ಹಲೋ ಸ್ನೇಹಿತರೇ ನಮಸ್ಕಾರ, ಕರ್ನಾಟಕದ ಎಸ್‌ಎಸ್‌ಎಲ್‌ಸಿ (SSLC) ವಿದ್ಯಾರ್ಥಿಗಳು ಮತ್ತು ಪೋಷಕರ ಎದಬಡಿತ ಹೆಚ್ಚಾಗಿದೆ. 10ನೇ ತರಗತಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೊನೆಗೂ ಶುಭ ಸುದ್ದಿ ಸಿಕ್ಕಿದೆ. ರಾಜ್ಯಾದ್ಯಂತ ಕುತೂಹಲ ಮೂಡಿಸಿರುವ ಫಲಿತಾಂಶದ ಕ್ಷಣಗಳು ಈಗ ತೀರಾ ಹತ್ತಿರದಲ್ಲಿವೆ.

ಫಲಿತಾಂಶ ಯಾವಾಗ? ಇಲ್ಲಿದೆ ಲೇಟೆಸ್ಟ್ ಅಪ್ಡೇಟ್!
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (KSEAB) ಮೂಲಗಳ ಪ್ರಕಾರ, SSLC ಪರೀಕ್ಷೆ-1 ರ ಫಲಿತಾಂಶವು ಏಪ್ರಿಲ್ 24 ಅಥವಾ 25 2026 ರಂದು ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.
ರಿಸಲ್ಟ್ ಬಂದ ತಕ್ಷಣ ಲಕ್ಷಾಂತರ ಜನರು ವೆಬ್‌ಸೈಟ್‌ಗೆ ಲಾಗಿನ್ ಆಗುವುದರಿಂದ ಸರ್ವರ್ ಸ್ಲೋ ಆಗಬಹುದು. ಅಂತಹ ಸಮಯದಲ್ಲಿ ಗಾಬರಿ ಪಡದೆ ಕೆಳಗಿನ ಹಂತಗಳನ್ನು ಅನುಸರಿಸಿ.
ನಿಮ್ಮ ಮೊಬೈಲ್ನಲ್ಲೇ ರಿಸಲ್ಟ್ ಚೆಕ್ ಮಾಡುವುದು ಹೇಗೆ?
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು
karresults.nic.inಅಥವಾkseab.karnataka.gov.inಲಾಗಿನ್ ಆಗಿ. - ಲಿಂಕ್ ಕ್ಲಿಕ್ ಮಾಡಿ: ಹೋಮ್ ಪೇಜ್‌ನಲ್ಲಿ ಕಾಣಿಸುವ “SSLC Main Examination Result 2026” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ವಿವರಗಳನ್ನು ಭರ್ತಿ ಮಾಡಿ: ನಿಮ್ಮ ನೋಂದಣಿ ಸಂಖ್ಯೆ (Registration Number) ಟೈಪ್ ಮಾಡಿ.
- ಜನ್ಮ ದಿನಾಂಕ: ಕ್ಯಾಲೆಂಡರ್ ಬಳಸಿ ನಿಮ್ಮ DOB ಸರಿಯಾಗಿ ಆಯ್ಕೆ ಮಾಡಿ.
- ಸಬ್ಮಿಟ್ ಕೊಡಿ: ಕೊನೆಯದಾಗಿ ‘Submit’ ಬಟನ್ ಒತ್ತಿದರೆ ನಿಮ್ಮ ಅಂಕಪಟ್ಟಿ ಸ್ಕ್ರೀನ್ ಮೇಲೆ ಕಾಣಿಸುತ್ತದೆ. ಕೂಡಲೇ ಅದನ್ನು Download ಮಾಡಿಕೊಳ್ಳಿ.
ಅಥವಾ ಇಲ್ಲೇ Direct App link ಇದೆ Click ಮಾಡಿ Result ನೋಡಿ
ರಿಸಲ್ಟ್ ನೋಡಿದ ಮೇಲೆ ಈ 4 ವಿಷಯ ಮರೆಯಬೇಡಿ
ಅಂಕಗಳನ್ನು ನೋಡಿದ ಖುಷಿಯಲ್ಲಿ ಅಥವಾ ಗಾಬರಿಯಲ್ಲಿ ಈ ಪ್ರಮುಖ ಅಂಶಗಳನ್ನು ಪರಿಶೀಲಿಸಲು ಮರೆಯದಿರಿ:
- ಹೆಸರು: ನಿಮ್ಮ ಮತ್ತು ತಂದೆ-ತಾಯಿಯ ಹೆಸರಿನ ಸ್ಪೆಲ್ಲಿಂಗ್ ಸರಿಯಾಗಿದೆಯೇ?
- ರಿಜಿಸ್ಟರ್ ನಂಬರ್: ಹಾಲ್ ಟಿಕೆಟ್‌ನಲ್ಲಿರುವ ನಂಬರ್ ಮತ್ತು ರಿಸಲ್ಟ್ ಶೀಟ್‌ನಲ್ಲಿರುವ ನಂಬರ್ ಮ್ಯಾಚ್ ಆಗುತ್ತಿದೆಯೇ?
- ವಿಷಯವಾರು ಅಂಕಗಳು: ಪ್ರತಿ ವಿಷಯದ ಅಂಕಗಳನ್ನು ಸರಿಯಾಗಿ ಚೆಕ್ ಮಾಡಿ.
- ಗ್ರೇಡ್: ನಿಮ್ಮ ಒಟ್ಟು ಅಂಕಗಳಿಗೆ ತಕ್ಕಂತೆ A+, A ಅಥವಾ B ಗ್ರೇಡ್ ಬಂದಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ಒಂದು ವೇಳೆ ಅಂಕ ಕಡಿಮೆ ಬಂದರೆ ಬೇಸರ ಬೇಡ!
- ಮರು ಮೌಲ್ಯಮಾಪನ (Revaluation): ನಿಮಗೆ ನಿಮ್ಮ ಬರವಣಿಗೆಯ ಮೇಲೆ ನಂಬಿಕೆ ಇದ್ದರೆ, ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿ ಪಡೆದು ಮರು ಎಣಿಕೆಗೆ ಅರ್ಜಿ ಸಲ್ಲಿಸಬಹುದು.
- ಪೂರಕ ಪರೀಕ್ಷೆ (Supplementary Exam): ಯಾವುದಾದರೂ ವಿಷಯದಲ್ಲಿ ಅನುತ್ತೀರ್ಣರಾದರೆ ವರ್ಷ ಪೂರ್ತಿ ಕಾಯುವ ಅಗತ್ಯವಿಲ್ಲ. ಜೂನ್ ತಿಂಗಳಲ್ಲೇ ನಡೆಯುವ ಪೂರಕ ಪರೀಕ್ಷೆ ಬರೆದು ಪಾಸಾಗಿ, ಅದೇ ವರ್ಷ ನೀವು ಪಿಯುಸಿ (PUC) ಸೇರಬಹುದು.
ಪ್ರಮುಖ ಲಿಂಕ್ಗಳು:
| ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಇತರೆ ಮಾಹಿತಿಗಾಗಿ | Click Here |
| ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| Check Result App Link | Click Here / Click Here |
| ಅಧಿಕೃತ ವೆಬ್‌ಸೈಟ್ | Click Here |