ಹೆಲೋ ಸ್ನೇಹಿತರೆ ನಮಸ್ಕಾರ, ನಿಮ್ಮ ಜಮೀನಿನ ನಕ್ಷೆ ಅಥವಾ ಸ್ಕೆಚ್ ಬೇಕೆಂದರೆ ತಾಲ್ಲೂಕು ಕಚೇರಿಗೋ ಅಥವಾ ಸರ್ವೆ ಆಫೀಸ್‌ಗೋ ಅಲೆಯುವ ಕಾಲ ಈಗ ಮುಗಿದಿದೆ. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ರೈತರ ಕೆಲಸವನ್ನು ಸುಲಭಗೊಳಿಸಲು ಡಿಜಿಟಲ್ ಕ್ರಾಂತಿಯನ್ನೇ ಮಾಡಿದೆ. ಹೌದು, ಈಗ ನಿಮ್ಮ ಹೊಲದ ಇ-ಸ್ಕೆಚ್ (E-Sketch) ಅನ್ನು ನೀವು ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ಮೂಲಕವೇ ವೀಕ್ಷಿಸಬಹುದು ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದು.

ನಕ್ಷೆಗಾಗಿ ಸರ್ವೇಯರ್ ಹಾದಿ ಕಾಯಬೇಕಿಲ್ಲ
ಹಿಂದೆಲ್ಲಾ ಜಮೀನಿನ ಸ್ಕೆಚ್ ಬೇಕೆಂದರೆ ಸರ್ವೇಯರ್ ಬರಬೇಕು, ಅಳತೆ ಮಾಡಬೇಕು, ನಂತರ ಕಚೇರಿಯಿಂದ ನಕ್ಷೆ ಸಿಗಲು ತಿಂಗಳುಗಟ್ಟಲೆ ಕಾಯಬೇಕಿತ್ತು. ಆದರೆ ಈಗ ‘ದಿಶಾ’ (Disha) ಅಪ್ಲಿಕೇಶನ್ ಮತ್ತು ಕಂದಾಯ ಇಲಾಖೆಯ ವೆಬ್‌ಸೈಟ್ ಮೂಲಕ ಪ್ರತಿಯೊಬ್ಬ ರೈತನೂ ತನ್ನ ಜಮೀನಿನ ಗಡಿ ಮತ್ತು ನಕ್ಷೆಯನ್ನು ಬೆರಳ ತುದಿಯಲ್ಲೇ ನೋಡುವ ವ್ಯವಸ್ಥೆ ಜಾರಿಗೆ ಬಂದಿದೆ.
ಮೊಬೈಲ್‌ನಲ್ಲಿ ಇ-ಸ್ಕೆಚ್ ನೋಡುವುದು ಹೇಗೆ?
- ಭೂಮಿ (Bhoomi) ಪೋರ್ಟಲ್‌ಗೆ ಭೇಟಿ ನೀಡಿ: ಮೊದಲು ಗೂಗಲ್‌ನಲ್ಲಿ https://rdservices.karnataka.gov.in/service84/’ಎಂದು ಸರ್ಚ್ ಮಾಡಿ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
- Revenue Maps ಆಯ್ಕೆ ಮಾಡಿ: ಅಲ್ಲಿ ಕಾಣಿಸುವ ಮೆನುವಿನಲ್ಲಿ ‘Revenue Maps’ ಅಥವಾ ‘ಕಂದಾಯ ನಕ್ಷೆಗಳು’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
- ನಿಮ್ಮ ಜಿಲ್ಲೆ ಆರಿಸಿ: ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಮತ್ತು ಗ್ರಾಮದ ಹೆಸರನ್ನು ಸರಿಯಾಗಿ ಆಯ್ಕೆ ಮಾಡಿ.
- ಸರ್ವೆ ನಂಬರ್ ದಾಖಲಿಸಿ: ನಿಮ್ಮ ಜಮೀನಿನ ಸರ್ವೆ ನಂಬರ್ ಅನ್ನು ನಮೂದಿಸಿ ‘Search’ ಬಟನ್ ಒತ್ತಿ.
- ನಕ್ಷೆ ವೀಕ್ಷಿಸಿ: ಈಗ ನಿಮ್ಮ ಜಮೀನಿನ ಸಂಪೂರ್ಣ ನಕ್ಷೆ (Map) ಪರದೆಯ ಮೇಲೆ ಕಾಣಿಸುತ್ತದೆ. ಇದನ್ನು ನೀವು PDF ರೂಪದಲ್ಲಿ ಡೌನ್‌ಲೋಡ್ ಕೂಡ ಮಾಡಿಕೊಳ್ಳಬಹುದು.
ಪ್ರಮುಖ ಲಿಂಕ್ಗಳು:
| ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಇತರೆ ಮಾಹಿತಿಗಾಗಿ | Click Here |
| ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಇ-ಸೈಚ್ ಡೌನ್ಲೋಡ್ | Click Here |
ಇ-ಸ್ಕೆಚ್ನಿಂದ ಆಗುವ ಲಾಭಗಳೇನು?
- ಗಡಿ ವಿವಾದಕ್ಕೆ ಮುಕ್ತಿ: ನಿಮ್ಮ ಜಮೀನಿನ ನಿಖರವಾದ ಗಡಿ ಗುರುತುಗಳನ್ನು ನೀವೇ ನೋಡಿಕೊಳ್ಳಬಹುದು.
- ವಂಚನೆಗೆ ಬ್ರೇಕ್: ಯಾರಾದರೂ ನಿಮ್ಮ ಜಮೀನನ್ನು ಒತ್ತುವರಿ ಮಾಡಿದ್ದರೆ ಅಥವಾ ನಕ್ಷೆ ತಿದ್ದಿದ್ದರೆ ಇಲ್ಲಿ ಪತ್ತೆ ಮಾಡಬಹುದು.
- ಸಾಲ ಸೌಲಭ್ಯ: ಬ್ಯಾಂಕ್ ಸಾಲ ಪಡೆಯುವಾಗ ಅಥವಾ ಜಮೀನು ಮಾರಾಟ ಮಾಡುವಾಗ ಈ ಡಿಜಿಟಲ್ ನಕ್ಷೆ ತುಂಬಾ ಸಹಕಾರಿ.