Headlines

ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ’ ಇಂದೇ ಅಪ್ಲೇ ಮಾಡಿ – PM Internship Scheme

ಹಲೋ ಸ್ನೇಹಿತರೇ ನಮಸ್ಕಾರ, ನೀವು ಪದವಿ ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದೀರಾ? ಅಥವಾ ಕೈಯಲ್ಲಿ ಡಿಗ್ರಿ ಇದ್ದರೂ ‘ಅನುಭವ ಇಲ್ಲ’ ಎಂಬ ಕಾರಣಕ್ಕೆ ದೊಡ್ಡ ಕಂಪನಿಗಳು ನಿಮ್ಮನ್ನು ಕೈಬಿಡುತ್ತಿದ್ದಾವೆಯೇ? ಹಾಗಿದ್ದರೆ ನಿಮಗಾಗಿಯೇ ಕೇಂದ್ರ ಸರ್ಕಾರ ಒಂದು ಅದ್ಭುತ ಯೋಜನೆಯನ್ನು ತಂದಿದೆ. ಅದೇ ‘ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ’ (PM Internship Scheme)

ಭಾರತದ ನಿರುದ್ಯೋಗಿ ಯುವಕ-ಯುವತಿಯರಿಗೆ ಕೌಶಲ್ಯ ತರಬೇತಿ ನೀಡಲು ಸರ್ಕಾರ ಈ ಯೋಜನೆ ಆರಂಭಿಸಿದೆ. ಮುಂದಿನ 5 ವರ್ಷಗಳಲ್ಲಿ 1 ಕೋಟಿ ಯುವಕರಿಗೆ ದೇಶದ ಪ್ರತಿಷ್ಠಿತ ಕಂಪನಿಗಳಾದ ರಿಲಯನ್ಸ್, ಟಾಟಾ, ಇನ್ಫೋಸಿಸ್‌ನಂತಹ ಸಂಸ್ಥೆಗಳಲ್ಲಿ 12 ತಿಂಗಳ ಕಾಲ ಕೆಲಸ ಕಲಿಯಲು ಅವಕಾಶ ಸಿಗಲಿದೆ.

  • ಮಾಸಿಕ ಸ್ಟೈಫಂಡ್: ಪ್ರತಿ ತಿಂಗಳು ₹5,000 ನಿಮ್ಮ ಖಾತೆಗೆ ಜಮೆಯಾಗುತ್ತದೆ (ಇದರಲ್ಲಿ ₹4,500 ಸರ್ಕಾರ ನೀಡಿದರೆ, ₹500 ಕಂಪನಿ ನೀಡುತ್ತದೆ).
  • ಒಂದು ಬಾರಿಯ ಧನಸಹಾಯ: ನೀವು ಕೆಲಸಕ್ಕೆ ಸೇರಿದ ತಕ್ಷಣ ಬಟ್ಟೆಬರೆ ಅಥವಾ ಇತರೆ ಖರ್ಚಿಗಾಗಿ ಸರ್ಕಾರ ₹6,000 ಹೆಚ್ಚುವರಿ ಸಹಾಯಧನ ನೀಡುತ್ತದೆ.
  • ವಿಮೆ ಸೌಲಭ್ಯ: ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಸುರಕ್ಷಾ ಬಿಮಾ ಯೋಜನೆಯಡಿ ನಿಮಗೆ ವಿಮಾ ರಕ್ಷಣೆಯೂ ಸಿಗಲಿದೆ.
  • ವಯಸ್ಸು: 21 ರಿಂದ 24 ವರ್ಷದೊಳಗಿರಬೇಕು.
  • ವಿದ್ಯಾಭ್ಯಾಸ: 10ನೇ ತರಗತಿ, ಪಿಯುಸಿ, ಐಟಿಐ, ಡಿಪ್ಲೊಮಾ ಅಥವಾ ಯಾವುದೇ ಪದವಿ (BA, B.Sc, B.Com, BBA ಇತ್ಯಾದಿ) ಮುಗಿಸಿರಬೇಕು.
  • ಯಾರು ಅರ್ಹರಲ್ಲ?: ಐಐಟಿ (IIT), ಐಐಎಂ (IIM), ಎಂಬಿಬಿಎಸ್ (MBBS), ಸಿಎ (CA) ಅಥವಾ ಎಂಬಿಎ (MBA) ಮಾಡಿದವರಿಗೆ ಈ ಯೋಜನೆಯಡಿ ಅವಕಾಶವಿಲ್ಲ.
  • ಕುಟುಂಬದ ಆದಾಯ: ನಿಮ್ಮ ಕುಟುಂಬದ ವಾರ್ಷಿಕ ಆದಾಯ ₹8 ಲಕ್ಷಕ್ಕಿಂತ ಕಡಿಮೆ ಇರಬೇಕು.

