್ 18 ರಿಂದ ಏಪ್ರಿಲ್ 2, 2026 ರವರೆಗೆ ಯಶಸ್ವಿಯಾಗಿ ನಡೆಸಲಾಯಿತು. ಆನ್‌ಲೈನ್‌ನಲ್ಲಿ ಫಲಿತಾಂಶ ಬಿಡುಗಡೆಯಾಗುವ ನಿರೀಕ್ಷೆಯಿರುವ ಅಧಿಕೃತ ಪ್ರಕಟಣೆಗಾಗಿ ರಾಜ್ಯಾದ್ಯಂತ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದಾರೆ.
ಕರ್ನಾಟಕ SSLC ಪರೀಕ್ಷೆ-1 ಫಲಿತಾಂಶ 2026 ತಾತ್ಕಾಲಿಕವಾಗಿ ಸುಮಾರು ಪ್ರಕಟವಾಗುವ ನಿರೀಕ್ಷೆಯಿದೆ. ಏಪ್ರಿಲ್ 24, 2026, ಅಥವಾ ಮೇ 2026 ರ ಮೊದಲ ವಾರದಲ್ಲಿ ಫಲಿತಾಂಶಗಳನ್ನು ಬಿಡುಗಡೆ ಮಾಡುತ್ತದೆ. ಫಲಿತಾಂಶ ಪ್ರಕಟವಾದ ತಕ್ಷಣ ಲಕ್ಷಾಂತರ ಜನರು ವೆಬ್‌ಸೈಟ್‌ಗೆ ಲಾಗಿನ್ ಆಗುವುದರಿಂದ ಸರ್ವರ್ ಸ್ಲೋ ಆಗುವ ಸಾಧ್ಯತೆ ಇರುತ್ತದೆ. ಆಗ ಗಾಬರಿಪಡದೆ ಅಧಿಕೃತ ವೆಬ್‌ಸೈಟ್ ಲಿಂಕ್ ಬಳಸಿ ರಿಸಲ್ಟ್ ನೋಡಿ ಅಥವಾ ಕೆಳಗೆ ಕೊಟ್ಟಿರು App ಡೌನ್ಲೋಡ್ ಮಾಡಿ ಎಲ್ಲರಿಗಿಂತ ಮೊದಲು ರಿಸಲ್ಟ್ ನೋಡಬಹುದು.
ನಿಮ್ಮ ಮೊಬೈಲ್ನಲ್ಲೇ ರಿಸಲ್ಟ್ ಚೆಕ್ ಮಾಡುವುದು ಹೀಗೆ:
- ಮೇಲೆ ನೀಡಲಾದ ಯಾವುದಾದರೂ ಒಂದು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಹೋಮ್ ಪೇಜ್‌ನಲ್ಲಿ “SSLC Main Examination Result 2026” ಎಂಬ ಲಿಂಕ್ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ನೋಂದಣಿ ಸಂಖ್ಯೆ (Registration Number) ಅನ್ನು ನಿಖರವಾಗಿ ಟೈಪ್ ಮಾಡಿ.
- ಅಲ್ಲಿರುವ ಕ್ಯಾಲೆಂಡರ್ ಐಕಾನ್ ಬಳಸಿ ನಿಮ್ಮ ಜನ್ಮ ದಿನಾಂಕವನ್ನು (DOB) ಆಯ್ಕೆ ಮಾಡಿ.
- ಕೊನೆಯದಾಗಿ ‘Submit’ ಬಟನ್ ಒತ್ತಿ. ಈಗ ನಿಮ್ಮ ಅಂಕಪಟ್ಟಿ ಪರದೆಯ ಮೇಲೆ ಕಾಣಿಸುತ್ತದೆ. ಇದನ್ನು ಕೂಡಲೇ ಡೌನ್‌ಲೋಡ್ ಮಾಡಿಕೊಳ್ಳಿ.
ಅಥವಾ ಇಲ್ಲೇ Direct App link ಇದೆ Click ಮಾಡಿ Result ನೋಡಿ
ರಿಸಲ್ಟ್ ನೋಡಿದ ತಕ್ಷಣ ಈ 4 ವಿಷಯಗಳನ್ನು ಮರೆಯದೇ ಚೆಕ್ ಮಾಡಿ
- ಹೆಸರು: ವಿದ್ಯಾರ್ಥಿಯ ಮತ್ತು ತಂದೆ-ತಾಯಿಯ ಹೆಸರಿನ ಸ್ಪೆಲ್ಲಿಂಗ್ ಸರಿಯಿದೆಯೇ?
- ನೋಂದಣಿ ಸಂಖ್ಯೆ: ನಿಮ್ಮ ಹಾಲ್ ಟಿಕೆಟ್‌ನಲ್ಲಿರುವ ಸಂಖ್ಯೆಯೇ ಅಂಕಪಟ್ಟಿಯಲ್ಲಿದೆಯೇ?
- ವಿಷಯವಾರು ಅಂಕಗಳು: ಎಲ್ಲ ವಿಷಯಗಳ ಅಂಕಗಳು ಸರಿಯಾಗಿ ನಮೂದಾಗಿದೆಯೇ?
- ಒಟ್ಟು ಗ್ರೇಡ್: ನಿಮ್ಮ ಅಂಕಕ್ಕೆ ತಕ್ಕಂತೆ A+, A ಅಥವಾ B ಗ್ರೇಡ್ ಬಂದಿದೆಯೇ ಚೆಕ್ ಮಾಡಿ.
ಅಂಕಗಳು ಕಡಿಮೆ ಬಂದರೆ ಅಥವಾ ಫೇಲ್ ಆದರೆ ಚಿಂತಿಸಬೇಡಿ!
- ಮರು ಮೌಲ್ಯಮಾಪನ (Revaluation): ನಿಮಗೆ ನಿಮ್ಮ ಮೇಲೆ ನಂಬಿಕೆ ಇದ್ದು, ಅಂಕಗಳು ಕಡಿಮೆ ಬಂದಿದೆ ಎನಿಸಿದರೆ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಯನ್ನು ಪಡೆದು ಮರು ಎಣಿಕೆಗೆ ಅರ್ಜಿ ಸಲ್ಲಿಸಬಹುದು.
- ಪೂರಕ ಪರೀಕ್ಷೆ (Supplementary Exam): ಒಂದು ವೇಳೆ ಯಾವುದಾದರೂ ವಿಷಯದಲ್ಲಿ ಫೇಲ್ ಆಗಿದ್ದರೆ ವರ್ಷಪೂರ್ತಿ ಕಾಯಬೇಕಿಲ್ಲ. ಜೂನ್ ತಿಂಗಳಲ್ಲೇ ನಡೆಯುವ ಪೂರಕ ಪರೀಕ್ಷೆ ಬರೆದು ಪಾಸಾಗುವ ಮೂಲಕ ಅದೇ ವರ್ಷ ನೀವು ಮುಂದಿನ ತರಗತಿಗೆ (PUC) ಪ್ರವೇಶ ಪಡೆಯಬಹುದು.
ಪ್ರಮುಖ ಲಿಂಕ್ಗಳು:
| ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಇತರೆ ಮಾಹಿತಿಗಾಗಿ | Click Here |
| ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| Check Result App Link | Click Here |
| ಅಧಿಕೃತ ವೆಬ್‌ಸೈಟ್ | Click Here |