Headlines

ಉದ್ಯೋಗಿನಿ ಯೋಜನೆ ನಿಮ್ಮ ಮೊಬೈಲ್‌ನಲ್ಲೇ ಆಪ್ಲೇ ಮಾಡಿ-Udyogini Scheme

ನಮಸ್ಕಾರ ಸ್ನೇಹಿತರೇ, ಸ್ವಂತ ಉದ್ಯೋಗ ಮಾಡಬೇಕು, ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂಬ ಕನಸು ಪ್ರತಿಯೊಬ್ಬ ಮಹಿಳೆಯಲ್ಲೂ ಇರುತ್ತದೆ. ಆದರೆ ಸರಿಯಾದ ಬಂಡವಾಳವಿಲ್ಲದೆ ಅನೇಕರು ಈ ಕನಸನ್ನು ಅರ್ಧಕ್ಕೆ ಬಿಡುತ್ತಾರೆ. ಇನ್ನು ಮುಂದೆ ಆ ಚಿಂತೆ ಬೇಡ! ಕರ್ನಾಟಕ ಸರ್ಕಾರದ ಉದ್ಯೋಗಿನಿ ಯೋಜನೆ’ (Udyogini Scheme) ಮಹಿಳೆಯರ ಕೈ ಹಿಡಿಯಲು ಸಿದ್ಧವಾಗಿದೆ.

ಈ ಯೋಜನೆಯಡಿ ನೀವು ಸುಲಭವಾಗಿ ಸಾಲ ಪಡೆದು ನಿಮ್ಮದೇ ಆದ ಸಣ್ಣ ಉದ್ಯಮವನ್ನು ಆರಂಭಿಸಬಹುದು. ವಿಶೇಷವೆಂದರೆ, ಇದಕ್ಕಾಗಿ ನೀವು ಕಚೇರಿಗಳಿಗೆ ಅಲೆಯಬೇಕಿಲ್ಲ, ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಅದರ ಸಂಪೂರ್ಣ ವಿವರ ಇಲ್ಲಿದೆ.

  • ಆಧಾರ್ ಕಾರ್ಡ್ (Aadhaar Card)
  • ರೇಷನ್ ಕಾರ್ಡ್ (BPL Card)
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್‌ಬುಕ್ ಪ್ರತಿ
  • ನಿಮ್ಮ ಫೋಟೋ (Passport size photo)
  • ಜನ್ಮ ದಿನಾಂಕದ ದಾಖಲೆ (SSLC ಮಾಕ್ರ್ಸ್‌ಕಾರ್ಡ್ ಅಥವಾ ಜನ್ಮ ಪ್ರಮಾಣ ಪತ್ರ)
  1. ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು ನಿಮ್ಮ ಮೊಬೈಲ್‌ನಲ್ಲಿರುವ ಗೂಗಲ್ ಕ್ರೋಮ್ ತೆರೆದು ‘ಸೇವಾ ಸಿಂಧು’ (Seva Sindhu) ಅಧಿಕೃತ ಪೋರ್ಟಲ್‌ಗೆ ಹೋಗಿ.
  2. ಲಾಗಿನ್ ಆಗಿ: ನಿಮ್ಮ ಮೊಬೈಲ್ ಸಂಖ್ಯೆ ಬಳಸಿ ಲಾಗಿನ್ ಆಗಿ (ಹೊಸಬರಾಗಿದ್ದರೆ ‘New User’ ಮೇಲೆ ಕ್ಲಿಕ್ ಮಾಡಿ ನೋಂದಾಯಿಸಿಕೊಳ್ಳಿ).
  3. ಯೋಜನೆಯನ್ನು ಹುಡುಕಿ: ಸರ್ಚ್ ಬಾರ್‌ನಲ್ಲಿ ‘Udyogini Scheme’ ಎಂದು ಟೈಪ್ ಮಾಡಿ.
  4. ಅರ್ಜಿ ಭರ್ತಿ ಮಾಡಿ: ಅಲ್ಲಿ ಕೇಳಲಾದ ನಿಮ್ಮ ವೈಯಕ್ತಿಕ ವಿವರ, ವಿಳಾಸ ಮತ್ತು ಬ್ಯಾಂಕ್ ಮಾಹಿತಿಯನ್ನು ಸರಿಯಾಗಿ ತುಂಬಿರಿ.
  5. ದಾಖಲೆ ಅಪ್‌ಲೋಡ್: ಮೇಲೆ ತಿಳಿಸಿದ ದಾಖಲೆಗಳನ್ನು ಸ್ಕ್ಯಾನ್ ಮಾಡಿ (ಫೋಟೋ ತೆಗೆದು) ಅಪ್‌ಲೋಡ್ ಮಾಡಿ.
  6. ಸಲ್ಲಿಸಿ (Submit): ಎಲ್ಲವನ್ನೂ ಒಮ್ಮೆ ಮರುಪರಿಶೀಲಿಸಿ ‘Submit’ ಬಟನ್ ಒತ್ತಿರಿ. ಅರ್ಜಿ ಸಲ್ಲಿಸಿದ ನಂತರ ನಿಮಗೆ ಒಂದು ‘Acknowledgement’ ನಂಬರ್ ಸಿಗುತ್ತದೆ, ಅದನ್ನು ಸೇವ್ ಮಾಡಿಟ್ಟುಕೊಳ್ಳಿ.
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಉದ್ಯೋಗಿನಿ ಯೋಜನೆ ApplyClick Here

ಗಮನಿಸಿ: ನೀವು ನೇರವಾಗಿ ನಿಮ್ಮ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಗೆ ಭೇಟಿ ನೀಡಿಯೂ ಮಾಹಿತಿ ಪಡೆಯಬಹುದು.

Leave a Reply

Your email address will not be published. Required fields are marked *