ನಮ್ಮ ಕರ್ನಾಟಕದ ಯುವಕರಿಗೆ ಇದು ದೊಡ್ಡ ಸುವರ್ಣಾವಕಾಶ. ರಾಜ್ಯದಲ್ಲಿ ಒಟ್ಟು 8,944 ಇಂಟರ್ನ್‌ಶಿಪ್ ಅವಕಾಶಗಳು ಲಭ್ಯವಿವೆ:

  • 10ನೇ ತರಗತಿ ಪಾಸಾದವರಿಗೆ: 2,959 ಸೀಟುಗಳು.
  • ಪದವೀಧರರಿಗೆ: 2,860 ಸೀಟುಗಳು.
  • ಐಟಿಐ ಹಾಗೂ ಡಿಪ್ಲೊಮಾ: ಸುಮಾರು 2,500ಕ್ಕೂ ಹೆಚ್ಚು ಅವಕಾಶಗಳು.
  1. ಮೊದಲು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ.
  2. ನಿಮ್ಮ ಮೊಬೈಲ್ ಸಂಖ್ಯೆ ಬಳಸಿ ನೋಂದಣಿ ಮಾಡಿಕೊಳ್ಳಿ.
  3. e-KYC ಪ್ರಕ್ರಿಯೆ ಪೂರ್ಣಗೊಳಿಸಿ (ಆಧಾರ್ ಕಾರ್ಡ್ ಕಡ್ಡಾಯ).
  4. ನಿಮ್ಮ ಶೈಕ್ಷಣಿಕ ದಾಖಲೆಗಳು ಮತ್ತು ಸಿವಿ (CV) ಅಪ್‌ಲೋಡ್ ಮಾಡಿ.
  5. ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆರಿಸಿ ಸಬ್ಮಿಟ್ ಮಾಡಿ.

ಒಬ್ಬ ಅಭ್ಯರ್ಥಿ ಕನಿಷ್ಠ 5 ಕಂಪನಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಕಂಪನಿಗಳು ನಿಮ್ಮ ಸ್ಕಿಲ್ ನೋಡಿ ಇಂಟರ್ವ್ಯೂ ಮೂಲಕ ಆಯ್ಕೆ ಮಾಡುತ್ತವೆ.

ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅಪ್ಲೇ ಆನ್ಲೈನ್‌Click Here
ಅಧಿಕೃತ ವೆಬ್‌ಸೈಟ್‌Click Here

ಕೊನೆಯ ಮಾತು: ಡಿಗ್ರಿ ಮುಗಿಸಿ ಮನೆಯಲ್ಲಿ ಕೂರುವ ಬದಲು, ಇಂತಹ ದೊಡ್ಡ ಕಂಪನಿಗಳಲ್ಲಿ ಅನುಭವ ಪಡೆದರೆ ಮುಂದೆ ನಿಮಗೆ ಕೈತುಂಬಾ ಸಂಬಳ ಬರುವ ಕೆಲಸ ಸಿಗುವುದು ಖಚಿತ. ತಡ ಮಾಡಬೇಡಿ, ಇಂದೇ ಅರ್ಜಿ ಸಲ್ಲಿಸಿ!

Leave a Reply

Your email address will not be published. Required fields are marked *